Headlines

ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತಾ? – Kannada News | Harihara Panchamasali Peetha Crisis: 27.61 Crore Collected in Donations Over the Last 18 Years

ದಾವಣಗೆರೆ, ಏಪ್ರಿಲ್​​ 27: ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯಿರುವ ಪಂಚಮಸಾಲಿ ಪೀಠದಲ್ಲಿ ಟ್ರಸ್ಟ್​ನ ಧರ್ಮದರ್ಶಿ ಬಿ.ಸಿ.ಉಮಾಪತಿ 2008ರಿಂದ 2026ರವರೆಗಿನ ಲೆಕ್ಕವನ್ನು ಮಂಡಿಸಿದರು.  ಸರ್ಕಾರ ಮತ್ತು ಭಕ್ತಾದಿಗಳಿಂದ ಕಳೆದ 18 ವರ್ಷಗಳಲ್ಲಿ ಒಟ್ಟು 27 ಕೋಟಿ 61 ಲಕ್ಷ 57 ಸಾವಿರದ 518 ರೂ ಸಂಗ್ರಹವಾಗಿದೆ ಎಂದು ಅವರು ಮಾಹಿತಿ ನೀಡಿದರು. ಪಂಚಮಸಾಲಿ ಟ್ರಸ್ಟ್ ಚಾರಿಟೇಬಲ್ ಟ್ರಸ್ಟ್ ಆಗಿದ್ದು, ಪ್ರತಿ ವರ್ಷ ಸರ್ಕಾರಕ್ಕೆ ಮತ್ತು ಮಾಸಿಕವಾಗಿ ಟ್ರಸ್ಟ್ ಸಭೆಗಳಲ್ಲಿ ಲೆಕ್ಕ ನೀಡಲಾಗುತ್ತದೆ. ಪಂಚಮಸಾಲಿ ಚಾರಿಟಬಲ್ ಟ್ರಸ್ಟ್, ಸಾರ್ವಜನಿಕರಿಗೆ…

Read More

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 9ರ ದಿನಭವಿಷ್ಯ 

ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಿರುವವರು ಅಥವಾ ಉದ್ಯೋಗ ಜೀವನ ಆರಂಭ ಮಾಡಬೇಕಿರುವವರು ಈಶ್ವರನಿಗೆ ಹಾಲಿನ ಅಭಿಷೇಕವನ್ನು ಮಾಡಿಸಬಹುದು, ಸಾಧ್ಯವಿದ್ದಲ್ಲಿ ನೀವೇ ಮನೆಯಲ್ಲಿ ಇಟ್ಟುಕೊಂಡಿರುವ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಅನುಕೂಲ ಒದಗಿ ಬರಲಿದೆ. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4): ಬಹಳ ಸಮಯದಿಂದ ನೀವು ಅಂದುಕೊಳ್ಳುತ್ತಿದ್ದ ಹಲವು ವಿಷಯಗಳನ್ನು ತಾರ್ಕಿಕ ಅಂತ್ಯ ತಲುಪಿಸುವುದಕ್ಕೆ ನಿರ್ಧಾರ ಮಾಡುತ್ತೀರಿ. ಅದಕ್ಕಾಗಿ ಸಮಯ- ಹಣವನ್ನು ಸಹ ಮೀಸಲಿಡುವುದಕ್ಕೆ ತೀರ್ಮಾನವನ್ನು ಮಾಡಲಿದ್ದೀರಿ. ಈ ಕಾರಣದಿಂದಾಗಿ…

Read More

‘ಈ ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ’ ಎಂದಿದ್ದ ಉಪ್ಪಿ; ಶಿವಣ್ಣನ ರಿಯಾಕ್ಷನ್ ಹೇಗಿತ್ತು?

