Headlines

ರಾಮ್ ಚರಣ್ ಮತ್ತು ನಾನಿ ಸಿನಿಮಾಗಳಿಗೆ ಲೀಕ್ ಸಂಕಷ್ಟ: ಆತಂಕದಲ್ಲಿ ‘ಪೆದ್ದಿ’, ‘ದಿ ಪ್ಯಾರಡೈಸ್’ – Kannada News | Ram Charan Peddi and Nani The Paradise leaked scenes viral on social media

ಚಿತ್ರರಂಗದಲ್ಲಿ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ಲೀಕ್ (Leak) ಪಿಡುಗು ಮಾತ್ರ ಚಿತ್ರತಂಡಗಳನ್ನು ಬಿಡುತ್ತಿಲ್ಲ. ಸದ್ಯ ಸಿನಿಪ್ರಿಯರೆಲ್ಲ ಕುತೂಹಲದಿಂದ ಕಾಯುತ್ತಿರುವ ಎರಡು ದೊಡ್ಡ ಸಿನಿಮಾಗಳಾದ ರಾಮ್ ಚರಣ್ ಅಭಿನಯದ ‘ಪೆದ್ದಿ’ (Peddi) ಮತ್ತು ನಟ ನಾನಿ ಅಭಿನಯದ ‘ದಿ ಪ್ಯಾರಡೈಸ್’ (The Paradise) ಚಿತ್ರಗಳ ಪ್ರಮುಖ ದೃಶ್ಯಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಇದರಿಂದ ಚಿತ್ರತಂಡಗಳಿಗೆ ತಲೆ ನೋವು ಶುರುವಾಗಿದೆ. ಕೆಲವು ದಿನಗಳ ಹಿಂದೆ ‘ಜನ ನಾಯಗನ್’ ಸಿನಿಮಾ ಲೀಕ್ ಆಗಿತ್ತು. ಹೀಗೆ ಒಂದೊಂದೇ ಸಿನಿಮಾಗಳು ಲೀಕ್ ಸಮಸ್ಯೆ ಎದುರಿಸುತ್ತಿವೆ. ಚಿತ್ರಮಂದಿರದಲ್ಲಿ…

Read More

‘ಡಾನ್ 3’ ಸಿನಿಮಾ ಬಗ್ಗೆ ಕೊನೆಗೂ ಬಾಯ್ಬಿಟ್ಟ ಫರ್ಹಾನ್ ಅಖ್ತರ್ – Kannada News | Farhan Akhtar talks about Don 3 movie, says he learned valid lesson

‘ಡಾನ್’ (Don) ಸಿನಿಮಾ ಸರಣಿ ಭಾರತದ ಬಲು ಜನಪ್ರಿಯ ಆಕ್ಷನ್ ಸಿನಿಮಾ ಸರಣಿಗಳಲ್ಲಿ ಒಂದಾಗಿದೆ. ಮೊದಲಿಗೆ ಅಮಿತಾಬ್ ಬಚ್ಚನ್ ನಟಿಸಿದ್ದ ಸಿನಿಮಾವನ್ನು ಶಾರುಖ್ ಖಾನ್ ನಾಯಕನನ್ನಾಗಿ ಹಾಕಿಕೊಂಡು ರೀಮೇಕ್ ಮಾಡಿಲಾಯ್ತು. ಸಿನಿಮಾ ನಿರ್ದೇಶನ ಮಾಡಿದ್ದು ಫರ್ಹಾನ್ ಅಖ್ತರ್, ಆ ಸಿನಿಮಾ ಬ್ಲಾಕ್ ಬಸ್ಟರ್ ಆಯ್ತು. ಬಳಿಕ ‘ಡಾನ್’ ಹೆಸರು, ಪಾತ್ರವನ್ನೇ ಇರಿಸಿಕೊಂಡು ಹೊಸದೊಂದು ಥ್ರಿಲ್ಲರ್ ಕತೆ ಹೆಣೆದ ಫರ್ಹಾನ್ ಅಖ್ತರ್ ಅದನ್ನು 2011 ರಲ್ಲಿ ರಿಲೀಸ್ ಮಾಡಿದರು. ಆ ಸಿನಿಮಾದಲ್ಲಿಯೂ ಶಾರುಖ್ ಖಾನ್ ನಾಯಕ. ಸಿನಿಮಾ ಬ್ಲಾಕ್…

