Headlines

ನೌಕರನ ತಪ್ಪಿಗೆ ಕಂಪನಿ ಸಿಇಒ ಹಾಗೂ ಹಿರಿಯ ಉದ್ಯೋಗಿಗಳಿಗೆ ಪೇಮೆಂಟ್ ಕಟ್; ಜಪಾನ್ ಏರ್ಲೈನ್ಸ್​ನಲ್ಲೊಂದು ಘಟನೆ – Kannada News | Employee fails in alcohol test, CEO faces 30pc cut in 2 months salary, example for Japan corporate discipline

ಜಪಾನ್ ಏರ್ಲೈನ್ಸ್Image Credit source: Kevin Carter/Getty Images ಟೋಕಿಯೋ, ಜೂನ್ 22: ಜಪಾನ್‌ನಲ್ಲಿ ಕಾರ್ಪೊರೇಟ್ ಶಿಸ್ತು (Corporate discipline) ಬಹಳ ಇದೆ. ಅಲ್ಲಿ ಯಾರೇ ತಪ್ಪು ಮಾಡಿದರೂ ಅದಕ್ಕೆ ತಲೆದಂಡ ಒಬ್ಬರದ್ದೇ ಆಗಿರುವುದಿಲ್ಲ. ಕಂಪನಿಯ ಅತ್ಯುನ್ನತ ಹುದ್ದೆಯಲ್ಲಿರುವವರಿಗೂ ದಂಡ ತಪ್ಪುವುದಿಲ್ಲ. ಜಪಾನ್ ಏರ್​ಲೈನ್ಸ್​ನಲ್ಲಿರುವ (JAL- Japan Airlines) ಒಂದು ಘಟನೆ ಇದಕ್ಕೆ ಒಳ್ಳೆಯ ನಿದರ್ಶನವಾಗಿದೆ. ಏರ್​ಲೈನ್ಸ್​ನ ಉದ್ಯೋಗಿಯೊಬ್ಬರು ಆಲ್ಕೋಹಾಲ್ ಪರೀಕ್ಷೆಯಲ್ಲಿ ವಿಫಲನಾಗಿದ್ದಕ್ಕೆ ಕಂಪನಿಯ ಸಿಇಒ ಹಾಗು ಇತರ ಕೆಲ ಹಿರಿಯ ಉದ್ಯೋಗಿಗಳಿಗೆ ಸಂಬಳ ಕಟ್ ಮಾಡಿರುವ…

Read More

‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ದ್ವಿಪಾತ್ರ: ಶ್ರೀರಾಮನ ಜೊತೆಗೆ ಪರಶುರಾಮನ ದರ್ಶನ

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಬಗ್ಗೆ ದಿನಕ್ಕೊಂದು ಕುತೂಹಲಕಾರಿ ವಿಚಾರಗಳು ಹೊರಬರುತ್ತಿವೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಭಾರಿ ಸಂಚಲನ ಮೂಡಿಸಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ರಣಬೀರ್ ಕಪೂರ್ (Ranbir Kapoor), ಈ ಸಿನಿಮಾದಲ್ಲಿ ತಾವು ಕೇವಲ ಶ್ರೀರಾಮನ ಪಾತ್ರ ಮಾತ್ರವಲ್ಲದೇ ಪರಶುರಾಮನ ಪಾತ್ರವನ್ನೂ ನಿರ್ವಹಿಸುತ್ತಿರುವುದಾಗಿ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಶ್ರೀರಾಮ ಮತ್ತು ಪರಶುರಾಮ ಇಬ್ಬರೂ ಭಗವಾನ್ ವಿಷ್ಣುವಿನ ಅವತಾರಗಳು ಎಂಬುದು…

Read More

ಕೋಟ್ಯಾಂತರ ರೂ. ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಕಂಟ್ರಾಕ್ಟರ್ ಅನುಮಾನಾಸ್ಪದ ಸಾವು!

