Headlines

ಮಲೆನಾಡಿನಲ್ಲಿ ಮತ್ತೆ ಮಂಗನಕಾಯಿಲೆ ಭೀತಿ: ಶಿವಮೊಗ್ಗದಲ್ಲಿ ಮೊದಲ ಬಲಿ, ಚಿಕ್ಕಮಗಳೂರಿನಲ್ಲಿ ಹೆಚ್ಚಿದ ಆತಂಕ – Kannada News | KFD Outbreak in Karnataka: Monkey Fever Cases Rise in Chikkamagaluru and Shivamogga, First Death Reported

ಚಿಕ್ಕಮಗಳೂರಿನಲ್ಲಿ ಮತ್ತೆ ಮಂಗನಕಾಯಿಲೆ ಭೀತಿ ಚಿಕ್ಕಮಗಳೂರು, ಜನವರಿ 30: ಮಲೆನಾಡು ಭಾಗದಲ್ಲಿ ಚಳಿ ಕಡಿಮೆಯಾಗುತ್ತಿದ್ದಂತೆಯೇ ಈ ಭಾಗದ ಜನರನ್ನು ಪ್ರತಿ ವರ್ಷ ಕಾಡುವ ಮಂಗನಕಾಯಿಲೆ (KFD – Kyasanur Forest Disease) ಮತ್ತೆ ಆತಂಕ ಸೃಷ್ಟಿಸಿದೆ. ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈ ರೋಗ ಪತ್ತೆಯಾಗಿದ್ದು, ಈಗಾಗಲೇ ಶಿವಮೊಗ್ಗದಲ್ಲಿ ವರ್ಷದ ಮೊದಲ ಬಲಿ ಸಂಭವಿಸಿರುವುದು ಸಾರ್ವಜನಿಕರಲ್ಲಿ ಭೀತಿ ಹೆಚ್ಚಿಸಿದೆ. ಕಾಫಿನಾಡಿನಲ್ಲಿ 9 ಪ್ರಕರಣಗಳು ಪತ್ತೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕುಗಳಾದ ಎನ್.ಆರ್. ಪುರ,…

Read More

ದೊಡ್ಡ ಬೆಲೆ ತೆರಬೇಕಾಗುತ್ತೆ, ವೆನೆಜುವೆಲಾ ಹಂಗಾಮಿ ಅಧ್ಯಕ್ಷರಿಗೂ ಬೆದರಿಕೆ ಹಾಕಿದ ಟ್ರಂಪ್ – Kannada News | Trump Warns Venezuela’s Vice President of Serious Consequences Amid Tensions

ವಾಷಿಂಗ್ಟನ್, ಜನವರಿ 05: ಒಂದೆಡೆ ಯುದ್ಧಕ್ಕೆ ಮುಂದಾಗಿರುವ ದೇಶಗಳಿಗೆ ಶಾಂತಿ ಪಾಠ ಮಾಡುತ್ತಾ, ಮತ್ತೊಂದೆಡೆ ಖುದ್ದು ತಾನೇ ಡಾನ್ ರೀತಿಯ ವರ್ತನೆಯನ್ನು ಟ್ರಂಪ್ ತೋರುತ್ತಿದ್ದಾರೆ. ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಸೆರೆಹಿಡಿದ ಕಾರ್ಯಾಚರಣೆಯ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಡೆಲ್ಸಿ ರೊಡ್ರಿಗಸ್ ಅವರಿಗೂ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ಟ್ರಂಪ್ ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋಗೆ ಎಚ್ಚರಿಕೆ ಸಂದೇಶ ರವಾನಿಸಿರುವುದು ಲ್ಯಾಟಿನ್ ಅಮೆರಿಕಾದ್ಯಂತ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ….

