ಸರ್ವೈಕಲ್ ಕ್ಯಾನ್ಸರ್ ವಿರುದ್ಧ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ: 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ HPV ಲಸಿಕೆ ಅಭಿಯಾನ ಪ್ರಾರಂಭ – Kannada News | Karnataka Government Launches Free HPV Cervical Cancer Vaccine Drive for 14 Year Old Girls
ಬೆಂಗಳೂರು, ಜುಲೈ 15: ಕೊರೊನಾ ಜಾಗತಿಕ ಹಾವಳಿಯ ನಡುವೆ ಕೊಂಚ ಮರೆಯಾಗಿದ್ದ ಮಹಾಮಾರಿ ಕ್ಯಾನ್ಸರ್, ಈಗ ಮತ್ತೆ ಕರ್ನಾಟಕ ರಾಜ್ಯದಲ್ಲಿ ಮಹಿಳೆಯರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವತಿಯರಿಂದ ಹಿಡಿದು ಮಧ್ಯವಯಸ್ಕ ಮಹಿಳೆಯರವರೆಗೆ ತೀವ್ರವಾಗಿ ಕಾಡುತ್ತಿರುವ ‘ಗರ್ಭಕಂಠ ಕ್ಯಾನ್ಸರ್’ (Cervical Cancer) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಈಗ ಮಹತ್ವದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್‌ಪಿವಿ (HPV) ಲಸಿಕೆ ನೀಡುವ ಬೃಹತ್ ಅಭಿಯಾನಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ….