Headlines

SSLC ಪರೀಕ್ಷೆ: ಸರ್ಕಾರ ಅಂಕಕ್ಕೆ ಕೋಕ್ ನೀಡಲು ಹೊರಟಿದ್ದ ತೃತೀಯ ಭಾಷೆಯಲ್ಲಿ ಶೇ. 98.55 ಫಲಿತಾಂಶ – Kannada News | Karnataka SSLC Exam Result 2026: 98.55 percent Student Pass in Third Language

ಬೆಂಗಳೂರು, ಏಪ್ರಿಲ್​​ 23: ವಿದ್ಯಾರ್ಥಿಗಳ ಮೇಲಿನ ಹೊರೆ ತಗ್ಗಿಸುವ ನಿಟ್ಟಿನಲ್ಲಿ SSLC ಪರೀಕ್ಷೆಯ ತೃತೀಯ ಭಾಷೆಗೆ ಅಂಕಗಳ ಬದಲು ಗ್ರೇಡ್​​ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಒಟ್ಟು 625 ಅಂಕಗಳ ಬದಲಿಗೆ 525 ಅಂಕಗಳಿಗೆ ಪರೀಕ್ಷಾ ಮೌಲ್ಯಮಾಪನವನ್ನು ಸೀಮಿತಗೊಳಿಸುವ ಬಗ್ಗೆ ನಿರ್ಧರಿಸಲಾಗಿತ್ತು. ತ್ರಿಭಾಷಾ ಸೂತ್ರದ ಅಡಿಯಲ್ಲಿ ತೃತೀಯ ಭಾಷೆಯನ್ನು ಕೇವಲ ಅರ್ಹತಾ ವಿಷಯವನ್ನಾಗಿ ಪರಿಗಣಿಸಿ, ಗ್ರೇಡ್ ನೀಡುವ ಮೂಲಕ ಒಟ್ಟು ಶೇಕಡಾವಾರು ಅಂಕಗಳ ಲೆಕ್ಕಾಚಾರದಿಂದ ಇದನ್ನು ಹೊರಗಿಡಲು ಉದ್ದೇಶಿಸಿತ್ತು. ಆದರೆ ಅಂತಿಮವಾಗಿ ಕೋರ್ಟ್​​ ಆದೇಶದಂತೆ ತೃತೀಯ ಭಾಷೆಗೂ…

Read More

ಹಿಟ್ ಸಿಗದೆ ಒದ್ದಾಡುತ್ತಿರುವ ಹೀರೋ ಜೊತೆ ಡೇಟಿಂಗ್ ಶುರು ಹಚ್ಚಿಕೊಂಡ ಪೂಜಾ ಹೆಗ್ಡೆ – Kannada News | Pooja Hegde Dating Rohan Mehra? Rumors Swirl Amidst Career Challenges

ಮಂಗಳೂರು ಮೂಲದ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರಿಗೆ ಇತ್ತೀಚೆಗೆ ದೊಡ್ಡ ಯಶಸ್ಸು ಸಿಗುತ್ತಿಲ್ಲ. ಅವರು ಒಪ್ಪಿಕೊಂಡ ಸಿನಿಮಾಗಳಿಂದಲೂ ಹಿಂದಕ್ಕೆ ಸರಿಯುತ್ತಿದ್ದಾರೆ. ಹೀಗಿರುವಾಗಲೇ ಅವರು ಡೇಟಿಂಗ್ ವಿಷಯಕ್ಕೆ ಸುದ್ದಿ ಆಗಿದ್ದಾರೆ. ಪೂಜಾ ಹೆಗ್ಡೆ ಅವರು ‘ಬಜಾರ್’ ಹೆಸರಿನ ಸಿನಿಮಾ ಮಾಡಿದ್ದ ರೋಹನ್ ಮೆಹ್ರಾ ಜೊತೆ ಸುತ್ತಾಡುತ್ತಿದ್ದಾರೆ ಎನ್ನಲಾಗಿದೆ. ರೋಹನ್ ಮೆಹ್ರಾ ಅವರು ಹಿಂದಿ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದ ವಿನೋದ್ ಮೆಹ್ರಾ ಅವರ ಮಗ. ಈ ಕಾರಣಕ್ಕೆ ವಿನೋದ್ ಅವರಿಗೆ ಚಿತ್ರರಂಗದಲ್ಲಿ ಸಿನಿಮಾ ಆಫರ್​​ಗಳು ಸಿಕ್ಕವು. 2015ರಲ್ಲಿ ಬಂದ…

