Headlines

Daily Devotional: ದೇವಾಲಯದ ಹೊರಗೆ ಚಪ್ಪಲಿ ಯಾಕೆ ಬಿಟ್ಟು ಹೋಗಬೇಕು? – Kannada News | Daily Devotional: Why should you leave your slippers outside the temple?

ಬೆಂಗಳೂರು, ಫೆಬ್ರವರಿ​ 11: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿದೇವಾಲಯದ ಹೊರಗೆ ಚಪ್ಪಲಿ ಯಾಕೆ ಬಿಟ್ಟು ಹೋಗಬೇಕು? ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಪಾದರಕ್ಷೆಗಳು ನಮ್ಮ ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ಕಾಲಿನ ರಕ್ಷಣೆಗೆ ಮಾತ್ರ ಸೀಮಿತವಾಗದೆ, ಅವು ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಭಾಗವಾಗಿವೆ. ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಚಪ್ಪಲಿಗಳನ್ನು ಹೊರಗೆ ಬಿಡುವುದು ಅಹಂಕಾರ ಮತ್ತು ದರ್ಪವನ್ನು ತ್ಯಾಗ ಮಾಡುವ ಸಂಕೇತವಾಗಿದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಇದು ವಿನಮ್ರವಾಗಿ ದೈವದ ಮುಂದೆ…

Read More

ಕರ್ನಾಟಕ ಹವಾಮಾನ ವರದಿ: ರಾಜ್ಯದೆಲ್ಲೆಡೆ ಚಳಿ, ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ – Kannada News | Bengaluru temperature: Extreme cold weather in Bengaluru, Yellow alert for 4 districts

ರಾಜ್ಯದೆಲ್ಲೆಡೆ ಚಳಿ, ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಬೆಂಗಳೂರು, ಡಿಸೆಂಬರ್ 19: ರಾಜ್ಯದೆಲ್ಲೆಡೆ ಶೀತದಲೆ (Weather Forecast) ಅಬ್ಬರಿಸುತ್ತಿದ್ದು, ಚಳಿಯ ಪ್ರಭಾವದಿಂದ ಜನಜೀವನದಲ್ಲಿ ಬದಲಾವಣೆ ಕಂಡುಬಂದಿದೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಶೀತದ ಪ್ರಮಾಣ ಹೆಚ್ಚಿದ್ದು, ಹವಾಮಾನ ಇಲಾಖೆ ಈ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಿಸಿದೆ. ಬೆಂಗಳೂರಿನಲ್ಲೂ ಮೈಕೊರೆಯುವ ಚಳಿ ಜನರನ್ನು ಬೆಂಬಿಡದೆ ಕಾಡುತ್ತಿದ್ದು, ಮೋಡ ಮುಸುಕಿದ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ. ಎಲ್ಲೆಲ್ಲಿ ಒಣ ಹವೆ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ,…

Read More

EA ಸ್ಪೋರ್ಟ್ಸ್ ಭವಿಷ್ಯವಾಣಿ: ಈ ಬಾರಿ ಕಪ್ ಯಾರಿಗೆ ಗೊತ್ತಾ? – Kannada News | EA Sports FC predicted Spain to win the 2026 FIFA World Cup

2026ರ ಫಿಫಾ ವಿಶ್ವಕಪ್ ಚಾಂಪಿಯನ್ ಪಟ್ಟ ಯಾರಿಗೆ ಒಲಿಯಲಿದೆ? ಈ ಪ್ರಶ್ನೆಗೆ EA ಸ್ಪೋರ್ಟ್ಸ್ ಭವಿಷ್ಯವಾಣಿ ಇದೀಗ ಉತ್ತರವಾಗಿ ಸಿಗುತ್ತಿದೆ. ಕಳೆದ ನಾಲ್ಕು ವಿಶ್ವಕಪ್ ಆವೃತ್ತಿಗಳಲ್ಲಿ ಯಾರೂ ಊಹಿಸದ ನಿಖರ ಫಲಿತಾಂಶ ನೀಡಿ ಕ್ರೀಡಾಲೋಕವನ್ನು ಬೆರಗುಗೊಳಿಸಿದ್ದ ಇಎ ಸ್ಪೋರ್ಟ್ಸ್ (EA Sports) ಸೂಪರ್ ಕಂಪ್ಯೂಟರ್, ಇದೀಗ ಮತ್ತೊಮ್ಮೆ ತನ್ನ ಅಂತಿಮ ಭವಿಷ್ಯವನ್ನು ಹೊರಹಾಕಿದೆ. ಈ ಭವಿಷ್ಯವಾಣಿಯಂತೆ ಈ ಬಾರಿ ಸ್ಪೇನ್ ಚಾಂಪಿಯನ್ ಪಟ್ಟಕ್ಕೇರಲಿದೆ. ಸತತ 4 ಬಾರಿ ನಿಖರ ಭವಿಷ್ಯ! EA ಸ್ಪೋರ್ಟ್ಸ್‌ನ ಈ ಭವಿಷ್ಯವಾಣಿಯನ್ನು ಕ್ರೀಡಾ…

