ದೆಹಲಿಯಲ್ಲಿ ತಪ್ಪಿದ ದುರಂತ; ಆಟಿಕೆ ಕಾರು ಬಳಸಿ ದಾಳಿಗೆ ಸಂಚು ರೂಪಿಸಿದ್ದ 4 ಉಗ್ರರ ಬಂಧನ – Kannada News | 4 terror suspects arrested IED seized in Delhi who were planning to attacks using toy cars

ನವದೆಹಲಿ, ಏಪ್ರಿಲ್ 18: ದೆಹಲಿ ಪೊಲೀಸರು ಇಂದು ಮಹಾರಾಷ್ಟ್ರ, ಒಡಿಶಾ ಮತ್ತು ಬಿಹಾರದ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಅವರು ದೆಹಲಿಯಲ್ಲಿ (Delhi) ಆಟಿಕೆ ಕಾರುಗಳನ್ನು ಬಳಸಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಯೋಜಿಸಿದ್ದರು. ಅದಕ್ಕಾಗಿ ಸೂಕ್ಷ್ಮ ಸ್ಥಳಗಳ ಪರಿಶೀಲನೆ ನಡೆಸಿದ್ದರು. ಎನ್‌ಕ್ರಿಪ್ಟ್ ಮಾಡಲಾದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಇತರರನ್ನು ನೇಮಿಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆಯ ಸಮಯದಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಮತ್ತು ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜನದಟ್ಟಣೆಯ ಸ್ಥಳಗಳನ್ನು ಗುರಿಯಾಗಿಸಲು…

Read More

Daily Devotional: ಅಡಿಗೆ ಮನೆ ಹೇಗಿರಬೇಕು? ಈ ವಸ್ತುಗಳಿದ್ರೆ ಕಷ್ಟ ತಪ್ಪಿದ್ದಲ್ಲ! – Kannada News | Daily Devotional: Vastu Tips for Your Kitchen, Things to Avoid for Health and Prosperity

ಬೆಂಗಳೂರು, ಫೆಬ್ರವರಿ​ 24​: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಅಡಿಗೆ ಮನೆ ಹೇಗಿರಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಮನೆಯ ಶಕ್ತಿ ಕೇಂದ್ರವಾದ ಅಡಿಗೆಮನೆಯು ಕೇವಲ ಅಡುಗೆಗೆ ಮಾತ್ರ ಸೀಮಿತವಾಗಿಲ್ಲ, ಇದು ಆರೋಗ್ಯ ಮತ್ತು ಸಕಾರಾತ್ಮಕ ಆಲೋಚನೆಗಳನ್ನು ಪೋಷಿಸುತ್ತದೆ. ಉತ್ತಮ ಆರೋಗ್ಯವಿದ್ದಾಗ ಮಾತ್ರ ನಮ್ಮ ಶ್ರೇಯಸ್ಸು ಹೆಚ್ಚುತ್ತದೆ. ಅಡಿಗೆಮನೆಯ ವಾಸ್ತು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ವಾಸ್ತು ಪ್ರಕಾರ, ಅಡಿಗೆಮನೆಯಲ್ಲಿ ಕೆಲವು ವಸ್ತುಗಳನ್ನು ತಪ್ಪಿಸಬೇಕು. ಉಳಿದಿರುವ ಮತ್ತು ಹಾಳಾದ ಆಹಾರ, ಮುರಿದ ಪಾತ್ರೆಗಳು, ಸಿಂಕ್‌ನಲ್ಲಿ ಆಹಾರ ಸಮೇತ ಪಾತ್ರೆಗಳು…

Read More

ಜಾತ್ರೆ, ಪೆಟ್ರೋಲ್ ಬಂಕ್ ಸೇರಿ ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್ – Kannada News | Vijayanagara Police Bust Fake Currency Gang Operating at Fairs and Petrol Bunks

ವಿಜಯನಗರ, ಡಿಸೆಂಬರ್ 26: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ, ಜಾತ್ರೆಗಳು, ಪೆಟ್ರೋಲ್ ಬಂಕ್​ಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋಟಾ ನೋಟು ಚಲಾವಣೆ ಮಾಡುತ್ತಿದ್ದ ಗ್ಯಾಂಗ್‌ ಅನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಹಾಗೂ ಒಬ್ಬ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 500 ರೂಪಾಯಿ ಮುಖಬೆಲೆಯ ಒಟ್ಟು 40 ನಕಲಿ ನೋಟುಗಳು ಹಾಗೂ ಒಂದು ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರಸೀಕೆರೆಯ ದಂಡಿ ದುರ್ಗಮ್ಮನ ಜಾತ್ರೆಯಲ್ಲಿ ನೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ…

