ಜಯದೇವ ಆಯ್ತು, ಈಗ ಬೆಂಗಳೂರಿನ ಮತ್ತೊಂದು ಫ್ಲೈ ಓವರ್ ಧರೆಗೆ: ಏನಿದು ಬಿ-ಸ್ಮೈಲ್ ಹೊಸ ಪ್ಲಾನ್? – Kannada News | Bengaluru to Raze IOC Junction Flyover: Rs 436 Cr Elevated Rotary Plan for SMVT Connectivity
ಜಯದೇವ ಆಯ್ತು, ಈಗ ಬೆಂಗಳೂರಿನ ಮತ್ತೊಂದು ಫ್ಲೈ ಓವರ್ ಧರೆಗೆ ಬೆಂಗಳೂರು, ಮೇ 05: ಜಯದೇವ ಮತ್ತು ಡಾಲ್ಮಿಯಾ ಫ್ಲೈ ಓವರ್‌ಗಳ ತೆರವು ಕಾರ್ಯಾಚರಣೆಯ ಬೆನ್ನಲ್ಲೇ, ಈಗ ಪೂರ್ವ ಬೆಂಗಳೂರಿನ ಮತ್ತೊಂದು ಪ್ರಮುಖ ಮೇಲ್ಸೇತುವೆ (Flyover) ಇತಿಹಾಸ ಸೇರಲು ಸಿದ್ಧವಾಗಿದೆ. ಐಒಸಿ ಜಂಕ್ಷನ್‌ನಲ್ಲಿರುವ ಹಳೆಯ ಫ್ಲೈ ಓವರ್ ಅನ್ನು ಕೆಡವಿ, ಅಲ್ಲಿ 436 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ಎಲಿವೇಟೆಡ್ ರೋಟರಿ ಫ್ಲೈ ಓವರ್ ನಿರ್ಮಿಸಲು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಯೋಜನೆ ರೂಪಿಸಿದೆ. 2001-02ರ…