ಎಐನಿಂದ ಉದ್ಯೋಗ ನಷ್ಟದ ಭೀತಿ ಬೇಡ; ಇನ್ಫೋಸಿಸ್‌ನಂತಹ ಕಂಪನಿಗಳಿಗೆ ಹಾನಿಯೂ ಇಲ್ಲ: ನಂದನ್ ನಿಲೇಕಣಿ – Kannada News | Nilekani: AI won’t cut jobs, but amplify potential & create $400B opportunities for IT
ಬೆಂಗಳೂರು, ಜೂನ್ 23: ಎಐನಿಂದ ಉದ್ಯೋಗ ಕುಸಿತ ಆಗುವುದಿಲ್ಲ. ಬದಲಿಗೆ ಉದ್ಯೋಗ ಸಾಮರ್ಥ್ಯ ಹೆಚ್ಚಲಿದೆ ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ (Nandan Nilekani) ಹೇಳಿದ್ದಾರೆ. ಇನ್ಫೋಸಿಸ್ (Infosys) ಸಂಸ್ಥೆಯ 45ನೇ ವಾರ್ಷಿಕ ಮಹಾಸಭೆಯಲ್ಲಿ (AGM) ಮಾತನಾಡಿದ ಅವರು ಐಟಿ ಉದ್ಯಮದ ಭವಿಷ್ಯ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತಂತ್ರಜ್ಞಾನದ ಕುರಿತು ಅತ್ಯಂತ ಸಕಾರಾತ್ಮಕ ಹಾಗೂ ಆತ್ಮವಿಶ್ವಾಸದ ಮಾತುಗಳನ್ನು ಹಂಚಿಕೊಂಡಿದ್ದಾರೆ. “ಎಐ ತಂತ್ರಜ್ಞಾನವು ಇನ್ಫೋಸಿಸ್‌ನಂತಹ ಐಟಿ ಕಂಪನಿಗಳನ್ನು ಎಂದಿಗೂ ಕೊನೆಗಾಣಿಸುವುದಿಲ್ಲ, ಬದಲಿಗೆ ಅವುಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ”…