Headlines

ಬ್ಯಾನ್ ಮಧ್ಯೆಯೂ ‘ಧುರಂಧರ್’ ವೀಕ್ಷಿಸಿದ 20 ಲಕ್ಷ ಪಾಕ್ ಮಂದಿ – Kannada News | Ranveer Singh Starrer Dhurandhar Movie Super Hit In Pakistan Here is how

‘ಧುರಂಧರ್’ ಸಿನಿಮಾದಲ್ಲಿ (Dhurandhar Movie)  ರಣವೀರ್ ಸಿಂಗ್ ಸ್ಪೈ ಪಾತ್ರ ಮಾಡಿದ್ದಾರೆ. ಭಾರತದ ಸೈನಿಕನೋರ್ವ ಪಾಕಿಸ್ತಾನದ ಉಗ್ರ ಸಂಘಟನೆ ಜೊತೆ ಸೇರಿ, ಅಲ್ಲಿಯವರಂತೆ ಬೆರೆತು ಅವರ ಎದೆಯಲ್ಲಿ ಭಯ ಹುಟ್ಟಿಸೋ ಕಥೆಯನ್ನು ಚಿತ್ರ ಹೊಂದಿದೆ. ಪಾಕಿಸ್ತಾನ ಮಾಡಿದ ಕೆಟ್ಟ ಕೆಲಸಗಳನ್ನು ತೋರಿಸಲಾಗಿದೆ. ಈ ಚಿತ್ರ ಪಾಕಿಸ್ತಾನದಲ್ಲಿ ಬ್ಯಾನ್ ಆಗಿದೆ. ಆದರೂ ಸಿನಿಮಾ ಆ ದೇಶದಲ್ಲಿ ಸೂಪರ್ ಹಿಟ್ ಆಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿವೆ. ಭಾರತದಲ್ಲಿ ಪಾಕ್ ಸಿನಿಮಾಗಳು ಹಾಗೂ ಪಾಕಿಸ್ತಾನದಲ್ಲಿ ಭಾರತದ…

Read More

ಪಾಕ್ ಆಟಗಾರನನ್ನು 2.34 ಕೋಟಿಗೆ ಖರೀದಿಸಿದ ಸನ್‌ರೈಸರ್ಸ್; ಭುಗಿಲೆದ್ದ ಆಕ್ರೋಶ

ಮುಂಬರುವ ದಿ ಹಂಡ್ರೆಡ್ ಲೀಗ್​ಗೆ ಇಂದು ಹರಾಜು ನಡೆಯುತ್ತಿದೆ. ಈ ಲೀಗ್‌ನಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಕಂಪನಿಗಳು ಫ್ರಾಂಚೈಸಿಗಳನ್ನು ಖರೀದಿಸಿವೆ. ಹೀಗಾಗಿ ಈ ಲೀಗ್‌ನಲ್ಲಿ ಪಾಕಿಸ್ತಾನದ ಆಟಗಾರರು ಆಡುವುದರಿಂದ ಭಾರತೀಯ ಒಡೆತನದ ಫ್ರಾಂಚೈಸಿಗಳು ಪಾಕಿಸ್ತಾನಿ ಆಟಗಾರನನ್ನು ಖರೀದಿಸುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿತ್ತು. ಏಕೆಂದರೆ ಪಾಕ್ ಆಟಗಾರರನ್ನು ಖರೀದಿಸಿದರೆ, ಭಾರತೀಯರ ಕೋಪಕ್ಕೆ ಗುರಿಯಾಗುವುದು ಖಚಿತವಾಗಿತ್ತು. ಆದಾಗ್ಯೂ ಕಾವ್ಯ ಮಾರನ್ ಒಡೆತನದ ಸನ್‌ರೈಸರ್ಸ್ ಲೀಡ್ಸ್ ಫ್ರಾಂಚೈಸಿ, ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ತನ್ನ ತಂಡಕ್ಕೆ ಖರೀದಿ…

