Headlines

ಎಸ್​ಬಿಐ ನೌಕರರ ಎರಡು ದಿನ ಮುಷ್ಕರ; ಏನು ಕಾರಣ, ಅವರ 16 ಬೇಡಿಕೆಗಳೇನು? ಇಲ್ಲಿದೆ ಮಾಹಿತಿ – Kannada News | SBI employees strike for 2 days in May last week, 16 key demands

ಎಸ್​ಬಿಐ ನೌಕರರ ಮುಷ್ಕರImage Credit source: AI/Mediaforge/TV9 ನವದೆಹಲಿ, ಮೇ 6: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನೌಕರರು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ (SBI employees strike) ನಡೆಸಲು ನಿರ್ಧರಿಸಿದ್ದಾರೆ. ಮೇ 25 ಮತ್ತು 26ರಂದು ಈ ಪ್ರತಿಭಟನೆಗಳು ನಡೆಯಲಿವೆ. ಪಿಂಚಣಿ, ನೇಮಕಾತಿ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿ ನೌಕರರು 16 ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದಾರೆ. ಎಸ್​ಬಿಐ ದೇಶಾದ್ಯಂತ 50 ಕೋಟಿಗೂ ಅಧಿಕ ಸಂಖ್ಯೆಯಷ್ಟು ಗ್ರಾಹಕರ ಬಳಗ ಹೊಂದಿರುವುದರಿಂದ, ಈ ಎರಡು ದಿನಗಳ ಮುಷ್ಕರವು…

Read More

DK ಕೋಚ್ ಆಗಲು ಇವರೇ ಕಾರಣ..! – Kannada News | DK Reveals How Virat Kohli Inspired His RCB Coaching Role

ಐಪಿಎಲ್ ಅಂಗಳದಲ್ಲಿ ಅಬ್ಬರಿಸಿದ್ದ ‘ಫಿನಿಶರ್’ ದಿನೇಶ್ ಕಾರ್ತಿಕ್, ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೆಂಟರ್ ಹಾಗೂ ಬ್ಯಾಟಿಂಗ್ ಕೋಚ್. ಆಟಗಾರನಾಗಿ ನಿವೃತ್ತಿ ಹೊಂದಿದ ಬೆನ್ನಲ್ಲೇ ಡಿಕೆ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಎರಡನೇ ಇನಿಂಗ್ಸ್ ಆರಂಭಿಸಿದ್ದರು. ಇದಕ್ಕೆ ವಿರಾಟ್ ಕೊಹ್ಲಿ ಎಂಬ ಕುತೂಹಲಕಾರಿ ವಿಷಯವನ್ನು ದಿನೇಶ್ ಕಾರ್ತಿಕ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಕೊಹ್ಲಿಯ ‘ಮಹತ್ವದ’ ಸಲಹೆ: ಇಂಡಿಯನ್ ಪ್ರೀಮಿಯರ್ ಲೀಗ್​​ಗೆ ನಿವೃತ್ತಿ ಘೋಷಿಸಿದ ಬಳಿಕ ನಾನು ಗೊಂದಲದಲ್ಲಿದ್ದೆ. ಈ ವೇಳೆ ನಾನು ವಿರಾಟ್ ಕೊಹ್ಲಿಯನ್ನು ಎರಡು…

Read More

ಬಿಜೆಪಿ ಗೆಲುವಿನ ಬೆನ್ನಲ್ಲೇ ಮಮತಾ ಬ್ಯಾನರ್ಜಿ ಕಾಳಿಘಾಟ್​​ ನಿವಾಸದ ಭದ್ರತೆ ಕಡಿತ – Kannada News | Mamata banerjees residence security reduced following bjps west bengal victory

ಕೋಲ್ಕತ್ತಾ, ಮೇ 06: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ರಾಜ್ಯ ರಾಜಕೀಯದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಬಿಜೆಪಿ ಜಯಭೇರಿ ಬಾರಿಸಿದ್ದು, ಇದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಸುತ್ತಮುತ್ತಲಿನ ಪರಿಸ್ಥಿತಿಯ ಮೇಲೂ ಪರಿಣಾಮ ಬೀರಿದೆ. ಕೋಲ್ಕತ್ತಾದ ಕಾಳಿಘಾಟ್‌ನಲ್ಲಿರುವ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ನೀಡಲಾಗಿದ್ದ ಭದ್ರತೆಯನ್ನು ಕಡಿತಗೊಳಿಸಲಾಗಿದ್ದು, ಹಿಂದೆ ಮುಖ್ಯಮಂತ್ರಿಗಳ ನಿವಾಸಕ್ಕೆ ಇದ್ದ ಭಾರೀ ಭದ್ರತೆ ಕಡಿತಗೊಳಿಸಲಾಗಿದೆ. ಮಮತಾ ನಿವಾಸದ ರಸ್ತೆಗೆ ಅಡ್ಡಲಾಗಿ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ರಸ್ತೆಯಲ್ಲಿ ಓಡಾಡಲು ಮುಕ್ತ…

