ಬೆಂಗಳೂರು ಮಳೆಗೆ ಬಲಿ: ‘ಇದು ಸರ್ಕಾರದ ವೈಫಲ್ಯ’ ಎಂದು ಗುಡುಗಿದ ಆರ್. ಅಶೋಕ್ – Kannada News | Government Under Scrutiny After Bengaluru Wall Collapse Kills Seven

ಬೆಂಗಳೂರು, ಏ,29: ಇಂದು ರಾಜಧಾನಿಯಲ್ಲಿ ಸುರಿದ ಮಳೆಯ ಪರಿಣಾಮವಾಗಿ ಬೌರಿಂಗ್ ಆಸ್ಪತ್ರೆ ಎಮರ್ಜೆನ್ಸಿ ವಿಭಾಗದ ಬಳಿ ಕಾಂಪೌಂಡ್ ಗೋಡೆ ಕುಸಿದು ಏಳು ಜನರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರ ಪೈಕಿ ಮೂವರು ಮಕ್ಕಳು ಸಹ ಸೇರಿದ್ದಾರೆ. ಈ ದುರಂತಕ್ಕೆ ಸರ್ಕಾರದ ವೈಫಲ್ಯವೇ ಕಾರಣ ಎಂದು ಮಾಜಿ ಸಚಿವರಾದ ಆರ್. ಅಶೋಕ್ ಅವರು ತೀವ್ರವಾಗಿ ಆರೋಪಿಸಿದ್ದಾರೆ. ಮಳೆಗಾಲ ಆರಂಭಕ್ಕೂ ಮುನ್ನವೇ ಸರ್ಕಾರ ಬಿರುಕು ಬಿಟ್ಟಿರುವ ಗೋಡೆಗಳು, ಹಳೆಯ ಮನೆಗಳು ಮತ್ತು ಮರಗಳ ಬಗ್ಗೆ ಸಮೀಕ್ಷೆ ನಡೆಸಿ ಸೂಕ್ತ ಕ್ರಮ…

Read More

‘ಧುರಂಧರ್’ ಸಿನಿಮಾಗೆ 90 ಕೋಟಿ ರೂಪಾಯಿ ನಷ್ಟ ಆಗಿದ್ದು ಯಾಕೆ? – Kannada News | Dhurandhar distributor says this film suffered Rs 90 Cr loss due to this reason

ಅಕ್ಷಯ್ ಖನ್ನಾ, ರಣವೀರ್ ಸಿಂಗ್ (Ranveer Singh) ಮುಂತಾದವರು ನಟಿಸಿರುವ ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ವಿಶ್ವಾದ್ಯಂತ ಈ ಸಿನಿಮಾದ ಕಲೆಕ್ಷನ್ 1100 ಕೋಟಿ ರೂಪಾಯಿ ಮೀರಿದೆ. ನಿರ್ಮಾಪಕರಿಗೆ ಈ ಸಿನಿಮಾದಿಂದ ಭರ್ಜರಿ ಲಾಭ ಆಗಿದೆ. ಇಂದಿಗೂ ಬಾಕ್ಸ್ ಆಫೀಸ್​ನಲ್ಲಿ ಉತ್ತಮವಾಗಿ ಕಲೆಕ್ಷನ್ ಆಗುತ್ತಲೇ ಇದೆ. ಭಾರತದ ಮಾರುಕಟ್ಟೆಯಲ್ಲಿ ಈ ಸಿನಿಮಾ 800 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇದೆ. ಹಾಗಿದ್ದರೂ ಕೂಡ ‘ಧುರಂಧರ್’ (Dhurandhar) ಸಿನಿಮಾಗೆ 90 ಕೋಟಿ ರೂಪಾಯಿ ಹೆಚ್ಚುವರಿ ಲಾಭ…

Read More

ಲೋಕೇಶ್ ಸಿನಿಮಾ ಯೂನಿವರ್ಸ್ ಮುಗಿದಿಲ್ಲ; ಭರ್ಜರಿ ಅಪ್ಡೇಟ್ ಕೊಟ್ಟ ಕನಗರಾಜ್ – Kannada News | Lokesh Kanagaraj Confirms LCU is NOT Ending: Big Updates on Future Movies

