Headlines

ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಮಾತ್ರ! – Kannada News | Mangaluru II PUC Digital Mark Sheets: DigiLocker Mandatory, Sparks Foreign Study Concerns

ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಮಾತ್ರ! Image Credit source: NewsFirst Prime ಮಂಗಳೂರು, ಏಪ್ರಿಲ್ 15: ಮಂಗಳೂರು ಪದವಿ ಪೂರ್ವ ಶಿಕ್ಷಣ ಇಲಾಖೆ (DPUE) ಮುಂದಿನ ಶೈಕ್ಷಣಿಕ ವರ್ಷದಿಂದ ದ್ವಿತೀಯ ಪಿಯುಸಿ (II PUC) ಅಂಕಪಟ್ಟಿಗಳನ್ನು ಕೇವಲ ಡಿಜಿಟಲ್ ರೂಪದಲ್ಲಿ ಡಿಜಿಲಾಕರ್ (DigiLocker) ಮೂಲಕ ಮಾತ್ರ ನೀಡಲು ಯೋಜನೆ ರೂಪಿಸಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತಂಕ ಮೂಡಿಸಿದೆ. ಪೋಷಕರ ಆತಂಕ ಅಧಿಕಾರಿಗಳ ಪ್ರಕಾರ, ಡಿಜಿಟಲ್ ಅಂಕಪಟ್ಟಿಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ…

Read More

SRH vs CSK: ಈ ಆವೃತ್ತಿಯ ವೇಗದ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ – Kannada News | Abhishek Sharma’s Fastest IPL Fifty: SRH Star Smashes Record vs CSK in 2026!

ಐಪಿಎಲ್ 2026 ರ 27 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್​ರೈಸರ್ಸ್​ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸನ್​ರೈಸರ್ಸ್​ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಅಭಿ ಅವರ ಈ ಅರ್ಧಶತಕದ ಇನ್ನಿಂಗ್ಸ್​ನಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ಅಂದರೆ, ಅವರು ಕೇವಲ 9…

Read More

ಛತ್ತೀಸ್‌ಗಢದಲ್ಲಿ ಐಇಡಿ ನಿಷ್ಕ್ರಿಯಗೊಳಿಸುವಾಗ ಸ್ಫೋಟ; ನಾಲ್ವರು ಭದ್ರತಾ ಸಿಬ್ಬಂದಿ ಸಾವು – Kannada News | 4 DRG personnel killed in IED Blast during demining operation in Chhattisgarh

ನವದೆಹಲಿ, ಮೇ 2: ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ಇಂದು ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡು ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ)ಯ ನಾಲ್ವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಇನ್ನೋರ್ವ ಸೈನಿಕ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಂಡವು ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿದ್ದಾಗ ಬಾಂಬ್ ಸ್ಫೋಟ ಸಂಭವಿಸಿದೆ. ಇದು ಮಾರ್ಚ್ 31ರಂದು ಭಾರತ ದೇಶವನ್ನು ಸಶಸ್ತ್ರ ಮಾವೋವಾದಿಗಳಿಂದ ಮುಕ್ತವೆಂದು ಘೋಷಿಸಿದ ನಂತರ ಛತ್ತೀಸ್​ಗಢ ರಾಜ್ಯದಲ್ಲಿ ನಕ್ಸಲೀಯರಿಗೆ ಸಂಬಂಧಿಸಿದ ಹಿಂಸಾಚಾರದ ಮೊದಲ ಘಟನೆಯಾಗಿದೆ. ಚೊಟೆಬೆಥಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ನಾರಾಯಣಪುರ ಜಿಲ್ಲೆಯ…

Read More

ಸಿಎಂ ನಿತೀಶ್ ಕುಮಾರ್​ ಹೆಲಿಕಾಪ್ಟರ್ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ದಿಕ್ಕಾಪಾಲಾಗಿ ಓಡಿದ ಪೊಲೀಸರು

