“ಮಧ್ಯಪ್ರಾಚ್ಯದ ಸೋಲೊಪ್ಪಿದ ರಾಷ್ಟ್ರ”: ಇಂದೇ ಆಗುತ್ತ ಇರಾನ್ನ ಸರ್ವನಾಶ? ಮಹತ್ವದ ಹೇಳಿಕೆ ನೀಡಿದ ಟ್ರಂಪ್
ವಾಷಿಂಗ್ಟನ್ ಮಾ.7: ಇಸ್ರೇಲ್ ಮತ್ತು ಅಮೆರಿಕದ ದಾಳಿಯಿಂದ ಜರ್ಜರಿತವಾಗಿರುವ ಇರಾನ್ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಮಧ್ಯಪ್ರಾಚ್ಯದ ಸೋಲೊಪ್ಪಿದ ರಾಷ್ಟ್ರ” (Loser of the Middle East) ಎಂದು ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇಂದು (ಮಾರ್ಚ್ 7) ಇರಾನ್ ಮೇಲೆ “ಅತ್ಯಂತ ಭೀಕರ ದಾಳಿ” ನಡೆಯಲಿದೆ ಎಂದು ಅವರು ಎಚ್ಚರಿಸಿದ್ದಾರೆ. “ನರಕದಂತೆ ಹೊಡೆತ ತಿಂದಿರುವ ಇರಾನ್, ಈಗ ನೆರೆರಾಷ್ಟ್ರಗಳ ಕ್ಷಮೆಯಾಚಿಸಿ ಶರಣಾಗಿದೆ. ಅಮೆರಿಕ ಮತ್ತು ಇಸ್ರೇಲ್ನ ನಿರಂತರ ದಾಳಿಯಿಂದಾಗಿ ಮಾತ್ರ ಇರಾನ್ ಈ ಭರವಸೆ…