Headlines

10.45 ಗಂಟೆಯಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಈಜಿದ ಜೋಡಿ: ಐತಿಹಾಸಿಕ ಸಾಧನೆ ಮಾಡಿದ ಬೆಂಗಳೂರಿನ ದಂಪತಿ – Kannada News | Bengaluru Couple’s Historic Swim: Sri Lanka to India in 10h 45m

10.45 ಗಂಟೆಯಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ಈಜಿದ ಜೋಡಿ ಬೆಂಗಳೂರು, ಮೇ 12: ಶ್ರೀಲಂಕಾದಿಂದ ಭಾರತಕ್ಕೆ ಐತಿಹಾಸಿಕ ರಾಮಸೇತು ಮಾರ್ಗದ ಮೂಲಕ ಈಜಿ ಬೆಂಗಳೂರಿನ (Bengaluru) ದಂಪತಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆ ಮೂಲಕ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದ್ ಈ ಮಾರ್ಗದ ಮೂಲಕ ಓಪನ್ ವಾಟರ್ ಈಜು ಪೂರ್ಣಗೊಳಿಸಿದ ಮೊದಲ ಜೋಡಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಮೇ 7ರಂದು ಶ್ರೀಲಂಕಾದ ತಲೈಮನ್ನಾರ್‌ನಿಂದ ಬೆಳಗ್ಗೆ ಸುಮಾರು 4.30ಕ್ಕೆ ಈಜು ಆರಂಭಿಸಿದ್ದ ದಂಪತಿ, ತಮಿಳುನಾಡಿನ ಧನುಷ್ಕೋಡಿಗೆ ಮಧ್ಯಾಹ್ನ ಸುಮಾರು…

Read More

ನಾನು ಹೇಳಿದ್ದು ಹಂಗಲ್ಲ, ಹಿಂಗೆ: ಎಸ್​. ಬದರಿನಾಥ್ ಸ್ಪಷ್ಟನೆ! – Kannada News | S badrinath clarification about krunal pandya commentary

IPL 2026: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯದ ವೇಳೆ ತಮಿಳು ಕಾಮೆಂಟರಿಯಲ್ಲಿ ಮಾಜಿ ಕ್ರಿಕೆಟಿಗ ಎಸ್. ಬದರಿನಾಥ್ ಅವರು ಕೃನಾಲ್ ಪಾಂಡ್ಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ವಿವಾದ ತಾರಕ್ಕೇರುತ್ತಿದ್ದಂತೆ ಬದರಿನಾಥ್ ಅವರು ತಮ್ಮ ಮಾತಿನ ಹಿಂದಿನ ಅಸಲಿ ಉದ್ದೇಶವನ್ನು ವಿವರಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ವಿವಾದದ ಹಿನ್ನೆಲೆ: ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾಗ …

Read More

ಟಿವಿಕೆ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿಯನ್ನೇ ಸರ್ಕಾರದ ವಿಶೇಷ ಅಧಿಕಾರಿಯಾಗಿ ನೇಮಿಸಿದ ಸಿಎಂ ವಿಜಯ್ – Kannada News | Tamil Nadu CM Vijay appoints astrologer Radhan Pandit Vettrivel as Political Special Duty Officer who predicted TVK win

ಚೆನ್ನೈ, ಮೇ 12: ಟಿವಿಕೆ ಮುಖ್ಯಸ್ಥ ಜೋಸೆಫ್ ವಿಜಯ್ (Joseph Vijay) ಅವರ ಗೆಲುವಿನ ಬಗ್ಗೆ ಚುನಾವಣೆಗೂ ಮುನ್ನವೇ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಇಂದು ತಮಿಳುನಾಡು ಮುಖ್ಯಮಂತ್ರಿಯ ವಿಶೇಷ ಕರ್ತವ್ಯ ಅಧಿಕಾರಿ (OSD) ಆಗಿ ನೇಮಿಸಲಾಗಿದೆ. ಈ ನೇಮಕ ಭಾರೀ ಚರ್ಚೆಗೆ ಕಾರಣವಾಗಿದೆ. ಟಿವಿಕೆ (TVK) ಪಕ್ಷವನ್ನು ಕೇವಲ 2 ವರ್ಷಗಳ ಹಿಂದೆ ಸ್ಥಾಪಿಸಲಾಗಿತ್ತು. 2024ರಲ್ಲಿ ನಟ ವಿಜಯ್ ಅವರ ರಾಜಕೀಯ ಉದಯದ ಬಗ್ಗೆ ಖ್ಯಾತ ಜ್ಯೋತಿಷಿಯಾದ ರಾಧನ್ ಪಂಡಿತ್ ಭವಿಷ್ಯ…

