Headlines

ನಾಳೆ ವಿಜಯ್ ಸರ್ಕಾರದ ಭವಿಷ್ಯ ನಿರ್ಧಾರ; ವಿಶ್ವಾಸಮತ ಯಾಚನೆ ವೇಳೆ ಮತದಾನ ಹೇಗೆ ನಡೆಯುತ್ತದೆ? – Kannada News | Tamil Nadu CM Joseph Vijay to Move Confidence Motion on Wednesday trust vote Floor Test

ಚೆನ್ನೈ, ಮೇ 12: ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ (Vijay) ನೇತೃತ್ವದ ಟಿವಿಕೆ ಸರ್ಕಾರದ ವಿರುದ್ಧ ನಾಳೆ (ಮೇ 13) ಬೆಳಿಗ್ಗೆ 9.30ಕ್ಕೆ ವಿಶ್ವಾಸಮತ ಯಾಚನೆ ಮಾಡಲಾಗುವುದು. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಪ್ರಸ್ತಾಪಿಸಿದ ಸರ್ಕಾರಿ ನಿರ್ಣಯದ ಮೇಲೆ ಶಾಸಕರು ಮತ ಚಲಾಯಿಸಲಿದ್ದಾರೆ. ಇಲ್ಲಿಯವರೆಗೆ ಮುಖ್ಯಮಂತ್ರಿ ವಿಜಯ್ ನೇತೃತ್ವದ ಸರ್ಕಾರಕ್ಕೆ ಸಾಕಷ್ಟು ಬೆಂಬಲವಿದೆ. ಹೀಗಾಗಿ, ನಾಳೆ ವಿಜಯ್ ಬಹುಮತ ಸಾಬೀತುಪಡಿಸುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲದಿದ್ದರೆ ವಿಜಯ್ ಅವರ ನೂತನ ಸರ್ಕಾರ ಪತನವಾಗಲಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದ…

Read More

ಬೆಂಗಳೂರಿನ ಸೆಖೆಗೆ ಬೆದರಿ ಕೆಫೆ ಸೇರುತ್ತಿದ್ದಾರೆ ಟೆಕ್ಕಿಗಳು! ದಿನಕ್ಕೆ 800 ರೂ. ಖರ್ಚು ಮಾಡಿದ್ರೂ ಎಸಿ ಅಂದ್ರೆ ಪ್ರಾಣ! – Kannada News | Viral Post Highlights the High Cost of ‘Work From Cafe’ in Sweltering Bengaluru

ಬೆಂಗಳೂರು, ಮೇ,12: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ವರ್ಷ ಬಿಸಿಲಿನ ತಾಪ ದಾಖಲೆ ಮಟ್ಟದಲ್ಲಿದೆ. ಮನೆಯಲ್ಲಿ ಕುಳಿತು ಕೆಲಸ ಮಾಡುವ ಉದ್ಯೋಗಿಗಳಿಗೆ ಸೆಖೆ ತಾಳಲಾರದೆ ಈಗ ಹೊಸ ಟ್ರೆಂಡ್ ಶುರುವಾಗಿದೆ. ಅದೇ ‘ವರ್ಕ್ ಫ್ರಮ್ ಕೆಫೆ’ (Work From Cafe). ಇತ್ತೀಚೆಗೆ ಬೆಂಗಳೂರಿನ ಯುವತಿಯೊಬ್ಬಳು ಹಂಚಿಕೊಂಡಿರುವ ಕೆಫೆ ಖರ್ಚಿನ ವಿವರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಯುವತಿ, ತಾನು ಮನೆಯಲ್ಲಿ ಸೆಖೆ ತಡೆಯಲಾಗದೆ ಕೆಫೆಗೆ ಹೋಗಿ…

Read More

ತ್ರಿಶಾ ನಟನೆಯ ‘ಕರುಪ್ಪು’ ಸಿನಿಮಾಗೆ ವಿಶೇಷ ಅನುಮತಿ ನೀಡಿದ ಸಿಎಂ ವಿಜಯ್ – Kannada News | Tamil Nadu CM Vijay grants special permission for Suriya Trisha starrer Karuppu 9 AM shows

ಕಾಲಿವುಡ್‌ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಕರುಪ್ಪು’ (Karuppu) ಸಿನಿಮಾ ಮೇ 14ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಸೂರ್ಯ ಮತ್ತು ತ್ರಿಶಾ ಕೃಷ್ಣನ್ ಅವರು ಜೋಡಿಯಾಗಿ ಅಭಿನಯಿಸಿದ್ದಾರೆ. ಚಿತ್ರದ ಬಿಡುಗಡೆ ಸಮಯದಲ್ಲಿ ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Tamil Nadu CM Vijay) ಅವರು ಚಿತ್ರತಂಡಕ್ಕೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಮೊದಲ ಪ್ರದರ್ಶನ ಮಾಡಲು ವಿಜಯ್ ಅವರು ಅನುಮತಿ ನೀಡಿದ್ದಾರೆ. ವಿಜಯ್ ಜೊತೆ ತ್ರಿಶಾ (Trisha) ಅವರು ಆಪ್ತತೆ…