Read More

ಹೆರಿಗೆಗೂ ಮೊದಲೇ ಮೃತಪಟ್ಟ ಹಸುಗೂಸು: ವೈದ್ಯರ ನಿರ್ಲಕ್ಷ್ಯಕ್ಕೆ ಬಲಿಯಾಯ್ತಾ ಪುಟ್ಟ ಜೀವ? – Kannada News | Newborn Dies: Medical Negligence Allegations Rock Karnataka Hospital and Spark Protests

ರಾಯಚೂರು/ಹಾವೇರಿ, ಏಪ್ರಿಲ್​​ 28: ಹೆರಿಗೆಗೂ ಮೊದಲೇ  ಹಸುಗೂಸು ಮೃತಪಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಆಸ್ಪತ್ರೆ ಮತ್ತು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ. ರಾಯಚೂರಿನ ಮಸ್ಕಿ ತಾಲೂಕಿನ ಜಂಗಮರ ಹಳ್ಳಿ ಗ್ರಾಮದ ಗುಂಡಪ್ಟ ಅವರ ಪತ್ನಿ ಪರಮ್ಮಳಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಸಿಂಧನೂರಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ…

Read More

ಗುಂಡ್ಲುಪೇಟೆಯಲ್ಲಿ ಫ್ಯಾಮಿಲಿ ಜೊತೆ ಯೂನಿಫಾರ್ಮ್‌ನಲ್ಲಿ ಶೋಕಿ; ಇನ್ಸ್‌ಪೆಕ್ಟರ್ ಜೈ ಕುಮಾರ್ ವಿಡಿಯೋ ವೈರಲ್ – Kannada News | Gundlepet Police Controversy: CPI Jai Kumar’s Family Trip in Uniform, Buffer Zone Violation

ಚಾಮರಾಜನಗರ, ಏ.28: ಕಾನೂನು ಪಾಲಿಸಬೇಕಾದ ಅಧಿಕಾರಿಯೇ ನಿಯಮಗಳನ್ನು ಗಾಳಿಗೆ ತೂರಿ ಶೋಕಿ ಮಾಡುತ್ತಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ (CPI) ಜೈ ಕುಮಾರ್ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಪೊಲೀಸ್ ಯೂನಿಫಾರ್ಮ್‌ನಲ್ಲಿಯೇ ಓಪನ್ ಜೀಪ್‌ನಲ್ಲಿ ಸುತ್ತಾಡಿ ಈಗ ಸುದ್ದಿಯಾಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಊಟಿ ರಸ್ತೆಯ ಬಳಿಯಿರುವ ಇಕ್ರಮ್ ಸಿದ್ದಿಕಿ ಫಾರ್ಮ್ ಹೌಸ್ ಸುತ್ತಮುತ್ತ ಇನ್ಸ್‌ಪೆಕ್ಟರ್ ಜೈ ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಬಿಂದಾಸ್ ಆಗಿ ರೌಂಡ್ಸ್ ಹಾಕಿದ್ದಾರೆ. ಈ ಪ್ರದೇಶವು…

Read More

ಬಿಗಿ ಭದ್ರತೆ ನಡುವೆ 5 ಬಾರಿ ಏಮ್ಸ್​ ಆಸ್ಪತ್ರೆಗೆ ಭೇಟಿ ನೀಡಿದ ಮುಂಬೈ ದಾಳಿಯ ಆರೋಪಿ ರಾಣಾ – Kannada News | 26/11 attack accused Tahawwur Rana visits 5 times to AIIMS amid tight security

