ನೌಕರನ ತಪ್ಪಿಗೆ ಕಂಪನಿ ಸಿಇಒ ಹಾಗೂ ಹಿರಿಯ ಉದ್ಯೋಗಿಗಳಿಗೆ ಪೇಮೆಂಟ್ ಕಟ್; ಜಪಾನ್ ಏರ್ಲೈನ್ಸ್ನಲ್ಲೊಂದು ಘಟನೆ – Kannada News | Employee fails in alcohol test, CEO faces 30pc cut in 2 months salary, example for Japan corporate discipline
ಜಪಾನ್ ಏರ್ಲೈನ್ಸ್Image Credit source: Kevin Carter/Getty Images ಟೋಕಿಯೋ, ಜೂನ್ 22: ಜಪಾನ್‌ನಲ್ಲಿ ಕಾರ್ಪೊರೇಟ್ ಶಿಸ್ತು (Corporate discipline) ಬಹಳ ಇದೆ. ಅಲ್ಲಿ ಯಾರೇ ತಪ್ಪು ಮಾಡಿದರೂ ಅದಕ್ಕೆ ತಲೆದಂಡ ಒಬ್ಬರದ್ದೇ ಆಗಿರುವುದಿಲ್ಲ. ಕಂಪನಿಯ ಅತ್ಯುನ್ನತ ಹುದ್ದೆಯಲ್ಲಿರುವವರಿಗೂ ದಂಡ ತಪ್ಪುವುದಿಲ್ಲ. ಜಪಾನ್ ಏರ್ಲೈನ್ಸ್ನಲ್ಲಿರುವ (JAL- Japan Airlines) ಒಂದು ಘಟನೆ ಇದಕ್ಕೆ ಒಳ್ಳೆಯ ನಿದರ್ಶನವಾಗಿದೆ. ಏರ್ಲೈನ್ಸ್ನ ಉದ್ಯೋಗಿಯೊಬ್ಬರು ಆಲ್ಕೋಹಾಲ್ ಪರೀಕ್ಷೆಯಲ್ಲಿ ವಿಫಲನಾಗಿದ್ದಕ್ಕೆ ಕಂಪನಿಯ ಸಿಇಒ ಹಾಗು ಇತರ ಕೆಲ ಹಿರಿಯ ಉದ್ಯೋಗಿಗಳಿಗೆ ಸಂಬಳ ಕಟ್ ಮಾಡಿರುವ…