KKR vs GT: 16,776 ಪಂದ್ಯಗಳ ಬಳಿಕ ಹೀಗೊಂದು ವಿಶ್ವ ದಾಖಲೆ..! – Kannada News | KKR vs GT: First Ever T20 Match With Six 50+ Scores
ಟಿ20 ಕ್ರಿಕೆಟ್ನಲ್ಲಿ 16,776 ಪಂದ್ಯಗಳು ನಡೆದಿದೆ. ಈ ಪಂದ್ಯಗಳಲ್ಲಿ ಕಂಡು ಬರದ ವಿಶೇಷ ವಿಶ್ವ ದಾಖಲೆಯೊಂದಕ್ಕೆ ಐಪಿಎಲ್ನ 60ನೇ ಮ್ಯಾಚ್ ಸಾಕ್ಷಿಯಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ಪರ ಫಿನ್ ಅಲೆನ್, ಅಂಗ್ಕ್ರಿಶ್ ರಘುವಂಶಿ ಹಾಗೂ ಕ್ಯಾಮರೋನ್ ಗ್ರೀನ್ ಅರ್ಧಶತಕ ಬಾರಿಸಿದ್ದರು. ಈ ಅರ್ಧಶತಕಗಳ ನೆರವಿನೊಂದಿಗೆ ಕೆಕೆಆರ್ ತಂಡವು 20…