Headlines

ಜಪಾನಿಯರಂತೆ ಆರೋಗ್ಯಕರವಾಗಿ ಜೀವನ ನಡೆಸಲು ಈ ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ – Kannada News | Follow these Japanese habits to stay healthy and fit

ತಂತ್ರಜ್ಞಾನ ಮಾತ್ರವಲ್ಲ ಆರೋಗ್ಯ, ಆಯಸ್ಸಿನ ವಿಚಾರದಲ್ಲೂ ಜಪಾನ್‌ ಸದಾ ಮುಂದಿದೆ. ಜಗತ್ತಿನ ಬಹುತೇಕ ಜನ ಒತ್ತಡದ ಜೀವನವನ್ನು ನಡೆಸುತ್ತಿರುವ ಈ ಕಾಲಘಟ್ಟದಲ್ಲಿ ಇಲ್ಲಿನ ಜನರು ಮಾತ್ರ ಆರೋಗ್ಯಕರ (healthy life), ನೆಮ್ಮದಿಯ, ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ ಪದ್ಧತಿಯೇ ಇವರ ಸದೃಢ ಮತ್ತು ಆರೋಗ್ಯಕರ ಜೀವನದ ಗುಟ್ಟು. ಜಪಾನಿನ ಜನರ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಂಡರೆ, ನಾವು ಸಹ ಅವರಂತೆಯೇ ಆರೋಗ್ಯವಂತರಾಗಿ ಜೀವನವನ್ನು ನಡೆಸಬಹುದು. ನಿಮಗೂ ಕೂಡ ಫಿಟ್‌ ಆಗಿರಬೇಕು, ನೂರ್ಕಾಲ ಆರೋಗ್ಯವಂತರಾಗಿ ಜೀವನ…

Read More

ನಿನ್ನ ಜೇಬಿನಲ್ಲಿ ವಿಕೆಟ್​ ಇದೆ, ನನ್ನ ಕಿಸೆಯಲ್ಲಿ ಪಾಯಿಂಟ್ಸ್ ಇದೆ! – Kannada News | Rashid Khan’s ‘Pocket’ Revenge: GT Star Mocks Jadeja After Epic Win

ಐಪಿಎಲ್ ಅಂಗಳದಲ್ಲಿ ಕೇವಲ ಬ್ಯಾಟ್ ಮತ್ತು ಬಾಲ್ ನಡುವಿನ ಹೋರಾಟ ಮಾತ್ರವಲ್ಲದೆ, ಆಟಗಾರರ ನಡುವಿನ ಸಂಭ್ರಮಾಚರಣೆಯ ಜಿದ್ದಾಜಿದ್ದೂ ನೋಡುಗರಿಗೆ ಭರಪೂರ ಮನರಂಜನೆ ನೀಡುತ್ತದೆ. ಇತ್ತೀಚೆಗೆ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆದ ಪಂದ್ಯವು ಇಂತಹದ್ದೇ ಒಂದು ಸ್ವಾರಸ್ಯಕರ ಘಟನೆಗೆ ಸಾಕ್ಷಿಯಾಯಿತು. ರಾಜಸ್ಥಾನ ರಾಯಲ್ಸ್​ ತಂಡದ ರವೀಂದ್ರ ಜಡೇಜಾ ಅವರ ‘ಪಾಕೆಟ್’ ಸಂಭ್ರಮಕ್ಕೆ, ಅಫ್ಘಾನ್ ಸ್ಪಿನ್ ಮಾಂತ್ರಿಕ ರಶೀದ್ ಖಾನ್ ನೀಡಿದ ತಮಾಷೆಯ ತಿರುಗೇಟು ಇದೀಗ ವೈರಲ್ ಆಗಿದೆ. ಅಷ್ಟಕ್ಕೂ ಈ ‘ಪಾಕೆಟ್ ವೀಡಿಯೋ’ ಹಿಂದಿನ…

Read More

ಸುಬ್ರಹ್ಮಣ್ಯನ ಲಹರಿ ಇರುವ ಇಂದಿನ ದಿನ ಭವಿಷ್ಯ ಹೇಗಿದೆ ನೋಡಿ

2026 ರ ಮಾರ್ಚ್ 17 ರ ಮಂಗಳವಾರದ ದೈನಂದಿನ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಶತಭಿಷಾ ನಕ್ಷತ್ರ, ಸಿದ್ಧಿ ಯೋಗ ಮತ್ತು ವಣಿಕ್ ಕರಣವಿರುವ ಈ ದಿನದ ಮಹತ್ವವನ್ನು ಕೂಡ ವಿವರಿಸಿದ್ದಾರೆ. ಈ ದಿನದ ರಾಹುಕಾಲವು ಮಧ್ಯಾಹ್ನ 3:28 ರಿಂದ 4:59 ರ ತನಕ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲವು…