Read More

ಬೆಳಗ್ಗೆ ಎದ್ದ ತಕ್ಷಣ ಏನ್ ಮಾಡ್ಬೇಕು? ನಿಮ್ಮ ದಿನಚರಿ ಆರೋಗ್ಯಕರವಾಗಿ ಆರಂಭವಾಗಲು ಈ 7 ಅಭ್ಯಾಸಗಳನ್ನು ರೂಢಿಸಿಕೊಳ್ಳಿ – Kannada News | Want More Energy? Follow These Morning Habits After Waking Up

ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ಬೆಳಗಿನ ಸಮಯವನ್ನು ನಿರ್ಲಕ್ಷಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ನಿದ್ರೆಯಿಂದ ಎದ್ದ ನಂತರದ ಮೊದಲ 60– 90 ನಿಮಿಷಗಳು ದಿನದ ಉಳಿದ ಸಮಯದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಹತ್ತರ ಪರಿಣಾಮ ಬೀರುತ್ತವೆ. ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ನ್ಯೂರಾಲಜಿಸ್ಟ್ ಡಾ. ಸುಧೀರ್ ಕುಮಾರ್ (Dr Sudhir Kumar M) ಅವರು ಹೇಳುವ ಪ್ರಕಾರ, ಈ ಸಮಯದಲ್ಲಿ ಅನುಸರಿಸುವ ಸರಿಯಾದ ಆರೋಗ್ಯಕರ ಅಭ್ಯಾಸಗಳು ದೇಹದ ಜೈವಿಕ ಗಡಿಯಾರ (Circadian Rhythm) ಅನ್ನು ಸಮತೋಲನಗೊಳಿಸಿ,…

Read More

‘ಧುರಂಧರ್ 2’ ಅಬ್ಬರಕ್ಕೂ ಜಗ್ಗಿಲ್ಲ ‘ಉಸ್ತಾದ್ ಭಗತ್ ಸಿಂಗ್’; ಪವನ್ ಸಿನಿಮಾ ಗಳಿಕೆ ಎಷ್ಟು?

ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಇಡೀ ವಿಶ್ವಾದ್ಯಂತ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಗಳ ಎದುರು ಕನ್ನಡದಲ್ಲಿ ‘ಲವ್ ಮಾಕ್ಟೇಲ್ 3’ ಹಾಗೂ ತೆಲುಗಿನಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾಗಳು ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ‘ಲವ್ ಮಾಕ್ಟೇಲ್ 3’ ಸಿನಿಮಾ ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದರೆ, ಉಸ್ತಾದ್ ಭಗತ್ ಸಿಂಗ್ ಸಿನಿಮಾ ತೆಲುಗಿನಲ್ಲಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾದ ಮೊದಲ ದಿನದ ಕಲೆಕ್ಷನ್ ವಿವರ ಸಿಕ್ಕಿದೆ. ಪವನ್…

Read More

ಎಸ್ಸೆಮ್ಮೆಸ್ ಅಲರ್ಟ್​ಗಳಿಗೆ ಗ್ರಾಹಕರಿಂದ ಹಣ ಪಡೆಯುವಂತಿಲ್ಲ; ಆರ್​ಬಿಐ ನಿಯಮದಿಂದ ಬ್ಯಾಂಕುಗಳಿಗೆ 300 ಕೋಟಿ ರೂ ಆದಾಯನಷ್ಟ? – Kannada News | New RBI Rules on SMS alerts might cut banks fee income by Rs 300 crore

ನವದೆಹಲಿ, ಜುಲೈ 8: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಕಡ್ಡಾಯ ಎಸ್‌ಎಂಎಸ್ (SMS) ಅಲರ್ಟ್‌ಗಳಿಗೆ ಗ್ರಾಹಕರಿಂದ ಶುಲ್ಕ ವಿಧಿಸುವುದನ್ನು ಆರ್‌ಬಿಐ ನಿಷೇಧಿಸಿದೆ. ಆರ್‌ಬಿಐನ ಈ ಹೊಸ ನಿಯಮದಿಂದಾಗಿ ಭಾರತದ ಒಟ್ಟಾರೆ ಬ್ಯಾಂಕಿಂಗ್ ವಲಯದ ವಾರ್ಷಿಕ ಸೇವಾ ಶುಲ್ಕದ ಆದಾಯದಲ್ಲಿ (Fee Income) ಸುಮಾರು ₹300 ಕೋಟಿ ರೂಗಳಷ್ಟು ಭಾರಿ ಕಡಿತ ಉಂಟಾಗಲಿದೆ ಎಂದು ಎಕನಾಮಿಕ್ ಟೈಮ್ಸ್ ಮೊದಲಾದ ಮಾಧ್ಯಮಗಳಲ್ಲಿ ವರದಿಯಾಗಿದೆ. ಇಲ್ಲಿಯವರೆಗೆ ಬಹುತೇಕ ಬ್ಯಾಂಕುಗಳು ಗ್ರಾಹಕರಿಗೆ ಕಳುಹಿಸುವ ಎಸ್‌ಎಂಎಸ್ ಅಲರ್ಟ್‌ಗಳಿಗಾಗಿ…

