Headlines

IND vs ENG: ದೇಶಕ್ಕಿಂತ ಆರ್​ಸಿಬಿ ತಂಡ ಮುಖ್ಯವೇ? ಆರ್​ಸಿಬಿ ಫ್ಯಾನ್ಸ್ ವಿರುದ್ಧ ಗಂಭೀರ ಆರೋಪ

2026 ರ ಟಿ20 ವಿಶ್ವಕಪ್‌ (T20 World Cup 2026) ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 7 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ (India vs England) ಫೈನಲ್​ಗೇರಿತು. ರನ್​ಗಳ ಮಳೆಯೇ ಹರಿದ ಈ ಪಂದ್ಯದಲ್ಲಿ ಬೌಲರ್​ಗಳು ಹೈರಾಣಾದರೆ ಬ್ಯಾಟ್ಸ್​ಮನ್​ಗಳು ಬೌಂಡರಿ ಹಾಗೂ ಸಿಕ್ಸರ್​ಗಳ ಮಳೆಗರೆದರು. ಅದರಲ್ಲೂ ಕ್ರೀಡಾಂಗಣದಲ್ಲಿ ಭಾರತದ ಅಭಿಮಾನಿಗಳು ಹೆಚ್ಚಿದ್ದ ಕಾರಣ, ಟೀಂ ಇಂಡಿಯಾದ ಬ್ಯಾಟಿಂಗ್‌ ವೇಳೆ ಇಡೀ ಕ್ರೀಡಾಂಗಣವೇ ಜೈಕಾರಗಳಿಂದ ತುಂಬಿ ತುಳುಕಿತ್ತು. ಇತ್ತ ಇಂಗ್ಲೆಂಡ್ ಬ್ಯಾಟಿಂಗ್‌ ವೇಳೆ ಆಂಗ್ಲ…

Read More

ಹಾರ್ಮುಜ್ ಜಲಸಂಧಿ ಕೇವಲ ಅಮೆರಿಕ ಹಾಗೂ ಇಸ್ರೇಲ್​ಗೆ ಮಾತ್ರ ಮುಚ್ಚಿದೆ: ಇರಾನ್ ವಿದೇಶಾಂಗ ಸಚಿವ

ಟೆಹ್ರಾನ್, ಮಾರ್ಚ್​ 15:ಇಸ್ರೇಲ್ ಮತ್ತು ಅಮೆರಿಕ ನಿರಂತರವಾಗಿ ಇರಾನ್(Iran) ಮೇಲೆ ದಾಳಿ ಮಾಡುತ್ತಿವೆ. ಈ ದಾಳಿಗಳಿಗೆ ಇರಾನ್ ಕೂಡ ಪ್ರತಿಕ್ರಿಯಿಸುತ್ತಿದೆ. ಏತನ್ಮಧ್ಯೆ, ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯ ಬಗ್ಗೆ ಇರಾನ್ ಹೇಳಿಕೆ ನೀಡಿದೆ.ಹಾರ್ಮುಜ್ ಜಲಸಂಧಿಯನ್ನು ಮುಚ್ಚುವ ಬಗ್ಗೆ ಇರಾನ್ ವಿದೇಶಾಂಗ ಸಚಿವ ಅರಘ್ಚಿ ಸ್ಪಷ್ಟನೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಎಲ್ಲಾ ದೇಶಗಳಿಗೆ ಮುಚ್ಚಲಾಗಿಲ್ಲ, ತಮ್ಮ ಶತ್ರುಗಳಿಗೆ ಮಾತ್ರ ಮುಚ್ಚಲಾಗಿದೆ. ನಮ್ಮ ಮತ್ತು ನಮ್ಮ ಮಿತ್ರರಾಷ್ಟ್ರಗಳ ಮೇಲೆ ದಾಳಿ ಮಾಡುವ ಟ್ಯಾಂಕರ್‌ಗಳು ಮತ್ತು ಹಡಗುಗಳಿಗೆ ಜಲಸಂಧಿಯನ್ನು ಮುಚ್ಚಲಾಗುವುದು ಎಂದು ಹೇಳಿದರು….

Read More

ದಾವಣಗೆರೆ: ಉಪಚುನಾವಣಾ ಪ್ರಚಾರಕ್ಕೆ ಕರೆದಿಲ್ಲ; ಜಬ್ಬಾರ್​ಗೆ ಸಚಿವ ಮಲ್ಲಿಕಾರ್ಜುನ್​​ ಖಡಕ್ ಕೌಂಟರ್

ದಾವಣಗೆರೆ, ಏಪ್ರಿಲ್​ 11: ಒಂದು ಚಹಾ ಕುಡಿದರೆ ಋಣ ಇಟ್ಟುಕೊಳ್ಳಬೇಕು. ಎಂಎಲ್​ಸಿ ಮಾಡಿದ್ದು ನಾವು. ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ಸಚಿವ ಎಸ್​ಎಸ್​ ಮಲ್ಲಿಕಾರ್ಜುನ್​​ ಹೇಳಿದ್ದಾರೆ. ಚುನಾವಣಾ ಪ್ರಚಾರಕ್ಕೆ ಕರೆದಿಲ್ಲ ಎಂಬ ಕಾಂಗ್ರೆಸ್​ ಮುಖಂಡ ಅಬ್ದುಲ್​​ ಜಬ್ಬಾರ್​ ಆರೋಪಕ್ಕೆ ಟಾಂಗ್​ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಪಕ್ಷದ ಕಾರ್ಯಕರ್ತರಾಗಿ ನಾವು ನಮ್ಮ ಪಾಡಿಗೆ, ಕರೆಗಾಗಿ ಕಾಯದೆ ಪಕ್ಷಕ್ಕಾಗಿ ಕೆಲಸ ಮಾಡಬೇಕು. ಮುಸ್ಲಿಂ ಸಮುದಾಯದ ನಾಯಕರಿಗೆ ಟಿಕೆಟ್ ನೀಡುವ ಬಗ್ಗೆ ನಡೆದ…