Read More

ಖಾಸಗಿ ದೃಶ್ಯ ಇಟ್ಟುಕೊಂಡು 78 ವರ್ಷದ ವ್ಯಕ್ತಿಗೆ ಮಹಿಳೆ ಬ್ಲ್ಯಾಕ್​​ಮೇಲ್​​: ದೂರು ದಾಖಲು

ಬೆಂಗಳೂರು, ಮಾರ್ಚ್​​ 08: 78 ವರ್ಷದ ವ್ಯಕ್ತಿಯೋರ್ವರನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡ ಮಹಿಳೆಯೊಬ್ಬಳು ಅವರ ಜೊತೆ ಸ್ನೇಹ ಬೆಳೆಸಿ, ಈಗ ಬ್ಲ್ಯಾಕ್​​ಮೇಲ್​​ ಮಾಡುತ್ತಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. ಸಂತ್ರಸ್ತ ವ್ಯಕ್ತಿಯ ಸೊಸೆ ಈ ಬಗ್ಗೆ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಮಾರ್ಚ್​​ 3ರಂದೇ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿತ ಮಹಿಳೆ ಮೊದಲು ಫೇಸ್‌ಬುಕ್‌ನಲ್ಲಿ 78 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದಾಳೆ. ಬಳಿಕ ತನ್ನ…

Read More

1.48 ಲಕ್ಷ ಮೃತ ಮಹಿಳೆಯರ ಖಾತೆಗೆ ಹೋಗಿತ್ತು 128 ಕೋಟಿ ರೂ. ಹಣ! ಗೃಹಲಕ್ಷ್ಮಿ ಯೋಜನೆ ಮಹಾ ಪರಿಷ್ಕರಣೆಗೆ ಸಿದ್ಧತೆ – Kannada News

ಗೃಹಲಕ್ಷ್ಮಿ ಯೋಜನೆ (ಸಾಂದರ್ಭಿಕ ಚಿತ್ರ)Image Credit source: tv9 ಬೆಂಗಳೂರು, ಜೂನ್ 10: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ (Gruha Lakshmi)’ ಯೋಜನೆಯಲ್ಲಿ ನಡೆದಿರುವ ಭಾರಿ ತಾಂತ್ರಿಕ ಲೋಪ ಹಾಗೂ ಹಣ ದುರ್ಬಳಕೆಯನ್ನು ತಡೆಯಲು ಸರ್ಕಾರ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ. ಯೋಜನೆಯಡಿ ನೋಂದಾಯಿಸಿಕೊಂಡಿದ್ದ ಫಲಾನುಭವಿಗಳ ಪೈಕಿ ಮೃತಪಟ್ಟಿರುವ ಮಹಿಳೆಯರ ಖಾತೆಗಳಿಗೂ ಕಳೆದ ಐದು ತಿಂಗಳುಗಳಿಂದ ಹಣ ಸಂದಾಯವಾಗುತ್ತಿರುವುದು ಪತ್ತೆಯಾಗಿದ್ದು, ಇಡೀ ಯೋಜನೆಯನ್ನು ಸಮೂಲವಾಗಿ ಪರಿಷ್ಕರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮುಖ್ಯಾಂಶಗಳು 1.48 ಲಕ್ಷ…

Read More

PAK vs BAN: ರನೌಟ್ ವಿವಾದ; ಸಲ್ಮಾನ್ ಆಘಾ ವಿರುದ್ಧ ಕಠಿಣ ಕ್ರಮ ಜರುಗಿಸಿದ ಐಸಿಸಿ

ಢಾಕಾದಲ್ಲಿ ನಡೆದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತು. ಈ ಪಂದ್ಯ ಈ ಫಲಿತಾಂಶದಿಂದ ಸದ್ದು ಮಾಡುವುದಕ್ಕಿಂತ ಪಂದ್ಯದ ಸಮಯದಲ್ಲಿ ನಡೆದ ರನೌಟ್​ನಿಂದ ಕ್ರಿಕೆಟ್​ ಲೋಕದಲ್ಲಿ ಸಂಚಲನ ಸೃಷ್ಟಿಸಿತು. ಬಾಂಗ್ಲಾದೇಶ ಬೌಲರ್​ಗೆ ಸಹಾಯ ಮಾಡಲು ಹೋಗಿ ರನೌಟ್​ಗೆ ಬಲಿಯಾಗಿದ್ದ ಪಾಕಿಸ್ತಾನ ತಂಡದ ಸಲ್ಮಾನ್ ಅಲಿ ಆಘಾ (Salman Agha ) ಮೈದಾನದಲ್ಲಿಯೇ ತಮ್ಮ ಆಕ್ರೋಶ ಹೊರಹಾಕಿದ್ದರು. ಜೊತೆಗೆ ತಮ್ಮ ಹೆಲ್ಮೆಟ್, ಬ್ಯಾಟ್ ಮತ್ತು ಕೈ ಗ್ಲೌಸ್​ಗಳನ್ನು…