ನವದೆಹಲಿ, ಏಪ್ರಿಲ್ 28: ಮುಂಬೈನ 26/11 ಭಯೋತ್ಪಾದಕ ದಾಳಿಯ ಆರೋಪಿ ತಹಾವೂರ್ ರಾಣಾ (Tahawwur Rana) ಬಿಗಿ ಭದ್ರತೆಯ ನಡುವೆ 5 ಬಾರಿ AIIMSಗೆ ಭೇಟಿ ನೀಡಿದ್ದಾರೆ. ಮುಂಬೈ ಭಯೋತ್ಪಾದಕ ದಾಳಿಯಲ್ಲಿನ ಕೈವಾಡಕ್ಕೆ ಸಂಬಂಧಿಸಿದಂತೆ ಕಳೆದ ಏಪ್ರಿಲ್‌ನಲ್ಲಿ ಅಮೆರಿಕದಿಂದ ಗಡಿಪಾರಾಗಿದ್ದ ತಹಾವೂರ್ ರಾಣಾ, ವೈದ್ಯಕೀಯ ಚಿಕಿತ್ಸೆಗಾಗಿ ಕಳೆದ 1 ತಿಂಗಳಲ್ಲಿ 5 ಬಾರಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ಗೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ…

Read More

ಜಾಗತಿಕ ಅನಿಮೆ ಅವಾರ್ಡ್ಸ್ 2026: ಟೋಕಿಯೋದಲ್ಲಿ ಮಿಂಚಲಿರುವ ರಶ್ಮಿಕಾ ಮಂದಣ್ಣ – Kannada News | Rashmika Mandanna to present at 10th Global Anime Awards 2026 Tokyo

ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಅವರಿಗೆ ಅಭಿಮಾನಿಗಳು ಇದ್ದಾರೆ. ಅದಕ್ಕೆ ಹಲವು ಉದಾಹರಣೆಗಳು ಸಿಗುತ್ತಿವೆ. ಜಪಾನ್‌ನ ಟೋಕಿಯೋದಲ್ಲಿ ಮೇ 23ರಂದು ನಡೆಯಲಿರುವ ಪ್ರತಿಷ್ಠಿತ 10ನೇ ಗ್ಲೋಬಲ್ ಅನಿಮೆ ಅವಾರ್ಡ್ಸ್ (Global Anime Awards) ಸಮಾರಂಭದಲ್ಲಿ ರಶ್ಮಿಕಾ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದು ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಹೆಮ್ಮ ತಂದಿದೆ. ರಶ್ಮಿಕಾ ಮಂದಣ್ಣ ಅವರು ಈ ಹಿಂದೆ 2024ರಲ್ಲಿ ಈ ಅನಿಮೆ…

Read More

ಗಾಂಜಾ ಸೇವನೆ ಆರೋಪಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ: ಹಣಕ್ಕೆ ಬೇಡಿಕೆ ಇಟ್ಟಿದ್ದರಾ ಪೊಲೀಸರು? – Kannada News | Student Dies After Police Allegedly Demand Money in Ganja Case

ಧಾರವಾಡ, ಏಪ್ರಿಲ್​​ 28: ಗಾಂಜಾ ಸೇವನೆ ಆರೋಪಕ್ಕೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡದ ಗಿರಿನಗರದಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಬೇಲೂರು ನಿವಾಸಿ ಆದಿತ್ಯ ಮ್ಯಾಗೇರಿ(20) ನೇಣಿಗೆ ಶರಣಾದ ವಿದ್ಯಾರ್ಥಿಯಾಗಿದ್ದು, ಧಾರವಾಡದ ಕಿಟೆಲ್ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ. ಗಿರಿನಗರ ಬಡಾವಣೆಯಲ್ಲಿ ರೂಮ್ ಮಾಡಿಕೊಂಡಿದ್ದ ವಿದ್ಯಾರ್ಥಿ ಆದಿತ್ಯಗೆ 2 ದಿನಗಳಿಂದ ಪೊಲೀಸರು ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಗಾಂಜಾ ಸೇವನೆ ಆರೋಪದಲ್ಲಿ ಆದಿತ್ಯ ಸೇರಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು….