Read More

ಅಂಜನಾದ್ರಿ ದೇವಸ್ಥಾನಕ್ಕೆ ಬಂಗಾರದ ಕವಚ ದೇಣಿಗೆ: ದಾಖಲೆಗಳ ಪುನರ್ ಪರಿಶೀಲನೆಗೆ ಮುಂದಾದ ಜಿಲ್ಲಾಡಳಿತ! – Kannada News | Anjanadri Temple Gold Donation Controversy: Kolar Administration Re verifies Documents of Mahesh Reddy

ಅಂಜನಾದ್ರಿ ದೇವಸ್ಥಾನಕ್ಕೆ ಬಂಗಾರದ ಕವಚ ದೇಣಿಗೆ: ದಾಖಲೆಗಳ ಪುನರ್ ಪರಿಶೀಲನೆಗೆ ಮುಂದಾದ ಜಿಲ್ಲಾಡಳಿತ! ಕೊಪ್ಪಳ, ಮೇ 12: ಹನುಮ ಜನ್ಮಸ್ಥಳ ಎಂದೇ ಪ್ರಸಿದ್ಧವಾಗಿರುವ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ನೀಡಿದ ಸುಮಾರು 2.50 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳ ವಿಚಾರದಲ್ಲಿ ಈಗ ಗೊಂದಲ ಮೂಡಿದ್ದು, ಜಿಲ್ಲಾಡಳಿತವು ದಾಖಲೆಗಳ ಮರುಪರಿಶೀಲನೆಗೆ ಮುಂದಾಗಿದೆ. ಪಂಚನಾಮ ಪ್ರಕ್ರಿಯೆಯ ನಂತರ ಎಲ್ಲಾ ಆಭರಣಗಳನ್ನು ದೇವಸ್ಥಾನದ ಸಮಿತಿಯ ಸುಪರ್ದಿಗೆ ತೆಗೆದುಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ….

Read More

Bengaluru Air Quality: ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿಲ್ಲ ಸುಧಾರಣೆ! – Kannada News | Bangalore Air Pollution Crisis: Bengaluru’s Air quality is poor, need precautions

ಬೆಂಗಳೂರಿನ ಗಾಳಿಯ ಗುಣಮಟ್ಟದಲ್ಲಿಲ್ಲ ಸುಧಾರಣೆ! ಬೆಂಗಳೂರು, ಜನವರಿ 16: ಕಳೆದ ಕೆಲ ದಿನಗಳಿಂದ ಹೋಲಿಸಿದರೆ ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) ಸುಧಾರಿಸುತ್ತಿದೆ ಎಂದೆನಿಸಿದರೂ ಇಂದಿನ ಸೂಚ್ಯಂಕ ನೋಡಿದರೆ ಮತ್ತೊಮ್ಮೆ ನಗರದ ಗಾಳಿಯ ಗುಣಮಟ್ಟ ಹದಗೆಟ್ಟಂತಿದೆ. ನಗರಗಳಲ್ಲಿ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರಿನ…

Read More

ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ: ಕ್ಯಾಮರಾಗಳಿಗೆ ಬೆರಳು ತೋರಿಸಿ ಧಿಮಾಕು – Kannada News | Suspected Terror Accused Suhail Acts Defiantly During Medical Examination, Gestures at Cameras