Read More

ಹಾಸನ: ಪ್ರಧಾನಿ ಮೋದಿ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ – Kannada News | Hassan: PM Modi to Inaugurate Mega Dairy; HD Deve Gowda

ಹಾಸನ, ಮೇ 12: ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಹಾಲು ಮಹಾಮಂಡಳ (KMF) ವತಿಯಿಂದ 830 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಡೇರಿ ಕಾಮಗಾರಿ ಅಂತಿಮ ಹಂತ ತಲುಪಿದೆ. ಮಾಜಿ ಪ್ರಧಾನಿ, JDS ವರಿಷ್ಠ ಹೆಚ್.ಡಿ. ದೇವೇಗೌಡ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರೊಂದಿಗೆ ಮಂಗಳವಾರ ಡೇರಿ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹೆಚ್​ಡಿ. ದೇವೇಗೌಡ, ಜುಲೈ ಮೊದಲ ಅಥವಾ 2ನೇ ವಾರದಲ್ಲಿ ಮೆಗಾ ಡೇರಿ ಉದ್ಘಾಟನೆಗೊಳ್ಳಲಿದ್ದು,…

Read More

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ದೇವಸ್ಥಾನದ ಗೋಡೆ ಕುಸಿದು 6 ಜನ ಸಾವು, 14 ಮಂದಿಗೆ ಗಾಯ – Kannada News | 6 people killed 14 injured after Temple Wall Collapses in Maharashtra’s Sangli

ಸಾಂಗ್ಲಿ, ಮೇ 12: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಇಂದು ಸಂಜೆ ಬಿರುಗಾಳಿಯಿಂದಾಗಿ ದೇವಸ್ಥಾನದ ಆವರಣದ ಗೋಡೆ ಕುಸಿದು 6 ಜನರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾಂಗ್ಲಿ ಜಿಲ್ಲೆಯ ಜಾಟ್ ತಾಲ್ಲೂಕಿನ ಮೋಟೆವಾಡಿ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಮಾರ್ಗುಬಾಯಿ ದೇವಿ ಯಾತ್ರೆಯ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಹಲವಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಆಗಲೇ ಈ ದುರಂತ ಸಂಭವಿಸಿದೆ. ಇದ್ದಕ್ಕಿದ್ದಂತೆ ಶುರುವಾದ ಬಿರುಗಾಳಿ ಮತ್ತು ಮಳೆಯಿಂದ ಗೋಡೆ ಕುಸಿದಿದೆ….

Read More

ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್ – Kannada News | Mandya Heatwave Impact: Water Level Drops in KRS Dam

ಮಂಡ್ಯ, ಮೇ 12: ರಾಜ್ಯದ ಹಲವೆಡೆ ಮಳೆಯ ಕೊರತೆಯ ನಡುವೆ ತೀವ್ರ ಬಿಸಿಲಿನ ಬೇಗೆಯಿಂದ ಜನ ತತ್ತರಿಸಿದ್ದಾರೆ. ಇದು ಜೀವಜಲದ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‌ಎಸ್ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. 124.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಈ ಜಲಾಶಯವು ಒಟ್ಟು 49 TMC ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಆದರೆ, ಪ್ರಸ್ತುತ ಕೇವಲ 16 TMC ನೀರು ಮಾತ್ರ ಸಂಗ್ರಹವಾಗಿದೆ. ಇದರಲ್ಲಿ ಬಳಕೆಗೆ ಸಿಗುವುದು…

Read More

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರಕ್ಕೆ ಸಿದ್ದರಾಮಯ್ಯ ಸಹಕಾರ ನೆನೆದ ಕುಮಾರ್ ಬಂಗಾರಪ್ಪ – Kannada News | Kumar Bangarappa talks about CM Siddaramaiah in Sarkari Nyaya Bele Angadi press meet

ಖ್ಯಾತ ನಟ ಕುಮಾರ್ ಬಂಗಾರಪ್ಪ ಅವರು ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ (Sarkari Nyaya Bele Angadi) ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ಇತ್ತೀಚೆಗೆ ನಡೆಯಿತು. ಈ ವೇಳೆ ಕುಮಾರ್ ಬಂಗಾರಪ್ಪ ಅವರು ಸಿದ್ದರಾಮಯ್ಯ (Siddaramaiah), ನರೇಂದ್ರ ಮೋದಿ ಮುಂತಾದವರಿಗೆ ಧನ್ಯವಾದ ತಿಳಿಸಿದರು. ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಡವರಿಗಾಗಿ ಆಹಾರ ಭದ್ರತೆ ಕಾಯ್ಕೆ ಪ್ರಕಾರ ದಿನಸಿ ನೀಡುತ್ತವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸಿನಿಮಾದ ಹಾಡನ್ನು ಬಹಳ ಖುಷಿಯಿಂದ ಬಿಡುಗಡೆ ಮಾಡಿದರು. ಈ…

Read More

NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಒಂದು ವಾಟ್ಸಾಪ್ ಮೆಸೇಜಿನಿಂದ ರದ್ದಾಯ್ತು ಯುಜಿ ಪರೀಕ್ಷೆ – Kannada News | NEET UG 2026 paper leak; How a WhatsApp Group message led to exams cancellation in India