ಖ್ಯಾತ ತಮಿಳು ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಈಗ ನಟನಾಗಿ ಬದಲಾಗಿದ್ದಾರೆ. ಅವರು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಡಿಸಿ’ ಸಿನಿಮಾ ಜುಲೈ 31ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಲೋಕೇಶ್ ತಮ್ಮ ‘ಲೋಕೇಶ್ ಸಿನಿಮಾ ಯೂನಿವರ್ಸ್’ ಬಗ್ಗೆ ದೊಡ್ಡ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ನಟನೆಯಲ್ಲಿ ಬ್ಯುಸಿ ಇರುವುದರಿಂದ ಎಲ್ಲರೂ ಇದು ಕ್ಲೋಸ್ ಆಯಿತು ಎಂದೇ ಭಾವಿಸಿದ್ದರು. ಕೊನೆಗೂ ಇದಕ್ಕೆ ಉತ್ತರ…

Read More

NEET UG ಆಕಾಂಕ್ಷಿಗಳಿಗೆ ಗೂಗಲ್​ನಿಂದ ಭರ್ಜರಿ ಗಿಫ್ಟ್; ಜೆಮಿನಿ ಆ್ಯಪ್‌ನಲ್ಲಿ ಸಿಗಲಿದೆ ಉಚಿತ ಅಣಕು ಪರೀಕ್ಷೆ! – Kannada News | Google Gemini Offers Free NEET UG Mock Tests: Boost Your Exam Prep with AI

ಗೂಗಲ್ ಇಂಡಿಯಾ ತನ್ನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವಾದ ‘ಜೆಮಿನಿ’ (Gemini) ಮೂಲಕ ಉಚಿತ NEET UG ಅಭ್ಯಾಸ ಪರೀಕ್ಷೆಗಳನ್ನು ಪರಿಚಯಿಸಿದೆ. ಸಾಮಾನ್ಯವಾಗಿ ನೀಟ್ ಪರೀಕ್ಷೆಯ ಕೋಚಿಂಗ್ ಪಡೆಯಲು ಲಕ್ಷಾಂತರ ರೂಪಾಯಿ ಶುಲ್ಕ ತೆರಬೇಕಾಗುತ್ತದೆ. ಇದನ್ನು ಮನಗಂಡ ಗೂಗಲ್ ಇಂಡಿಯಾ, ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ತನ್ನ ಗುರಿಯ ಭಾಗವಾಗಿ ಈ ಯೋಜನೆಯನ್ನು ಘೋಷಿಸಿದೆ. ಗೂಗಲ್ ತನ್ನ ಅಧಿಕೃತ ‘X’ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅಭ್ಯರ್ಥಿಗಳು ತಮ್ಮ ತಯಾರಿಯನ್ನು ಈಗ ಸಂಪೂರ್ಣ ಉಚಿತವಾಗಿ…

Read More

ಬಿಜೆಪಿಯಿಂದ ಮತ್ತೊಮ್ಮೆ ಪಂಜಾಬಿಗಳಿಗೆ ದ್ರೋಹ; ರಾಘವ್ ಚಡ್ಡಾ ಸೇರಿ 7 ಸಂಸದರ ರಾಜೀನಾಮೆಗೆ ಕೇಜ್ರಿವಾಲ್ ಪ್ರತಿಕ್ರಿಯೆ – Kannada News | Arvind Kejriwals First Reaction On Raghav Chadha and Other 6 AAP MPs Joinging BJP