Read More

ಮಲೇಷ್ಯಾ ಧರ್ಮಗುರುವಿನ ಲಿಂಕ್, ವಾಟ್ಸಾಪ್ ಚಾಟ್; ಕಗ್ಗಂಟಾಗುತ್ತಲೇ ಇದೆ ಟಿಸಿಎಸ್ ಮತಾಂತರ ಪ್ರಕರಣ – Kannada News | WhatsApp Chats, Malaysia Linked Preacher; TCS Nashik conversion case widens

ನವದೆಹಲಿ, ಏಪ್ರಿಲ್ 15: ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಬಿಪಿಒ ಕಚೇರಿಯಲ್ಲಿನ ಮತಾಂತರ ಮತ್ತು ಲೈಂಗಿಕ ಕಿರುಕುಳ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದು ಕಾರ್ಪೋರೇಟ್ ಜಿಹಾದ್​ ಎಂದು ಟೀಕೆಗಳು ಕೂಡ ವ್ಯಕ್ತವಾಗುತ್ತಿವೆ. ಈ ಪ್ರಕರಣದ ತನಿಖೆಯಲ್ಲಿ ಅಂತಾರಾಷ್ಟ್ರೀಯ ಸಂಪರ್ಕವಿರುವ ಮತಾಂತರ ಜಾಲವೊಂದು ಬೆಳಕಿಗೆ ಬಂದಿದೆ. ಫೆಬ್ರವರಿಯಲ್ಲಿ ಗುಪ್ತ ಪೊಲೀಸ್ ಕಾರ್ಯಾಚರಣೆ ನಡೆದ ನಂತರ ಈ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ಟಿಸಿಎಸ್​​ನಲ್ಲಿ (TCS) ರಹಸ್ಯವಾಗಿ ಹೌಸ್ ಕೀಪಿಂಗ್ ಸಿಬ್ಬಂದಿಯಂತೆ ನಿಯೋಜಿಸಲಾಗಿತ್ತು. ವಾಟ್ಸಾಪ್…

Read More

ಕೇವಲ 1 ರನ್‌ನಿಂದ ಚಾಂಪಿಯನ್ ಪಟ್ಟಕ್ಕೇರಿದ ನೈಟ್ ರೈಡರ್ಸ್! – Kannada News | Los Angeles Knight Riders clinch maiden MLC title

ಮೇಜರ್ ಲೀಗ್ ಕ್ರಿಕೆಟ್ (MLC 2026) ಟೂರ್ನಿಯ ಫೈನಲ್ ಪಂದ್ಯದಲ್ಲಿ ಲಾಸ್ ಏಂಜಲಿಸ್ ನೈಟ್ ರೈಡರ್ಸ್ (LAKR) ತಂಡವು ರೋಚಕ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಓಕ್ಲಾಂಡ್​ನ ಕೊಲಿಸಿಯಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊನೆಯ ಎಸೆತದವರೆಗೂ ಹೋರಾಡಿದ ವಾಷಿಂಗ್ಟನ್ ಫ್ರೀಡಂ ತಂಡವು ಒಂದು ರನ್​ನಿಂದ ಸೋಲೊಪ್ಪಿಕೊಂಡಿತು. ಇತ್ತ ಈ ಒಂದು ರನ್​ನ ರೋಚಕ ಜಯದೊಂದಿಗೆ ನೈಟ್ ರೈಡರ್ಸ್ ತಂಡವು ಇದೇ ಮೊದಲ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನೈಟ್ ರೈಡರ್ಸ್ ಸಾಧಾರಣ ಮೊತ್ತ: ಈ…

Read More

2026 ರ ಐಪಿಎಲ್​ಗೆ ಜೆರ್ಸಿ ಬದಲಿಸಿದ ಆರ್​ಸಿಬಿ; ಹೊಸ ಜೆರ್ಸಿಯ ವಿಡಿಯೋ ನೋಡಿ – Kannada News | RCB New IPL Jersey: Star for First Trophy, Nothing Sponsor Revealed