ಮಂಡ್ಯ, ಏಪ್ರಿಲ್ 07: ಜಿಲ್ಲೆಯಲ್ಲಿ ಪ್ರಥಮ ದರ್ಜೆ ಕಂಟ್ರಾಕ್ಟರ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಶ್ರೀರಂಗಪಟ್ಟಣ ತಾಲೂಕಿನ ಹುಣಸನ ಹಳ್ಳಿಯ ನಿವಾಸಿ ಪವನ್ (27) ಎಂಬ ಯುವಕನ ಶವ ಕಾವೇರಿ ನದಿಯಲ್ಲಿ (Cauvery River) ಪತ್ತೆಯಾಗಿದ್ದು, ಈ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ಮನೆಗೆ ಬರುವುದಿಲ್ಲ ಎಂದು ಹೇಳಿ ಹೋದವನು ಶವವಾಗಿ ಪತ್ತೆ! ಪವನ್ ಕೋಟ್ಯಾಂತರ ರೂಪಾಯಿ ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಕಂಟ್ರಾಕ್ಟರ್ ಆಗಿದ್ದು, ನಾಲ್ಕು ದಿನಗಳ ಹಿಂದೆ ಕೆಲಸ ಇದೆ, ಇಂದು ಮನೆಗೆ…

Read More

Daily Devotional: ಕೇವಲ ಮನೆಯಲ್ಲಿ ಪೂಜೆ ಮಾಡಿದರೆ ಸಾಕಾಗಲ್ಲ, ದೇವಸ್ಥಾನಕ್ಕೂ ಹೋಗಬೇಕು! ಯಾಕೆ ಗೊತ್ತಾ?

ಮನೆಯಲ್ಲಿ ಪೂಜೆ ಮಾಡುವುದರ ಜೊತೆಗೆ ದೇವಸ್ಥಾನಕ್ಕೂ ಹೋಗಬೇಕು ಯಾಕೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಅನೇಕರಿಗೆ ಮನೆಯಲ್ಲಿ ಪೂಜೆ ಮಾಡಿದರೆ ಸಾಕಾ ಅಥವಾ ದೇವಾಲಯಕ್ಕೂ ಹೋಗಬೇಕಾ ಎಂಬ ಗೊಂದಲವಿರುತ್ತದೆ. ಮನೆಯಲ್ಲಿ ನಾವು ನಮ್ಮ ತೃಪ್ತಿಗಾಗಿ ವಿಗ್ರಹಗಳನ್ನು ಇಟ್ಟು ಪೂಜೆ ಮಾಡುತ್ತೇವೆ, ಇದು ಆಂತರಿಕ ಆತ್ಮ ಶುದ್ಧಿಗೆ ಸಹಕಾರಿ. ಆದರೆ ದೇವಾಲಯಗಳಲ್ಲಿ ವಿಗ್ರಹಗಳನ್ನು ಶಾಸ್ತ್ರಬದ್ಧವಾಗಿ ಭೂಸ್ಥಾಪನೆ ಮಾಡಿ ಪ್ರತಿಷ್ಠಾಪಿಸಲಾಗಿರುತ್ತದೆ. ಅಲ್ಲಿ ತ್ರಿಕಾಲ ಪೂಜೆ ನಡೆಯುತ್ತದೆ ಮತ್ತು ಅವು ಪಂಚಭೂತಗಳನ್ನು ನಿಯಂತ್ರಿಸುವ ಶಕ್ತಿ…