Read More

MBA in Temple Management: ದೇವಾಲಯಗಳ ಆಡಳಿತಕ್ಕೂ ಬಂತು ಎಂಬಿಎ ಪದವಿ! ವೃತ್ತಿಜೀವನದ ಹೊಸ ದಾರಿಯಾಗಿ ‘ಟೆಂಪಲ್ ಮ್ಯಾನೇಜ್ಮೆಂಟ್’ – Kannada News | Ujjain Launches MBA in Temple Management: New Course for Pilgrim Tourism and Administration

ಉಜ್ಜಯಿನಿ: ಭಾರತದಲ್ಲಿ ತೀರ್ಥಯಾತ್ರೆ ಎಂಬುದು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿದಿಲ್ಲ, ಅದು ಪ್ರವಾಸೋದ್ಯಮದ ಬೆನ್ನೆಲುಬಾಗಿ ಬೆಳೆದಿದೆ. ಇಂತಹ ಬೃಹತ್ ಸಂಪನ್ಮೂಲ ಮತ್ತು ಭಕ್ತರ ಸಾಗರವನ್ನು ನಿರ್ವಹಿಸಲು ಈಗ ವೃತ್ತಿಪರರ ಅಗತ್ಯವಿದ್ದು, ಇದಕ್ಕಾಗಿ ‘ದೇವಾಲಯ ನಿರ್ವಹಣೆಯಲ್ಲಿ ಎಂಬಿಎ’ (MBA in Temple Management) ಕೋರ್ಸ್ ಆರಂಭವಾಗುತ್ತಿದೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಸಾಮ್ರಾಟ್ ವಿಕ್ರಮಾದಿತ್ಯ ವಿಶ್ವವಿದ್ಯಾಲಯವು (ವಿಕ್ರಮ್ ವಿಶ್ವವಿದ್ಯಾಲಯ) ಈ ವಿಶೇಷ ಕೋರ್ಸ್ ಅನ್ನು ಪ್ರಾರಂಭಿಸಲು ಮುಂದಾಗಿದೆ. ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅನಿಲ್ ಕುಮಾರ್ ಶರ್ಮಾ ಅವರ ಪ್ರಕಾರ, ಈ ಕೋರ್ಸ್‌ಗೆ ಯಾವುದೇ…

Read More

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಭೀತಿ, ವೈದ್ಯರ ಎಚ್ಚರಿಕೆ!

ಬೆಂಗಳೂರು, ಮೇ 31: ನಗರದಲ್ಲಿ ಇತ್ತೀಚೆಗೆ ಕ್ಯಾನ್ಸರ್ (Cancer) ಕೇಸ್​ಗಳು ಹೆಚ್ಚಾಗಿದ್ದು, ಬಹುತೇಕ ಕ್ಯಾನ್ಸರ್ ರೋಗಿಗಳಲ್ಲಿ ತಂಬಾಕು ಸೇವನೆ ಕಂಡುಬಂದಿದೆ. ಧೂಮಪಾನ ಹಾಗೂ ತಂಬಾಕು ಸೇವನೆಯು ಕೇವಲ ಶ್ವಾಸಕೋಶದ ಕ್ಯಾನ್ಸರ್‌ಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಇದು ಜಠರ, ಯಕೃತ್ (ಲಿವರ್), ಮೂತ್ರಪಿಂಡ (ಕಿಡ್ನಿ), ಮೇದೋಜ್ಜೀರಕ ಗ್ರಂಥಿ (ಪ್ಯಾಂಕ್ರಿಯಾಸ್) ಹಾಗೂ ರಕ್ತದ ಕ್ಯಾನ್ಸರ್ ಸೇರಿದಂತೆ ದೇಹದ ವಿವಿಧ ಅಂಗಾಂಗಗಳ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಬೆಂಗಳೂರಿನ ಹಿರಿಯ ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಮುಖ್ಯಾಂಶಗಳು ಕರ್ನಾಟಕದ ಒಟ್ಟು…

