ಕೇವಲ 5 ಶಾಟ್ಗಳಲ್ಲಿ ಸಿದ್ಧವಾಯ್ತು ‘ಅದಿತಿ’ ಸಿನಿಮಾ; ಇದು ಮಹಿಳಾ ಪ್ರಧಾನ ಚಿತ್ರ
ಬಹುಭಾಷೆಯಲ್ಲಿ ಬಿಡುಗಡೆ ಆಗಲಿರುವ ‘ಅದಿತಿ’ ಸಿನಿಮಾದಲ್ಲಿ ಒಂದು ಡಿಫರೆಂಟ್ ಪ್ರಯತ್ನ ಮಾಡಲಾಗಿದೆ. ಇಡೀ ಸಿನಿಮಾವನ್ನು ಕೇವಲ 5 ಶಾಟ್ಗಳಲ್ಲಿ ಚಿತ್ರಿಸಲಾಗಿದೆ. ಇದು ನಿಜಕ್ಕೂ ಸವಾಲಿನ ಕೆಲಸ. ಆ ಮೂಲಕ ‘ಅದಿತಿ’ ಸಿನಿಮಾ (Aditi Movie) ಕುತೂಹಲ ಮೂಡಿದೆ. ಅಂದಹಾಗೆ, ಈ ಸಿನಿಮಾದಲ್ಲಿ ಮಹಿಳಾ ಪ್ರಧಾನ ಕಥಾಹಂದರ ಇದೆ. ಬಹುತೇಕ ಮಹಿಳೆಯರೇ ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ‘ಅದಿತಿ’ ಸಿನಿಮಾದ ಟೀಸರ್ (Teaser) ಬಿಡುಗಡೆ ಮಾಡಲಾಯಿತು. ಈ ಚಿತ್ರದ ಶೀರ್ಷಿಕೆಗೆ ‘ಲಿಬರ್ಟಿ’ ಎಂಬ ಟ್ಯಾಗ್ಲೈನ್ ಇದೆ. ‘ಮಿಲೆನಿಯಮ್…