Read More

‘ಧುರಂಧರ್ 2’ ವಿವಾದ ಸುಖಾಂತ್ಯ; ಆದಿತ್ಯ ಧರ್ ಬಳಿ ಕ್ಷಮೆ ಕೇಳಿದ ಸಂತೋಷ್ ಕುಮಾರ್  – Kannada News | Dhurandhar Copyright Row Settles: Aditya Dhar Wins as Santosh Kumar Apologizes

ಬಾಲಿವುಡ್‌ನ ಖ್ಯಾತ ನಿರ್ದೇಶಕ ಆದಿತ್ಯ ಧರ್ ಅವರ ‘ಧುರಂಧರ್: ದಿ ರಿವೇಂಜ್’ ಸಿನಿಮಾ ಸಾಕಷ್ಟು ಮೆಚ್ಚುಗೆ ಪಡೆದಿದೆ. ಈ ಚಿತ್ರವನ್ನು ನೋಡಿ ಅನೇಕರು ಹೊಗಳಿದ್ದಾರೆ. ಈ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಮಾಯಿ ಕೂಡ ಮಾಡಿದೆ. ಇದರ ಜೊತೆಗೆ ಸಿನಿಮಾ ಸುತ್ತ ಕಾನೂನು ಸಂಘರ್ಷ ಎದುರಾಗಿತ್ತು. ಸದ್ಯ ಇದಕ್ಕೆ ತೆರೆ ಬಿದ್ದಿದೆ. ಆದಿತ್ಯ ಧರ್ ವಿರುದ್ಧ ಕೃತಿ ಚೌರ್ಯದ ಆರೋಪ ಮಾಡಿದ್ದ ಸಂತೋಷ್ ಕುಮಾರ್ ಅವರು ನ್ಯಾಯಾಲಯದಲ್ಲಿ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಆ ಬಳಿಕ ಬಾಂಬೆ ಹೈಕೋರ್ಟ್…

Read More

Vastu Tips: ಸೆಕೆಂಡ್ ಹ್ಯಾಂಡ್ ವಸ್ತು ಖರೀದಿಸುವ ಮುನ್ನ ಈ ವಾಸ್ತು ನಿಯಮ ತಿಳಿದಿರಲಿ; ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ! – Kannada News | Vastu Tips: Second Hand Items to Avoid Bringing Negative Energy Home

ಇಂದಿನ ಕಾಲದಲ್ಲಿ ಬಜೆಟ್ ಉಳಿಸಲು ಅಥವಾ ವಿಂಟೇಜ್ (Vintage) ಲುಕ್ ಪಡೆಯಲು ಅನೇಕರು ಹಳೆಯ ಅಥವಾ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಆದರೆ, ವಾಸ್ತು ಶಾಸ್ತ್ರದ ಪ್ರಕಾರ, ನಾವು ಮನೆಗೆ ತರುವ ಪ್ರತಿಯೊಂದು ವಸ್ತುವು ತನ್ನದೇ ಆದ ಶಕ್ತಿಯನ್ನು (Energy) ಹೊಂದಿರುತ್ತದೆ. ಬೇರೆಯವರು ಬಳಸಿದ ವಸ್ತುಗಳನ್ನು ಮನೆಗೆ ತರುವಾಗ, ಅವರ ಅದೃಷ್ಟ ಅಥವಾ ಸಂಕಷ್ಟಗಳು ನಮ್ಮ ಮನೆಗೆ ಬರಬಹುದು ಎಂಬ ನಂಬಿಕೆಯಿದೆ. ಹಾಗಾದರೆ, ಯಾವ ವಸ್ತುಗಳನ್ನು ಸೆಕೆಂಡ್ ಹ್ಯಾಂಡ್ ಖರೀದಿಸುವುದು ಅಶುಭ? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ….