Read More

ವಿಜಯ್ ಸಿಎಂ ಆಗುವ ಕನಸು ಇಂದು, ನಿನ್ನೆಯದಲ್ಲ; 15 ವರ್ಷಗಳ ಹಿಂದೆಯೇ ಸೂಚನೆ ಕೊಟ್ಟಿದ್ದ ನಟ – Kannada News | Thalapathy Vijay’s 15 Year Old Viral Video Predicts His CM Journey: Hints of TVK Entry Uncovered!

ತಮಿಳು ಚಿತ್ರರಂಗದ ಅನೇಕರು ರಾಜಕೀಯಕ್ಕೆ ಎಂಟ್ರಿ ಕೊಟ್ಟು ಯಶಸ್ಸು ಕಂಡಿದ್ದಾರೆ. ಈ ಸಾಲಿನಲ್ಲಿ ದಳಪತಿ ವಿಜಯ್ ಕೂಡ ಸೇರಿದ್ದಾರೆ. ಅವರದ್ದು ಅಂತಿಂಥ ಗೆಲುವಲ್ಲ. ಕೆಲವೇ ವರ್ಷಗಳ ಹಿಂದೆ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವನ್ನು ಸ್ಥಾಪಿಸಿ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. 2026ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅವರು ಗೆದ್ದಿದ್ದಾರೆ. ಆದರೆ, ಅವರ ಈ ರಾಜಕೀಯ ಪಯಣದ ಸುಳಿವು 2011ರಲ್ಲೇ ಸಿಕ್ಕಿತ್ತು ಎಂಬುದು ಈಗ ವೈರಲ್ ಆಗುತ್ತಿರುವ ವಿಡಿಯೋದಿಂದ ಸ್ಪಷ್ಟವಾಗುತ್ತಿದೆ. ಅಂದು ವಿಜಯ್ ಹೇಳಿದ್ದೇನು? ವಿಜಯ್ ಆಗಿನ್ನೂ ಸಿನಿಮಾದಲ್ಲಿ…

Read More

ಕೊಟ್ಟ ಮಾತು ಉಳಿಸಿಕೊಳ್ತೇವೆ: ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ – Kannada News | Thalapathy Vijay first speech at Tamil Nadu assembly

ದಳಪತಿ ವಿಜಯ್ (Thalapathy Vijay) ಸಿಎಂ ಆಗಿ ಇತ್ತೀಚೆಗಷ್ಟೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಇಂದು (ಮೇ 15) ಮೊದಲ ವಿಧಾನಸಭೆ ಅಧಿವೇಶದಲ್ಲಿ ಪಾಲ್ಗೊಂಡಿದ್ದಾರೆ. ಎಲ್ಲ ಶಾಸಕರು ಇಂದು ಸ್ಪೀಕರ್ ಎದುರು ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ವಿಜಯ್ ಅವರು ಸದನವನ್ನು ಉದ್ದೇಶಿಸಿ ಇದೇ ಮೊದಲ ಬಾರಿಗೆ ಭಾಷಣ ಮಾಡಿದ್ದಾರೆ. ತಮ್ಮ ಭಾಷಣದಲ್ಲಿ ಅವರು ತಾವು ಚುನಾವಣೆಗೆ ಮುಂಚೆ ಕೊಟ್ಟಿದ್ದ ಮಾತುಗಳನ್ನು ಉಳಿಸಿಕೊಳ್ಳಲಿದ್ದೇವೆ ಎಂದು ಸಹ ಹೇಳಿದ್ದಾರೆ. ವಿಡಿಯೋ ನೋಡಿ.. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…