Read More

Gold Rates: ಚಿನ್ನದ ಬೆಲೆ 135 ರೂ ಹೆಚ್ಚಳ; ಇಲ್ಲಿದೆ ದರಪಟ್ಟಿ – Kannada News | Gold prices 14th april 2026 gold rates rise as silver remains unmoved news in kannada

ಬೆಂಗಳೂರು, ಏಪ್ರಿಲ್ 14: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಳಿತಗಳನ್ನು ಕಾಣುತ್ತಲೇ ಇದೆ. ಒಂದು ದಿನ ಕಡಿಮೆಗೊಂಡರೆ, ಮತ್ತೊಂದು ದಿನ ಏರಿಕೆ ಆಗುತ್ತಿದೆ. ಇವತ್ತು ಮಂಗಳವಾರ ಚಿನ್ನದ ಬೆಲೆಯಲ್ಲಿ (Gold Rates) ಗ್ರಾಮ್​​ಗೆ 135 ರೂಗಳಷ್ಟು ಹೆಚ್ಚಳ ಆಗಿದೆ. ಇದರ ಬೆಲೆ ಮತ್ತೊಮ್ಮೆ 14,000 ರೂ ಗಡಿ ದಾಟಿ ಹೋಗಿದೆ. ಇದೇ ವೇಳೆ, ಬೆಳ್ಳಿ ಬೆಲೆ ಇವತ್ತು ಬದಲಾವಣೆ ಕಂಡಿಲ್ಲ. ನಿನ್ನೆಯ ದರವೇ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,100…

Read More

Travel Tips: ಜುಲೈ ತಿಂಗಳಲ್ಲಿ ಭಾರತದ ಈ ಪ್ರಮುಖ ಪ್ರವಾಸಿ ತಾಣಗಳಿಗೆ ತಪ್ಪದೇ ಭೇಟಿ ನೀಡಿ – Kannada News | 7 Best Monsoon Destinations in India: July Travel Guide and Must Visit Places

ಪ್ರಯಾಣ ಎಂಬುದು ಕೇವಲ ಹೊಸ ಜಾಗಗಳನ್ನು ನೋಡುವುದಲ್ಲ, ಅದು ಮನಸ್ಸಿಗೆ ಶಾಂತಿ ಮತ್ತು ಹೊಸ ಚೈತನ್ಯವನ್ನು ನೀಡುವ ಸುಂದರ ಅನುಭವ. ಅದರಲ್ಲೂ ಮಳೆಗಾಲದಲ್ಲಿ ಪ್ರವಾಸ ಮಾಡುವುದೇ ಒಂದು ವಿಭಿನ್ನ ರೋಮಾಂಚನ. ಜುಲೈ ತಿಂಗಳು ಬಂತೆಂದರೆ ಸಾಕು ಪ್ರಕೃತಿ ಹಸಿರು ರೇಷ್ಮೆಯ ಸೀರೆಯನ್ನುಟ್ಟಂತೆ ಕಂಗೊಳಿಸುತ್ತದೆ, ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತವೆ. ನೀವು ಈ ಜುಲೈನಲ್ಲಿ ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಸ್ಮರಣೀಯ ಪ್ರವಾಸ ಕೈಗೊಳ್ಳಲು ಯೋಚಿಸುತ್ತಿದ್ದರೆ, ಭಾರತದಲ್ಲಿ ಭೇಟಿ ನೀಡಲೇಬೇಕಾದ 7 ಅದ್ಭುತ ತಾಣಗಳ ಪಟ್ಟಿ ಇಲ್ಲಿದೆ: ಕೂರ್ಗ್, ಕರ್ನಾಟಕ…

Read More

‘ತ್ರಿಕಾರಂ’ ಚಿತ್ರತಂಡದಿಂದ ಮತ್ತೊಂದು ಲವ್ ಹಾಡು ರಿಲೀಸ್ – Kannada News | Seedanintru Lokayako song released from Trikaaram movie

