Headlines

KKR vs GT: 16,776 ಪಂದ್ಯಗಳ ಬಳಿಕ ಹೀಗೊಂದು ವಿಶ್ವ ದಾಖಲೆ..! – Kannada News | KKR vs GT: First Ever T20 Match With Six 50+ Scores

ಟಿ20 ಕ್ರಿಕೆಟ್​ನಲ್ಲಿ 16,776 ಪಂದ್ಯಗಳು ನಡೆದಿದೆ. ಈ ಪಂದ್ಯಗಳಲ್ಲಿ ಕಂಡು ಬರದ ವಿಶೇಷ ವಿಶ್ವ ದಾಖಲೆಯೊಂದಕ್ಕೆ ಐಪಿಎಲ್​ನ 60ನೇ ಮ್ಯಾಚ್ ಸಾಕ್ಷಿಯಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ಫಿನ್ ಅಲೆನ್, ಅಂಗ್​ಕ್ರಿಶ್ ರಘುವಂಶಿ ಹಾಗೂ ಕ್ಯಾಮರೋನ್ ಗ್ರೀನ್ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಕೆಕೆಆರ್ ತಂಡವು 20…

Read More

‘ಟಾಕ್ಸಿಕ್’ ಸಿನಿಮಾ ವಿಳಂಬಕ್ಕೆ ಹಲವು ಬಲವಾದ ಕಾರಣಗಳಿವೆ: ನಟಿ ತಾರಾ ಸುತಾರಿಯಾ – Kannada News | Yash starrer Toxic movie delayed due to valid reasons says Tara Sutaria

ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಟಾಕ್ಸಿಕ್’ (Toxic) ಬಿಡುಗಡೆ ತಡವಾಗುತ್ತಿರುವುದು ಅಭಿಮಾನಿಗಳಲ್ಲಿ ತುಸು ನಿರಾಸೆ ಮೂಡಿಸಿರುವುದು ನಿಜ. ಆದರೆ, ಈ ವಿಳಂಬದ ಹಿಂದೆ ಸೂಕ್ತ ಹಾಗೂ ಬಲವಾದ ಕಾರಣಗಳಿವೆ ಎಂದು ಚಿತ್ರದ ನಟಿ ತಾರಾ ಸುತಾರಿಯಾ (Tara Sutaria) ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ‘ಈ ಕಾಯುವಿಕೆ ಖಂಡಿತವಾಗಿಯೂ ಸಾರ್ಥಕವಾಗಲಿದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ಈ ಚಿತ್ರವನ್ನು ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಮಧ್ಯಪ್ರಾಚ್ಯದಲ್ಲಿ ನಡೆದ…

Read More

Bengaluru Air Quality: ಬೆಂಗಳೂರಿಗಿಂತ ಮಡಿಕೇರಿಯ ವಾಯುಗುಣಮಟ್ಟವೇ ಉತ್ತಮ! – Kannada News | Bengaluru Air Quality Index Today: City Records Moderate AQI, Madikeri Cleanest

ಬೆಂಗಳೂರಿಗಿಂತ ಮಡಿಕೇರಿಯ ವಾಯುಗುಣಮಟ್ಟವೇ ಉತ್ತಮ ಬೆಂಗಳೂರು, ಮೇ 17: ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಆರ್ಭಟದ ನಡುವೆಯೇ ವಾಯು ಗುಣಮಟ್ಟ ಸೂಚ್ಯಂಕದಲ್ಲಿ (AQI) ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಬಿಡುಗಡೆ ಮಾಡಿರುವ ಇಂದಿನ ವರದಿಯ ಪ್ರಕಾರ, ಸಿಲಿಕಾನ್ ಸಿಟಿ ಬೆಂಗಳೂರಿನ ಒಟ್ಟಾರೆ ವಾಯು ಗುಣಮಟ್ಟವು ಸಾಧಾರಣ ವಲಯದಲ್ಲಿದೆ. ಆದರೆ ಗದಗ ಮತ್ತು ಮಡಿಕೇರಿಯ ವಾಯು ಗುಣಮಟ್ಟ ಉತ್ತಮವಾಗಿದೆ. ಮುಖ್ಯಾಂಶಗಳು ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟವು ಇಂದು 75 AQI ದಾಖಲಾಗಿದೆ ಮಡಿಕೇರಿ ಮತ್ತು…

