Headlines

‘ಮಾ ಇಂಟಿ ಬಂಗಾರಂ’ ಬಿಡುಗಡೆ ಮುಂದೂಡಿಕೆ: ಹೊಸ ದಿನಾಂಕದತ್ತ ಚಿತ್ರತಂಡದ ಚಿತ್ತ – Kannada News | Samantha Ruth Prabhu starrer Maa Inti Bangaram movie release date postpone

ಇತ್ತೀಚೆಗೆ ಸಿನಿಮಾಗಳ ಬಿಡುಗಡೆ ದಿನಗಳು ಪದೇ ಪದೇ ಬದಲಾವಣೆ ಆಗುತ್ತಲೇ ಇವೆ. ‘ಟಾಕ್ಸಿಕ್’ (Toxic) ಸಿನಿಮಾದ ದಿನಾಂಕ ಬದಲಾವಣೆ ಆದ ಬಳಿಕ ಅದರ ಪರಿಣಾಮದಿಂದಲೋ ಏನೋ ಎಷ್ಟೋಂದು ಸಿನಿಮಾಗಳ ಬಿಡುಗಡೆ ದಿನಾಂಕ ಬದಲಾವಣೆ ಆಗಿವೆ, ಈಗಲೂ ಆಗುತ್ತಲೇ ಇವೆ. ‘ಉಸ್ತಾದ್ ಭಗತ್ ಸಿಂಗ್’, ‘ಡಕಾಯತ್’, ‘ಪೆದ್ದಿ’ ಸಿನಿಮಾಗಳ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆಯ್ತು. ಇದೀಗ ಸಮಂತಾ ಋತ್ ಪ್ರಭು ನಟಿಸಿರುವ ಬಹುನಿರೀಕ್ಷಿತ ಚಿತ್ರ ‘ಮಾ ಇಂಟಿ ಬಂಗಾರಂ’ (Maa Inti Bangaram) ಬಿಡುಗಡೆಯ ದಿನಾಂಕದಲ್ಲಿ ಬದಲಾವಣೆಯಾಗಿದೆ. ಈ…

Read More

ಆಪರೇಷನ್ ಸಿಂಧೂರ್​​ಗೆ ಒಂದು ವರ್ಷ; ಉಗ್ರರ ವಿರುದ್ಧದ ಕಾರ್ಯಾಚರಣೆ ಪರಿಣಾಮಕಾರಿಯಾಗಿದ್ದು ಹೇಗೆ? – Kannada News | 1 year for Operation Sindoor How India delivered maximum damage with minimal impact

ನವದೆಹಲಿ, ಮೇ 6: ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ನಡೆದು ಒಂದು ವರ್ಷವಾಗಿದೆ. ಮಿಲಿಟರಿ ಕಾರ್ಯಾಚರಣೆಯನ್ನು ಆಧುನಿಕ ಯುದ್ಧದಲ್ಲಿ ನಿರ್ಣಾಯಕ ಕ್ಷಣವೆಂದು ಪರಿಗಣಿಸಲಾಗುತ್ತದೆ. ಕಾಶ್ಮೀರದ ಕಣಿವೆ ಪಹಲ್ಗಾಮ್​​ನಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಪ್ರತಿಕ್ರಿಯೆಯಾಗಿ ಕಳೆದ ವರ್ಷ ಇದೇ ಸಮಯದಲ್ಲಿ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿತ್ತು. ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಜಮ್ಮು-ಕಾಶ್ಮೀರದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಗಡಿಯಾಚೆಗಿನ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾದ ಈ ಕಾರ್ಯಾಚರಣೆಯಲ್ಲಿ ಭಾರತ ನಾಗರಿಕರು ಯಾರೂ ಸಾವನ್ನಪ್ಪದಂತೆ…

Read More

ಎರಡುವರೆ ವರ್ಷ ಬಳಿಕ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ ಜೀವರಾಜ್ – Kannada News | Shringeri Assembly Result: BJP DN Jeevaraj Finally Take oath as MLA after Won In Recounting