ದಾವಣಗೆರೆ, ಜುಲೈ 01: ಜಿಲ್ಲೆಯ ಹರಿಹರದಲ್ಲಿ ಬಂಧಿಸಲಾದ ಶಂಕಿತ ಉಗ್ರ ಸುಹೇಲ್, ವೈದ್ಯಕೀಯ ಪರೀಕ್ಷೆಗೆ ಕರೆತಂದಾಗ ಮಾಧ್ಯಮಗಳ ಕ್ಯಾಮರಾಗಳ ಮುಂದೆ ಅಹಂಕಾರದಿಂದ ವರ್ತಿಸಿರುವುದು ಬೆಳಕಿಗೆ ಬಂದಿದೆ. ಜೂನ್ 23ರಂದು ಹರಿಹರ ತಾಲೂಕಿನ ಬನ್ನಿಕೋಡ ಗ್ರಾಮದಲ್ಲಿ ಎನ್ಐಎ ಅಧಿಕಾರಿಗಳು ಸುಹೇಲ್‌ನನ್ನು ಬಂಧಿಸಿದ್ದರು. ಬಂಧನದ ನಂತರ ವೈದ್ಯಕೀಯ ಪರೀಕ್ಷೆಗಾಗಿ ಹರಿಹರ ಆಸ್ಪತ್ರೆ ಆವರಣಕ್ಕೆ ಕರೆತಂದ ಸಂದರ್ಭದಲ್ಲಿ, ಪೊಲೀಸ್ ವಾಹನದಲ್ಲಿ ಕುಳಿತಿದ್ದ ಸುಹೇಲ್ ಕ್ಯಾಮರಾಗಳತ್ತ ಬೆರಳು ತೋರಿಸುವ ಮೂಲಕ ತನ್ನ ಉದ್ದಟತನವನ್ನು ಪ್ರದರ್ಶಿಸಿದ್ದಾನೆ. ಶಂಕಿತ ಉಗ್ರನ ಈ ವರ್ತನೆಯು ಆಕ್ರೋಶಕ್ಕೆ ಕಾರಣವಾಗಿದೆ….

Read More

ಊಟ ಮಾಡುವಾಗ ಫೋನ್ ಬಳಸುವ ಅಭ್ಯಾಸ ನಿಮಗಿದ್ಯಾ? ಇದರಿಂದ ಕರುಳಿನ ಆರೋಗ್ಯ ಹಾಳಾಗುತ್ತೆ ಹುಷಾರ್!

ಇಂದಿನ ಕಾಲದಲ್ಲಿ ಅನಾರೋಗ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಮತ್ತು ಅಸ್ಥಿರ ಜೀವನ ಶೈಲಿ. ಈಗ ಹೆಚ್ಚಿನವರು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ತಿನ್ನುತ್ತಾರೆ. ಅಷ್ಟು ಮಾತ್ರವಲ್ಲ, ಊಟ ಮಾಡುವಾಗ ಮೊಬೈಲ್ ಬಳಸದೆಯೇ ಊಟ ಮಾಡುವುದೇ ಇಲ್ಲ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ಅಭ್ಯಾಸ ನಿಮ್ಮ ಆರೋಗ್ಯಕ್ಕೆ, ಅದರಲ್ಲಿಯೂ ಕರುಳಿನ ಆರೋಗ್ಯಕ್ಕೆ (Gut Health) ಹಾನಿ ಉಂಟುಮಾಡಬಹುದು. ಹಾಗಾದರೆ ಫೋನ್ ಬಳಕೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆಯೇ, ಆರೋಗ್ಯ ಕಾಪಾಡಿಕೊಳ್ಳಲು…

Read More

ಬಿಆರ್​​ಎಸ್​ ಶಾಸಕನ ಕಚೇರಿ ಮೇಲೆ ಬಿಜೆಪಿಗರ ದಾಳಿ: ಪೀಠೋಪಕರಣ ಧ್ವಂಸ, ಕಾರಿನ ಗಾಜು ಪುಡಿಗೈದು ಅಟ್ಟಹಾಸ – Kannada News | BRS MLA Office Attack in Karimnagar: BJP Workers Vandalize Property Over Controversial Remarks