Read More

ಸ್ವಪಕ್ಷ ಸಂಸದನ ವಿರುದ್ಧವೇ ಬಿಜೆಪಿ ಕಾರ್ಯಕರ್ತರ ಆಕ್ರೋಶ: ಮಂಗಳೂರಲ್ಲಿ ಭುಗಿಲೆದ್ದ ಅಸಮಾಧಾನ – Kannada News | BJP Workers Turn Against MP Brijesh Chowta Over Bannadk Road Issue; Discontent Erupts in Mangaluru

ಸ್ವಪಕ್ಷದ ಸಂಸದನ ವಿರುದ್ಧವೇ ಬಿಜೆಪಿ ಕಾರ್ಯಕರ್ತರ ಆಕ್ರೋಶImage Credit source: Tv9 Kannada ಮಂಗಳೂರು, ಮೇ 17: ದಕ್ಷಿಣ ಕನ್ನಡ ಜಿಲ್ಲೆಯ ಸ್ವಪಕ್ಷದ ಸಂಸದನ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಸಂಸದ ಕ್ಯಾ‌.ಬ್ರಿಜೇಶ್ ಚೌಟ ವಿರುದ್ಧ ಬಿಜೆಪಿ ಮಂಡಲ ಉಪಾಧ್ಯಕ್ಷನಿಂದಲೇ ಅಸಮಾಧಾನ ವ್ಯಕ್ತವಾಗಿದ್ದು, ರಸ್ತೆ ಸಮಸ್ಯೆಗೆ ಪರಿಹಾರ ಕೇಳಲು ಹೋದವರಿಗೆ ಅವಮಾನ ಆರೋಪ ಕೇಳಿಬಂದಿದೆ. ಸಂಸದರು ಬೇಜವಾಬ್ದಾರಿ ವರ್ತನೆ ತೋರಿದ್ದಾರೆ ಎಂದೂ ದೂರಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಪೋಸ್ಟ್ ಹಾಕಿ ಮೂಲ್ಕಿ-ಮೂಡಬಿದ್ರೆ ಬಿಜೆಪಿ…

Read More

16 ಅಂಕಗಳಿದ್ದರೂ ಹೊರಬೀಳುವ ಭೀತಿಯಲ್ಲಿ ಗುಜರಾತ್ ಟೈಟಾನ್ಸ್!

IPL 2026: ಐಪಿಎಲ್ 2026ರ ಲೀಗ್ ಹಂತವು ಕ್ಲೈಮ್ಯಾಕ್ಸ್ ತಲುಪಿದ್ದು, ಪ್ಲೇ-ಆಫ್ಸ್ ರೇಸ್ ತೀವ್ರ ಕುತೂಹಲ ಕೆರಳಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧದ ಪಂದ್ಯದಲ್ಲಿ 29 ರನ್‌ಗಳ ಸೋಲು ಅನುಭವಿಸಿದ ನಂತರ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟನ್ಸ್ (GT) ಭಾರೀ ಹಿನ್ನಡೆ ಅನುಭವಿಸಿದೆ.  ಏಕೆಂದರೆ 16 ಅಂಕಗಳನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ತಂಡಕ್ಕೆ ಇನ್ನು ಉಳಿದಿರುವುದು ಕೇವಲ ಒಂದು ಮ್ಯಾಚ್​ ಮಾತ್ರ. ಆ ಪಂದ್ಯದಲ್ಲಿ ಗೆದ್ದರೆ ಮಾತ್ರ ನೇರವಾಗಿ ಪ್ಲೇಆಫ್​ಗೇರಬಹುದು. ಇಲ್ಲದಿದ್ದರೆ, ಇತರೆ ತಂಡಗಳ…

