Headlines

ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ವಿಪಕ್ಷ ನಾಯಕ ಅಶೋಕ್ ಗಂಭೀರ ಆರೋಪ – Kannada News | Opposition Leader R Ashok Displays Pen Drive in Karnataka Assembly, Makes Serious Corruption Allegations

ವಿಪಕ್ಷ ನಾಯಕ ಅಶೋಕ್ ಗಂಭೀರ ಆರೋಪImage Credit source: tv9 ಬೆಂಗಳೂರು, ಫೆಬ್ರವರಿ 3: ವಿರೋಧ ಪಕ್ಷದ ನಾಯಕ ಆರ್ ಅಶೋಕ್ (R Ashoka) ಅವರು ಅಬಕಾರಿ ಇಲಾಖೆಯಲ್ಲಿ (Excise department) ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿ, ಅದಕ್ಕೆ ಸಂಬಂಧಿಸಿದ ಆಡಿಯೋ ಸಾಕ್ಷ್ಯ ತಮ್ಮ ಬಳಿ ಇದೆ ಎಂದರು. ಅಲ್ಲದೆ, ಅದಕ್ಕೆ ಸಂಬಂಧಿಸಿದ ಪೆನ್​ಡ್ರೈವ್ ಅನ್ನೂ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಪ್ರದರ್ಶಿಸಿದ ಅವರು, ಸರ್ಕಾರ ಮತ್ತು ಇಲಾಖೆಯ ಉನ್ನತ ಅಧಿಕಾರಿಗಳ ವಿರುದ್ಧ…

Read More

ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಕೇಂದ್ರ ಗುಡ್​​ ನ್ಯೂಸ್​​: ವೇತನ ಪರಿಷ್ಕರಣೆಗೆ ಅಸ್ತು – Kannada News | Central Govt Approves Wage and Pension Revision: Boost for PSU Insurance, NABARD, RBI Employees and Pensioners

ದೆಹಲಿ, ಜನವರಿ 24: ಬಹುಕಾಲದಿಂದ ಬಾಕಿ ಉಳಿದಿದ್ದ ವೇತನ ಪರಿಷ್ಕರಣೆಗೆ (Wage Revision) ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಆ ಮೂಲಕ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ಸಾರ್ವಜನಿಕ ವಲಯದ ವಿಮಾ ಕಂಪನಿ, ನಬಾರ್ಡ್​​ ಉದ್ಯೋಗಿಗಳು, ಭಾರತೀಯ ರಿಸರ್ವ್​​ ಬ್ಯಾಂಕ್ ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್​​​ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಿಂಚಣಿದಾರರಿಗೆ ಪಿಂಚಣಿ ಹೆಚ್ಚಳವಾಗಲಿದೆ.​​​ ಈ ಬಗ್ಗೆ ಕೇಂದ್ರ…

Read More

ಕೊರಗಜ್ಜನಿಗೆ ತಲೆಬಾಗಿ ನಮಿಸಿದ ನಟಿ ರಚಿತಾ ರಾಮ್: ವಿಡಿಯೋ ನೋಡಿ

ನಟಿ ರಚಿತಾ ರಾಮ್ (Rachita Ram) ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಸನ್ನಿಧಿಗೆ ಕುಟುಂಬ ಸಮೇತ ಭೇಟಿ ನೀಡಿ, ಶನಿವಾರ ರಾತ್ರಿ ಹರಕೆಯ ಕೋಲ ಸೇವೆ ಸಲ್ಲಿಸಿದ್ದಾರೆ. ರಚಿತಾ ರಾಮ್ ಅಪ್ಪಟ ದೈವ ಭಕ್ತೆ ಆಗಿದ್ದು, ಇದೀಗ ಕೊರಗಜ್ಜನಿಗೆ ಸೇವೆ ಸಲ್ಲಿಸುವ ಮೂಲಕ ಹರಕೆ ತೀರಿಸಿದ್ದಾರೆ. ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ ಸುಂದರ ವಿಡಿಯೋ ಒಂದನ್ನು ಸಹ ನಟಿ ರಚಿತಾ ರಾಮ್ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…. ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ…

