ಮೈಸೂರು ಅರಮನೆ ಬಳಿ ಭಾರಿ ಭದ್ರತಾ ಲೋಪ? ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ ಇದ್ದರೂ ಸೆರೆಯಾಗಿಲ್ಲ ಸ್ಫೋಟದ ದೃಶ್ಯ! – Kannada News | Major Security Lapse Near Mysuru Palace? Blast Footage Missing Despite CCTV Cameras

ಮೈಸೂರು, ಡಿಸೆಂಬರ್ 27: ಕ್ರಿಸ್ಮಸ್ ದಿನ ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಮುಂಭಾಗದಲ್ಲಿ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಘಟನೆಯಲ್ಲಿ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ. ಬಲೂನು ಮಾರಾಟಗಾರ ಸಲೀಂ ಸ್ಥಳದಲ್ಲೇ ಮೃತಪಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಂಜನಗೂಡು ಮೂಲದ ಮಂಜುಳಾ ಹಾಗೂ ಬೆಂಗಳೂರು ಮೂಲದ ಲಕ್ಷ್ಮೀ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದ ಸ್ಥಳದ ಸಮೀಪವೇ ಅಳವಡಿಸಲಾಗಿದ್ದ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾದಲ್ಲಿ ಘಟನೆಯ ಯಾವುದೇ ದೃಶ್ಯ ಸೆರೆಯಾಗದಿರುವುದು ಅಚ್ಚರಿ ಮೂಡಿಸಿದೆ. 360 ಡಿಗ್ರಿ ಕ್ಯಾಮರಾ…

Read More

ಸುಬ್ಬ, ಸುಬ್ಬಿ ಕಥೆ ಅಂತ ಹೇಳಿದ್ದು ಯಾಕೆ? ಅನುಮಾನ ಪರಿಹರಿಸಿದ ಪ್ರಥಮ್

ಪ್ರಥಮ್ ಅವರು ನಟಿಸಿದ ‘ಫಸ್ಟ್ ನೈಟ್ ವಿತ್ ದೆವ್ವ’ (First Night With Devva) ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಈ ಸಿನಿಮಾದ ಶೀರ್ಷಿಕೆಗೆ ‘ಸುಬ್ಬ ಸುಬ್ಬಿ ಹಾರರ್ ಸ್ಟೋರಿ’ ಎಂಬ ಟ್ಯಾಗ್ ಲೈನ್ ಇದೆ. ಈ ಕಥೆ ಯಾರಿಗಾದರೂ ಲಿಂಕ್ ಆಗುತ್ತಾ ಎಂಬ ಅನುಮಾನ ಮೂಡಿದೆ. ಆ ಬಗ್ಗೆ ಪ್ರಥಮ್ ಅವರು ಉತ್ತರ ನೀಡಿದ್ದಾರೆ. ‘ಮೊದಲ ದೃಶ್ಯದಲ್ಲೇ ಮದುವೆ. ಮದುವೆ ಆಗಿ 10 ನಿಮಿಷದ ಬಳಿಕ ನನ್ನ ಹೆಂಡತಿ ಮೈ ಮೇಲೆ ದೆವ್ವ ಇದೆ ಎಂಬುದು…

Read More

ಭಾರತ್​ ಜೋಡೋ ಯುವ ಸಂಘಗಳ ಸ್ಥಾಪನೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ – Kannada News | Karnataka Govt Issues Official Order to Setup 10,000 ‘Bharat Jodo Youth Bharat Jodo Yuva Sanghas’ with Rs 1,010 Crore Budget

ಸಿಎಂ ಡಿಕೆ ಶಿವಕುಮಾರ್​​ ಮತ್ತು ಡಿಸಿಎಂ ಡಾ. ಪರಮೇಶ್ವರ್​Image Credit source: G. Parameshwar X Account ಬೆಂಗಳೂರು, ಜುಲೈ 13: ಭಾರತ್​ ಜೋಡೋ ಯುವ ಸಂಘಗಳ ಸ್ಥಾಪನೆ ಸಂಬಂಧ ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಮಾಡಿದ್ದು, ಈ ಬಗ್ಗೆ ತಮ್ಮ ಎಕ್ಸ್​ ಖಾತೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾಹಿತಿ ಹಂಚಿಕೊಂಡಿದ್ದಾರೆ. ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಗ್ರಾಮ ಪಂಚಾಯಿತಿ ಮತ್ತು ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ 10 ಸಾವಿರ…

Read More

ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ಭದ್ರತಾ ಲೋಪ: ಪೊಲೀಸ್ ಮೇಲೆಯೇ ಹಲ್ಲೆ ನಡೆಸಿ ವಿಚಾರಣಾಧೀನ ಆರೋಪಿ ಪರಾರಿ

ಮುಂಬೈ, ಏಪ್ರಿಲ್ 09: ನ್ಯಾಯಾಲಯದಲ್ಲಿ ಆರೋಪಿಯೊಬ್ಬ ಪೊಲೀಸ್(Police) ಅಧಿಕಾರಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಕೊಲೆ ಯತ್ನದ ಪ್ರಕರಣದ ವಿಚಾರಣಾಧೀನ ಆರೋಪಿ ಹ್ಯಾರಿಸನ್ ಆಂಥೋನಿ ಜೋಸೆಫ್,ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿ ಕೈಕೋಳ ಸಮೇತ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. 42 ವರ್ಷದ ಹ್ಯಾರಿಸನ್ ಆಂಥೋನಿ ಜೋಸೆಫ್ ವಿರುದ್ಧ MCOCA ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ಮಾರ್ಚ್ 2024ರಲ್ಲಿ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ ಆರೋಪ ಎದುರಿಸುತ್ತಿದ್ದಾನೆ. ಆರ್ಥರ್ ರಸ್ತೆ…

Read More

Vasthu Tips: ದಾಂಪತ್ಯದಲ್ಲಿ ಕಲಹವೇ? ನಿಮ್ಮ ಬೆಡ್‌ರೂಮ್‌ನ ಈ ವಾಸ್ತು ದೋಷಗಳೇ ಕಾರಣ! – Kannada News

ದಾಂಪತ್ಯದಲ್ಲಿ ಕಲಹವೇ? Image Credit source: Pinterest ಪತಿ-ಪತ್ನಿಯರ ಸಂಬಂಧವನ್ನು ಅತ್ಯಂತ ಪವಿತ್ರ ಮತ್ತು ಪ್ರಮುಖವಾದುದು ಎಂದು ಪರಿಗಣಿಸಲಾಗುತ್ತದೆ. ಈ ದಾಂಪತ್ಯ ಜೀವನದಲ್ಲಿ ಸದಾ ಪ್ರೀತಿ ಮತ್ತು ಸಾಮರಸ್ಯ ನೆಲೆಸಬೇಕಾದರೆ, ಮನೆಯಲ್ಲಿ ಸಕಾರಾತ್ಮಕ ಶಕ್ತಿ (Positive energy) ಇರುವುದು ಅತ್ಯಂತ ಅವಶ್ಯಕ. ಆದರೆ, ಹಲವು ಬಾರಿ ಎಷ್ಟೇ ಪ್ರಯತ್ನಿಸಿದರೂ ಯಾವುದೇ ಕಾರಣವಿಲ್ಲದೆ ಪತಿ-ಪತ್ನಿಯರ ನಡುವೆ ಅನಗತ್ಯ ಜಗಳ ಮತ್ತು ಮುನಿಸು ಉಂಟಾಗುತ್ತದೆ. ಇಂತಹ ಸನ್ನಿವೇಶಗಳ ಹಿಂದೆ ಬೆಡ್‌ರೂಮ್‌ನ (ಮಲಗುವ ಕೋಣೆ) ವಾಸ್ತು ದೋಷ ಪ್ರಮುಖ ಕಾರಣವಾಗಿರಬಹುದು. ವಾಸ್ತು…