ಪಾಟ್ನಾ, ಮಾರ್ಚ್ 14: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಆಗಮನಕ್ಕೂ ಮೊದಲು ಬೇಗುಸರೈನಲ್ಲಿರುವ ಹೆಲಿಪ್ಯಾಡ್‌ನೊಳಗೆ ನುಗ್ಗಿದ ಗೂಳಿ ಕೆಲಕಾಲ ಆತಂಕ ಸೃಷ್ಟಿಸಿತು. ಸಮೃದ್ಧಿ ಯಾತ್ರೆಯ ಭಾಗವಾಗಿ ಸಿಎಂ ಭೇಟಿಗೆ ಸಿದ್ಧತೆ ನಡೆಸುತ್ತಿದ್ದಾಗ ನಡೆದ ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಹೆಲಿಪ್ಯಾಡ್​​ಗೆ ನುಗ್ಗಿದ ಗೂಳಿ ಪೊಲೀಸರನ್ನು ಅಟ್ಟಿಸಿಕೊಂಡು ಹೋಗಿದೆ. ಇದರಿಂದ ಹೆದರಿದ ಪೊಲೀಸರು ಜೀವ ಉಳಿಸಿಕೊಳ್ಳಲು ಮೈದಾನದಿಂದ ಹೊರಗೆ ಓಡಿದ್ದಾರೆ. ಮುಖ್ಯಮಂತ್ರಿ ಆಗಮನಕ್ಕೂ ಮುನ್ನ ಸ್ಥಳವನ್ನು ಸುರಕ್ಷಿತಗೊಳಿಸಲಾಗಿತ್ತು. ಹೆಲಿಪ್ಯಾಡ್ ಪ್ರದೇಶವು ಬಿದಿರಿನ ಬ್ಯಾರಿಕೇಡ್‌ಗಳಿಂದ ಸುತ್ತುವರೆದಿತ್ತು. ಅಧಿಕೃತ…

Read More

ಇರಾನ್ ದಾಳಿಗೆ ಹೊತ್ತಿ ಉರಿದ ಕತಾರ್​ನ ಅತಿದೊಡ್ಡ ಎಲ್​ಎನ್​ಜಿ ಸ್ಥಾವರ

ಕತಾರ್, ಮಾರ್ಚ್ 19: ಮಧ್ಯಪ್ರಾಚ್ಯದಲ್ಲಿ ಯುದ್ಧದ ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ಇರಾನ್ ಅಮೆರಿಕದ ಸ್ವತ್ತುಗಳನ್ನು ಗುರಿಯಾಗಿಸಿಕೊಂಡಿದೆ ಮತ್ತು ಇಂಧನ ಸೌಲಭ್ಯಗಳನ್ನು ಸಹ ಧ್ವಂಸಗೊಳಿಸಿದೆ. ಇರಾನ್ (Iran War) ಇಂದು ಕತಾರ್‌ನ ಅತಿದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಸ್ಥಾವರವಾದ ರಾಸ್ ಲಫಾನ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ನಂತರ ಅಂತಾರಾಷ್ಟ್ರೀಯ ತೈಲ ಮತ್ತು ಅನಿಲ ಮಾರುಕಟ್ಟೆಗಳಲ್ಲಿ ಪ್ರಕ್ಷುಬ್ಧತೆ ತೀವ್ರಗೊಂಡಿದೆ. ವಿಶ್ವದ ಅತಿದೊಡ್ಡ ಎಲ್‌ಎನ್‌ಜಿ ಸೌಲಭ್ಯದ ಮೇಲಿನ ದಾಳಿಯ ನೇರ ಪರಿಣಾಮವಾಗಿ ಈ ಸ್ಥಳದಲ್ಲಿ ತೈಲದ ಉತ್ಪಾದನೆಯನ್ನು…

Read More

ಬಿಹಾರದ ಬಾನ್ಸ್ ಘಾಟ್ ಚಿತಾಗಾರವನ್ನು ಸಂಪೂರ್ಣ ಆಧುನೀಕರಣಗೊಳಿಸಿದ ಇಶಾ ಫೌಂಡೇಷನ್​ – Kannada News | 5 Ways Baans Ghat Crematorium Is Transforming Cremation Services in Bihar Patna by Isha Foundation