ಶಿವರಾಜ್​ಕುಮಾರ್ ಅವರು ‘ಓಂ’ ಸಿನಿಮಾದಲ್ಲಿ ನಟಿಸಿದ್ದಾರೆ. ಉಪೇಂದ್ರ ಈ ಚಿತ್ರಕ್ಕೆ ಡೈರೆಕ್ಟರ್. ಸಿನಿಮಾ ಶೂಟ್ ವೇಳೆ ನಡೆದ ಘಟನೆ ಬಗ್ಗೆ ಉಪೇಂದ್ರ ಅವರು ಮಾತನಾಡಿದ್ದಾರೆ. ‘45’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಉಪ್ಪಿ ಈ ಘಟನೆ ನೆನಪಿಸಿಕೊಂಡರು. ಒಂದು ದೃಶ್ಯದ ಬಗ್ಗೆ ಶಿವಣ್ಣಗೆ ಅಸಮಾಧಾನ ಇತ್ತು. ಈ ಬಗ್ಗೆ ಉಪೇಂದ್ರ ಬಳಿ ನಿರಂತರವಾಗಿ ಕೇಳಿದ್ದರಂತೆ. ಆದರೆ, ದೃಶ್ಯ ತೆಗೆಯಲು ಉಪೇಂದ್ರ ಒಪ್ಪಲೇ ಇಲ್ಲ. ಕೊನೆಗೆ ಶಿವಣ್ಣ ಅವರು ಯಾರದ್ದೋ ಬಳಿ ಹೇಳಿ ಕಳುಹಿಸಿದರಂತೆ. ಅವರು ಬಂದು ಹೇಳಿದಾಗ, ‘ಈ…

Read More

ಹಾರ್ಮುಜ್ ಜಲಸಂಧಿ ಮುಚ್ಚಲು ಕಾರಣರಾಗಿದ್ದ ಇರಾನ್ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವು

ಜೆರುಸಲೇಂ, ಮಾರ್ಚ್​ 26: ಹಾರ್ಮುಜ್ ಜಲಸಂಧಿ ಬಳಿ ಇಸ್ರೇಲ್(Israel) ನಡೆಸಿದ ದಾಳಿಯಲ್ಲಿ ಇರಾನಿನ ನೌಕಾಪಡೆಯ ಮುಖ್ಯಸ್ಥ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ. ಈ ಪ್ರದೇಶದಲ್ಲಿ ಈಗಾಗಲೇ ಹೆಚ್ಚಿರುವ ಉದ್ವಿಗ್ನತೆ ಮತ್ತು ಮಿಲಿಟರಿ ಚಟುವಟಿಕೆಗಳು ನಿರಂತರವಾಗಿ ಹೆಚ್ಚುತ್ತಿರುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ. ತಂಗ್ಸಿರಿ ಇರಾನ್ ನೌಕಾಪಡೆಯ ಪ್ರಮುಖ ಕಮಾಂಡರ್ ಆಗಿದ್ದರು ಮತ್ತು ಹಾರ್ಮುಜ್‌ನಂತಹ ಕಾರ್ಯತಂತ್ರದ ಪ್ರದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಾರ್ಮುಜ್ ಜಲಸಂಧಿ ಮುಚ್ಚಲು ಅವರೇ ಕಾರಣರಾಗಿದ್ದರು. ಈ ಯುದ್ಧದಲ್ಲಿ ಇಲ್ಲಿಯವರೆಗೆ ಅಮೆರಿಕ-ಇಸ್ರೇಲ್ ಇರಾನ್​​ನ ಮೂರು ಡಜನ್​ಗಿಂತಲೂ…

Read More

‘ನಾನು 3ನೇ ಮದುವೆ ಆಗುತ್ತಿರುವುದು ನಿಜ’; ನೇರವಾಗಿ ಒಪ್ಪಿಕೊಂಡ ಆಮಿರ್ ಖಾನ್ – Kannada News

ಬಾಲಿವುಡ್‌ನ ಖ್ಯಾತ ನಟ ಆಮಿರ್ ಖಾನ್ (Aamir Khan) ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ತಮ್ಮ ಜೊತೆಗಿರುವ ಪ್ರೇಯಸಿ ಗೌರಿ ಸ್ಪ್ರ್ಯಾಟ್ (Gauri Spratt) ಅವರನ್ನು ಜುಲೈ 5ರಂದು ವಿವಾಹವಾಗುತ್ತಿರುವುದಾಗಿ ನಟ ಆಮೀರ್ ಖಾನ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಅವರು, ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸುತ್ತಾ, ‘ಮದುವೆ ಸುದ್ದಿ ನಿಜ. ಜುಲೈ 5ರಂದು ವಿವಾಹ ನಡೆಯಲಿದೆ. ನಾನೀಗ ಅಮೆರಿಕದಲ್ಲಿ ಪ್ರಯಾಣ ಮಾಡುತ್ತಿದ್ದೇನೆ’ ಎಂದು ಹೇಳಿದ್ದಾರೆ. ಇತರೆ ಸೆಲೆಬ್ರಿಟಿಗಳಂತೆ…