ನವದೆಹಲಿ, ಏಪ್ರಿಲ್ 24: ಆಮ್ ಆದ್ಮಿ ಪಕ್ಷಕ್ಕೆ ಒಂದರ ಹಿಂದೊಂದರಂತೆ ಹೊಡೆತಗಳು ಬೀಳುತ್ತಲೇ ಇವೆ. ಪಕ್ಷಕ್ಕೆ ನಿಯತ್ತಾಗಿರುವ ಅನೇಕ ನಾಯಕರು ಇದೀಗ ಆಮ್ ಆದ್ಮಿ ಪಕ್ಷದ (AAP) ಧೋರಣೆಯ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಪಕ್ಷದೊಳಗೆ ಅತೃಪ್ತರ ಬಣ ದೊಡ್ಡದಾಗುತ್ತಲೇ ಇದೆ. ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ಕೇಜ್ರಿವಾಲ್ (Arvind Kejriwal) ವಜಾಗೊಳಿಸಿದ ನಂತರ ಪಕ್ಷದಲ್ಲೇ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಇಂದು ರಾಘವ್ ಚಡ್ಡಾ ಮಹತ್ವದ ನಿರ್ಧಾರ ತೆಗೆದುಕೊಂಡು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದು,…

Read More

‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಒಂದು ವಾರಕ್ಕೆ ಗಳಿಸಿದ್ದು ಎಷ್ಟು? – Kannada News | Mark and 45 Box Office Collection Day 7: Kannada Movies Cross 55 Cr in 1st Week

45-ಮಾರ್ಕ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ‘ಮಾರ್ಕ್’ ಸಿನಿಮಾ ಹಾಗೂ ‘45’ ಚಿತ್ರಗಳು ತೆರೆಗೆ ಬಂದು ಒಂದು ವಾರ ಕಳೆದಿವೆ. ಏಳು ದಿನಗಳಲ್ಲಿ ಸಿನಿಮಾಗಳು ಉತ್ತಮ ಕಲೆಕ್ಷನ್ ಮಾಡಿವೆ. ಎರಡೂ ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳು ನಟಿಸಿದ್ದಾರೆ. ಎರಡೂ ಚಿತ್ರಗಳು ಬಿಗ್ ಬಜೆಟ್​​​ನವು. ಈ ಕಾರಣದಿಂದ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಗಳಿಕೆ ಮಾಡುತ್ತಿವೆ. ಈ ಚಿತ್ರಗಳ ಒಟ್ಟಾರೆ ಕಲೆಕ್ಷನ್ ವಿವರ ಇಲ್ಲಿದೆ. ‘ಮಾರ್ಕ್’ ಚಿತ್ರಕ್ಕೆ ಕಿಚ್ಚ ಸುದೀಪ್ ಹೀರೋ. ‘ಮ್ಯಾಕ್ಸ್’ ಸಿನಿಮಾ…

Read More

ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ: ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಬರೆದ ಡೆತ್​​ನೋಟ್​​ನಲ್ಲಿ ಸ್ಫೋಟಕ ಮಾಹಿತಿ

ಚಿತ್ರದುರ್ಗ, ಏಪ್ರಿಲ್​​ 02: ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ ಆರೋಪ ಸಂಬಂಧ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ BAMS ವಿದ್ಯಾರ್ಥಿನಿ‌ ನಿಖಿತಾ(23) ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಷ್ಟು ವಿಚಾರಗಳು ಬಯಲಾಗಿವೆ. ರಾಜು, ಪತ್ನಿ ನಿಶಾ, ಕೆಲ ವಿದ್ಯಾರ್ಥಿನಿಯರ ಹೆಸರನ್ನು ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಸಂಬಂಧ ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆಲವರ ವಿರುದ್ಧ ಕೇಸ್​​ ಕೂಡ ಆಗಿದೆ. ಈ ನಡುವೆ ಸಾವಿಗೂ ಮುನ್ನ ನಿಖಿತಾ ಬರೆದ ಡೆತ್​​ನೋಟ್​​ ಲಭ್ಯವಾಗಿದ್ದು, ಆಕೆ ಮಾನಸಿಕವಾಗಿ ತೀವ್ರ ನೊಂದಿದ್ದಳು ಎಂಬುದು…