Read More

ತುಂಗಭದ್ರಾ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಆತಂಕ: ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಭೀತಿ – Kannada News | Tungabhadra Dam Hits Dead Storage: Drinking Water Crisis Looms Over 4 Districts as Water Levels Drop to 10 TMC

ತುಂಗಭದ್ರಾ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ಆತಂಕImage Credit source: tv9 ಹೊಸಪೇಟೆ, ಮೇ 6: ಕಲ್ಯಾಣ ಕರ್ನಾಟಕದ ಜೀವನಾಡಿ ಎಂದೇ ಕರೆಯಲ್ಪಡುವ ತುಂಗಭದ್ರಾ ಜಲಾಶಯದಲ್ಲಿ (TB Dam) ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಇದೀಗ ‘ಡೆಡ್ ಸ್ಟೋರೇಜ್’ ಹಂತಕ್ಕೆ ತಲುಪಿದೆ. ಜಲಾಶಯದಲ್ಲಿ ಪ್ರಸ್ತುತ ಕೇವಲ 10 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಮುಂಬರುವ ಮಳೆಗಾಲದವರೆಗೆ ಈ ನೀರನ್ನು ನಾಲ್ಕು ಜಿಲ್ಲೆಗಳಿಗೆ ಹಂಚಿಕೆ ಮಾಡುವುದು ತುಂಗಭದ್ರಾ ಮಂಡಳಿಗೆ (TB Board) ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಖ್ಯಾಂಶಗಳು 105…

Read More

15 ದಿನದಲ್ಲಿ 65 ಕೋಟಿ ಮೌಲ್ಯದ ಡ್ರಗ್ಸ್ ಸೀಜ್!: ಬೆಂಗಳೂರಿಗೆ ಡ್ರಗ್ಸ್ ಹರಿದು ಬರುತ್ತಿರುವುದು ಏಕೆ? ಪೊಲೀಸರು ಪತ್ತೆಹಚ್ಚಿದ 11 ಶಾಕಿಂಗ್ ಕಾರಣಗಳು! – Kannada News | Mega Drug Bust in Bengaluru: Police Uncover Global Trafficking Routes and Youth Targets

ಬೆಂಗಳೂರು, ಮೇ.6: ಇತಿಹಾಸದಲ್ಲೇ ಕಾಣದ ರೀತಿಯಲ್ಲಿ ಬೆಂಗಳೂರು ನಗರಕ್ಕೆ ಬೃಹತ್ ಪ್ರಮಾಣದಲ್ಲಿ ಮಾದಕ ದ್ರವ್ಯಗಳು ಹರಿದು ಬರುತ್ತಿವೆ. ಪೊಲೀಸರು ಎಷ್ಟೇ ಹದ್ದಿನ ಕಣ್ಣಿಟ್ಟಿದ್ದರೂ, ಡ್ರಗ್ಸ್ ಸಪ್ಲೈ ಜಾಲ ಮಾತ್ರ ಕಡಿಮೆಯಾಗುತ್ತಿಲ್ಲ. ಇದು ನಗರದ ಜನತೆಯಲ್ಲಿ ಮತ್ತು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳೆದ ಕೇವಲ 15 ದಿನಗಳಲ್ಲಿ ಬೆಂಗಳೂರು ಪೊಲೀಸರು ನಗರದ ವಿವಿಧೆಡೆ ದಾಳಿ ನಡೆಸಿ ಬರೋಬ್ಬರಿ 65 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಅಂಕಿ-ಅಂಶವೇ ನಗರದಲ್ಲಿ ಡ್ರಗ್ಸ್ ಜಾಲ ಎಷ್ಟು ಆಳವಾಗಿ…

Read More

ಮದುವೆ ಮಂಟಪಕ್ಕೇ ನುಗ್ಗಿ ಬಂಗಾರ, ಬೆಳ್ಳಿ ಕದ್ದ ಕಳ್ಳ: ಎಸ್ಕೇಪ್​​ ಆಗುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ – Kannada News | Hospet Kalyana Mantapa Theft: Gold and Silver Stolen, Thief Caught on CCTV

ವಿಜಯನಗರ/ದೇವನಹಳ್ಳಿ, ಮೇ 06: ಮದುವೆ ಮಂಟಪಕ್ಕೇ ನುಗ್ಗಿ ಕಳ್ಳನೋರ್ವ ವಧುವಿಗೆ ಹಾಕಬೇಕಿದ್ದ ಬಂಗಾರ ಮತ್ತು ಬೆಳ್ಳಿಯ ಆಭರಣಗಳಿದ್ದ ಬ್ಯಾಗ್​​ ಕಳ್ಳತನ ನಡೆಸಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಸಿದ್ಧಿಪ್ರಿಯ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಬ್ಯಾಗ್ ಸಮೇತ ಕಳ್ಳ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೇ 4ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 40 ಗ್ರಾಂನ ಚಿನ್ನದ ಸರ, ಅರ್ಧ ಕೆ.ಜಿ. ಬೆಳ್ಳಿ, 10 ಸಾವಿರ ನಗದು…