Read More

ಕೊನೆಗೂ ಮಗಳ ಮುಖ ತೋರಿಸಿದ ರಾಮ್ ಚರಣ್, ಉಪಾಸನಾ; ಕ್ಲಿನ್ ಕಾರಾ ಯಾರ ರೀತಿ ಇದ್ದಾಳೆ ನೋಡಿ.. – Kannada News | Peddi actor Ram Charan and wife Upasana Konidela reveal Daughter Klin Kaara face on 3rd birthday

ಟಾಲಿವುಡ್‌ನ ಸ್ಟಾರ್ ಜೋಡಿ ರಾಮ್ ಚರಣ್ (Ram Charan) ಮತ್ತು ಉಪಾಸನಾ ಕೊನಿಡೆಲ ದಂಪತಿ ತಮ್ಮ ಮಕ್ಕಳ ವಿಷಯದಲ್ಲಿ ಇದುವರೆಗೂ ಒಂದು ನಿಯಮ ಪಾಲಿಸುತ್ತಿದ್ದರು. ಮಕ್ಕಳ ಮುಖವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ತೋರಿಸುತ್ತಿರಲಿಲ್ಲ. ಯಾವುದೇ ಫೋಟೋ ಹೊರಬರದಂತೆ ಅವರು ನೋಡಿಕೊಂಡಿದ್ದರು. ಆದರೆ, ಇದೀಗ ತಮ್ಮ ಮೊದಲ ಮಗಳು ಕ್ಲಿನ್ ಕಾರಾ (Klin Kaara) ಮೂರನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ, ಮೊದಲ ಬಾರಿಗೆ ಆಕೆಯ ಮುಖವನ್ನು ಜಗತ್ತಿಗೆ ತೋರಿಸಿದ್ದಾರೆ. 2023ರ ಜೂನ್ ತಿಂಗಳಲ್ಲಿ ಜನಿಸಿದ ಕ್ಲಿನ್ ಕಾರಾಗೆ ಈಗ…

Read More

ಏರ್ ಇಂಡಿಯಾ ಅಪಘಾತ: ಬ್ಲ್ಯಾಕ್ ಬಾಕ್ಸ್ ಆಡಿಯೋ ಬಹಿರಂಗಪಡಿಸಲು ಸಾಧ್ಯವಿಲ್ಲ, ಸುಪ್ರೀಂಗೆ ತನಿಖಾ ಸಂಸ್ಥೆಯ ಉತ್ತರ – Kannada News | Air India Crash CVR: AAIB Tells SC Audio is Confidential Under Law

ನವದೆಹಲಿ, ಜುಲೈ 15: ಅಹಮದಾಬಾದಿನಲ್ಲಿ 2025ರ ಜೂನ್ 12ರಂದು ನಡೆದ ಏರ್ ಇಂಡಿಯಾ(Air India) ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ವಿಮಾನದ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಆಡಿಯೋ ಸೇರಿದಂತೆ ಯಾವುದೇ ನಿರ್ಣಾಯಕ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸುಪ್ರೀಂ ಕೋರ್ಟ್‌ಗೆ ಅಧಿಕೃತವಾಗಿ ತಿಳಿಸಿದೆ. ಅಪಘಾತದಲ್ಲಿ ಮೃತಪಟ್ಟ ಪೈಲಟ್‌ನ ತಂದೆ ಪುಷ್ಕರ್ ರಾಜ್ ಸಭರ್ವಾಲ್ ಅವರು ತನಿಖೆಯ ವಿವರಗಳನ್ನು ಕೋರಿ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಎಎಐಬಿ ಸುಪ್ರೀಂ…