Read More

ಇಂಧನ ಬಿಕ್ಕಟ್ಟು; ವರ್ಕ್ ಫ್ರಂ ಹೋಂ, ಪೆಟ್ರೋಲ್ ಖರೀದಿಮಿತಿ ಇತ್ಯಾದಿ ಕ್ರಮ ಜಾರಿಯಲ್ಲಿರುವ ದೇಶಗಳು – Kannada News | Global Energy Crisis: Nations Combat Rising Oil Prices & Fuel Shortages

ನವದೆಹಲಿ, ಮೇ 12: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ಇಂಧನ ಬಿಕ್ಕಟ್ಟು ಎದುರಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಮತ್ತು ಆಮದು ವಸ್ತುಗಳ ಬಳಕೆ ಕಡಿಮೆ ಮಾಡಲು ವಿವಿಧ ಮಾರ್ಗೋಪಾಯಗಳನ್ನು ತಿಳಿಸಿ, ಅದನ್ನು ಪಾಲಿಸುವಂತೆ ಜನತೆ ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಗೆ ಮನವಿ ಮಾಡಿದ್ದು ಹೌದು. ಈ ರೀತಿ, ತೈಲ ಬೆಲೆ ಏರಿಕೆ ಮತ್ತು ಪೂರೈಕೆಯಲ್ಲಿನ ವ್ಯತ್ಯಯವನ್ನು ನಿಭಾಯಿಸಲು ವಿಶ್ವದ ಅನೇಕ ದೇಶಗಳು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ. 4 ದಿನಗಳ ಕೆಲಸದ…

Read More

ಇದುವೇ ನನ್ನ ಏಕೈಕ ಗುರಿ: ಮನದಿಂಗಿತ ಬಿಟ್ಟಿಟ್ಟ ಕೃನಾಲ್ ಪಾಂಡ್ಯ – Kannada News | Krunal Pandya Sets Sights on 2027 ODI World Cup Comeback

ಐಪಿಎಲ್ 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮ್ಯಾಚ್-ವಿನ್ನರ್ ಆಗಿ ಹೊರಹೊಮ್ಮುತ್ತಿರುವ ಕೃನಾಲ್ ಪಾಂಡ್ಯ, ರಾಷ್ಟ್ರೀಯ ತಂಡಕ್ಕೆ ಮರಳುವ ಇಚ್ಛೆಯನ್ನು ಬಹಿರಂಗಪಡಿಸಿದ್ದಾರೆ. 2027ರಲ್ಲಿ ಆಫ್ರಿಕಾ ಮಣ್ಣಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದೇ ನನ್ನ ಪರಮ ಗುರಿ ಎಂದು ಘೋಷಿಸಿರುವ ಅವರ ಈ ಹೇಳಿಕೆ ಈಗ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮಾತನಾಡಿದ ಕೃನಾಲ್ ಪಾಂಡ್ಯ, ನನಗೆ 6-7 ವಯಸ್ಸಿದ್ದಾಗಿನಿಂದಲೂ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ. ಆ ಕನಸು ಇಂದಿಗೂ ಬದಲಾಗಿಲ್ಲ….

Read More

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಸಿಬಿಐನಿಂದ ಮಹತ್ವದ ಸಾಕ್ಷಿ ಪತ್ತೆ – Kannada News | NEET UG Scam: CBI Raids Nashik, Major Breakthrough in Paper Leak Investigation

ದೆಹಲಿ, ಮೇ.12: ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಈಗ ಮಹಾರಾಷ್ಟ್ರದ ನಾಸಿಕ್ ನಗರದ ಲಿಂಕ್ ಇರುವುದು ಪತ್ತೆಯಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ (CBI) ಅಧಿಕಾರಿಗಳು ನಾಸಿಕ್‌ನಲ್ಲಿ ಕಾರ್ಯಾಚರಣೆ ನಡೆಸಿ ಓರ್ವ ಪ್ರಮುಖ ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ. ರಾಜಸ್ಥಾನ ಮತ್ತು ಬಿಹಾರದಲ್ಲಿ ಈ ಹಿಂದೆ ನಡೆದಿದ್ದ ಬಂಧನಗಳ ಬೆನ್ನಲ್ಲೇ, ತನಿಖಾ ಸಂಸ್ಥೆಗಳಿಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಈ ದಂಧೆಯ ಕೊಂಡಿಗಳು ಇರುವುದು ಸಾಬೀತಾಗಿದೆ. ವಶಕ್ಕೆ ಪಡೆದ ಶಂಕಿತ ವ್ಯಕ್ತಿಯು ಪರೀಕ್ಷೆಗೂ ಮುನ್ನವೇ ಅಭ್ಯರ್ಥಿಗಳಿಗೆ…

Read More

ವಿಜಯಪುರ: ಬೀದಿನಾಯಿಗಳ ಹಾವಳಿ ಬೆನ್ನಲ್ಲೇ ದುಷ್ಕರ್ಮಿಗಳಿಂದ ವಿಷಪ್ರಾಶನ; 6 ಶ್ವಾನಗಳು ಸಾವು – Kannada News | Vijayapura Stray Dog Menace Sparks Outrage After Miscreants Poison 6 Dogs

ವಿಜಯಪುರ, ಮೇ 12: ನಗರದಲ್ಲಿ ಬೀದಿನಾಯಿಗಳ (street dogs) ಹಾವಳಿ ಮುಂದುವರಿದಿರುವ ಬೆನ್ನಲ್ಲೇ ದುಷ್ಕರ್ಮಿಗಳು ಬೀದಿನಾಯಿಗಳಿಗೆ ವಿಷಾಹಾರ ನೀಡಿದ್ದು, ಆರು ಬೀದಿನಾಯಿಗಳು ನರಳಿ ನರಳಿ ಪ್ರಾಣಬಿಟ್ಟಿರುವ (death) ಆತಂಕಕಾರಿ ಘಟನೆ ಶಾಂತಿ ನಗರದಲ್ಲಿ ನಡೆದಿದೆ. ಎರಡು ನಾಯಿಗಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಶಾಂತಿ ನಗರದಲ್ಲಿ ಈವರೆಗೆ ನಾಯಿಗಳ ದಾಳಿ ಪ್ರಕರಣ ವರದಿಯಾಗದಿದ್ದರೂ ವಿಷಾಹಾರ ನೀಡಿರುವುದು ಮಾತ್ರ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ವಿಷ ಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ಮುಖ್ಯಾಂಶಗಳು ವಿಜಯಪುರದಲ್ಲಿ ಬೀದಿನಾಯಿಗಳಿಗೆ…

Read More

ಗದಗದ ಸರ್ಕಾರಿ ಕಚೇರಿಗೆ ಕತ್ತಲೆ ಭಾಗ್ಯ: ಸಾರ್ವಜನಿಕರು, ಸಿಬ್ಬಂದಿ ಮೊಬೈಲ್​​ ಟಾರ್ಚೇ ಇಲ್ಲಿ ಬೆಳಕು! – Kannada News | Electricity Cut Over Rupees 3,000 Dues, Gadag Government Office Left in Darkness for 8 Months

ದಗದ ಸರ್ಕಾರಿ ಕಚೇರಿಗೆ ಕತ್ತಲೆ ಭಾಗ್ಯ ಗದಗ, ಮೇ 12: ಗೃಹ ಜ್ಯೋತಿ ಯೋಜನೆಯಡಿ ಮನೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ, ಇದರಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದು ರಾಜ್ಯ ಸರ್ಕಾರವೇನೋ ಗರ್ವದಿಂದ ಹೇಳಿಕೊಳ್ಳುತ್ತಿದೆ. ಆದರೆ ಇದೇ ಸರ್ಕಾರದ ಅಡಿಯಲ್ಲಿ ಬರುವ ಗದಗದ ಕಚೇರಿಯೊಂದು ಒಂದೆರಡಲ್ಲ ಬರೋಬ್ಬರಿ 8 ತಿಂಗಳಿನಿಂದ ಕತ್ತಲೆ ಭಾಗ್ಯದಲ್ಲಿದೆ. ಬಿಲ್​​ ಪಾವತಿಸದೇ ಇರುವ ಕಾರಣ ವಿದ್ಯುತ್​​ ಸಂಪರ್ಕ ಕಡಿತಗೊಳಿಸಲಾಗಿದ್ದು, ಸಾರ್ವಜನಿಕರು ಹಾಗೂ ಸಿಬ್ಬಂದಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿಯೇ ದಿನನಿತ್ಯದ ವ್ಯವಹಾರ ನಿರ್ವಹಿಸಬೇಕಾದ ಸ್ಥಿತಿ…

Read More