ಪಿಓಪಿ ಗಣೇಶ ಮೂರ್ತಿ ನಿಷೇಧ, ಶಬ್ಧ ಮಾಲೀನ್ಯಕ್ಕೂ ಅವಕಾಶವಿಲ್ಲ: ಈಶ್ವರ್ ಖಂಡ್ರೆ ಸೂಚನೆ – Kannada News | Minister Eshwar Khandre directs gram panchayats to permit only eco friendly clay Ganesh idols
ಬೆಂಗಳೂರು, (ಆಗಸ್ಟ್ 06): ಸೆಪ್ಟೆಂಬರ್ 14ರಂದು ನಾಡಿನಾದ್ಯಂತ ಆಚರಿಸಲಾಗುವ ಗಣೇಶ ಹಬ್ಬದ (Ganesh Festival) (Ganesh Festival) ವೇಳೆ ನಿಷೇಧಿತ ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ನಿರ್ಮಿತ, ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ(Ganesh Idol) ವಿಸರ್ಜನೆಗೆ ಅವಕಾಶ ನೀಡದೆ, ಪರಿಸರ ಸ್ನೇಹಿ ಬಣ್ಣ ರಹಿತ ಮಣ್ಣಿನ ಗಣಪತಿ ಪೂಜಿಸಲು ಪ್ರೇರೇಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ (Eshwar Khandre) ಸೂಚನೆ ನೀಡಿದ್ದಾರೆ. ಅಲ್ಲದೇ ಗಣೇಶ ಉತ್ಸವ ವೇಳೆ ಶಬ್ಧ ಮಾಲೀನ್ಯಕ್ಕೆ ಅವಕಾಶವಿಲ್ಲ…