Read More

‘ಪರಿಹಾರ ಕೊಡಿ’: ಬಿಗ್ ಬಾಸ್​​ಗೆ ನೊಟೀಸ್ ಕಳಿಸಿದ ಮಾಜಿ ಸ್ಪರ್ಧಿ – Kannada News | Ex contestant Sonali Raut sends legal notice to Bigg Boss Marathi

ಬಿಗ್​​ಬಾಸ್ (Bigg Boss) ಭಾರತದ ಬಲು ಜನಪ್ರಿಯ ರಿಯಾಲಿಟಿ ಶೋ. ಹಿಂದಿ, ತಮಿಳು, ತೆಲುಗು, ಕನ್ನಡ, ಮರಾಠಿ, ಮಲಯಾಳಂ ಹೀಗೆ ಬೇರೆ ಬೇರೆ ಭಾಷೆಗಳಲ್ಲಿ ಬಿಗ್​ಬಾಸ್ ಪ್ರಸಾರ ಆಗುತ್ತದೆ. ಪ್ರತಿ ಭಾಷೆಗೆ ಬೇರೆ ಬೇರೆ ನಿರೂಪಕರು ಆದರೆ ಮಾದರಿ ಮಾತ್ರ ಒಂದೇ. ಸ್ಪರ್ಧಿಗಳನ್ನು ಕೂಡಿ ಹಾಕುವ ಬಿಗ್​​ಬಾಸ್ ಮನೆಯಲ್ಲಿ ಐಶಾರಾಮಿಯಾಗಿ ಆಯೋಜಕರು ನಿರ್ಮಿಸಿರುತ್ತಾರೆ. ಮನೆ ನಿರ್ಮಾಣಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ಸಹ ಖರ್ಚು ಮಾಡಲಾಗುತ್ತದೆ. ಆದರೆ ಇದೀಗ ಮಾಜಿ ಬಿಗ್​​ಬಾಸ್ ಸ್ಪರ್ಧಿಯೊಬ್ಬರು, ತಮಗೆ ಬಿಗ್​​ಬಾಸ್ ಇಂದಾಗಿ, ಅಲ್ಲಿ…

Read More

‘ಟಾಕ್ಸಿಕ್’ ಜಾಗ ತುಂಬಲು ಬರ್ತಿದೆ ‘ಮ್ಯಾಂಗೋ ಪಚ್ಚ’; ಕಿಚ್ಚನ ಘೋಷಣೆ – Kannada News | Mango Paccha Release Date: Kiccha Sudeep announces June 5th; fills Toxic’s slot

ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ ‘ಮ್ಯಾಂಗೋ ಪಚ್ಚ’ ಪೋಸ್ಟರ್ ಹಾಗೂ ಟೀಸರ್​​ಗಳ ಮೂಲಕ ಗಮನ ಸೆಳೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜನವರಿಯಲ್ಲೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರದ ಬಿಡುಗಡೆ ಕಾರಣಾಂತರಗಳಿಂದ ವಿಳಂಬ ಆಯಿತು. ಈಗ ಸಿನಿಮಾಗೆ ಹೊಸ ರಿಲೀಸ್ ದಿನಾಂಕ ಘೋಷಣೆ ಆಗಿದೆ. ಜೂನ್ 5ರಂದು ಸಿನಿಮಾ ತೆರೆಗೆ ಬರಲಿದೆ. ಈ ಮೊದಲು ‘ಟಾಕ್ಸಿಕ್’ ಸಿನಿಮಾ ಜೂನ್ 4ರಂದು ಬರುವುದಾಗಿ ಘೋಷಣೆ ಮಾಡಿತ್ತು. ಆದರೆ, ಇಂದು (ಏಪ್ರಿಲ್ 29) ಯಶ್ ಅವರು ಈ…