ಟಿ20 ವಿಶ್ವಕಪ್ ಮುಗಿದ ಕೂಡಲೇ 2026 ರ ಐಪಿಎಲ್ ಕೂಡ ಆರಂಭವಾಗಲಿದೆ. ಹಾಲಿ ಚಾಂಪಿಯನ್ ಆರ್​ಸಿಬಿ ಈ ಆವೃತ್ತಿಯಲ್ಲೂ ತನ್ನ ಟ್ರೋಫಿ ಉಳಿಸಿಕೊಳ್ಳುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ಆದರೆ ಆರ್​ಸಿಬಿ ತನ್ನ ತವರು ಪಂದ್ಯಗಳನ್ನು ಎಲ್ಲಿ ಆಡಲಿದೆ ಎಂಬುದು ಇಲ್ಲಿಯವರೆಗೆ ಖಚಿತವಾಗಿಲ್ಲ. ಒಂದೆಡೆ ಕೆಎಸ್​ಸಿಎ, ಆರ್​ಸಿಬಿ ಪಂದ್ಯಗಳನ್ನು ಬೆಂಗಳೂರಿನಲ್ಲಿ ನಡೆಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಆರ್​ಸಿಬಿ ಮ್ಯಾನೇಜ್​ಮೆಂಟ್ ಮಾತ್ರ ತನ್ನ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ನೋಡುತ್ತಿದೆ. ಇದೆಲ್ಲದರ ನಡುವೆ ಆರ್​ಸಿಬಿ ಫ್ರಾಂಚೈಸಿ ಮುಂಬರುವ ಐಪಿಎಲ್​ಗೆ ತನ್ನ ತಂಡದ ನೂತನ…

Read More

ಫ್ರಾನ್ಸ್‌ನ ಲುಮಿಯೆರ್ ಮ್ಯೂಸಿಯಂನಲ್ಲಿ ರಾಜಮೌಳಿಗೆ ಗೌರವ: ‘ವಾಲ್ ಆಫ್ ಫಿಲ್ಮ್ ಮೇಕರ್ಸ್’ಗೆ ಸೇರ್ಪಡೆ – Kannada News | SS Rajamouli Honored at Lumiere Museum, Joins Global Filmmakers Wall in France

ಪ್ರಖ್ಯಾತ ಚಲನಚಿತ್ರ ನಿರ್ದೇಶಕ ಎಸ್‌ಎಸ್ ರಾಜಮೌಳಿ ( SS Rajamouli) ಫ್ರಾನ್ಸ್‌ನ ಲಿಯಾನ್‌ನಲ್ಲಿರುವ ಲುಮಿಯೆರ್ ಮ್ಯೂಸಿಯಂನಲ್ಲಿ ದೊಡ್ಡ ಗೌರವ ಸಿಕ್ಕಿದೆ. ಮ್ಯೂಸಿಯಂನಲ್ಲಿರುವ ಪ್ರತಿಷ್ಠಿತ ವಾಲ್ ಆಫ್ ಫಿಲ್ಮ್ ಮೇಕರ್ಸ್ ಗೋಡೆಯ ಮೇಲೆ ರಾಜಮೌಳಿ ಅವರ ಹೆಸರಿನ ನಾಮಫಲಕವನ್ನು ಅನಾವರಣಗೊಳಿಸಲಾಗಿದೆ. ಇದಕ್ಕೂ ಮುನ್ನ ಮ್ಯೂಸಿಯಂನ ಚಿತ್ರಮಂದಿರದಲ್ಲಿ ಅವರ ‘ಈಗ’ ಮತ್ತು ‘ಆರ್‌ಆರ್‌ಆರ್‌’ ಸಿನಿಮಾಗಳನ್ನು ಪ್ರದರ್ಶಿಸಲಾಯಿತು. ಈ ಪ್ರದರ್ಶನಕ್ಕೆ ಭಾರಿ ಜನಸ್ತೋಮ ಹರಿದುಬಂದಿತ್ತು. ಈ ಸಂತೋಷದ ಸುದ್ದಿಯನ್ನು ರಾಜಮೌಳಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫ್ರಾನ್ಸ್‌ನ ಲಿಯಾನ್‌ನಲ್ಲಿ ‘ಈಗ’ ಮತ್ತು…

Read More

ಸಿಬಿಎಸ್​ಇ ಮರುಮೌಲ್ಯಮಾಪನ ಪೋರ್ಟಲ್ ತಾಂತ್ರಿಕ ದೋಷ ನಿವಾರಣೆ: ಅಂಕ ಪರಿಶೀಲನೆಗೆ ಜೂನ್ 6 ಕೊನೆಯ ದಿನಾಂಕ