ಬೆಂಗಳೂರು, (ಮೇ 06): ಹೈಕೋರ್ಟ್ ಆದೇಶದಂತೆ ಶೃಂಗೇರಿ ವಿಧಾನಸಭಾ (shringeri Assembly Result) ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್.ಜೀವರಾಜ್ (BJP DN Jeevaraj )ಗೆಲುವು ಸಾಧಿಸಿದ್ದಾರೆ. ಸುಮಾರು ಮೂರು ವರ್ಷಗಳ ಸತತ ಕಾನೂನು ಹೋರಾಟದ ಮೂಲಕ ಶಾಸಕರಾಗಿ ಆಯ್ಕೆಯಾಗಿರುವ ಜೀವರಾಜ್ ಇಂದು (ಮೇ 06) ಶೃಂಗೇರಿ ಶಾರದಾಂಬೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಕಾಂಗ್ರೆಸ್​​ ಶಾಸಕ ಸಂಖ್ಯೆಯಲ್ಲಿ  ಒಂದು ಕಡೆಮೆಯಾದಂತಾಗಿದೆ, ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಬಳಿಕ ಉಂಟಾದ ರಾಜಕೀಯ ಗದ್ದಲದಿಂದ,…

Read More

IND vs PAK: ಪಾಕ್ ಕ್ರಿಕೆಟ್ ತಂಡಕ್ಕೆ ಭಾರತದಲ್ಲಿ ಅಡಲು ಅವಕಾಶ ನೀಡಿದ ಕೇಂದ್ರ ಸರ್ಕಾರ – Kannada News | India Allows Pak Players for Multi Nation Tournaments, No Bilateral Cricket

ಪಹಲ್ಗಾಮ್​ನಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಅಮಾಯಕ ಭಾರತೀಯರ ಪ್ರಾಣ ಹರಣ ಮಾಡಿದ ಬಳಿಕ ಪಾಕಿಸ್ತಾನದೊಂದಿಗಿನ ಎಲ್ಲಾ ಸಂಬಂಧಗಳಿಗೂ ಭಾರತ ಅಂತ್ಯ ಹಾಡಿದೆ. ಇದರಿಂದಾಗಿ ಎರಡೂ ದೇಶಗಳ ಕ್ರಿಕೆಟ್ ತಂಡಗಳ ನಡುವಿನ ಪಂದ್ಯಕ್ಕೂ ಬ್ರೇಕ್ ಬಿದ್ದಿದೆ. ಮಾತ್ರವಲ್ಲದೆ ಭಾರತ ತಂಡ ಪಂದ್ಯವನ್ನಾಡಲು ಪಾಕಿಸ್ತಾನಕ್ಕೆ (India vs Pakistan) ಪ್ರಯಾಣಿಸಲು ಒಲ್ಲೆ ಎಂದರೆ, ಇತ್ತ ಪಾಕಿಸ್ತಾನ ತಂಡ ಕೂಡ ಭಾರತಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದೆ. ಏತನ್ಮಧ್ಯೆ, ಭಾರತ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದು, ಪಾಕಿಸ್ತಾನಿ ಆಟಗಾರರು ಭಾರತಕ್ಕೆ ಪ್ರಯಾಣಿಸಲು ಅವಕಾಶ…

Read More

ಜಾಗತಿಕ ಮಟ್ಟದಲ್ಲಿ ಭಾರತದ ಆರ್ಥಿಕತೆಯ ಜಯಭೇರಿ: ದೇಶದ ಜಿಡಿಪಿ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಮೂಡೀಸ್ ಮತ್ತು ಎಡಿಬಿ – Kannada News | Moodys adb laud indias economy strong growth stable outlook global investment hub

