ಉಪ್ಪಿನಂಶವಿರುವ ಆಹಾರ ಸೇವನೆಯನ್ನು ಕಡಿಮೆ ಮಾಡಿದ್ರೆ ನಮ್ಮ ಕಿಡ್ನಿ ಆರೋಗ್ಯವಾಗಿರುತ್ತಾ?
ಇತ್ತೀಚಿನ ದಿನಗಳಲ್ಲಿ ಮೂತ್ರಪಿಂಡ ಅಂದರೆ ಕಿಡ್ನಿಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು ಇದನ್ನು ತಡೆಗಟ್ಟಲು ಕೆಲವು ಆರೋಗ್ಯಕರ ಸಲಹೆಗಳನ್ನು ಅನುಸರಿಸುವುದು ಬಹಳ ಅನಿವಾರ್ಯವಾಗಿದೆ. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಪಡೆಯಲು ಬೆಂಗಳೂರು ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ಸಲಹೆಗಾರರಾದ ಡಾ. ಮೊಹಮ್ಮದ್ ಯೂಸುಫ್ (Dr. Mohammad Yousuff) ಅವರನ್ನು ಸಂಪರ್ಕಿಸಿತ್ತು. ಈ ವಿಷಯದ ಕುರಿತಂತೆ ಅವರು ಹೆಚ್ಚಿನ ಮಾಹಿತಿ ನೀಡಿದ್ದು, ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಯಾವ ರೀತಿಯ ದಿನಚರಿಯನ್ನು…