Read More

ನಾಳೆ ‌ಲೆಕ್ಕ ಕೊಡುತ್ತೇವೆ ಎಂದ ಟ್ರಸ್ಟ: ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ಸ್ವಾಮೀಜಿಗೆ ತಾಕೀತು – Kannada News | Harihara Panchamasali Gurupeeth Conflict: Trustee Warns vachananda swamiji to Vacate Math

ಪಂಚಮಸಾಲಿ ಮಠದಲ್ಲಿ ಧರ್ಮದರ್ಶಿ ಸಮಿತಿ ಸುದ್ದಿಗೋಷ್ಠಿ Image Credit source: tv9 kannada ದಾವಣಗೆರೆ, ಏಪ್ರಿಲ್​ 26: ಹರಿಹರದ ಪಂಚಮಸಾಲಿ ಮಠದ ಆಡಳಿತ ಮಂಡಳಿ (ಟ್ರಸ್ಟ್) ಹಾಗೂ ವಚನಾನಂದ ಸ್ವಾಮೀಜಿ (Vachananda Swamiji) ನಡುವಿನ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಧರ್ಮದರ್ಶಿ ಸಮಿತಿಯ ಮುಖಂಡರು ಸ್ವಾಮೀಜಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ನಾಳೆ ಲೆಕ್ಕ ಕೊಡುತ್ತೇವೆ. ಲೆಕ್ಕ ಪಡೆದು ಮಠ ಖಾಲಿ‌ ಮಾಡುವಂತೆ ಸ್ವಾಮೀಜಿಗೆ ಟ್ರಸ್ಟಿ ಹೆಚ್​.ಎಸ್.ನಾಗರಾಜ್ ತಾಕೀತು ಮಾಡಿದ್ದಾರೆ. ವಚನಾನಂದ ಸ್ವಾಮೀಜಿಗೆ ತಾಕೀತು …

Read More

‘ಎಲ್ಲರೂ ರಶ್ಮಿಕಾ ಮಂದಣ್ಣ ಆಗಲು ಸಾಧ್ಯವಿಲ್ಲ’; ಹಾಡಿ ಹೊಗಳಿದ ನಟಿ ಐಶ್ವರ್ಯಾ ಲಕ್ಷ್ಮಿ – Kannada News | Aishwarya Lekshmi Hails Rashmika Mandanna’s Hard Work and Success: Not Just Luck

ಸಿನಿಮಾ ರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ (Rashmika Mandanna) ಬೆಳವಣಿಗೆಯನ್ನು ಕಂಡು ಅನೇಕರು ಇದು ಕೇವಲ ‘ಅದೃಷ್ಟ’ ಎಂದು ಮಾತನಾಡಿಕೊಂಡಿದ್ದಿದೆ. ಆದರೆ, ರಶ್ಮಿಕಾ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿರುವುದರ ಹಿಂದೆ ಅವರದ್ದೇ ಆದ ಕಠಿಣ ಶ್ರಮವಿದೆ. ಇಂಡಸ್ಟ್ರಿಯಲ್ಲಿ ಅವರ ಶ್ರಮ ಹಾಗೂ ನಟನೆಯನ್ನು ಗುರುತಿಸಿ ಗೌರವಿಸುವವರ ಸಂಖ್ಯೆಯೂ ದೊಡ್ಡದಿದೆ. ಇದೀಗ ಅದೇ ಸಾಲಿಗೆ ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯಾ ಲಕ್ಷ್ಮಿ ಕೂಡ ಸೇರಿದ್ದು, ರಶ್ಮಿಕಾ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ….

Read More

Viral News: ಹೆಂಗಸರ ಒಳಉಡುಪು ಕದಿಯುತ್ತಿದ್ದ ಪತಿ; 30 ವರ್ಷಗಳ ಬಳಿಕ ಅಸಹ್ಯಕರ ಅಭ್ಯಾಸ ತಿಳಿದು ವಿಚ್ಛೇದನ ನೀಡಿದ ಪತ್ನಿ – Kannada News | 30 Year Marriage Ends: Husband’s Secret Underwear Theft Habit Revealed

ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಹಲವು ಕಾರಣಗಳಿವೆ. ಮದುವೆಯಾದ ಪ್ರಾರಂಭದ 2ರಿಂದ 5ವರ್ಷಗಳ ನಡುವೆ ಹೆಚ್ಚಾಗಿ ವಿಚ್ಛೇದನಗಳು ನಡೆಯುತ್ತವೆ. ಆದರೆ ಇಲ್ಲೊಬ್ಬಳು ಬರೋಬ್ಬರೀ 30 ವರ್ಷಗಳ ದಾಂಪತ್ಯಕ್ಕೆ ವಿಚ್ಛೇದನ ನೀಡಿದ್ದಾಳೆ. ಹೌದು 30 ವರ್ಷಗಳ ಸುಖಿ ದಾಂಪತ್ಯ ನಡೆಸಿಕೊಂಡು ಬಂದಿದ್ದ ಮಹಿಳೆಯೊಬ್ಬಳು, ತನ್ನ ಪತಿಯ ಅಸಹ್ಯಕರ ಅಭ್ಯಾಸ ತಿಳಿದ ನಂತರ, ಆ ಸಂಬಂಧಕ್ಕೆ ಅಂತ್ಯ ಹಾಡಿದ್ದಾರೆ. ದಿ ಮಿರರ್ ವರದಿಯ ಪ್ರಕಾರ, ಮಹಿಳೆಗೆ ತನ್ನ ಪತಿ ಹಲವು ವರ್ಷಗಳಿಂದ ತನ್ನ ಸ್ನೇಹಿತರು, ನೆರೆಹೊರೆಯವರು…

Read More

IPL 2026: 1 ರನ್ನಿಂದ ಗೆದ್ದ ಗುಜರಾತ್ ನಾಯಕನಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ

ಈ ಬಾರಿಯ ಐಪಿಎಲ್‌ನಲ್ಲಿ ಸತತ ಎರಡು ಪಂದ್ಯಗಳನ್ನು ಸೋತಿದ್ದ ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡವು ತನ್ನ ಗೆಲುವಿನ ಖಾತೆ ತೆರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯವನ್ನು 1 ರನ್​ಗಳಿಂದ ರೋಚಕವಾಗಿ ಗೆದ್ದುಕೊಂಡ ಗುಜರಾತ್ ತಂಡಕ್ಕೆ ಎರಡು ಅಂಕಗಳು ಸಿಕ್ಕಿವೆ. ಇದರಿಂದ ಗುಜರಾತ್ ತಂಡ ಪಾಯಿಂಟ್ ಟೇಬಲ್‌ನಲ್ಲಿ ತಮ್ಮ ಖಾತೆಯನ್ನು ತೆರೆದಿದೆ. ಆದಾಗ್ಯೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಈ ಪಂದ್ಯದಲ್ಲಿ ನಿಧಾನಗತಿಯ ಓವರ್‌ ನಿಯಮವನ್ನು ಗುಜರಾತ್ ಟೈಟಾನ್ಸ್ ತಂಡ ಉಲ್ಲಂಘಿಸಿದೆ. ಹೀಗಾಗಿ ತಂಡದ ನಾಯಕ…

Read More

ಚಿಕ್ಕಮಗಳೂರು: ಗೋಣಿಬೀಡು ಬಳಿ 30ಕ್ಕೂ ಹೆಚ್ಚು ಕಾಡಾನೆಗಳ ದರ್ಬಾರ್, ಜನರು ಕಂಗಾಲು – Kannada News | Wild Elephant Herd Creates Panic in Chikkamagaluru’s Gonibeedu Hobli; Over 30 Elephants Camp Near Villages

ಚಿಕ್ಕಮಗಳೂರು, ಮಾರ್ಚ್ 1: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಸಂಚರಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಾಸನ ಜಿಲ್ಲೆಯ ಬೇಲೂರು ಮಾರ್ಗವಾಗಿ ಬಂದಿರುವ ಈ ಹಿಂಡು ಕಳೆದ ನಾಲ್ಕು ದಿನಗಳಿಂದ ವಿವಿಧ ಗ್ರಾಮಗಳ ಸುತ್ತಮುತ್ತ ಬೀಡುಬಿಟ್ಟಿದೆ. ಕಸ್ಕೆಬೈಲು ಗ್ರಾಮದ ಸಮೀಪ ರಸ್ತೆಯಲ್ಲೇ ಕಾಡಾನೆಗಳು ತಂಗಿರುವುದರಿಂದ ವಾಹನ ಸವಾರರು ಭಯಭೀತರಾಗಿದ್ದಾರೆ. ಅಲ್ಲದೆ ಕಾಫಿ ತೋಟಗಳಲ್ಲಿಯೂ ಕಾಡಾನೆಗಳ ಸಂಚಾರ ಕಂಡುಬಂದಿದ್ದು, ಕಾರ್ಮಿಕರು ತೋಟಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ….

Read More