Read More

‘ಆಸೆ’ ಧಾರಾವಾಹಿ ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ್ರಾ ಅಮೃತಾ ರಾಮಮೂರ್ತಿ? – Kannada News | Amrutha Ramamurthy Reveals Why She Quit Popular TV Serial: Uncomfortable Environment

ನ್ಯೂಸ್ ಆ್ಯಂಕರ್ ಆಗಿ ವೃತ್ತಿ ಆರಂಭಿಸಿದ ಅಮೃತಾ ರಾಮಮೂರ್ತಿ (Amrutha Ramamoorthy) ಅವರು ನಂತರ ಕಿರುತೆರೆಯಲ್ಲಿ ಮಿಂಚಿದರು. ವಿಲನ್ ಪಾತ್ರಗಳ ಮೂಲಕ ಅವರು ಗಮನ ಸೆಳೆದರು. ಈಗ ಅವರು ಒಂದು ಜನಪ್ರಿಯ ಧಾರಾವಾಹಿ ತೊರೆದ ಬಗ್ಗೆ ಕಾರಣ ನೀಡಿದ್ದಾರೆ. ಧಾರಾವಾಹಿ ಸೆಟ್ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥವಾಗಿ ಇರುತ್ತಿತ್ತು ಎಂದು ಹೇಳಿದ್ದಾರೆ. ಅವರು ಧಾರಾವಾಹಿ ಹೆಸರನ್ನು ಎಲ್ಲಿಯೂ ಹೇಳಿಲ್ಲ. ಅನೇಕರು ಇದು ‘ಆಸೆ’ ಧಾರಾವಾಹಿ ಇರಬಹುದು ಎಂದು ಊಹಿಸಿದ್ದಾರೆ. ಅವರು ನೀಡಿರುವ ಮಾಹಿತಿ ‘ಆಸೆ’ ಧಾರಾವಾಹಿಯನ್ನು ಹೋಲುತ್ತಿದೆ ಎಂದಿದ್ದಾರೆ….

Read More

ವಯನಾಡ್ ಸುರಂಗ ಮಾರ್ಗ ನಿರ್ಮಾಣ ಸ್ಥಳದಲ್ಲಿ ಭೂಕುಸಿತ: ಮೂವರ ರಕ್ಷಣೆ, ಹಲವರು ಸಿಲುಕಿರುವ ಶಂಕೆ – Kannada News | Wayanad Landslide at Tunnel Site: 3 Rescued, Many Feared Trapped Amid Heavy Rains

ವಯನಾಡ್, ಜುಲೈ 07: ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಮಂಗಳವಾರ ಭಾರಿ ಭೂಕುಸಿತ (Landslide) ಸಂಭವಿಸಿದೆ. ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಸುರಂಗ ರಸ್ತೆ ಯೋಜನೆ ನಡೆಯುತ್ತಿರುವ ಸ್ಥಳದಲ್ಲೇ ಈ ದುರಂತ ಸಂಭವಿಸಿದ್ದು, ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಆತಂಕ ಎದುರಾಗಿದೆ. ಪ್ರಸ್ತುತ ಸ್ಥಳದಲ್ಲಿ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. 24 ಗಂಟೆಗಳಲ್ಲಿ 265 ಮಿಮೀ ಭಾರಿ ಮಳೆ ಕಳೆದ 24 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ಸುಮಾರು 265 ಮಿಮೀ ನಷ್ಟು…

Read More

ಬಿಳಿ ಶರ್ಟು ಪಂಚೆ ತೊಟ್ಟು ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ, ವಿಶೇಷತೆಯೇನು? – Kannada News | Rakshit Shetty seen wearing traditional dress here is the detail

ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ (Rakshit Shetty) ಕುರಿತು ಕೆಲ ದಿನಗಳ ಹಿಂದೆ ಟ್ರೋಲ್​ ಒಂದು ಹರಿದಾಡುತ್ತಿತ್ತು, ‘ರಕ್ಷಿತ್ ಕಳೆದ ಹೋಗಿದ್ದಾರೆ ಹುಡುಕಿ ಕೊಡಿ’ ಎಂದು ಕೆಲವರು ಪೋಸ್ಟ್​​ಗಳನ್ನು ಹಂಚಿಕೊಂಡಿದ್ದರು. ರಕ್ಷಿತ್ ಸಹ ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಬಳಿಕ ಬಹುತೇಕ ಕಾಣೆ ಆಗಿದ್ದರು. ಹೊರಗೆಲ್ಲೂ ಕಾಣಿಸಿಕೊಂಡಿರಲಿಲ್ಲ. ‘ರಿಚರ್ಡ್ ಆಂಟೊನಿ’ ಸಿನಿಮಾದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಬಿಟ್ಟರೆ ಇನ್ನೇನೂ ಅಪ್​​ಡೇಟ್ ನೀಡಿರಲಿಲ್ಲ. ಇದೀಗ ರಕ್ಷಿತ್ ಶೆಟ್ಟಿ ಹಠಾತ್ತನೆ ಕಾಣಿಸಿಕೊಂಡಿದ್ದಾರೆ. ಅದೂ ಪಂಚೆ ಮತ್ತು ಶರ್ಟು ಧರಿಸಿ. ರಕ್ಷಿತ್…

Read More

ಲಕ್ಷ್ಮೀ ಹೆಬ್ಬಾಳ್ಕರ್​​ ಪರ ನಿಂತ ಸತೀಶ್ ಜಾರಕಿಹೊಳಿ, ಹಾವು ಮುಂಗುಸಿಯಂತಿದ್ದವರು ಒಂದಾದ್ರಾ? – Kannada News | Satish Jarkiholi Bats for Lakshmi Hebbalkar For Minister Post In Dk Shivakumar Governmnet

ಬೆಳಗಾವಿ, (ಆಗಸ್ಟ್ 15): ಡಿಕೆ ಶಿವಕುಮಾರ್ ಸಂಪುಟದಲ್ಲಿ ಮಹಿಳಾ ಸಚಿವ ಸ್ಥಾನ ಮೀಸಲಿರಿಸಲಾಗಿದೆ. ಸಚಿವ ಸಂಪುಟ ಪುನಾರಚನೆ ವೇಳೆ ವಿಧಾನಪರಿಷತ್ ಸದಸ್ಯೆ ಗಾಯತ್ರಿ ಅವರಿಗೆ ಮಣೆ ಹಾಕಲಾಗಿತ್ತು. ಆದ್ರೆ, ಬದಲಾದ ಸನ್ನವೇಶಗಳಿಂದ ಅವರು ಸಚಿವರಾಗಿ ಅಧಿಕಾರಿ ಸ್ವೀಕಾರ ಮಾಡಲಿಲ್ಲ. ಹೀಗಾಗಿ ಅದೊಂದು ಸ್ಥಾನ ಖಾಲಿ ಉಳಿದಿದ್ದು, ಇದಕ್ಕೆ ಉಮಾಶ್ರೀ, ಲಕ್ಷ್ಮೀ ಹೆಬ್ಬಾಳ್ಕರ್ ರೇಸ್​​ನಲ್ಲಿದ್ದಾರೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್​ ಪರವಾಗಿ ಸತೀಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಿರುವುದು ಅಚ್ಚರಿ ಮೂಡಿಸಿದೆ. ಹೌದು..ರಾಜ್ಯ ರಾಜಕಾರಣವೇ ಬೇರೆ ಬೆಳಗಾವಿ ರಾಜಕಾರಣವೇ ಬೇರೆ, ಬೆಳಗಾವಿಯಲ್ಲಿ…

Read More

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 34ರಿಂದ 38ಕ್ಕೆ ಹೆಚ್ಚಿಸಲು ಮೋದಿ ಸಂಪುಟ ಅನುಮೋದನೆ – Kannada News | Modi Cabinet approves proposal to increase number of Supreme Court judges from 34 to 38