Read More

IPL 2026: 5 ಆಟಗಾರರ ಬಗ್ಗೆ ಬಿಗ್ ಅಪ್​ಡೇಟ್​

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಈಗಾಗಲೇ 14 ಪಂದ್ಯಗಳು ಮುಗಿದಿವೆ. ಇದಾಗ್ಯೂ ಕೆಲ ಸ್ಟಾರ್ ಆಟಗಾರರು ಇನ್ನೂ ಕೂಡ ತಂಡವನ್ನು ಕೂಡಿಕೊಂಡಿಲ್ಲ. ಅಂದರೆ ಗಾಯದ ಸಮಸ್ಯೆಯ ಕಾರಣ ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇದೀಗ ಈ ಆಟಗಾರರ ಇಂಜುರಿ ಅಪ್​ಡೇಟ್ ಹೊರಬಿದಿದ್ದು, ಯಾವ ಆಟಗಾರ ಯಾವಾಗ ಕಣಕ್ಕಿಳಿಯಲಿದ್ದಾರೆ ಎಂದು ನೋಡುವುದಾದರೆ… ಎಂ.ಎಸ್. ಧೋನಿ (CSK): ಸತತ ಸೋಲುಗಳಿಂದ ಕಂಗೆಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಚಿಂತೆ ಮುಂದಿನ ಪಂದ್ಯದಲ್ಲೂ ಮುಂದುವರೆಯಲಿದೆ. ಏಕೆಂದರೆ ಕಾಲಿನ ಸ್ನಾಯು ಸೆಳೆತದಿಂದ…

Read More

Horoscope Today 24 March: ಇಂದು ಈ ರಾಶಿಯವರ ಸಣ್ಣ ತಪ್ಪೂ ದೊಡ್ಡದಾಗಿ ಬಿಂಬಿತವಾಗಲಿದೆ

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಶುಕ್ಲ ಪಕ್ಷದ ಷಷ್ಠೀ ತಿಥಿಯ ಮಂಗಳವಾರ ಪ್ರಚೋದನೆ, ಉತ್ತಮರ ಸಂಗ, ಸಾಮಾಜಿಕ ಕಾರ್ಯಕ್ಕೆ ಯತ್ನ, ಪ್ರೋತ್ಸಹ, ಧಾರ್ಮಿಕ ಕಾರ್ಯ, ಅನ್ಯಾಯ, ಗೆಲುವಿನ ಸಂಭ್ರಮ ಇದೆಲ್ಲ ಇಂದಿನ ವಿಶೇಷ. ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ :…

Read More

DC vs RCB: ರಾಹುಲ್ ವಿರುದ್ಧ ಸೇಡು ತೀರಿಸಿಕೊಂಡ ಹೇಜಲ್‌ವುಡ್; ವಿಡಿಯೋ – Kannada News | IPL 2026: DC vs RCB Match 39 Delhi’s Dramatic Collapse, Hazlewood Dominates

ಐಪಿಎಲ್ 2026 ರ 39ನೇ ಪಂದ್ಯ ದೆಹಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಿತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ತಂಡ ಮೊದಲ 3 ಓವರ್​ಗಳಲ್ಲೇ ಪ್ರಮುಖ 5 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭುವನೇಶ್ವರ್ ಕುಮಾರ್ ಹಾಗೂ ಹೇಜಲ್‌ವುಡ್ ಅವರ ದಾಳಿಗೆ ತತ್ತರಿಸಿ ಹೋಗಿರುವ ಡೆಲ್ಲಿ ಬ್ಯಾಟರ್​ಗಳಿಗೆ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಇದೇ ಉಭಯ ತಂಡಗಳ ನಡುವೆ ಏಪ್ರಿಲ್…