Read More

ಟಿಮ್ ಡೇವಿಡ್ ಯಾಕೆ 5.35 ಲಕ್ಷ ರೂ. ದಂಡ ಕಟ್ಟಬೇಕು? – Kannada News | Why was RCB’s Tim David fined 5.35 lakh rs in IPL 2026

IPL 2026: ಐಪಿಎಲ್​ನ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ತಂಡಗಳು ಮುಖಾಮುಖಿಯಾಗಿದ್ದವು. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​​ಸಿಬಿ ಆಟಗಾರ ಟಿಮ್ ಡೇವಿಡ್ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಶಿಸ್ತು ಕ್ರಮಕ್ಕೆ ಒಳಗಾಗಿದ್ದಾರೆ. ಪಂದ್ಯದ ವೇಳೆ ಮೈದಾನದಲ್ಲಿದ್ದ ಅಂಪೈರ್‌ಗಳ ಸೂಚನೆಯನ್ನು ಪದೇ ಪದೇ ನಿರ್ಲಕ್ಷಿಸಿದ ಕಾರಣಕ್ಕಾಗಿ ಟಿಮ್ ಡೇವಿಡ್ ಅವರಿಗೆ ಪಂದ್ಯದ ಸಂಭಾವನೆಯ ಶೇ. 25ರಷ್ಟು ದಂಡ ಮತ್ತು ಒಂದು ಡಿಮೆರಿಟ್ ಪಾಯಿಂಟ್ ವಿಧಿಸಲಾಗಿದೆ….

Read More

ಬಿಗ್​​ಬಾಸ್: ರನ್ನರ್ ಅಪ್ ಆದರೂ ವಿನ್ನರ್​​ಗಿಂತ ಹೆಚ್ಚು ಹಣ ಪಡೆದ ತನುಜಾ – Kannada News | Tanuja Puttaswamy remuneration in Telugu Bigg Boss season 09

ಬಿಗ್​​ಬಾಸ್ (Bigg Boss) ಸೀಸನ್ ಮುಗಿಯುತ್ತಾ ಬಂದಿದೆ. ಈಗಾಗಲೇ ಹಿಂದಿ, ಮಲಯಾಳಂ ಬಿಗ್​​ಬಾಸ್ ಮುಗಿದಿವೆ. ಇದೇ ಭಾನುವಾರ ತೆಲುಗು ಬಿಗ್​​ಬಾಸ್ ಸೀಸನ್ 09 ಸಹ ಮುಗಿದಿದೆ. ಈ ಬಾರಿಯ ತೆಲುಗು ಬಿಗ್​​ಬಾಸ್ ಕೆಲವು ಕಾರಣಗಳಿಗೆ ಕನ್ನಡ ಪ್ರೇಕ್ಷಕರ ಗಮನವನ್ನೂ ಸೆಳೆದಿತ್ತು. ಈ ಬಾರಿ ತೆಲುಗು ಬಿಗ್​​ಬಾಸ್​​ನಲ್ಲಿ ಇಬ್ಬರು ಕನ್ನಡತಿಯರು ಭಾಗವಹಿಸಿದ್ದರು, ಮಾತ್ರವಲ್ಲದೆ ಅದ್ಭುತವಾಗಿ ಆಡಿ ಫಿನಾಲೆ ಸಹ ತಲುಪಿದ್ದರು. ನಟಿ ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಇಬ್ಬರೂ ಸಹ ತೆಲುಗು ಬಿಗ್​​ಬಾಸ್​​ನಲ್ಲಿ ಭಾಗವಹಿಸಿದ್ದರು. ಅದ್ಭುತವಾಗಿ ಆಡಿ…

Read More

ಬಯಲಾಯ್ತು ಟೀಮ್ ಇಂಡಿಯಾದ ಅತೀ ದೊಡ್ಡ ವೀಕ್ ​ನೆಸ್

ನ್ಯೂಝಿಲೆಂಡ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ಟೀಮ್ ಇಂಡಿಯಾ 4ನೇ ಪಂದ್ಯದಲ್ಲಿ ಸೋಲನುಭವಿಸಿದೆ. ವಿಶಾಖಪಟ್ಟಣದ ಎಸಿಎ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡದ ಪರ ಆರಂಭಿಕ ದಾಂಡಿಗ ಟಿಮ್ ಸೈಫರ್ಟ್ ಸ್ಫೋಟಕ ಅರ್ಧಶತಕ ಸಿಡಿಸಿದರು. ಸೈಫರ್ಟ್ ಬಾರಿಸಿದ 62 ರನ್​ಗಳ ನೆರವಿನೊಂದಿಗೆ ನ್ಯೂಝಿಲೆಂಡ್ ತಂಡವು 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು…

Read More

ಕಮಲ್ ಹಾಸನ್ ಮೇಲೆ ಭುಗಿಲೆದ್ದ ಆಕ್ರೋಶ: 50 ಸಾವಿರ ಮರಳಿಸುವಂತೆ ಒತ್ತಾಯ

ಕಮಲ್ ಹಾಸನ್ (Kamal Haasan) ಭಾರತದ ಸ್ಟಾರ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ಆಗಿರುವ ಜೊತೆಗೆ ರಾಜಕಾರಣಿಯೂ ಹೌದು. ಇತ್ತೀಚೆಗಷ್ಟೆ ಅವರು ರಾಜ್ಯಸಭೆಗೆ ಸಹ ಆಯ್ಕೆ ಆಗಿದ್ದಾರೆ. ಕೆಲ ವರ್ಷಗಳ ಹಿಂದೆ ಕಮಲ್ ಹಾಸನ್ ಅವರು ‘ಮಕ್ಕಳ್ ನಿಧಿ ಮಯಂ’ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಬಲಗೊಳಿಸುವ ಪ್ರಯತ್ನ ಮಾಡಿದ್ದರು. ತಮಿಳುನಾಡಿನ ಬಲಿಷ್ಟ ಪಕ್ಷವಾದ ಡಿಎಂಕೆಗೆ ಸವಾಲೊಡ್ಡುವ ಪಕ್ಷ ಎಂದೇ ಆರಂಭದಲ್ಲಿ ಬಿಂಬಿತವಾಗಿತ್ತು. ಆದರೆ ಈ ಬಾರಿ ಕಮಲ್ ಹಾಸನ್ ಅವರ ಪಕ್ಷ…

Read More

ದೇವರು ಬಂದಂತೆ ನಟಿಸಿ ದಲಿತ ನವದಂಪತಿಯನ್ನು ದೇಗುಲದಿಂದ ಹೊರಗಟ್ಟಿದ ಅರ್ಚಕ – Kannada News | A Man denied temple entry for dalit newlywed couple In Tumakuru, video Goes Viral

ತುಮಕೂರು, (ಫೆಬ್ರವರಿ 24): ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತವರಲ್ಲೇ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದೇವರು ಬಂದಂತೆ ನಾಟಕವಾಡಿದ ಗ್ರಾಮಸ್ಥನೊಬ್ಬ ದಲಿತ ನವದಂಪತಿಗಳನ್ನು ದೇವಾಲಯದಿಂದ ಹೊರಗೆ ಕಳಿಸಿರುವ ಘಟನೆ ನಡೆದಿದೆ. ತುಮಕೂರು (Tumakuru) ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಅರಸಮ್ಮ ದೇವಾಲಯದಲ್ಲಿ ಘಟನೆ ನಡೆದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೊಸದಾಗಿ ಮದುವೆಯಾಗಿದ್ದ ದಂಪತಿ ದೇವಾಲಯಕ್ಕೆ ಹೋಗಿದ್ದರು. ಈ ವೇಳೆ ದೇವಾಲಯದ ಒಳಗಿದ್ದ ವ್ಯಕ್ತಿಯೊಬ್ಬ ದಂಪತಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿಲ್ಲ. ಬಳಿಕ ದೇವರು ಬಂದಂತೆ ನಟಿಸಿ…

Read More