Daily Devotional: ಅಧಿಕ ಮಾಸದಲ್ಲಿ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರಲಿದೆ? – Kannada News
ಟಿವಿ9 ಕನ್ನಡ ಡಿಜಿಟಲ್ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಅಧಿಕ ಮಾಸದಲ್ಲಿ ಹುಟ್ಟಿದ ಮಕ್ಕಳ ಭವಿಷ್ಯ ಹೇಗಿರಲಿದೆ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ಅಧಿಕ ಮಾಸ, ಇದನ್ನು ಪುರುಷೋತ್ತಮ ಮಾಸವೆಂದೂ ಕರೆಯುತ್ತಾರೆ, ಈ ಮಾಸದಲ್ಲಿ ಜನಿಸಿದ ಮಕ್ಕಳ ಭವಿಷ್ಯದ ಕುರಿತು ಕೆಲವೊಂದು ಪ್ರಮುಖ ವಿಚಾರಗಳನ್ನು ತಿಳಿಸಿದ್ದಾರೆ. ಸಾಂಪ್ರದಾಯಿಕವಾಗಿ, ಚೈತ್ರ ಮಾಸದಿಂದ ಹಿಡಿದು 12 ಮಾಸಗಳಲ್ಲಿ ಶುಭ-ಅಶುಭಗಳು ಸಂಭವಿಸುತ್ತವೆ. ಆದರೆ, ಮಗುವಿನ ಜನನಕ್ಕೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ, ಏಕೆಂದರೆ ಜನಿಸಿದ ಮಾಸಕ್ಕೆ ತಕ್ಕಂತೆ ದೇವರ ಅನುಗ್ರಹ ಆ ಮಗುವಿನ ಮೇಲೆ ಇರುತ್ತದೆ….