ಪಾಟ್ನಾ, ಜೂನ್ 29: ಬಿಹಾರದ ಪಾಟ್ನಾದಲ್ಲಿರುವ ಏಷ್ಯಾದ ಅತಿ ದೊಡ್ಡ ಚಿತಾಗಾರಗಳಲ್ಲಿ ಒಂದಾದ ‘ಬಾನ್ಸ್ ಘಾಟ್’ ಅನ್ನು ಇಶಾ ಔಟ್‌ರೀಚ್ ಸಂಸ್ಥೆಯು ಆಧುನೀಕರಣಗೊಳಿಸುತ್ತಿದೆ. ಇಶಾ ಫೌಂಡೇಷನ್ (Isha Foundation) ತಮಿಳುನಾಡು ಸರ್ಕಾರದ ಸಹಯೋಗದೊಂದಿಗೆ ಚಿತಾಗಾರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವವನ್ನು ಗುರುತಿಸಿ, ಬಿಹಾರ ಸರ್ಕಾರವು ಪಾಟ್ನಾದ ‘ಬಾನ್ಸ್ ಘಾಟ್ ಚಿತಾಗಾರ’ದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ವಹಿಸಿಕೊಳ್ಳಲು ಇಶಾ ಫೌಂಡೇಶನ್‌ನ ಸಾಮಾಜಿಕ ಮತ್ತು ಪರಿಸರ ಕಲ್ಯಾಣ ವಿಭಾಗವಾದ ‘ಇಶಾ ಔಟ್‌ರೀಚ್’ ಅನ್ನು ಆಹ್ವಾನಿಸಿದೆ. ಸಾಂಪ್ರದಾಯಿಕ ಅಂತ್ಯಸಂಸ್ಕಾರದ ಪವಿತ್ರತೆಯನ್ನು ಕಾಪಾಡಿಕೊಳ್ಳುವ ಜೊತೆಗೆ,…

Read More

ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ – Kannada News | Abhishek of Lord Neelkanthvarni performed by baps during New Year Celebration

ನವದೆಹಲಿ, ಜನವರಿ 1: 2026ರ ಹೊಸ ವರ್ಷದ ಪ್ರಯುಕ್ತ ಬಿಎಪಿಎಸ್ (BAPS)  ಸ್ವಾಮಿನಾರಾಯಣ ಸಂಸ್ಥೆಯು ಪ್ರಪಂಚದಾದ್ಯಂತದ ಭಕ್ತರಿಗೆ ತನ್ನ ಆತ್ಮೀಯ ಶುಭಾಶಯಗಳನ್ನು ಕೋರಿದೆ. ಈ ವರ್ಷ ಪ್ರತಿಯೊಬ್ಬರ ಜೀವನದಲ್ಲಿ ಶಾಂತಿ, ಸಮೃದ್ಧಿ, ಆರೋಗ್ಯ ಮತ್ತು ಆಧ್ಯಾತ್ಮಿಕ ಅಭಿವೃದ್ಧಿಯಿಂದ ತುಂಬಿದ ವರ್ಷವಾಗಲಿ ಎಂದು ಸಂಸ್ಥೆಯು ಹಾರೈಸಿದೆ. ಬಿಎಪಿಎಸ್ ಆಧ್ಯಾತ್ಮಿಕ ಗುರು ಮಹಾಂತ ಸ್ವಾಮಿ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಈ ಹೊಸ ವರ್ಷವು ಭಕ್ತರ ಜೀವನವನ್ನು ದೈವಿಕ ಆಶೀರ್ವಾದ, ಆಂತರಿಕ ಶಕ್ತಿ ಮತ್ತು ಸಂತೋಷದಿಂದ ತುಂಬಲಿ ಎಂದು ನಾವು ಪ್ರಾರ್ಥಿಸುತ್ತೇವೆ…

Read More

ಕನಕಪುರ ಶ್ರೀನಿವಾಸ್ ಅಶ್ಲೀಲ ಮಾತಿಗೆ ಕಿಚ್ಚ ಸುದೀಪ್ ಖಡಕ್ ರಿಯಾಕ್ಷನ್ – Kannada News | Kichcha Sudeep reaction to Kanakapura Srinivas derogatory speech