ಈ ಮೊದಲು ಬಿಡುಗಡೆ ಆಗಿದ್ದ ಹಾಡಿಗೆ ಜನರಿಂದ ಸಿಕ್ಕ ಪ್ರತಿಕ್ರಿಯೆಗೆ ‘ತ್ರಿಕಾರಂ’ (Trikaaram) ಚಿತ್ರತಂಡ ಖುಷಿಯಾಗಿದೆ. ಅದರ ಬೆನ್ನಲ್ಲೇ ಇನ್ನೊಂದು ಹಾಡು (Kannada Song) ರಿಲೀಸ್ ಮಾಡಲಾಗಿದೆ. ಫೆಬ್ರವರಿ ಎಂದರೆ ಪ್ರೇಮಿಗಳ ತಿಂಗಳು. ಪ್ರೇಮಿಗಳ ದಿನಾಚರಣೆ ಪ್ರಯುಕ್ತ ಇತ್ತೀಚೆಗೆ ಈ ಸಿನಿಮಾದ ಹೊಸ ಹಾಡನ್ನು ಅನಾವರಣ ಮಾಡಲಾಯಿತು. ಉತ್ಸವ್ ಲೆಗೆಸಿಯಲ್ಲಿ ಹಾಡಿನ ರಿಲೀಸ್ ಕಾರ್ಯಕ್ರಮ ನಡೆಯಿತು. ರವೀಂದ್ರ, ಶಿವರಾಜ್ ಕೆ.ಆರ್. ಪೇಟೆ, ಖದರ್ ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಬಂದು ಚಿತ್ರತಂಡಕ್ಕೆ ವಿಶ್ ಮಾಡಿದರು. ‘ತ್ರಿಕಾರಂ’ ಸಿನಿಮಾದ…

Read More

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ; ದುರುಳರ ಹಿಂಸಾಚಾರಕ್ಕೆ 29 ವರ್ಷದ ಸಾಮ್ರಾಟ್ ಬಲಿ – Kannada News | Bangladesh violence, Amrit Mandal beaten to death, second hindu person killed in a week

ಢಾಕಾ, ಡಿಸೆಂಬರ್ 25: ಬಾಂಗ್ಲಾದೇಶದಲ್ಲಿ ಹಿಂಸಾಚಾರ (Bangladesh violence) ಘಟನೆಗಳು ನಿಲ್ಲುತ್ತಲೇ ಇಲ್ಲ. ರಕ್ತಪಿಪಾಸುಗಳಂತೆ ವರ್ತಿಸುತ್ತಿರುವ ಕೆಲ ಜನರು ಅಲ್ಪಸಂಖ್ಯಾತರನ್ನು ಗುರಿ ಮಾಡಿದಂತೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ದೀಪು ಚಂದ್ರದಾಸ್ ಎನ್ನುವ ಹಿಂದೂ ವ್ಯಕ್ತಿಯನ್ನು ಬಲಿಪಡೆದಿದ್ದ ದುರುಳರು ಇದೀಗ ಮತ್ತೊಬ್ಬ ಹಿಂದೂ ಧರ್ಮೀಯನನ್ನು ಕೊಂದಿದ್ದಾರೆ. ರಾಜ್​ಬಾರಿ ಜಿಲ್ಲೆಯಲ್ಲಿ 29 ವರ್ಷದ ಅಮೃತ್ ಮಂಡಲ್ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಸಾಯಿಸಿದ್ದಾರೆ. ಈ ಘಟನೆ ನಿನ್ನೆ ಬುಧವಾರ ರಾತ್ರಿ 11 ಗಂಟೆಗೆ ಸಂಭವಿಸಿರುವುದು ಬೆಳಕಿಗೆ ಬಂದಿದೆ….

Read More

ಸಿಬಿಎಫ್​​ಸಿ ಮತ್ತು ‘ಜನ ನಾಯಗನ್’ ನಡುವೆ ನಿಜಕ್ಕೂ ನಡೆದಿದ್ದೇನು? ವಿವರಿಸಿದ ನಿರ್ದೇಶಕ ವಿನೋದ್ – Kannada News | What realy happened between CBFC and Jana Nayagan team director explains