ನವದೆಹಲಿ, ಮೇ 5: ಕೇಂದ್ರ ಸಚಿವ ಸಂಪುಟ ಇಂದು ಸುಪ್ರೀಂ ಕೋರ್ಟ್‌ನ (Supreme Court) ನ್ಯಾಯಾಧೀಶರ ಬಲವನ್ನು ಪ್ರಸ್ತುತ ಇರುವ 34ರಿಂದ 38ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಅಂಗೀಕರಿಸಿತು. ಸದ್ಯಕ್ಕೆ, ಸುಪ್ರೀಂ ಕೋರ್ಟ್ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೇರಿದಂತೆ 34 ನ್ಯಾಯಾಧೀಶರ ಅನುಮೋದಿತ ಬಲವನ್ನು ಹೊಂದಿದೆ. ನ್ಯಾಯಾಧೀಶರ ಸಂಖ್ಯೆಯಲ್ಲಿನ ಹೆಚ್ಚಳವು ಸುಪ್ರೀಂ ಕೋರ್ಟ್ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ, ತ್ವರಿತ ನ್ಯಾಯವನ್ನು ಖಚಿತಪಡಿಸುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಈ…

Read More

ಹಿಮಂತ ಬಿಸ್ವಾ ಶರ್ಮಾ ಆಡಳಿತಕ್ಕೆ ಅಸ್ಸಾಂ ಜನತೆಯ ಮೊಹರು, ವಿರೋಧ ಪಕ್ಷಗಳ ಕೋಟೆ ಧ್ವಂಸ, ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಕಾರಣಗಳೇನು? – Kannada News | Assam BJP’s Historic Win: Himanta’s Magic Secures Third Term, Why Anti Incumbency Failed Here

ಗುವಾಹಟಿ, ಮೇ 04: ದೇಶದ ಇತರ ಮೂರು ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆ (Anti-incumbency) ಸರ್ಕಾರಗಳನ್ನು ಬುಡಮೇಲು ಮಾಡುತ್ತಿದ್ದರೆ, ಅಸ್ಸಾಂನಲ್ಲಿ ಮಾತ್ರ ಬಿಜೆಪಿ ಈ ಪ್ರವೃತ್ತಿಯನ್ನು ತಲೆಕೆಳಗಾಗಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ(Himanta Biswa Sarma) ಅವರ ನೇತೃತ್ವದ ತಂಡವು ಅಸ್ಸಾಂನಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರಿದೆ. ಅಸ್ಸಾಂ ವಿಧಾನಸಭೆ ಚುನಾವಣೆ 2026ರ ಫಲಿತಾಂಶಗಳು ಹೊರಬೀಳುತ್ತಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ…

Read More

Vastu Remedies: ಮನೆಯಲ್ಲಿ ಪದೇ ಪದೇ ಜಗಳ, ಅಶಾಂತಿಯೇ? ಇಲ್ಲಿದೆ ಸರಳ ವಾಸ್ತು ಪರಿಹಾರಗಳು! – Kannada News | Simple Vastu Remedies to Attract Positive Energy and Love in Your Family

ಒತ್ತಡದ ಮತ್ತು ದಣಿದ ದಿನದ ನಂತರ ಪ್ರತಿಯೊಬ್ಬರೂ ಮನೆಗೆ ಮರಳಿ ಪ್ರಶಾಂತತೆಯನ್ನು ಅನುಭವಿಸಲು ಬಯಸುತ್ತಾರೆ. ಆದರೆ ಕೆಲವೊಮ್ಮೆ ಎಲ್ಲವೂ ಸರಿಯಾಗಿದ್ದರೂ ಸಹ, ಮನೆಯಲ್ಲಿ ಉದ್ವಿಗ್ನತೆ, ಅನಗತ್ಯ ಜಗಳಗಳು ಮತ್ತು ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ. ಮನೆಯಲ್ಲಿರುವ ವಾಸ್ತು ದೋಷಗಳೂ ಇದಕ್ಕೆ ಕಾರಣವಾಗಿರಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಂತೋಷ ಮತ್ತು ಪ್ರೀತಿಯನ್ನು ಮರಳಿ ತರಲು ಸಹಾಯ ಮಾಡುವ ಕೆಲವು ಸರಳ ಮತ್ತು ಪರಿಣಾಮಕಾರಿ ವಾಸ್ತು ಪರಿಹಾರಗಳು ಇಲ್ಲಿವೆ. ಮನೆಯ ಮುಖ್ಯ ದ್ವಾರದ…

Read More