ನವದೆಹಲಿ, ಮೇ 6: ಜಾಗತಿಕವಾಗಿ ಅನೇಕ ಪ್ರಮುಖ ದೇಶಗಳ ಆರ್ಥಿಕತೆಗಳು ಮಂದಗತಿಯನ್ನು ಎದುರಿಸುತ್ತಿರುವ ಈ ಸಮಯದಲ್ಲಿ, ಭಾರತದ ಆರ್ಥಿಕತೆಯು ಅತ್ಯಂತ ಸದೃಢವಾಗಿ ಮುನ್ನಡೆಯುತ್ತಿರುವುದನ್ನು ಜಾಗತಿಕ ರೇಟಿಂಗ್ ದೈತ್ಯ ಸಂಸ್ಥೆಯಾದ ‘ಮೂಡೀಸ್’ (Moody’s Ratings) ಮತ್ತು ‘ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್’ (ADB) ಮುಕ್ತಕಂಠದಿಂದ ಶ್ಲಾಘಿಸಿವೆ. ಭಾರತದ ಜಿಡಿಪಿ (GDP) ಪ್ರಗತಿಯು ಮುಂಬರುವ ದಿನಗಳಲ್ಲಿ ಇನ್ನಷ್ಟು ಬಲಗೊಳ್ಳಲಿದೆ ಎಂದು ಎರಡೂ ಜಾಗತಿಕ ಸಂಸ್ಥೆಗಳು ಜಂಟಿಯಾಗಿ ವಿಶ್ವಾಸ ವ್ಯಕ್ತಪಡಿಸಿವೆ. ಮೂಡೀಸ್ ಸಂಸ್ಥೆಯು ಭಾರತದ ಆರ್ಥಿಕತೆಯ ಸ್ಥಿರತೆಯನ್ನು ಗುರುತಿಸಿ ತನ್ನ ಮುನ್ಸೂಚನೆಯನ್ನು ಸಕಾರಾತ್ಮಕವಾಗಿ…

Read More

ಡಾಬಸ್ ಪೇಟೆ ಬಳಿ ಸರಣಿ ಅಪಘಾತ: ಇಬ್ಬರ ಸ್ಥಿತಿ ಗಂಭೀರ, 10ಕ್ಕೂ ಹೆಚ್ಚು ಮಂದಿಗೆ ಗಾಯ – Kannada News | Multiple Vehicle Pile Up Near Dabaspet on Bengaluru–Tumakuru Highway; Two Critical, Over 10 Injured

ನೆಲಮಂಗಲ, ಮೇ 06:  ತಾಲೂಕಿನ ಡಾಬಸ್ ಪೇಟೆಯ ಅಂಚೆಮನೆ ಗೇಟ್ ಬಳಿಯ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ  ಸರಣಿ ಅಪಘಾತ ಸಂಭವಿಸಿದೆ.  ಬೈಕ್, ಎರಡು ಕಾರು, ಲಾರಿ, ಬಸ್,  ಪಿಕಪ್​​ ವಾಹನ ಅಪಘಾತಕ್ಕೀಡಾಗಿದ್ದು, ಡಿಕ್ಕಿಯ ರಭಸಕ್ಕೆ ಹೆದ್ದಾರಿಯಲ್ಲಿ ಪಿಕ್​​ಅಪ್​​ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗುದ್ದು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳಕ್ಕೆ ನೆಲಮಂಗಲ ಸಂಚಾರ ಪೊಲೀಸರು ದೌಡಾಯಿಸಿದ್ದಾರೆ. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಮತ್ತಷ್ಟು ವಿಡಿಯೋ…

Read More

ಬಡ್ತಿ ಪರೀಕ್ಷೆಯಲ್ಲೂ ಕನ್ನಡಕ್ಕೆ ಅವಕಾಶ ನೀಡದ ರೈಲ್ವೆ ಇಲಾಖೆ: ಸಿಡಿದೆದ್ದೆ ಕರವೇ – Kannada News | Railway Department not allowing Kannada in Railway Promotion Exam: Karnataka Rakshana Vedike sparks

ಬೆಂಗಳೂರು, ಮೇ 06: ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಇತ್ತೀಚೆಗೆ ಹೊರಡಿಸಿರುವ ಎಲ್​ಡಿಸಿಇ ಪ್ರಮೋಷನ್ ಪರೀಕ್ಷೆಗಳ ಅಧಿಸೂಚನೆಯಲ್ಲಿ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿರುವುದು ಇದೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ನೋಟಿಫಿಕೇಶನ್​​ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಮಾತ್ರ ಪರೀಕ್ಷೆಗಳನ್ನು ನಡೆಸುವುದಾಗಿ ತಿಳಿಸಲಾಗಿದೆ. ಇದರಿಂದ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸಿದೆ. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಅಂದರೆ, ರಾಜ್ಯಾದ್ಯಂತ ರೈಲುಗಳನ್ನು ಸಂಚಾರ ‌ಮಾಡಲು ಬಿಡುವುದಿಲ್ಲ. ರಾಜ್ಯದ ಎಲ್ಲಾ ರೈಲ್ವೆ…