Read More

ಇದು ಹಲಸಿನ ಬೀಜದ ಕಾಫಿ; ತಯಾರಿಸೋದು ಬಲು ಸುಲಭ – Kannada News | Delicious coffee can also be made from jackfruit seeds

ಬೇಸಿಗೆಯಲ್ಲಿ ಹೇರಳವಾಗಿ ಹಲಸಿನ ಹಣ್ಣು ಲಭ್ಯವಿರುತ್ತವೆ. ಸಾಮಾನ್ಯವಾಗಿ ಈ ಹಣ್ಣನ್ನು ತಿಂದ ಬಳಿಕ ಅದರ ಬೀಜವನ್ನು ಎಸೆದು ಬಿಡುತ್ತಾರೆ. ಇವುಗಳಲ್ಲಿಯೂ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಹೌದು  ಹಲಸಿನ ಬೀಜಗಳು (jackfruit seeds) ಉತ್ಕರ್ಷಣ ನಿರೋಧಕಗಳು, ಪ್ರೋಟೀನ್, ಕಬ್ಬಿಣ ಮತ್ತು ವಿಟಮಿನ್ ಎ ಯಿಂದ ಸಮೃದ್ಧವಾಗಿರುವುದರಿಂದ ರಕ್ತಹೀನತೆಯನ್ನು ತಡೆಗಟ್ಟಲು, ಚರ್ಮ, ಕೂದಲಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ. ಸಾಮಾನ್ಯವಾಗಿ ಈ ಬೀಜದಿಂದ ಸಾರು, ಪಲ್ಯ, ವಡೆ ಇತ್ಯಾದಿಗಳನ್ನು ತಯಾರಿಸುತ್ತಾರೆ. ಅದೇ ರೀತಿ ಇದರಿಂದ ರುಚಿಕರವಾಗಿರುವ ಕಾಫಿಯನ್ನು ಕೂಡ ತಯಾರಿಸಬಹುದು….

Read More

IPL 2026: ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ ಬಂತು ಆನೆ ಬಲ

ಐಪಿಎಲ್ 2026 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಇಲ್ಲಿಯವರೆಗೆ ನಿರಾಶಾದಾಯಕವಾಗಿದೆ. ತಂಡವು ಆರು ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಸೋತಿದೆ. ತನ್ನ ಮುಂದಿನ ಪಂದ್ಯದಲ್ಲಿ ಅಜೇಯ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಒಳ್ಳೆಯ ಸುದ್ದಿ ಬಂದಿದೆ. ತಂಡದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಇಷ್ಟರಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಮೊಣಕೈ ಮತ್ತು ಭುಜದ ಗಾಯಗಳಿಂದಾಗಿ ಕಳೆದ ಜನವರಿಯಿಂದ ಆಟದಿಂದ ಹೊರಗುಳಿರುವ ವೇಗಿ ಮಿಚೆಲ್ ಸ್ಟಾರ್ಕ್​ಗೆ ಕ್ರಿಕೆಟ್ ಆಸ್ಟ್ರೇಲಿಯಾ, 2026 ರ ಐಪಿಎಲ್‌ನಲ್ಲಿ…

