ಮೊದಲ ಬಾರಿಗೆ ಸೈಂಟ್ ಮೇರಿಸ್ ದ್ವೀಪದಲ್ಲಿ ಧ್ವಜಾರೋಹಣ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್! – Kannada News | 77th Republic Day: Lakshmi Hebbalkar Hoists flag on St. Marys Island by Boat

ಉಡುಪಿ, ಜನವರಿ 26: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಸೈಂಟ್ ಮೇರಿಸ್ ದ್ವೀಪದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ (Republic Day 2026) ನೆರವೇರಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಧ್ವಜಾರೋಹಣ ಮಾಡಿದರು. ಅಧಿಕಾರಿಗಳು ಮತ್ತು ಗಣ್ಯರು ಬೋಟ್ ಮೂಲಕ ದ್ವೀಪಕ್ಕೆ ತೆರಳಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ಈ ವಿಶೇಷ ಸಂದರ್ಭದಲ್ಲಿ, ಸಶಸ್ತ್ರ ಪಡೆಗಳ ವತಿಯಿಂದ ರಾಷ್ಟ್ರೀಯ ವಂದನಾ ಪರೇಡ್ ಹಾಗೂ ಸಶಸ್ತ್ರ ಪರೇಡ್ ಜರುಗಿತು. ಇದು ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ಮತ್ತು ಗಾಂಭೀರ್ಯದ ಸ್ಪರ್ಶ ನೀಡಿತು. ಸೈಂಟ್…

Read More

Video: ಸೂಪರ್​ ಮಾರ್ಕೆಟ್​​ ಲೂಟಿ ಮಾಡಲು ಬಂದ ಕಳ್ಳರಿಗೆ ಸಿಬ್ಬಂದಿ ಕಲಿಸಿದ ಪಾಠ ನೋಡಿ – Kannada News | Robbery Attempt in Brazil Foiled as Staff Fight Back, Suspects Arrested

ಬ್ರೆಜಿಲ್‌ನಲ್ಲಿ ನಡೆದ ಈ ದರೋಡೆ ಯತ್ನವು ಕಳ್ಳರ ಪಾಲಿಗೆ ಅಕ್ಷರಶಃ ದುಸ್ವಪ್ನವಾಗಿ ಪರಿಣಮಿಸಿತ್ತು. ಶಸ್ತ್ರಸಜ್ಜಿತರಾಗಿ ಬಂದ ದರೋಡೆಕೋರರಿಗೆ ಸೂಪರ್​ ಮಾರ್ಕೆಟ್​ನ ಸಿಬ್ಬಂದಿ ನೀಡಿರುವ ತಿರುಗೇಟು ಎಲ್ಲೆಡೆ ಚರ್ಚೆಯಾಗುತ್ತಿದೆ. ಬ್ರೆಜಿಲ್‌ನ ಮಳಿಗೆಯೊಂದಕ್ಕೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು, ಸಿಬ್ಬಂದಿಯನ್ನು ಬೆದರಿಸಿ ನಗದು ರಿಜಿಸ್ಟರ್‌ನಲ್ಲಿದ್ದ ಹಣವನ್ನು ಲೂಟಿ ಮಾಡಲು ಯತ್ನಿಸಿದ್ದಾರೆ. ದರೋಡೆಕೋರರಲ್ಲೊಬ್ಬ ಹಣವನ್ನು ಚೀಲಕ್ಕೆ ತುಂಬಿಸಿಕೊಳ್ಳುತ್ತಿದ್ದಾಗ, ಅಲ್ಲಿನ ಸಿಬ್ಬಂದಿ ಧೈರ್ಯ ಪ್ರದರ್ಶಿಸಿ ಮಚ್ಚಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾರೆ.ದರೋಡೆಕೋರರಲ್ಲಿ ಒಬ್ಬನನ್ನು ಬಂಧಿಸಿ ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ. ಉದ್ಯೋಗಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ…

