ದಿನ ಭವಿಷ್ಯ: ಈ ರಾಶಿಯವರು ಇಂದು ಸಿಗುವ ಅಶುಭಸೂಚನೆಯನ್ನು ನಿರ್ಲಕ್ಷಿಸಬೇಡಿ… – Kannada News | Horoscope May 04 Monday 2026; Dina Rashi Bhavishya Today, Checkout the details here
ಮೇಷ ರಾಶಿ: ನೀವು ಮಾಡುವ ಕಠಿಣ ಪರಿಶ್ರಮವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಕೃಷಿ ಕಾರ್ಯದಲ್ಲಿ ನೀವು ತೊಡಗುವಿರಿ. ಇದು ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವ ಸಮಯ ಕೂಡ. ಇದರಿಂದ ನೀವು ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಮೇಲ್ಮಟ್ಟಕ್ಕೆ ಹೋಗಲಿದ್ದೀರಿ. ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ. ವೃಷಭ ರಾಶಿ : ಪ್ರಯೋಜನವಾಗದ ಮಾತುಗಳನ್ನು ಹೇಳುವುದು ಬೇಡ. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಹಣಕಾಸಿನ ವಿಷಯಗಳಲ್ಲಿ ಕೆಲವು ತೊಡಕುಗಳು…