Read More

ಸುಳ್ವಾಡಿ ವಿಷ ಪ್ರಸಾದ ಕೇಸ್​ನ ಎ1 ಆರೋಪಿಗೆ ಮಲೆ ಮಹದೇಶ್ವರ ಬೆಟ್ಟಕ್ಕೆ ನಿರ್ಬಂಧ – Kannada News | Chamarajanagar: Sulvadi poison prasad case; A1 accused banned from Male Mahadeshwar hill

ಚಾಮರಾಜನಗರ, ಜನವರಿ 29: 2018ರಲ್ಲಿ ನಡೆದಿದ್ದ ಸುಳ್ವಾಡಿ ವಿಷ ಪ್ರಸಾದ ದುರಂತ ಪ್ರಕರಣದ (sulvadi Poison Case) ಪ್ರಮುಖ ಆರೋಪಿ ಇಮ್ಮಡಿ ಮಹದೇವಸ್ವಾಮಿಗೆ (immadi mahadevaswamy) ಮಲೆ ಮಹದೇಶ್ವರ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ಹನೂರು ತಹಶೀಲ್ದಾರ್​ ಚೈತ್ರಾ ಗುರುವಾರ ಆದೇಶ ಹೊರಡಿಸಿದ್ದಾರೆ. ಆರೋಪಿ ವಿರುದ್ಧ ಪ್ರತಿಭಟನೆ ಸಾಧ್ಯತೆ ಹಿನ್ನೆಲೆ ಪ್ರವೇಶ ನಿರ್ಬಂಧಿಸಲಾಗಿದ್ದು, ಸದ್ಯ ಪೊಲೀಸರು ಇಮ್ಮಡಿ ಮಹದೇವಸ್ವಾಮಿಯನ್ನ ಬೆಂಗಳೂರಿಗೆ ವಾಪಸ್​ ಕಳಿಸಿದ್ದಾರೆ. ಘಟನೆ ಹಿನ್ನೆಲೆ  ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚಗುತ್ತಿ ಮಾರಮ್ಮ ದೇವಾಲಯದ…

Read More

ಇರಾನ್ ಜತೆ ಚೀನಾ ಕೈಜೋಡಿಸಿದರೆ ಕಾದಿದೆ ಆಪತ್ತು, ಡೊನಾಲ್ಡ್​ ಟ್ರಂಪ್ ಅಂತಿಮ ಎಚ್ಚರಿಕೆ

ವಾಷಿಂಗ್ಟನ್, ಏಪ್ರಿಲ್ 12: ಜಾಗತಿಕ ರಾಜಕೀಯದ ರಣರಂಗದಲ್ಲಿ ಈಗ ಅಮೆರಿಕ, ಇರಾನ್(Iran) ಮತ್ತು ಚೀನಾ ನಡುವಿನ ಸಂಘರ್ಷ ತಾರಕಕ್ಕೇರಿದೆ. ಇರಾನ್ ಬೆನ್ನಿಗೆ ನಿಂತಿರುವ ಚೀನಾಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಎಚ್ಚರಿಕೆ ಈಗ ಮೂರನೇ ಮಹಾಯುದ್ಧದ ಭೀತಿಯನ್ನು ಹುಟ್ಟುಹಾಕಿದೆ. ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಬಿಕ್ಕಟ್ಟು ಈಗ ಅಮೆರಿಕ ಮತ್ತು ಡ್ರ್ಯಾಗನ್ ದೇಶ ಚೀನಾವನ್ನು ಮುಖಾಮುಖಿಯಾಗಿಸಿದೆ. ಇರಾನ್​ಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಚೀನಾಗೆ ಡೊನಾಲ್ಡ್​ ಟ್ರಂಪ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ಷಿ ಜಿನ್​ಪಿಂಗ್ ಅವರೇ, ಇರಾನ್​ಗೆ ಶಸ್ತ್ರಾಸ್ತ್ರ…