Read More

ಮಧುಮೇಹ, ಅಧಿಕ ರಕ್ತದೊತ್ತಡ ಇರುವವರಿಗೆ ಶ್ರವಣದೋಷ ಉಂಟಾಗುತ್ತದೆಯೇ? ವೈದ್ಯರು ಹೇಳುವುದೇನು? – Kannada News | Diabetes, High BP & Hearing Loss: The Link

ಮಧುಮೇಹ (Diabetes) ಅಥವಾ ಅಧಿಕ ರಕ್ತದೊತ್ತಡ (High BP) ಇದ್ದರೆ, ಹೃದಯ, ಮೂತ್ರಪಿಂಡ ಮತ್ತು ಕಣ್ಣಿಗೆ ಸಂಬಂಧ ಪಟ್ಟ ಕಾಯಿಲೆಗಳು ಬರುವ ಅಪಾಯವಿರುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದು ಹಿಯರಿಂಗ್ ಲಾಸ್ ಗೆ ಕಾರಣವಾಗುತ್ತದೆಯೇ ಅಥವಾ ಶ್ರವಣ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂಬುದು ಹಲವರಿಗಿರುವ ಗೊಂದಲ. ಅದರಲ್ಲಿಯೂ ಈ ರೀತಿಯ ಸಮಸ್ಯೆ ವಯಸ್ಸಾದ ನಂತರ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದು ನಿಜವೇ ಎಂಬ ಅನುಮಾನ ಮೂಡುತ್ತದೆ. ಅದಕ್ಕಾಗಿಯೇ ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ…

Read More

ಚಿಕ್ಕಬಳ್ಳಾಪುರ ದುರಂತ: ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ – Kannada News | Minister Pradeep Eshwar on Fatal Chikkaballapur Accident: Relief Announced, Helmet Safety Stressed

ಚಿಕ್ಕಬಳ್ಳಾಪುರ, ಡಿ.25: ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅಜ್ಜವಾರ ಗೇಟ್ ಬಳಿ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾತ್ರಿ 9:30ರ ಸುಮಾರಿಗೆ ನರಸಿಂಹಮೂರ್ತಿ, ಅರುಣ್, ಮನೋಜ್ ಮತ್ತು ನಂದೀಶ್ ಎಂಬ ಯುವಕರು ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ, ಅತಿವೇಗದಿಂದ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಯುವಕರು ನಿಧಾನವಾಗಿ ಬಲ ತಿರುವು ತೆಗೆದುಕೊಳ್ಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಪ್ರದೀಪ್ ಈಶ್ವರ್ ಅವರು, ಟಿಪ್ಪರ್ ಚಾಲಕನ ನಿರ್ಲಕ್ಷ್ಯದಿಂದ ಈ…

Read More

ಮುಸ್ಲಿಮರು ಬಸವಕಲ್ಯಾಣ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಕಲ್ಲು ತೂರಿದ್ಯಾಕೆ? ಅಸಲಿ ಕಾರಣ ಬಿಚ್ಚಿಟ್ಟ ಎಸ್ಪಿ – Kannada News | Bidar SP Talks about thousand Of Muslims Protest Infront of basavakalyana police station And Stone Pelting

ಬೀದರ್, (ಮಾರ್ಚ್ 05): ಜಿಲ್ಲೆಯ ಬಸವಕಲ್ಯಾಣ ಪೊಲೀಸ್ ಠಾಣೆಗೆ ( basavakalyana police station) ಸಾವಿರಾರು ಮುಸ್ಲಿಮರು (Muslim) ಮುತ್ತಿಗೆ ಯತ್ನಿಸಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಶಿಕ್ಷಕರ ಮೇಲೆ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಮಾರ್ಚ್ 3ರಂದು ಸಹಸ್ರಾರು ಮುಸ್ಲಿಮರು ಬಸವಕಲ್ಯಾಣ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದು, ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಇದೇ ವೇಳೆ ಕೆಲವರು ಪೊಲೀಸ್ ವ್ಯಾನ್​ ಮೇಲೆ ಕಲ್ಲು…

Read More