ನವದೆಹಲಿ, ಜೂನ್ 02: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅತ್ಯಂತ ವೇಗದ ಕ್ರಮ ಕೈಗೊಂಡಿದೆ. ಮರುಮೌಲ್ಯಮಾಪನ ಪೋರ್ಟಲ್ ಆರಂಭವಾದ ಮೊದಲ ದಿನ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಲಾಗಿನ್ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಮಂಡಳಿಯು ತಕ್ಷಣವೇ ಪರಿಹರಿಸಿದ್ದು, ಪ್ರಸ್ತುತ ಪೋರ್ಟಲ್ ಅತ್ಯಂತ ಸರಾಗವಾಗಿ ಹಾಗೂ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ. ಜೂನ್ 6 ರವರೆಗೆ ಅರ್ಜಿ ಸಲ್ಲಿಸಲು ಸುವರ್ಣಾವಕಾಶ ಸಿಬಿಎಸ್‌ಇ ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳ ಮರುಪರಿಶೀಲನೆ ಹಾಗೂ ಮರುಮೌಲ್ಯಮಾಪನಕ್ಕಾಗಿ (Revaluation)…

Read More

ಪಾಕಿಸ್ತಾನಕ್ಕೆ ಭಾರತೀಯ ನೌಕಾಪಡೆಯ ರಹಸ್ಯ ಮಾಹಿತಿ ರವಾನೆ: ಉಡುಪಿಯಲ್ಲಿ ಮತ್ತೊಬ್ಬನ ಬಂಧನ – Kannada News | Indian Navy Secret Leak Case: Another Arrest in Udupi Over Sharing Classified Information with Pakistan

ಉಡುಪಿ, ಫೆಬ್ರವರಿ 18: ಭಾರತೀಯ ನೌಕಾ ಪಡೆಗೆ (Indian Navy) ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ (Pakistan) ರವಾನಿಸಿದ ಪ್ರಕರಣದಲ್ಲಿ ಉಡುಪಿ (Udupi) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಮಲ್ಪೆ ಬಂದರಿನ ಕೊಚ್ಚಿನ್ ಶಿಪ್ ಯಾರ್ಡ್‌ಗೆ ಸಂಬಂಧಿಸಿದ ನೌಕರರು ನೌಕಾಪಡೆಯ ಹಡಗುಗಳ ಸಂಖ್ಯೆಗಳ ಗೋಪ್ಯ ಮಾಹಿತಿಯನ್ನು ವಾಟ್ಸ್​ಆ್ಯಪ್ ಮತ್ತು ಫೇಸ್‌ಬುಕ್ ಮೂಲಕ ಪಾಕಿಸ್ತಾನದ ಜತೆ ಹಂಚಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ…

Read More

ವಯನಾಡು ಭೂಕುಸಿತ: ಭಯಾನಕ ದೃಶ್ಯದಲ್ಲಿ ಸೆರೆಯಾದ ಟ್ಯಾಂಕರ್ ಕರ್ನಾಟಕದ್ದು! – Kannada News | Wayanad Landslide: Karnataka Registered Water Tanker Caught in Terrifying Mudslide Video

ವಯನಾಡ್, ಜುಲೈ 8: ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿಯಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೂವರು ಸಾವನ್ನಪ್ಪಿದ್ದು, ಐವರು ನಾಪತ್ತೆಯಾಗಿದ್ದಾರೆ. ಎನ್​​ಡಿಆರ್​​ಎಫ್ ತಂಡವು ಕಳೆದ 25 ಗಂಟೆಗಳಿಂದ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ದುರಂತದ ಸಂದರ್ಭ ಸ್ಥಳದಲ್ಲಿ ಕಾಣಿಸಿದ, ವೈರಲ್ ಆದ ವಿಡಿಯೋಗಳಲ್ಲಿದ್ದ ಟ್ಯಾಂಕರ್ ಕರ್ನಾಟಕ ನೋಂದಣಿಯದ್ದು ಎಂಬುದು ಗೊತ್ತಾಗಿದೆ. ರಾಮನಗರ ಜಿಲ್ಲೆಯ ಆರ್​ಟಿಒ (KA 42, B 9671) ನೋಂದಣಿಯ ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್‌ಗೆ ಸೇರಿದ ಈ ನೀರಿನ ಟ್ಯಾಂಕರ್, ಸುರಂಗ ಕಾಮಗಾರಿ ಸ್ಥಳಕ್ಕೆ ನೀರು ಪೂರೈಸಲು…

Read More