Read More

Netrasemi Chip: ಭಾರತದ ನೇತ್ರಸೆಮಿಯಿಂದ ದೇಶೀಯ ವಿನ್ಯಾಸದ ಎಐ ಪ್ರೋಸಸರ್ A2000 ಅನಾವರಣ

ಸೆಮಿಕಂಡಕ್ಟರ್ ಸಾಂದರ್ಭಿಕ ಚಿತ್ರImage Credit source: Shutterstock ನವದೆಹಲಿ, ಮೇ 28: ದೇಶೀಯ ಸೆಮಿಕಂಡಕ್ಟರ್ ಮತ್ತು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವಲಯದಲ್ಲಿ ಭಾರತವು ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಭಾರತದ ಪ್ರಮುಖ ಸೆಮಿಕಂಡಕ್ಟರ್ ನವೋದ್ಯಮವಾದ ನೇತ್ರಸೆಮಿ ಪ್ರೈವೇಟ್ ಲಿಮಿಟೆಡ್ (NetraSemi), ತನ್ನ ಅತ್ಯಂತ ಮಹತ್ವಾಕಾಂಕ್ಷೆಯ ಎಡ್ಜ್ AI ಸಿಸ್ಟಮ್-ಆನ್-ಚಿಪ್ (SoC) ಆಗಿರುವ ‘A2000’ ಪ್ರೊಸೆಸರ್ ಅನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಭಾರತದಲ್ಲೇ ಸಂಪೂರ್ಣವಾಗಿ ವಿನ್ಯಾಸಗೊಳಿಸಲಾದ ಈ ಚಿಪ್, ಜಾಗತಿಕ ಮಟ್ಟದಲ್ಲಿ ಎಡ್ಜ್ ಕಂಪ್ಯೂಟಿಂಗ್ ಮತ್ತು…

Read More

ಪ್ರಾಣಿ ಬಲಿ ಮಹಾ ಪಾಪ, ಬಕ್ರೀದ್ ದಿನ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ವ್ಯಕ್ತಿ

ಹಿಂದೂ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿImage Credit source: India Today ಖಾಂಡ್ವಾ, ಜೂನ್ 1: ಪ್ರಾಣಿಗಳ ಮೇಲಿನ ಅತಿಯಾದ ಕರುಣೆ ಮತ್ತು ಸನಾತನ ಧರ್ಮದ ತತ್ವಗಳಿಗೆ ಆಕರ್ಷಿತನಾದ ಬಿಲಾಲ್ ಎಂಬ ಯುವಕ ಇಸ್ಲಾಂ ಧರ್ಮ ತೊರೆದು ಹಿಂದೂ(Hindu) ಧರ್ಮವನ್ನು ಸ್ವೀಕರಿಸಿದ್ದಾನೆ. ಮತಾಂತರದ ನಂತರ ಆತ ತನ್ನ ಹೆಸರನ್ನು ‘ವಿಶಾಲ್’ ಎಂದು ಬದಲಾಯಿಸಿಕೊಂಡಿದ್ದಾನೆ. ಚಿಕ್ಕ ವಯಸ್ಸಿನಿಂದಲೂ ರಾಜೇಶ್ ಸಾರಂಗ್ ಎಂಬುವವರ ಬಳಿ ಕೆಲಸ ಮಾಡುತ್ತಿದ್ದ ಬಿಲಾಲ್‌ನನ್ನು ಅವರ ಕುಟುಂಬದ ಸದಸ್ಯನಂತೆಯೇ ನೋಡಿಕೊಳ್ಳಲಾಗಿತ್ತು. ಈ ವಾತಾವರಣವು ಆತನ ಮೇಲೆ ಭಾರಿ…

Read More

ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ: DFO ಹೇಳಿದ್ದೇನು? – Kannada News | Chikmagalur: Illegal Resort Construction in Bhadra Tiger Reserve Buffer Zone Ignites Row

ಚಿಕ್ಕಮಗಳೂರು, ಜನವರಿ 23: ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ನಡೆಯುತ್ತಿರುವ ಆರೋಪ ಚಿಕ್ಕಮಗಳೂರು (Chikkamagaluru) ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನ ಪ್ರಭಾವಿ ಮುಖಂಡನೊಬ್ಬರು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಪಶ್ಚಿಮ ಘಟ್ಟಗಳ ಸಾಲಿನ ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ತಾಲೂಕಿನ ಕೊಳಗಾವೆ ಗ್ರಾಮದ ಸರ್ವೆ ನಂಬರ್ 58ರಲ್ಲಿ ಕಾಮಗಾರಿ ನಡೆಯುತ್ತಿದ್ದು, ಈ ಪ್ರದೇಶವನ್ನು 2011ರಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಝೋನ್ ಎಂದು…

Read More