Read More

ಗಂಧದ ನಾಡಿನ ಸೋಪಿಗೆ ಆಂಧ್ರ-ತೆಲಂಗಾಣದಲ್ಲಿ ಭಾರಿ ಕ್ರೇಜ್: ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕಕ್ಕಿಂತ ನೆರೆ ರಾಜ್ಯಗಳಲ್ಲೇ ಹೆಚ್ಚು ಮಾರಾಟ! – Kannada News | Mysore Sandal Soap: M.B. Patil Reveals KSDLs Significant Financial Achievements

ಬೆಂಗಳೂರು, ಏ.28: ಕರ್ನಾಟಕದ ಐಕಾನಿಕ್ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್ ತಯಾರಿಸುವ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆ.ಎಸ್.ಡಿ.ಎಲ್) ಇತ್ತೀಚೆಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ. ಮೈಸೂರು ರಾಜರ ಕಾಲದಲ್ಲಿ ಆರಂಭವಾದ ಈ ಸಂಸ್ಥೆ ಇಂದು ಹಲವು ಉದ್ಯಮಗಳಲ್ಲಿ ಮೇಲ್ಪಂತಿಯಾಗಿದೆ. ಪ್ರಸ್ತುತ ಕೆ.ಎಸ್.ಡಿ.ಎಲ್‌ನ ವಾರ್ಷಿಕ ವಹಿವಾಟು 2 ಸಾವಿರ ಕೋಟಿ ರೂಪಾಯಿ ತಲುಪಿದೆ. ರಾಜ್ಯವಾರು ಮಾರಾಟದ ಅಂಕಿಅಂಶಗಳನ್ನು ನೀಡಿದ ಅವರು, ಕರ್ನಾಟಕ ಮತ್ತು ಗೋವಾದಲ್ಲಿ ಶೇ. 14 ರಷ್ಟು, ತೆಲಂಗಾಣ…

Read More

ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ – Kannada News | Virat Kohli Creates New World Record With 9000 Runs

ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಯಾವುದೇ ಬ್ಯಾಟರ್ ಟಿ20 ಕ್ರಿಕೆಟ್​ನಲ್ಲಿ ಒಂದೇ ತಂಡದ ಪರ ಕಣಕ್ಕಿಳಿದು 9 ಸಾವಿರ ರನ್​ಗಳಿಸಿಲ್ಲ. ಈ ಪಟ್ಟಿಯಲ್ಲಿ 9012 ರನ್​ಗಳೊಂದಿಗೆ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್​) 6,013 ರನ್​ಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಜೇಮ್ಸ್ ವಿನ್ಸ್ (ಹ್ಯಾಂಪ್​ಶೈರ್) 5,934 ರನ್​ಗಳೊಂದಿಗೆ ತೃತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. Source link

Read More

ಮೂರೇ ದಿನಕ್ಕೆ 2100 ಕೋಟಿ ಗಳಿಸಿದ ‘ಮೈಖಲ್’: ಭಾರತದಲ್ಲಿ ಎಷ್ಟು? – Kannada News | Michael movie collection report, how much in India

ಭಾರತದ ಹಲವಾರು ಸಿನಿಮಾಗಳು 100 ಕೋಟಿ ಗಳಿಕೆ ಮಾಡಲು ಒದ್ದಾಡುತ್ತಿವೆ. ಸೂಪರ್ ಹಿಟ್ ಸಿನಿಮಾ ಸಹ 500 ಕೋಟಿ ಗಳಿಸುವಷ್ಟರಲ್ಲಿ ಹೆಣಗಾಡುತ್ತದೆ. ಇತ್ತೀಚೆಗೆ ಬ್ಲಾಕ್ ಬಸ್ಟರ್ ಆದ ‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಿ ಒಂದೂವರೆ ತಿಂಗಳಿಗೆ ಸುಮಾರು 1800 ಕೋಟಿ ಗಳಿಕೆ ಮಾಡಿದೆ. ಆದರೆ ಇಲ್ಲೊಂದು ಹಾಲಿವುಡ್ ಸಿನಿಮಾ, ಅದೂ ಬಿಡುಗಡೆ ಆದ ಬಳಿಕ ಬಹುತೇಕ ಋಣಾತ್ಮಕ ವಿಮರ್ಶೆಗಳನ್ನೇ ಪಡೆಯುತ್ತಿರುವ ಸಿನಿಮಾ ಬಿಡುಗಡೆ ಆದ ಮೂರೇ ದಿನಗಳಲ್ಲಿ 2100 ಕೋಟಿಗೂ ಹೆಚ್ಚು ಮೊತ್ತ…

Read More