Read More

Solar Eclipse 2026: ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವವು ವೃಶ್ಚಿಕ ರಾಶಿಯವರ ಮೇಲೆ ಮಧ್ಯಮವಾಗಿದೆ ಎಂದು ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ವೃಶ್ಚಿಕ ರಾಶಿಯವರು ಮಿಶ್ರಫಲಗಳನ್ನು ನಿರೀಕ್ಷಿಸಬಹುದು. ಗ್ರಹಣವು ನಾಲ್ಕನೇ ಮನೆಯಲ್ಲಿ ಸಂಭವಿಸುವುದರಿಂದ ಅನಾವಶ್ಯಕ ಆರೋಗ್ಯ ಸಮಸ್ಯೆಗಳು ಮತ್ತು ಕೌಟುಂಬಿಕ ವಿಷಯಗಳಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆಹಾರದ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ವಾಹನ ಯೋಗ ಉತ್ತಮವಾಗಿದ್ದು, ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ಶುಭವಾಗಲಿದೆ. ಹೊಸ ವ್ಯಾಪಾರಕ್ಕೆ ಪ್ರಯತ್ನಿಸುವವರಿಗೆ, ಪಾಲುದಾರಿಕೆಯಲ್ಲಿ ಮತ್ತು ನಿರ್ದಿಷ್ಟ ವೃತ್ತಿಯವರಿಗೆ (ಸಾಫ್ಟ್‌ವೇರ್,…

Read More

‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್, ನಿರ್ಮಾಪಕರ ನಡು ರಸ್ತೆಯಲ್ಲಿ ಅಡ್ಡ ಹಾಕಿದ ಹಂಸ – Kannada News | Producer not giving remuneration actress confronted producer

‘ವಸುದೇವ ಕುಟುಂಬ’ ಧಾರಾವಾಹಿಯ (Serial) ನಟ, ನಟಿಯರು ಮತ್ತು ತಂತ್ರಜ್ಞರು ಧಾರಾವಾಹಿಯ ನಿರ್ಮಾಪಕರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಮಾಜಿ ಬಿಗ್​​ಬಾಸ್ ಸ್ಪರ್ಧಿ ಹಂಸ, ನಟಿ ಚೈತ್ರಾ, ಹಿರಿಯ ನಟ ಅವಿನಾಶ್ ಸೇರಿದಂತೆ ಕೆಲವು ಪ್ರಮುಖ ಕಲಾವಿದರು ನಟಿಸುತ್ತಿರುವ ಧಾರಾವಾಹಿ ಇದಾಗಿದ್ದು, ಸ್ಟಾರ್ ಸುವರ್ಣ ಚಾನೆಲ್​​ನಲ್ಲಿ ಪ್ರಸಾರ ಕಾಣುತ್ತಿದೆ. ಕೆಲವು ತಿಂಗಳುಗಳಿಂದಲೂ ಧಾರಾವಾಹಿಯ ನಿರ್ಮಾಪಕರು ಕಲಾವಿದರಿಗೆ ಸಂಭಾವನೆ ನೀಡಿಲ್ಲ ಮಾತ್ರವಲ್ಲದೆ, ಆಹಾರ, ಇನ್ನಿತರೆಗಳನ್ನು ಸರಿಯಾಗಿ ನೀಡಿಲ್ಲ ಎಂದು ಕಲಾವಿದರು ಆರೋಪಿಸಿದ್ದು, ಇಂದು (ಏಪ್ರಿಲ್ 01) ನಿರ್ಮಾಪಕರನ್ನು ನಡು…

Read More

ಬೆಂಗಳೂರು ಗಾಳಿಯ ಗುಣಮಟ್ಟ ಎರಡು ಸಿಗರೇಟ್ ಸೇದಿದಷ್ಟು ಹಾನಿಕಾರಕ! ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ವರದಿ – Kannada News | Bengaluru Air Pollution: CPCB Report Says City Air is Equivalent to Smoking 2 Cigarettes a Week

ಬೆಂಗಳೂರು, ಜುಲೈ 11: ವಿಶ್ವದಲ್ಲೇ ಅತಿಹೆಚ್ಚು ಟ್ರಾಫಿಕ್ ಇರುವ ನಗರಗಳ ಪೈಕಿ ಬೆಂಗಳೂರು (Bengaluru) ಎರಡನೇ ಸ್ಥಾನ ಪಡೆದುಕೊಂಡಿದೆ. ಇದೀಗ ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಹವಾಮಾನದ ಬಗ್ಗೆ ವರದಿ ಬಿಡುಗಡೆ ಮಾಡಿದ್ದು, ಸಿಲಿಕಾನ್ ಸಿಟಿಯ ಹವಾಮಾನ ತೀರಾ ಕಳಪೆಯಾಗಿದೆ. ವಾಯುಮಾಲಿನ್ಯದ ಪರಿಣಾಮ ವಾರಕ್ಕೆ ಎರಡು ಸಿಗರೇಟ್ ಸೇದಿದಷ್ಟು, ತಿಂಗಳಿಗೆ ಸುಮಾರು ಹತ್ತು ಸಿಗರೇಟ್ ಸೇದಿದಷ್ಟು ಎಂದು ಉಲ್ಲೇಖಿಸಿದೆ. ಇತ್ತ ಪ್ರತಿದಿನ ನಗರದಲ್ಲಿ 3 ಸಾವಿರ ಹೊಸ ವಾಹನಗಳು ರೋಡಿಗಿಳಿಯುತ್ತಿವೆ. ಇವುಗಳಲ್ಲಿ 2100 ದ್ವಿಚಕ್ರ ವಾಹನಗಳು,…