Read More

ಬಸ್ಸಿನ ಛಾವಣಿಗಿಂತ ಎತ್ತರವಿದ್ದ ಕಂಡಕ್ಟರ್​ಗೆ ಬೆನ್ನು, ಕುತ್ತಿಗೆ ನೋವು: ಕೆಲಸವನ್ನೇ ಬದಲಿಸಿ ಮಾದರಿಯಾದ ಆರ್​ಟಿಸಿ – Kannada News | Telangana RTC Reassigns Tall Conductor Amin Ansari Due to Height Related Pain

ತೆಲಂಗಾಣ, ಮೇ 06: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಉದ್ಯೋಗಿಯೊಬ್ಬರ ವಿಶಿಷ್ಟ ದೈಹಿಕ ಸಮಸ್ಯೆಯನ್ನು ಅರ್ಥಮಾಡಿಕೊಂಡು, ಅವರಿಗೆ ಪೂರಕವಾದ ಕೆಲಸ ನೀಡುವ ಮೂಲಕ ತೆಲಂಗಾಣ(Telangana) ಸಾರಿಗೆ ಸಂಸ್ಥೆಯು ಮಾದರಿಯಾಗಿದೆ. ಸುಮಾರು 198 ಸೆಂಟಿಮೀಟರ್ (6 ಅಡಿ 6 ಇಂಚು) ಎತ್ತರವಿರುವ ಕಂಡಕ್ಟರ್ ಅಮೀನ್ ಅಹ್ಮದ್ ಅನ್ಸಾರಿ ಅವರಿಗೆ ಬಸ್ಸಿನ ಒಳಗಿನ ಇಕ್ಕಟ್ಟಾದ ಜಾಗದಲ್ಲಿ ಕೆಲಸ ಮಾಡುವುದು ಒಂದು ದೊಡ್ಡ ಶಿಕ್ಷೆಯಾಗಿತ್ತು. ಬಗ್ಗಿದ ಕುತ್ತಿಗೆ, ಬೆನ್ನಿಗಂಟಿದ ನೋವು ಮೆಹದಿಪಟ್ನಂ ಡಿಪೋಗೆ ಸೇರಿದ ಅನ್ಸಾರಿ ಅವರಿಗೆ ಬಸ್ಸಿನ ಒಳಗಿನ ಸೀಮಿತ ಹೆಡ್‌ರೂಮ್ ಮತ್ತು…

Read More

ಚೇತನ್ ಇನ್ನಾದರೂ ಮನುಷ್ಯನಾಗು: ವಿವಾದದ ಬಳಿಕ ಸಾರಾ ಗೋವಿಂದು ಕಿವಿಮಾತು – Kannada News | Sa Ra Govindu talks about Chetan Ahimsa after Dr Rajkumar Samadhi controversy

ನಟ ‘ಆ ದಿನಗಳು’ ಚೇತನ್ (Chetan Ahimsa) ಅವರು ಡಾ. ರಾಜ್​ಕುಮಾರ್ ಸಮಾಧಿ ಬಗ್ಗೆ ನೀಡಿದ ಹೇಳಿಕೆಗೆ ಸಾರಾ ಗೋವಿಂದು ಅವರು ಖಾರವಾಗಿ ಪ್ರತಿಕ್ರಿಯಿಸಿದರು. ಚೇತನ್ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ಕೂಡ ಮಾಡಲಾಗಿದೆ. ಈ ವೇಳೆ ಸಾರಾ ಗೋವಿಂದು ಅವರು ಮಾತನಾಡಿದ ವಿಡಿಯೋ ಇಲ್ಲಿದೆ. ‘ಗೌರಿ ಲಂಕೇಶ್ ಅವರ ಪಾರ್ಥೀವ ಶರೀರ ನೋಡಲು ಹೋದಾಗ ರವೀಂದ್ರ ಕಲಾಕ್ಷೇತ್ರದಲ್ಲಿ ರೀ ವಾಟಾಳ್ ಅವರೇ ಅಂತ ಕರೆದಿದ್ದ ಈ ಅಯೋಗ್ಯ. ಆವತ್ತೇ ಜನರು ಆಕ್ರೋಶಕ್ಕೆ ಒಳಗಾಗಿದ್ದರು. ನಿನಗೆ ತಂದೆ-ತಾಯಿ ಸಂಸ್ಕಾರ…

Read More