ವಿಜಯ್ (Vijay) ನಟನೆಯ ‘ಜನ ನಾಯಗನ್’ ಇಂದು (ಜುಲೈ 23) ಬಿಡುಗಡೆ ಆಗಿದೆ. ಜನವರಿ ತಿಂಗಳಲ್ಲಿ ಬಿಡುಗಡೆ ಆಗಬೇಕಿದ್ದ ಸಿನಿಮಾ ಹಲವಾರು ಸಮಸ್ಯೆಗಳನ್ನು ಎದುರಿಸಿ ಕೊನೆಗೂ ಇಂದು ರಿಲೀಸ್ ಆಗಿದೆ. ವಿಜಯ್ ಅವರ ಯಾವೊಂದು ಸಿನಿಮಾ ಸಹ ಸಿಬಿಎಫ್​​ಸಿ ಇಂದ ಸಮಸ್ಯೆಗೆ ಒಳಗಾಗಿದ್ದಿಲ್ಲ. ಸಿಬಿಎಫ್​​ಸಿಯಲ್ಲಿ ಸಮಸ್ಯೆಗೆ ಒಳಗಾಬಹುದಾದಂಥಹ ಕಂಟೆಂಟ್ ಉಳ್ಳ ಸಿನಿಮಾಗಳನ್ನು ವಿಜಯ್ ಒಪ್ಪಿಕೊಳ್ಳುವುದೇ ಇಲ್ಲ. ಕೌಟುಂಬಿಕ ಪ್ರೇಕ್ಷಕರು ಹೆಚ್ಚಿಗಿರುವ ವಿಜಯ್ ರಿಸ್ಕ್​​ಗಳನ್ನು ತೆಗೆದುಕೊಳ್ಳುವುದಿಲ್ಲ. ಆದರೂ ಸಹ ಅವರ ನಟನೆಯ ‘ಜನ ನಾಯಗನ್’ ಸಿನಿಮಾಕ್ಕೆ ಸಿಬಿಎಫ್​​ಸಿ ಪ್ರಮಾಣ…

Read More

ಇಂಧನ ಪರಿಸ್ಥಿತಿ ಅವಲೋಕಿಸಲು ಉನ್ನತ ಮಟ್ಟದ ಸಭೆ ನಡೆಸಿದ ಪಿಎಂ ಮೋದಿ

ನವದೆಹಲಿ, ಮಾರ್ಚ್ 22: ಇರಾನ್ ಯುದ್ಧ ಮುಂದುವರಿಯುತ್ತಲೇ ಇರುವುದರಿಂದ ಜಾಗತಿಕ ತೈಲ ಬಿಕ್ಕಟ್ಟು (Oil crisis) ತೀವ್ರಗೊಳ್ಳುತ್ತಿದೆ. ಭಾರತದಲ್ಲಿ ಸರ್ಕಾರವು ಇಂಧನ ಪೂರೈಕೆಗೆ ಹರಸಾಹಸ ಮಾಡುತ್ತಿದೆ. ಈ ಮುಂದುವರಿದ ಸಂಕಷ್ಟ ಎದುರಿಸಲು ನಡೆದಿರುವ ಸಿದ್ಧತೆಗಳನ್ನು ಪರಿಶೀಲಿಸಲು ಪ್ರಧಾನಿಗಳು ಉನ್ನತ ಮಟ್ಟದ ಸಭೆ ನಡೆಸಿದರು. ಪೆಟ್ರೋಲಿಯಂ, ಕಚ್ಚಾ ತೈಲ, ನೈಸರ್ಗಿಕ ಅನಿಲ್, ವಿದ್ಯುತ್, ರಸಗೊಬ್ಬರ ಸೆಕ್ಟರ್​ಗಳಲ್ಲಿ ಪರಿಸ್ಥಿತಿ ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಸಭೆ ಮಾಡಿದರು. ಅತಿರೇಕದ ಸ್ಥಿತಿ ಬಂದರೆ ದೇಶದಲ್ಲಿ ಈ ವಿವಿಧ ಇಂಧನ…

Read More

Fitness Trainer Jobs 2025: ಕರ್ನಾಟಕ ಕ್ರೀಡಾ ಇಲಾಖೆಯಲ್ಲಿ ಫಿಟ್‌ನೆಸ್ ತರಬೇತುದಾರ ಹುದ್ದೆಗೆ ನೇಮಕಾತಿ – Kannada News | Karnataka Fitness Trainer Jobs 2025: Apply Offline by Jan 5 | Youth Dept

ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಅಧಿಕೃತ ಅಧಿಸೂಚನೆಯ ಮೂಲಕ ಫಿಟ್‌ನೆಸ್ ತರಬೇತುದಾರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಡಿಯಲ್ಲಿ ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಜನವರಿ 05 ರ ಮೊದಲು ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ ದೃಢೀಕರಿಸಿದ ದಾಖಲೆಗಳೊಂದಿಗೆ…

Read More