ಟಿಎಂಸಿ ಅಭ್ಯರ್ಥಿಯ ಭದ್ರಕೋಟೆಯಲ್ಲಿ ಇವಿಎಂ ಮೇಲಿನ ಬಿಜೆಪಿ ಬಟನ್ಗೆ ಟೇಪ್! ಮರು ಮತದಾನಕ್ಕೆ ಆಗ್ರಹ – Kannada News | West Bengal Elections Tape on BJP button on EVM in West Bengal Falta BJP demands immediate repoll
ಕೊಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ (West Bengal Assembly Elections) ಈ ಬಾರಿ ಬಿಜೆಪಿ ಮತ್ತು ಟಿಎಂಸಿ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಕುತೂಹಲಕ್ಕೆ ಮೇ 4ರಂದು ತೆರೆ ಬೀಳಲಿದೆ. ಟಿಎಂಸಿ ನಾಯಕರಾದ ಅಭಿಷೇಕ್ ಬ್ಯಾನರ್ಜಿ ಪ್ರತಿನಿಧಿಸುವ ಡೈಮಂಡ್ ಹಾರ್ಬರ್ ಲೋಕಸಭಾ ಕ್ಷೇತ್ರದ ವಿಧಾನಸಭಾ ಸ್ಥಾನವಾದ ಫಾಲ್ಟಾ ಭಾರೀ ಸುದ್ದಿಯಲ್ಲಿದೆ. ಫಾಲ್ಟಾ ಕ್ಷೇತ್ರದ ಕೆಲವು ಭಾಗಗಳಲ್ಲಿ ತಕ್ಷಣ ಮರು ಮತದಾನಕ್ಕೆ ಭಾರತೀಯ ಜನತಾ ಪಕ್ಷ ಒತ್ತಾಯಿಸಿದ…