ಸಚಿವ ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಭೂಮಿ ಎಲ್ಲಿ? ಹೇಗಿದೆ ನೋಡಿ – Kannada News | BJP Alleged land grab in Kolar Against Minister Krishna Byre Gowda, here Is land details
ಕೋಲಾರ, (ಡಿಸೆಂಬರ್ 18): ಬೆಂಗಳೂರಿನ ಬ್ಯಾಟರಾಯನಪುರ ಕಾಂಗ್ರೆಸ್ ಶಾಸಕ, ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಈವರೆಗೂ ಯಾವ ಹಗರಣದಲ್ಲೂ ಸಿಲುಕದ ಕ್ಲೀನ್ ಇಮೇಜ್ ರಾಜಕಾರಣಿ. ಆದ್ರೆ, ಇದೇ ಮೊದಲ ಬಾರಿಗೆ ಭೂಕಬಳಿಕೆ ಆರೋಪ ಇವರನ್ನೀಗ ಸುತ್ತಿಕೊಂಡಿದೆ.ಹೌದು..ಕೋಲಾರ ತಾಲೂಕಿನ ಗರುಡಪಾಳ್ಯ ಸಚಿವ ಕೃಷ್ಣಭೈರೇಗೌಡರ ಹುಟ್ಟೂರು. ನರಸುಪುರ ಹೋಬಳಿಯ ಗರುಡಪಾಳ್ಯದಲ್ಲಿ 200ಎಕರೆಗೂ ಹೆಚ್ಚು ಜಾಗವಿದೆ. ಇಲ್ಲಿನ ಸರ್ವೆ ನಂಬರ್ 46 ಮತ್ತು 47ರಲ್ಲಿ . ಇದೇ ಸರ್ವೇ ನಂಬರ್‌ನಲ್ಲೇ ಸಚಿವರ ಹೆಸರಿನಲ್ಲಿ 21 ಎಕರೆ ಜಮೀನಿದೆ. ಆದ್ರೆ, ಇದು ಸ್ಮಶಾನ…