ನವದೆಹಲಿ, ಮೇ 12: 22 ಲಕ್ಷಕ್ಕೂ ಹೆಚ್ಚು ವೈದ್ಯಕೀಯ ಆಕಾಂಕ್ಷಿಗಳ ಕನಸು ಇಂದು ಛಿದ್ರವಾಗಿದೆ. NEET-UG 2026 ಪರೀಕ್ಷೆಯು ವ್ಯವಸ್ಥಿತ ವೈಫಲ್ಯದ ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆಯು (NEET) ಈಗ ಭಾರಿ ಹಗರಣವಾಗಿ ಬೆಳೆದಿದೆ. ತೀವ್ರ ಪ್ರತಿಭಟನೆಗಳ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದುಗೊಳಿಸಲಾಯಿತು. ವಿದ್ಯಾರ್ಥಿಯೊಬ್ಬ ಹಾಸ್ಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಕಳುಹಿಸಿದ್ದ ವಾಟ್ಸಾಪ್ ಮೆಸೇಜಿನಿಂದಾಗಿಯೇ ಈ ಇಡೀ ಹಗರಣ ಬಯಲಾದಂತಾಗಿದೆ. ಅಷ್ಟಕ್ಕೂ ಆ ಮೆಸೇಜ್ ಏನು? ದೇಶದಲ್ಲಿ…

Read More

ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು: 2.20 ಲಕ್ಷ ಕುಟುಂಬಗಳಿಗೆ ಸಿಕ್ಕಿತು ಅಧಿಕೃತ ಮನೆ ಹಕ್ಕು! – Kannada News | Hakku Patra Distribution: Addressing Land Ownership Gaps in Karnataka

ಬೆಂಗಳೂರು, ಮೇ.12: ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ದಶಕಗಳಿಂದಲೂ ದಾಖಲೆರಹಿತ ವಸತಿ ಪ್ರದೇಶಗಳಾಗಿರುವ ಹಾಡಿ, ಹಟ್ಟಿ, ತಾಂಡಾ ಮತ್ತು ಕ್ಯಾಂಪ್‌ಗಳಿಗೆ ಅಧಿಕೃತ ಮಾನ್ಯತೆ ನೀಡುವ ಕಾರ್ಯಕ್ರಮವನ್ನು ಆದ್ಯತೆಯಾಗಿ ಕೈಗೊಂಡಿದೆ. ಈ ಪ್ರದೇಶಗಳಲ್ಲಿ ವಾಸಿಸುವ ಜನರು ಭೂ ದಾಖಲೆಗಳಿಲ್ಲದೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಆಶ್ರಯ ಯೋಜನೆ, ಬ್ಯಾಂಕ್ ಸಾಲ, ಇ-ಸ್ವತ್ತು, ಮತ್ತು ಆಸ್ತಿ ಪರಬಾರೆ ಮಾಡುವಂತಹ ಹಕ್ಕುಗಳನ್ನು ಹೊಂದಿಲ್ಲ. ಹಿಂದಿನ ಕಾಂಗ್ರೆಸ್ ಸರ್ಕಾರವು ಕಾನೂನು ತಿದ್ದುಪಡಿ ಮಾಡಿ ಆರು ವರ್ಷಗಳಲ್ಲಿ (2017-2023) 1.06 ಲಕ್ಷ ಜನರಿಗೆ ಹಕ್ಕುಪತ್ರ ವಿತರಿಸಿತ್ತು. ಆದರೆ,…

Read More

ಮತ್ತೆ ಸನಾತನ ಧರ್ಮದ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್ – Kannada News | Udhayanidhi Stalin repeats controversial Sanatan dharm must be abolished comment in Tamil Nadu Assembly

ಚೆನ್ನೈ, ಮೇ 12: ತಮಿಳುನಾಡಿನಲ್ಲಿ ಮತ್ತೊಮ್ಮೆ ಸನಾತನ ಧರ್ಮದ ಸುತ್ತಲಿನ ವಿವಾದ ಸೃಷ್ಟಿಯಾಗಿದೆ. ತಮಿಳುನಾಡಿನ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಇಂದು ಸದನದಲ್ಲಿ ಮತ್ತೆ ‘ಸನಾತನ ಧರ್ಮದ ನಿರ್ಮೂಲನೆ’ಯನ್ನು ಪ್ರತಿಪಾದಿಸಿದ್ದಾರೆ. ಈ ವೇಳೆ ಸದನದಲ್ಲಿ ಹಾಜರಿದ್ದ ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Joseph Vijay) ಮೌನವಾಗಿದ್ದರು. “ಜನರನ್ನು ಬೇರ್ಪಡಿಸುವ ಸನಾತನವನ್ನು ನಿರ್ಮೂಲನೆ ಮಾಡಬೇಕು” ಎಂದು ಸ್ಟಾಲಿನ್ ತಮಿಳುನಾಡು ಚುನಾವಣೆಯ ನಂತರ ವಿಧಾನಸಭಾ ಅಧಿವೇಶನದ…

Read More