Read More

ಸಿಕ್ಕ ಸಿಕ್ಕ ಗೋಡೆ ನೋಡಿ ಮೂತ್ರ ವಿಸರ್ಜನೆ ಮಾಡ್ತೀರಾ? ಹುಷಾರ್! – Kannada News | Mysuru city corporation introduced New Plan For control People Peeing In Public Places

ಮೈಸೂರು, (ಮೇ 06): ಸಿಕ್ಕ ಸಿಕ್ಕ ಗೋಡೆ ಮೇಲೆ ಸೂಸು ಮಾಡೋರಿಗೆ ಬುದ್ದಿಕಲಿಸಲು ಮೈಸೂರಿನ (mysuru) ಸಬರ್ಬ್ ಬಸ್ ಸ್ಟ್ಯಾಂಡ್ ಬಳಿ ಈ ರೀತಿಯ ಮಿರರ್ ಅನ್ನು ಕಾಂಪೌಂಡ್ ಗೆ ಅಳವಡಿಸಲಾಗಿದೆ. ಮೈಸೂರು ಕೇಂದ್ರ ಬಸ್ ನಿಲ್ದಾಣದ ಮುಂಭಾಗದ ಕಾಂಪೌಂಡ್ ಗೆ ಕನ್ನಡಿ ಮಾದರಿ ರಿಫ್ಲೆಕ್ಷನ್ ಅಳವಡಿಕೆ ಮಾಡಲಾಗಿದೆ. ಈ ಮೂಲಕ ಖಾಲಿ ಕಾಂಪೌಂಡ್ ಗಳ ಮುಂದೆ ನಿಂತು ಮೂತ್ರ ವಿಸರ್ಜನೆ ಬ್ರೇಕ್‌ಗೆ ಹಾಕಲು ಪಾಲಿಕೆ (mysuru city corporation)  ಈ ಹೊಸ ಐಡಿಯಾ ಮಾಡಿದೆ. 80…

Read More

ಪ್ರಮಾಣ ವಚನಕ್ಕೆ ಸಿದ್ಧತೆ ನಡೆಸಿದ್ದ ವಿಜಯ್‌ಗೆ ಬಿಗ್‌ ಶಾಕ್‌ ಕೊಟ್ಟ ತಮಿಳುನಾಡು ಗರ್ವನರ್‌! – Kannada News | Tamil Nadu Governor Not Convinced Vijay’s TVK Has Majority, Oath Unlikely Tomorrow

ಚೆನ್ನೈ, (ಮೇ 06): ತಮಿಳುನಾಡು (Tamil Nadu) ವಿಧಾನಸಭೆಯಲ್ಲಿ ದಳಪತಿ ವಿಜಯ್ (Vijay) ಅವರ ಟಿವಿಕೆ ಪಕ್ಷ ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೊದಲ ಬಾರಿ ರಾಜಕೀಯ ಅಖಾಡಕ್ಕೆ ಇಳಿದು ಭರ್ಜರಿ ಜಯಭೇರಿ ಬಾರಿಸಿರುವ ದಳಪತಿ ವಿಜಯ್ ಅವರು ಬುಧವಾರ ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅವರನ್ನು ಭೇಟಿ ಮಾಡಿ, ನೂತನ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು, ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸುವುದಾಗಿ ಮನವಿ ಪತ್ರ ಸಲ್ಲಿಸಿದರು….

Read More

SRH vs PBKS IPL 2026 Live Score: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ – Kannada News | Sunrisers Hyderabad vs Punjab Kings IPL 2026 Live Cricket Score SRH vs PBKS Match on 6th May latest news in Kannada

ಐಪಿಎಲ್ 2026 ರ 49 ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು, ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸುತ್ತಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಇದು ಹೈದರಾಬಾದ್‌ನ 11 ನೇ ಪಂದ್ಯವಾಗಿದ್ದರೆ, ಪಂಜಾಬ್‌ಗೆ 10 ನೇ ಪಂದ್ಯವಾಗಿದೆ. ಎರಡೂ ತಂಡಗಳು ತಲಾ 6 ಪಂದ್ಯಗಳನ್ನು ಗೆದ್ದಿವೆ. Source link

Read More