Read More

‘ಧುರಂಧರ್ 2’ ಗೆಲುವಿನ ಬೆನ್ನಲ್ಲೆ ಆರ್​​ಎಸ್​​ಎಸ್ ಕಚೇರಿಗೆ ರಣ್ವೀರ್ ಸಿಂಗ್ ಭೇಟಿ

ರಣ್ವೀರ್ ಸಿಂಗ್ (Ranveer Singh) ನಟಿಸಿ, ಆದಿತ್ಯ ಧರ್ ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಕಳೆದ ತಿಂಗಳು ಬಿಡುಗಡೆ ಆಗಿದ್ದು ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಭಾರತದಲ್ಲಿ 1000 ಕೋಟಿ ಗಳಿಕೆಯನ್ನು ದಾಟಿದ್ದು, ಬಾಕ್ಸ್ ಆಫೀಸ್​​ನಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇತ್ತೀಚೆಗಷ್ಟೆ ಚುನಾವಣಾ ಪ್ರಚಾರವೊಂದರ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಸಿನಿಮಾದ ಬಗ್ಗೆ ಧನಾತ್ಮಕವಾಗಿ ಮಾತನಾಡಿದ್ದಾರೆ. ಇದೆಲ್ಲದರ ಬೆನ್ನಲ್ಲೆ ನಟ ರಣ್ವಿರ್ ಸಿಂಗ್ ಆರ್​​ಎಸ್​​ಎಸ್ ಕಚೇರಿಗೆ ಭೇಟಿ ನೀಡಿದ್ದು ಆರ್​​ಎಸ್​​ಎಸ್ ಮುಖ್ಯಸ್ಥ…

Read More

ಬಜೆಟ್​ನಲ್ಲಿ ವಿತ್ತೀಯ ಶಿಸ್ತು ಕಾಯ್ದುಕೊಂಡು ಬಂಡವಾಳ ವೆಚ್ಚ ಹೆಚ್ಚಿಸಬಹುದು: ಜೆಎಂ ಫೈನಾನ್ಷಿಯಲ್ ನಿರೀಕ್ಷೆ – Kannada News | Capex growth along with fiscal discipline, Brokerage firm JM Financial expects from 2026 Budget

ನವದೆಹಲಿ, ಜನವರಿ 30: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರುವರಿ 1ರಂದು ಪ್ರಸ್ತುತಪಡಿಸುತ್ತಿರುವ ಬಜೆಟ್ 2026-27 ಬಗ್ಗೆ ನಿರೀಕ್ಷೆಗಳು ಹಲವಿವೆ. ಮಾರುಕಟ್ಟೆಯ ಮೇಲೆ ಪ್ರಭಾವ ಬೀರುವ ಹೂಡಿಕೆದಾರರು ಈ ಬಜೆಟ್​ನಿಂದ ಏನು ನಿರೀಕ್ಷಿಸುತ್ತಾರೆ? ಆರ್ಥಿಕ ಬೆಳವಣಿಗೆಗೆ ನೀರೆರೆದು ಪೋಷಿಸಲು ಸರ್ಕಾರ ಯಾವ ಪ್ಲಾನ್ ಮಾಡಿದೆ? ವಿತ್ತೀಯ ಶಿಸ್ತು ಕಾಯ್ದುಕೊಳ್ಳುತ್ತಲೇ ಬಂಡವಾಳ ವೆಚ್ಚ ಹೆಚ್ಚಿಸಲು ಏನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದು ಹೂಡಿಕೆದಾರರಿಗೆ ಇರುವ ಕುತೂಹಲ ಮತ್ತು ನಿರೀಕ್ಷೆ. ಕಳೆದ ಬಜೆಟ್​ನಲ್ಲಿ ಸರ್ಕಾರವು ಬಂಡವಾಳ ವೆಚ್ಚಕ್ಕಿಂತ ಅನುಭೋಗಕ್ಕೆ…

Read More

Daily Devotional: ಮಾಂಗಲ್ಯ ಸರದಲ್ಲಿ ಮುತ್ತು, ಹವಳ ಇರಲೇಬೇಕು ಯಾಕೆ ಗೊತ್ತಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Unlocking Strength: Traditional Benefits of Pearl and Coral in Jewellery

ಮಾಂಗಲ್ಯ ಸರದಲ್ಲಿ ಮುತ್ತು, ಹವಳImage Credit source: Pinterest ಮಾಂಗಲ್ಯ ಸರದಲ್ಲಿ ಧರಿಸುವ ಮುತ್ತು ಮತ್ತು ಹವಳದ ಮಹತ್ವದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.ಪ್ರತಿಯೊಬ್ಬ ಗೃಹಿಣಿ, ತಾಯಿ ಅಥವಾ ವೃತ್ತಿಪರ ಮಹಿಳೆಗೆ ಶಕ್ತಿ, ಧೈರ್ಯ ಮತ್ತು ಆತ್ಮವಿಶ್ವಾಸ ಅತ್ಯಗತ್ಯ. ಈ ಗುಣಗಳನ್ನು ಹೆಚ್ಚಿಸಲು ನವರತ್ನಗಳು, ಅದರಲ್ಲೂ ನಿರ್ದಿಷ್ಟವಾಗಿ ಮುತ್ತು ಮತ್ತು ಹವಳಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ….

Read More