Read More

ನಿಟ್​​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಜಾಕ್ಕೆ ರಾಹುಲ್​​ ಆಗ್ರಹ – Kannada News | NEET Paper Leak: Rahul Demands Education Minister Dharmendra Pradhan’s Sacking

ಧರ್ಮೇಂದ್ರ ಪ್ರಧಾನ್ ವಜಾಕ್ಕೆ ರಾಹುಲ್​​ ಆಗ್ರಹ ನವದೆಹಲಿ, ಮೇ 17: ನೀಟ್​​ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​​ ಅವರನ್ನು ತಕ್ಷಣವೇ ವಜಾಗೊಳಿಸುವಂತೆ ವಿಪಕ್ಷ ನಾಯಕ ರಾಹುಲ್​​ ಗಾಂಧಿ ಆಗ್ರಹಿಸಿದ್ದಾರೆ. 22 ಲಕ್ಷ NEET ವಿದ್ಯಾರ್ಥಿಗಳನ್ನು ಮೋಸಗೊಳಿಸಲಾಗಿದೆ. ಆದರೂ ಮೋದಿ ಜೀ ಒಂದು ಮಾತೂ ಆಡುತ್ತಿಲ್ಲ. ಧರ್ಮೇಂದ್ರ ಪ್ರಧಾನರನ್ನು ತಕ್ಷಣ ವಜಾಗೊಳಿಸಿ, ಇಲ್ಲವೇ ನೀವು ಹೊಣೆ ಹೊರಿ ಎಂದು ಅವರು ಎಕ್ಸ್​​ ಪೋಸ್ಟ್​​ ಮೂಲಕ ಆಗ್ರಹಿಸಿದ್ದಾರೆ. ವಿಡಿಯೋ ಹಂಚಿಕೊಂಡ ರಾಹುಲ್​​ ಗಾಂಧಿ…

Read More

Karnataka Weather Forecast: ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ, ಚಿಕ್ಕಮಗಳೂರಿನಲ್ಲಿ ಆರೆಂಜ್ ಅಲರ್ಟ್! – Kannada News | Karnataka rain Update: Heavy Rain Forecast, Orange Alert Issued for Chikkamagaluru, Fishermen Warning

ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ, ಚಿಕ್ಕಮಗಳೂರಿನಲ್ಲಿ ‘ಆರೆಂಜ್ ಅಲರ್ಟ್’! Image Credit source: google Gemini ಬೆಂಗಳೂರು, ಮೇ 17: ಹವಾಮಾನ ಇಲಾಖೆಯು ಮುಂದಿನ ಕೆಲವು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ (Weather) ಮತ್ತು ಗಾಳಿ ಸಹಿತ ಗುಡುಗು ಸಿಡಿಲಿನ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಮಲೆನಾಡು ಭಾಗ ಹಾಗೂ ಪಶ್ಚಿಮಘಟ್ಟಗಳ ಸಾಲಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಲಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಸಿಡಿಲು ಮತ್ತು 40-50 ಕಿ.ಮೀ ವೇಗದ…

Read More

ಸಿಎಂ ವಿಜಯ್ ಭೇಟಿ ಮಾಡಿ 6 ಬೇಡಿಕೆ ಇಟ್ಟು ನಟ ಕಮಲ್ ಹಾಸನ್; ಏನದು? – Kannada News | Kamal Haasan submits 6 demands to Tamil Nadu CM Vijay for cinema industry