Read More

ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ

ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ, ರಿಷ್ಮಾ ನಾಣಯ್ಯ ನಟಿಸಿರುವ ‘ಕೆಡಿ’ ಸಿನಿಮಾದ ಹಾಡು ಇಂದು (ಮಾರ್ಚ್ 14) ಅದ್ಧೂರಿಯಾಗಿ ಬಿಡುಗಡೆ ಆಗಿದೆ. ನೋರಾ ಫತೇಹಿ ಸಖತ್ ಆಗಿ ಡ್ಯಾನ್ಸ್ ಮಾಡಿರುವ ‘ಸೆರಗು ಸರ್ಸು’ ಹಾಡು ಇಂದು ಬಿಡುಗಡೆ ಆಗಿದೆ. ಹಾಡಿನ ಬಿಡುಗಡೆ ಅದ್ಧೂರಿಯಾಗಿ ನಡೆದಿದ್ದು, ಸಿನಿಮಾದ ನಟರು, ಪ್ರಮುಖ ತಂತ್ರಜ್ಞರು ಭಾಗಿ ಆಗಿದ್ದರು. ನಟಿ ರಕ್ಷಿತಾ ಮಾತನಾಡಿ, ತಮ್ಮ ಸಿನಿಮಾ ಪಯಣ ನೆನಪಿಸಿಕೊಂಡ ಜೊತೆಗೆ ಅರ್ಜುನ್ ಜನ್ಯ, ಇನ್ನೂ ಕೆಲವರ ಸಹಕಾರ ನೆನಪು ಮಾಡಿಕೊಂಡರು. ನೋರಾ…

Read More

ಉಪೇಂದ್ರ ಅಣ್ಣನ ಮಗ ನಿರಂಜನ್ ಸುದಿಂದ್ರ ನಿಶ್ಚಿತಾರ್ಥ; ಹುಡುಗಿ ಬಗ್ಗೆ ಇಲ್ಲಿದೆ ಮಾಹಿತಿ

ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಮನೆಮಾಡಿದೆ. ಅವರ ಮನೆಯಲ್ಲಿ ಸದ್ಯ ನಿಶ್ಚಿತಾರ್ಥದ ಸಡಗರ ಜೋರಾಗಿ ನಡೆಯುತ್ತಿದೆ. ಉಪೇಂದ್ರ ಅವರ ಅಣ್ಣನ ಮಗ, ನಟ ನಿರಂಜನ್ ಸುಧೀಂದ್ರ ಅವರು ತಮ್ಮ ಹೊಸ ಜೀವನದ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ. ಅವರು ಗೃಹಸ್ಥಾಶ್ರಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ನಟ ನಿರಂಜನ್ ಸುಧೀಂದ್ರ ಅವರು ಸಂಜನಾ ಬಿ ರಾಜ್ ಎಂಬುವವರ ಜೊತೆ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇಬ್ಬರ ಉಂಗುರ ಬದಲಾವಣೆ ಶಾಸ್ತ್ರ ಶಾಸ್ತ್ರೋಕ್ತವಾಗಿ ನೆರವೇರಿದೆ. ಬೆಂಗಳೂರಿನ ಖಾಸಗಿ…

Read More

Chanakya Niti: ಚಾಣಕ್ಯರ ಈ ಮಾತುಗಳನ್ನು ಅನುಸರಿಸಿದವರು ಜೀವನದಲ್ಲಿ ಖಂಡಿತವಾಗಿಯೂ ಯಶಸ್ಸು ಕಾಣುತ್ತಾರಂತೆ – Kannada News