ಹೈದರಾಬಾದ್​​, ಮೇ 07: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್​​ ಕುಮಾರ್​​ ಅವರ ವಿರುದ್ಧ ಬಿಆರ್‌ಎಸ್ ಶಾಸಕ ಕೌಶಿಕ್ ರೆಡ್ಡಿ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಕರೀಂನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸಚಿವ ಹಾಗೂ ಶಾಸಕ ಗಂಗುಲ ಕಮಲಾಕರ್ ಅವರ ಕ್ಯಾಂಪ್​​​ ಕಚೇರಿಗೆ ನುಗ್ಗಿ ಬಿಜೆಪಿಗರು ದಾಂಧಲೆ ನಡೆಸಿದ್ದಾರೆ. ಬಿಆರ್​ಎಸ್ ಶಾಸಕ ಕೌಶಿಕ್ ರೆಡ್ಡಿ ಒಳಗೆ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಬಿಜೆಪಿ ಬೆಂಬಲಿತರು ಧ್ವಂಸಗೊಳಿಸಿದ್ದು, ಕೂಡಲೇ ಲಘು ಲಾಠಿ ಪ್ರಹಾರ…

Read More

ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಕಲಹಕ್ಕೆ ಸುಪ್ರೀಂಕೋರ್ಟ್ ಬ್ರೇಕ್ – Kannada News | Defamation Dispute: Supreme Court Appoints Justice Kurian Joseph As Mediator In Karnataka IAS Rohini Sindhuri And IPS Roopa Moudgil

ನವದೆಹಲಿ, (ಜೂನ್ 12): ಕರ್ನಾಟಕದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್(IPS Officer Roopa D Moudgil) ನಡುವಿನ ದೀರ್ಘಕಾಲದ ಕಾನೂನು ಸಮರಕ್ಕೆ ಸುಪ್ರೀಂ ಕೋರ್ಟ್ (Supreme Court) ಈಗ ಸಂಧಾನದ ಹಾದಿ ತೋರಿಸಿದೆ. ಇಬ್ಬರು ಅಧಿಕಾರಿಗಳ ನಡುವಿನ ಮಾನಹಾನಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ (Mediation) ವಹಿಸಿದ್ದು, ಇಬ್ಬರೂ ಉನ್ನತ ಹುದ್ದೆಯಲ್ಲಿದ್ದು, ಸಾರ್ವಜನಿಕವಾಗಿ ಜಗಳವಾಡುವುದು ಸರಿಯಲ್ಲ ಎಂದು ಹೇಳಿ ಸಂಧಾನ ಮಾಡಿಕೊಳ್ಳುವಂತೆ ಕಿವಿ…

Read More

ಧಾರವಾಡ: ದಲಿತರಿಗೆ ಜಾತಿ ಪ್ರಮಾಣ ಪತ್ರ ನೀಡಲು ಅಧಿಕಾರಿಗಳು ಹಿಂದೇಟು; ಕಾರಣವೇನು ಗೊತ್ತಾ? – Kannada News | Why Are Officials Hesitant to Issue Caste Certificates to Dalits; Key Reasons Explained

ಧಾರವಾಡ, ಜೂನ್​​​ 22: ಇತ್ತೀಚಿನ ವರ್ಷಗಳಲ್ಲಿ ಸರಕಾರದ ಯಾವುದೇ ಯೋಜನೆಗಳನ್ನು ಪಡೆಯಬೇಕೆಂದರೆ ಅಥವಾ ಮಕ್ಕಳನ್ನು ಶಾಲೆಗೆ ದಾಖಲಿಸಲು ಅತೀ ಮುಖ್ಯವಾದದ್ದು ಜಾತಿ ಪ್ರಮಾಣ ಪತ್ರ (SC Caste Certificate). ಸರಕಾರದ ಮೀಸಲಾತಿಯನ್ನು ಪಡೆಯಲು ಈ ಪ್ರಮಾಣಪತ್ರ ಅವಶ್ಯಕ. ಆದರೆ ಧಾರವಾಡದ (dharwad) ಗ್ರಾಮವೊಂದರಲ್ಲಿ ದಲಿತರಿಗೆ ಮಾತ್ರ ಜಾತಿ ಪ್ರಮಾಣ ಪತ್ರವನ್ನೇ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಕಾರಣ ಆ ಗ್ರಾಮದಲ್ಲಿರುವ ಮತ್ತೊಂದು ಜಾತಿ ಸಂಘಟನೆಯ ಸೂಚನೆ ಎನ್ನುವ ಅಚ್ಚರಿಯ ಸಂಗತಿ ಬಯಲಿಗೆ ಬಂದಿದೆ. ಇದರಿಂದಾಗಿ…

Read More