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ನಟ, ರಾಜಕಾರಣಿ ದಳಪತಿ ವಿಜಯ್ (CM Vijay) ಅವರನ್ನು ಹಿರಿಯ ನಟ ಕಮಲ್ ಹಾಸನ್ ಮೇ 16ರಂದು ಭೇಟಿಯಾಗಿದ್ದಾರೆ. ಈ ಸೌಜನ್ಯಯುತ ಭೇಟಿಯ ಚಿತ್ರಗಳನ್ನು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಕಮಲ್ ಹಾಸನ್ (Kamal Haasan), ತಮಿಳು ಚಿತ್ರರಂಗ ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಿ, ಚಿತ್ರೋದ್ಯಮದ ಬೆಂಬಲಕ್ಕಾಗಿ 6 ಪ್ರಮುಖ ಬೇಡಿಕೆಗಳನ್ನೊಳಗೊಂಡ ಪ್ರಸ್ತಾವನೆಯನ್ನು ಸಿಎಂ ವಿಜಯ್ ಅವರಿಗೆ ಸಲ್ಲಿಸಿದ್ದಾರೆ. ಸಿಎಂ ವಿಜಯ್ ಭೇಟಿಯ ನಂತರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್…

Read More

ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಬೆನ್ನಲ್ಲೇ NTAನಲ್ಲಿ ಮಹತ್ವದ ಬದಲಾವಣೆ – Kannada News | NTA Undergoes Major Leadership Changes Following NEET UG Paper Leak

ನವದೆಹಲಿ, ಮೇ 17: NEET ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ತನಿಖೆಯ ನಡುವೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ಇಬ್ಬರು ಜಂಟಿ ಕಾರ್ಯದರ್ಶಿಗಳು ಮತ್ತು ಇಬ್ಬರು ಜಂಟಿ ನಿರ್ದೇಶಕರ ನೇಮಕಕ್ಕೆ ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. 1998 ಬ್ಯಾಚ್‌ನ ಭಾರತೀಯ ಅಂಕಿಅಂಶ ಸೇವೆ (ISS) ಅಧಿಕಾರಿಯಾಗಿರುವ ಅನುಜಾ ಬಾಪಟ್ ಹಾಗೂ 2004 ಬ್ಯಾಚ್‌ನ ಐಆರ್‌ಎಸ್ (ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆ) ಅಧಿಕಾರಿಯಾಗಿರುವ ರುಚಿತಾ…

Read More

ಪೋಕ್ಸೋ ಕೇಸ್​​ನಲ್ಲಿ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಪುತ್ರ ಭಗೀರಥ್ ಸಾಯಿ ಅರೆಸ್ಟ್​​ – Kannada News | Union Minister Bandi Sanjay Kumar’s Son Bhageerath Sai Arrested in POCSO Case

ಬಂಡಿ ಸಂಜಯ್ ಕುಮಾರ್ ಪುತ್ರ ಭಗೀರಥ್ ಸಾಯಿ ಅರೆಸ್ಟ್​​ ಹೈದರಾಬಾದ್​​, ಮೇ 17: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರು ಹಾಗೂ ಬಿಜೆಪಿ ಸಂಸದರಾಗಿರುವ ಬಂಡಿ ಸಂಜಯ್ ಕುಮಾರ್ ಪುತ್ರ ಭಗೀರಥ್ ಸಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದಿಂದ ಮಧ್ಯಂತರ ರಕ್ಷಣೆ ನೀಡಲು ತೆಲಂಗಾಣ ಹೈಕೋರ್ಟ್​​ ನಿರಾಕರಿಸಿದ ಕೆಲವೇ ಗಂಟೆಗಳಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ತಮ್ಮ ಪುತ್ರನನ್ನು ತನಿಖೆಗೆ ಪೊಲೀಸರಿಗೆ ಒಪ್ಪಿಸಿದ್ದಾಗಿ ಬಂಡಿ ಸಂಜಯ್ ಕುಮಾರ್ ತಿಳಿಸಿದ್ದು, 17 ವರ್ಷದ…

Read More