Read More

ಜನನಾಯಗನ್ ‘ಸೇಡು’?; ಬಿಜೆಪಿ ಕಾರಣಕ್ಕೆ ಎಐಎಡಿಎಂಕೆ ಬೇಡ ಅಂತಾರಾ ವಿಜಯ್?; ದಳಪತಿ ಮುಂದಿರುವ ಆಯ್ಕೆಗಳೇನು? – Kannada News | Thalapathi Vijay’s TVK might be few seats short of majority, here are few options for power alliance

ಚೆನ್ನೈ, ಮೇ 4: ವಿಜಯ್ ಅವರ ಟಿವಿಕೆ ಪಕ್ಷ ತನ್ನ ಚೊಚ್ಚಲ ಸ್ಪರ್ಧೆಯಲ್ಲಿ ಬಹುಮತದ ಸಮೀಪಕ್ಕೆ ಹೋಗಿದೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections) ತಮಿಳಗ ವೆಟ್ರಿ ಕಳಗಂ (TVK) 107-108 ಸ್ಥಾನಗಳಲ್ಲಿ ಗೆಲುವು ಮತ್ತು ಮುನ್ನಡೆ ಹೊಂದಿದೆ. ಬಹುಮತಕ್ಕೆ ಅಗತ್ಯ ಇರುವುದು 118 ಸ್ಥಾನಗಳಿಗೆ ಸುಮಾರು 10-11 ಸ್ಥಾನಗಳ ಕೊರತೆ ಎದುರಾಗಬಹುದು. ವಿಜಯ್ ಅವರು ಈ ಕೊರತೆ ತುಂಬಿಕೊಂಡರೆ ಕಿಂಗ್ ಮೇಕರ್ ಬದಲು ಕಿಂಗ್ ಆಗುವ ಅವಕಾಶ ಇದೆ….

Read More

ಆಸ್ತಿಗಾಗಿ ಹೆತ್ತಮ್ಮನ ಮೇಲೆಯೇ ಮಗನಿಂದ ಮಾರಣಾಂತಿಕ ಹಲ್ಲೆ: ಸಾವು-ಬದುಕಿನ ನಡುವೆ ಮಹಿಳೆಯ ಹೋರಾಟ

ಬೆಂಗಳೂರು, ಮಾರ್ಚ್​​ 13: ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತಲೂ ಮಿಗಿಲು ಎಂಬ ಮಾತಿದೆ. ಜನ್ಮ ನೀಡಿದ ತಾಯಿ ಅಂದ್ರೆ ನಡೆದಾಡುವ ದೇವರು ಎಂದು ನಾವು ಪೂಜಿಸುತ್ತೇವೆ. ಆದರೆ ಇಲ್ಲೊಬ್ಬ ಮಗ ಆಸ್ತಿಗಾಗಿ ಅಂತಹ ತಾಯಿ ಮೇಲೆಯೇ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪಾಪಿ ಮಗನ ಕ್ರೌರ್ಯಕ್ಕೆ ವೃದ್ಧೆ ಆಸ್ಪತ್ರೆ ಸೇರಿದ್ದಾರೆ. ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಲಕ್ಷ್ಮೀ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಜಯನಗರದ ನಿವಾಸಿ ಲಕ್ಷ್ಮೀ ಹಾಗೂ ಸಣ್ಣಸಿದ್ದಪ್ಪ ದಂಪತಿಗೆ 3 ಜನ…

Read More