ಜೀವನದಲ್ಲಿ ಯಶಸ್ಸನ್ನು (success) ಸಾಧಿಸುವ ಬಯಕೆ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಆದರೆ ಇದನ್ನು ಸಾಧಿಸುವುದೆಂದರೆ ಅಷ್ಟೇನೂ ಸುಲಭದ ಕೆಲಸವಲ್ಲ. ಯಶಸ್ಸಿನ ಪ್ರತಿಯೊಂದು ಮೆಟ್ಟಿಲು ಕಷ್ಟಕರವೆನಿಸುತ್ತದೆ. ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮ, ಆತ್ಮವಿಶ್ವಾಸ, ದೃಢ ನಿರ್ಧಾರ ಎಲ್ಲವೂ ಬೇಕಾಗುತ್ತದೆ.  ಇದರ ಜೊತೆಗೆ ಆಚಾರ್ಯ ಚಾಣಕ್ಯರ ಈ ಕೆಲವೊಂದು ಮಾತುಗಳನ್ನು ಪಾಲಿಸುವ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗಬಹುದು. ಚಾಣಕ್ಯರು ಜೀವನದಲ್ಲಿ ಯಶಸ್ಸನ್ನು ಗಳಿಸಲು ಬೇಕಾಗಿರುವಂತಹ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಆ ಸಲಹೆಗಳನ್ನು ತಪ್ಪದೇ ಅನುಸರಿದರೆ ನೀವು ಸಹ ಜೀವನದಲ್ಲಿ ಸಕ್ಸಕ್‌…

Read More

ಗುಂಡ್ಲುಪೇಟೆಯಲ್ಲಿ ಫ್ಯಾಮಿಲಿ ಜೊತೆ ಯೂನಿಫಾರ್ಮ್‌ನಲ್ಲಿ ಶೋಕಿ; ಇನ್ಸ್‌ಪೆಕ್ಟರ್ ಜೈ ಕುಮಾರ್ ವಿಡಿಯೋ ವೈರಲ್ – Kannada News | Gundlepet Police Controversy: CPI Jai Kumar’s Family Trip in Uniform, Buffer Zone Violation

ಚಾಮರಾಜನಗರ, ಏ.28: ಕಾನೂನು ಪಾಲಿಸಬೇಕಾದ ಅಧಿಕಾರಿಯೇ ನಿಯಮಗಳನ್ನು ಗಾಳಿಗೆ ತೂರಿ ಶೋಕಿ ಮಾಡುತ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ (CPI) ಜೈ ಕುಮಾರ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಪೊಲೀಸ್ ಯೂನಿಫಾರ್ಮ್‌ನಲ್ಲಿಯೇ ಓಪನ್ ಜೀಪ್‌ನಲ್ಲಿ ಸುತ್ತಾಡಿ ಈಗ ಸುದ್ದಿಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಊಟಿ ರಸ್ತೆಯ ಬಳಿಯಿರುವ ಇಕ್ರಮ್ ಸಿದ್ದಿಕಿ ಫಾರ್ಮ್ ಹೌಸ್ ಸುತ್ತಮುತ್ತ ಇನ್ಸ್‌ಪೆಕ್ಟರ್ ಜೈ ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಬಿಂದಾಸ್ ಆಗಿ ರೌಂಡ್ಸ್ ಹಾಕಿದ್ದಾರೆ. ಈ ಪ್ರದೇಶವು…

Read More

ವೇತನ‌ ಸಿಗದೆ ಪೊಲೀಸ್ ಸಿಬ್ಬಂದಿ ಪರದಾಟ: ಸಂಬಳ ನೀಡಲೂ ಸರ್ಕಾರದ ಬಳಿ ಇಲ್ವಾ ಹಣ?

ಹುಬ್ಬಳ್ಳಿ, ಮಾರ್ಚ್​​ 11: ಕಳೆದ ಫೆಬ್ರವರಿ ತಿಂಗಳ ವೇತನ ಇನ್ನೂ ಪಾವತಿ ಆಗದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಪರದಾಟ ನಡೆಸಬೇಕಾದ ಪ್ರಸಂಗ ಉದ್ಭವಿಸಿದೆ. ತಿಂಗಳ ಆರಂಭದಲ್ಲಿಯೇ ಜಮೆ ಆಗುತ್ತಿದ್ದ ವೇತನ‌ ಇಲ್ಲಿಯವರೆಗೂ ಜಮೆ ಆಗಿಲ್ಲ. ಹೀಗಾಗಿ ಸಾವಿರಾರು ಮಂದಿ ಪೊಲೀಸ್​​ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಳ ವಿಳಂಬದಿಂದ ಮನೆ ಬಾಡಿಗೆ, ಬ್ಯಾಂಕ್ ಸಾಲದ ಕಂತುಗಳು, ಮಕ್ಕಳ ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಮತ್ತು ಎಸ್‌ಪಿ ವ್ಯಾಪ್ತಿಯಲ್ಲಿರುವ 3,200 ಸಿಬ್ಬಂದಿಗೂ ಇನ್ನೂ…

Read More