Read More

IND vs AFG: ಚೊಚ್ಚಲ ಸರಣಿಯಲ್ಲೇ ಇತಿಹಾಸ ನಿರ್ಮಿಸಿದ ಗುರ್ನೂರ್ ಬ್ರಾರ್

ಭಾರತದ ಯುವ ವೇಗಿ ಗುರ್ನೂರ್ ಬ್ರಾರ್ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ಗುರ್ನೂರ್ ಬ್ರಾರ್ ಯಾವುದೇ ಭಾರತೀಯ ಬೌಲರ್ ತಮ್ಮ ಏಕದಿನ ಚೊಚ್ಚಲ ಸರಣಿಯಲ್ಲಿ ಇದುವರೆಗೆ ಮಾಡಲು ಸಾಧ್ಯವಾಗದ ಗಮನಾರ್ಹ ದಾಖಲೆಯನ್ನು ನಿರ್ಮಿಸಿದ್ದಾರೆ (PC-PTI). ಮೂರು ಪಂದ್ಯಗಳ ಚೊಚ್ಚಲ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶಿಷ್ಟ ದಾಖಲೆಯನ್ನು ಗುರ್ನೂರ್ ಬ್ರಾರ್ ನಿರ್ಮಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಮೊದಲ ಏಕದಿನ…

Read More

ನಿಮ್ಮ ಉಗುರಿನ ಆಕಾರದಲ್ಲಿದೆ ನಿಮ್ಮ ಭವಿಷ್ಯ! ಉಗುರುಗಳ ಮೂಲಕ ನಿಮ್ಮ ವ್ಯಕ್ತಿತ್ವ ಅರಿಯುವುದು ಹೇಗೆ? – Kannada News | The Ancient Art of Nail Reading: Decoding Personality and Future

ಬೆಂಗಳೂರು, ಮೇ.14: ನಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿಯಲು ಹಲವು ಪ್ರಾಚೀನ ವಿಧಾನಗಳಿವೆ. ಜನ್ಮ ದಿನಾಂಕ, ಹಸ್ತ ಸಾಮುದ್ರಿಕ ಶಾಸ್ತ್ರದ ಜೊತೆಗೆ, ಉಗುರುಗಳನ್ನು ಗಮನಿಸುವುದರಿಂದಲೂ ಒಬ್ಬರ ಗುಣಸ್ವಭಾವಗಳನ್ನು ಅರಿಯಬಹುದು. ಉಗುರಿನ ಆಕಾರವು ನಮ್ಮ ದೇಹದ ವಾತ, ಪಿತ್ತ, ಕಫ ಗುಣಗಳೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಉಗುರುಗಳ ಆಕಾರವನ್ನು ಆಧರಿಸಿ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಈ ಪದ್ಧತಿಯು ನಮ್ಮ ಗುಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಗತ್ಯವಿದ್ದಲ್ಲಿ ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಮುಖ್ಯವಾಗಿ, ಉಗುರುಗಳಲ್ಲಿ ನಾಲ್ಕು ವಿಧಗಳಿವೆ: ಅಗಲವಾದ ಉಗುರು, ವೃತ್ತಾಕಾರದ…

Read More

ಚುನಾವಣಾ ಆಯೋಗದಿಂದ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ 1,000 ಕೋಟಿಗೂ ಹೆಚ್ಚು ಹಣ ವಶಕ್ಕೆ – Kannada News | Election Commission reports over 1000 crore Rs Poll seizures in Tamil Nadu and West Bengal

ನವದೆಹಲಿ, ಏಪ್ರಿಲ್ 22: ಪಶ್ಚಿಮ ಬಂಗಾಳ (West Bengal Assembly Elections) ಮತ್ತು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ (Tamil Nadu Assembly Elections) ನಡೆಯಲಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಮತದಾರರನ್ನು ಆಕರ್ಷಿಸಲು ಉದ್ದೇಶಿಸಲಾದ ನಗದು, ಮಾದಕ ದ್ರವ್ಯಗಳು ಮತ್ತು ಮದ್ಯ ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಶಪಡಿಸಿಕೊಳ್ಳುವಿಕೆಗಳು 1000 ಕೋಟಿ ರೂ.ಗಳನ್ನು ದಾಟಿವೆ ಎಂದು ಚುನಾವಣಾ ಆಯೋಗ (Election Commission) ಇಂದು ತಿಳಿಸಿದೆ. ಈ ವರ್ಷದ ಫೆಬ್ರವರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಹಣ, ಆಲ್ಕೋಹಾಲ್, ಡ್ರಗ್ಸ್, ಅಮೂಲ್ಯವಾದ ಲೋಹಗಳು…

Read More