ರೆಡ್, ಆರೆಂಜ್, ಯೆಲ್ಲೋ, ಗ್ರೀನ್ ಅಲರ್ಟ್ ಅಂದರೇನು? ಹವಾಮಾನ ಇಲಾಖೆಯ ಯಾವ ಅಲರ್ಟ್ ಏನನ್ನು ಸೂಚಿಸುತ್ತೆ? – Kannada News | Decode India’s Weather Warnings: What Each IMD Alert Colour Means
ಬೆಂಗಳೂರು, ಜುಲೈ 09: ವಾತಾವರಣದ ಬದಲಾವಣೆಗಳಿಗೆ ಅನುಗುಣವಾಗಿ ಭಾರತೀಯ ಹವಾಮಾನ ಇಲಾಖೆಯು (IMD) ಸಾರ್ವಜನಿಕರಿಗೆ ನಿರಂತರವಾಗಿ ಮುನ್ನೆಚ್ಚರಿಕೆಗಳನ್ನು ನೀಡುತ್ತಿರುತ್ತದೆ. ಉಪಗ್ರಹಗಳು ಮತ್ತು ಅತ್ಯಾಧುನಿಕ ರಾಡಾರ್‌ಗಳ ಮೂಲಕ ಹವಾಮಾನವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುವ ಇಲಾಖೆಯು, ಮುಂದಿನ ಕೆಲವು ಗಂಟೆಗಳು ಅಥವಾ ದಿನಗಳಲ್ಲಿ ಸಂಭವಿಸಬಹುದಾದ ಭಾರಿ ಮಳೆ, ಬಿರುಗಾಳಿ, ಗುಡುಗು, ಮಿಂಚು ಹಾಗೂ ಚಂಡಮಾರುತಗಳ ಬಗ್ಗೆ ಮುಂಚಿತವಾಗಿಯೇ ಅಲರ್ಟ್‌ಗಳನ್ನು ಪ್ರಕಟಿಸುತ್ತದೆ. ರೆಡ್ ಅಲರ್ಟ್ ತೀವ್ರ ಅಪಾಯಕಾರಿ ಪರಿಸ್ಥಿತಿಯನ್ನು ಸೂಚಿಸುತ್ತದೆ, ಅಲ್ಲಿ ತಕ್ಷಣದ ಕ್ರಮದ ಅಗತ್ಯವಿರುತ್ತದೆ. ಆರೆಂಜ್ ಅಲರ್ಟ್ ಎಂದರೆ ಸಂಭವನೀಯ…