ಪ್ರವಾಸಿಗರ ಕಣ್ಣಿಗೆ ಬಿದ್ದ ಅಪರೂಪದ ‘ಬಿಳಿ ಜಿಂಕೆ’! – Kannada News | Rare White Deer Spotted During Safari in Ajjipura, Chamarajanagar; Video Goes Viral
ಚಾಮರಾಜನಗರ, ಮೇ 02: ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಸಫಾರಿ ಕೇಂದ್ರದಲ್ಲಿ ಪ್ರವಾಸಿಗರಿಗೆ ಅತಿ ಅಪರೂಪದ ಬಿಳಿ ಜಿಂಕೆ ದರ್ಶನ ನೀಡಿದೆ. ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್ ಕ್ಯಾಮರಾದಲ್ಲಿ ಈ ಮನಮೋಹಕ ದೃಶ್ಯ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಕಳೆದ ವಾರವಷ್ಟೇ ಇದೇ ಸಫಾರಿ ಪಾಯಿಂಟ್‌ನಲ್ಲಿ ಕಪ್ಪು ಚಿರತೆ (Black Panther) ಕಾಣಿಸಿಕೊಂಡು ಕುತೂಹಲ ಮೂಡಿಸಿತ್ತು. ಇದೀಗ 30 ಸಾವಿರದಲ್ಲೊಂದರಂತೆ ಕಾಣ ಸಿಗುವ ಹಾಲು ಬಿಳುಪಿನ ಜಿಂಕೆಯನ್ನು ಕಂಡು ಪ್ರವಾಸಿಗರು ರೋಮಾಂಚನಗೊಂಡಿದ್ದಾರೆ….