ನಿರ್ಮಾಪಕ ಕನಕಪುರ ಶ್ರೀನಿವಾಸ್ (Kanakapura Srinivas) ಅವರು ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಅನೇಕರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಡಿಕೆ ಶಿವಕುಮಾರ್, ಧ್ರುವ ಸರ್ಜಾ, ಎ.ಪಿ. ಅರ್ಜುನ್, ಜೋಗಿ ಪ್ರೇಮ್, ಪುನೀತ್ ರಾಜ್​ಕುಮಾರ್ ಸೇರಿದಂತೆ ಹಲವರ ವಿರುದ್ಧ ಅವರು ಅಶ್ಲೀಲವಾಗಿ ಮಾತನಾಡಿದ್ದರು. ಅದಕ್ಕೆ ಚಿತ್ರರಂಗದಲ್ಲಿ ಖಂಡನೆ ವ್ಯಕ್ತವಾಗಿದೆ. ಸಿಸಿಎಲ್ ಗೆಲುವಿನ ಸುದ್ದಿಗೋಷ್ಠಿಯಲ್ಲಿ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಈ ಬಗ್ಗೆ ಪ್ರಶ್ನೆ ಕೇಳಲಾಯಿತು. ತಮ್ಮದೇ ರೀತಿಯಲ್ಲಿ ಅವರು ಉತ್ತರ ನೀಡಿದ್ದಾರೆ. ‘ಇದು ಸಿಸಿಎಲ್ ಸುದ್ದಿಗೋಷ್ಠಿ. ಸಿಹಿ ತಿನ್ನುವ…

Read More

ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!

ನವದೆಹಲಿ, ಏಪ್ರಿಲ್ 13: ರಾತ್ರಿಯಾಗುತ್ತಿದ್ದಂತೆ ಕಳ್ಳರು ಅಲರ್ಟ್ ಆಗಿ ಬಿಡುತ್ತಾರೆ. ಎಷ್ಟೇ ಬಂದೋಬಸ್ತ್ ಇದ್ದರೂ ಕಳ್ಳರಿಂದ ಅಂಗಡಿ, ಮನೆಗಳನ್ನು ಕಾಪಾಡಿಕೊಳ್ಳುವುದೇ ನಗರಗಳ ಜನರಿಗೆ ದೊಡ್ಡ ತಲೆನೋವು. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿರುವ ವಿಡಿಯೋದಲ್ಲಿ ಕಳ್ಳರು ದರೋಡೆ ಮಾಡಲೆಂದು ಅಂಗಡಿಯೊಳಗೆ ನುಗ್ಗುತ್ತಾರೆ. ಆದರೆ, ಅಂಗಡಿಯ ಹೊರಗಿದ್ದ ಜನರು ಆ ಶಾಪ್​ನ ಶಟರ್ ಎಳೆದು ಆ ಕಳ್ಳರನ್ನು ಕೂಡಿಹಾಕುತ್ತಾರೆ. ಇದರಿಂದ ಒಳಗಿರುವ ಕಳ್ಳರು ಗಾಬರಿಯಾಗಿ ಕಿರುಚಾಡುತ್ತಾ ಶಟರ್ ಬಾಗಿಲು ಬಡಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊರಗಿದ್ದ…

Read More

ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ, ಆರೆಂಜ್ ಅಲರ್ಟ್ ಘೋಷಣೆ: ಶಾಲೆ, ಕಾಲೇಜುಗಳಿಗೆ ರಜೆ – Kannada News | Dakshina Kannada Orange Alert: Schools and Colleges Closed Today as Heavy Rain Lashes Coastal Karnataka

ಮಂಗಳೂರು, ಜುಲೈ 23: ಕರ್ನಾಟಕದ ಹಲವೆಡೆ ಮತ್ತೆ ಮುಂಗಾರು ಮಳೆ ಚುರುಕುಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಇಂದು (ಜುಲೈ 23) ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲೆಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಹಲವು ದಿನಗಳಿಂದ ಜಿಲ್ಲೆಯ ವಿವಿಧೆಡೆ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಭೂಕುಸಿತ ಮತ್ತು ಪ್ರವಾಹದ ಭೀತಿಯನ್ನು ಹೆಚ್ಚಿಸಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ…

Read More