3,500 ರೂಪಾಯಿಗೆ ಮನೆಗೆಲಸದವರು ಬೇಕಂತೆ! ಬೆಂಗಳೂರು ಹೆಚ್.ಆರ್ ಕನ್ಸಲ್ಟೆಂಟ್‌ಗೆ ಸರಿಯಾಗಿ ಚಳಿ ಬಿಡಿಸಿದ ನೆಟ್ಟಿಗರು – Kannada News | Maid Salary Controversy: Bengaluru HR Consultant Faces Backlash Over Low Pay
ಬೆಂಗಳೂರು, ಮೇ.15: ಸಿಲಿಕಾನ್ ಸಿಟಿಯ ಫ್ರೀಲ್ಯಾನ್ಸ್ ಹೆಚ್.ಆರ್ ಕನ್ಸಲ್ಟೆಂಟ್ ಒಬ್ಬರು ಮನೆಗೆಲಸದವರ ಸಂಬಳದ ಬಗ್ಗೆ ನೀಡಿದ “ಅಮಾನವೀಯ” ಹೇಳಿಕೆಯೊಂದು ಈಗ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಮನೆಗೆಲಸದವರಿಗೆ ನೀಡುವ ಸಂಬಳವನ್ನು “ಎಂಜಿನಿಯರಿಂಗ್ ಪದವೀಧರರ” ಸಂಬಳಕ್ಕೆ ಹೋಲಿಸಿದ ಇವರ ಪೋಸ್ಟ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ತಮ್ಮ ವಸತಿ ಸಮುಚ್ಚಯದ (Apartment) ಆ್ಯಪ್‌ನಲ್ಲಿ ಪೋಸ್ಟ್ ಹಾಕಿದ್ದ ಈ ವ್ಯಕ್ತಿ, ಬೆಳಿಗ್ಗೆ ಮತ್ತು ಸಂಜೆ ಕೆಲಸಕ್ಕೆ ಬರಲು ಮನೆಗೆಲಸದವರು ಬೇಕಾಗಿದ್ದಾರೆ ಎಂದು ತಿಳಿಸಿದ್ದರು. ಆದರೆ, ಎರಡು ಬಾರಿ ಕೆಲಸಕ್ಕೆ ಬರುವವರಿಗೆ ತಾವು…