‘ಸತ್ಯ’, ‘ಕಂಪನಿ’ ಸಿನಿಮಾ ಸೇರಿಸಿ ‘ಧುರಂಧರ್’ ಮಾಡಿದ ಆದಿತ್ಯ ಧಾರ್: ವಿಷಯ ಬಯಲು
‘ಧುರಂಧರ್’ (Dhurandhar) ಚಿತ್ರದ ದೃಶ್ಯಗಳು ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಸತ್ಯ’ ಚಿತ್ರವನ್ನು ಹೋಲುತ್ತವೆ ಎಂಬ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ‘ಧುರಂಧರ್’ ನಿರ್ದೇಶಕ ಆದಿತ್ಯ ಧಾರ್ (Aditya Dhar) ಅವರು ಆರ್ಜಿವಿ ಶೈಲಿಯನ್ನು ನಕಲು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಮ್ ಗೋಪಾಲ್ ವರ್ಮಾ (Ram Gopal Varma) ಮಾತನಾಡಿದ್ದಾರೆ. ಸಿನಿಮಾ ರಂಗದಲ್ಲಿ ಒಬ್ಬರ ಕೆಲಸದಿಂದ ಇನ್ನೊಬ್ಬರು ಪ್ರಭಾವಿತರಾಗುವುದು ಸಾಮಾನ್ಯ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ. ‘ಆದಿತ್ಯ ಧಾರ್ ಪ್ರಜ್ಞಾಪೂರ್ವಕವಾಗಿ…