Read More

ಗಡಿ ಜಿಲ್ಲೆಗಳ ಎಸ್‌ಪಿಗಳೊಂದಿಗೆ ಭದ್ರತಾ ಪರಿಶೀಲನೆ ನಡೆಸಿದ ಗೃಹ ಸಚಿವ ಅಮಿತ್ ಶಾ – Kannada News | Home Minister Amit Shah reviewing security with SPs from border districts

ನವದೆಹಲಿ, ಜುಲೈ 9: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ನವದೆಹಲಿಯಲ್ಲಿ ಗಡಿ ಜಿಲ್ಲೆಗಳ 119 ಪೊಲೀಸ್ ವರಿಷ್ಠಾಧಿಕಾರಿಗಳ (ಎಸ್‌ಪಿ) ಜೊತೆ ಮಹತ್ವದ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರಾಖಂಡ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ಗಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ವರಿಷ್ಠಾಧಿಕಾರಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳೂ ಸಹ ಸಭೆಯಲ್ಲಿ ಉಪಸ್ಥಿತರಿದ್ದರು….

Read More

ದೆಹಲಿಗೆ ಡಿಕೆ ಶಿವಕುಮಾರ್: ಕಾರ್ಯಕಾರಿಣಿಗೂ ಮುನ್ನ ರಾಹುಲ್ ಭೇಟಿಗೆ ಪ್ರಯತ್ನ – Kannada News | Karnataka Congress Power Sharing Talks: DK Shivakumar to Visit Delhi, Likely to Meet Rahul Gandhi

ಬೆಂಗಳೂರು, ಡಿಸೆಂಬರ್ 22: ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನದ ಅಧಿಕಾರ ಹಂಚಿಕೆ ಕುರಿತ ಬಿಕ್ಕಟ್ಟು ಮುಂದುವರಿದಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದೆಹಲಿಗೆ ತೆರಳಲು ಅಣಿಯಾಗಿದ್ದಾರೆ. ಡಿಸೆಂಬರ್ 26 ಮತ್ತು 27 ರಂದು ನಡೆಯಲಿರುವ ಎಐಸಿಸಿ ಕಾರ್ಯಕಾರಿಣಿ ಸಭೆಯ ನೆಪದಲ್ಲಿ, ಅದಕ್ಕೂ ಮುನ್ನ ಶಿವಕುಮಾರ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಯತ್ನಿಸುತ್ತಿದ್ದಾರೆ. ಮುಖ್ಯವಾಗಿ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯದ ನಾಯಕತ್ವ ವಿಚಾರವನ್ನು ಬಗೆಹರಿಸಿಕೊಳ್ಳುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಆದರೆ, ದೆಹಲಿಯಿಂದ ಬುಲಾವ್ ಬಂದರೆ ಮಾತ್ರ ದೆಹಲಿಗೆ ಪ್ರಯಾಣ…

Read More

ಬೆಂಗಳೂರು ಏರ್​ಪೋರ್ಟ್​ನಲ್ಲಿ ಸಿಕ್ತು 3 ಕೋಟಿ ರೂ. ಮೌಲ್ಯದ ಗಾಂಜಾ! ಮೂವರು ಆರೋಪಿಗಳು ವಶಕ್ಕೆ – Kannada News | Bengaluru Airport Customs Seize Rs 2.97 Cr Hydro Ganja; 3 Arrested for Smuggling

ಬೆಂಗಳೂರು ಏರ್​ಪೋರ್ಟ್​ನಲ್ಲಿ ಸಿಕ್ತು 3 ಕೋಟಿ ರೂ. ಮೌಲ್ಯದ ಗಾಂಜಾ! ಬೆಂಗಳೂರು, ಫೆಬ್ರವರಿ 07: ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (International Airport) ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2.97 ಕೋಟಿ ರೂ. ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಎಂಟೂ ವರೆ ಕೆಜಿ ಹೈಡ್ರೋ ಗಾಂಜಾ ಪತ್ತೆ ಥಾಯ್ಲೆಂಡ್‌ನ ಪುಕೆಟ್ ಹಾಗೂ ಮಲೇಶಿಯಾದಿಂದ ಕೆಐಎಬಿಗೆ ಆಗಮಿಸಿದ್ದ…

Read More

ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ‘ಧುರಂಧರ್ 2’: ಅನ್‌ಕಟ್ ಜಾಗತಿಕ ವರ್ಷನ್‌ನಲ್ಲಿ ಏನೆಲ್ಲಾ ಇರಲಿದೆ? – Kannada News | Ranveer Singh Dhurandhar 2 Uncut International Version OTT Release on Netflix India

ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿರುವ ರಣವೀರ್ ಸಿಂಗ್ (Ranveer Singh) ಹಾಗೂ ಆದಿತ್ಯ ಧರ್ ಕಾಂಬಿನೇಷನ್‌ನ ಸೂಪರ್ ಹಿಟ್ ಆ್ಯಕ್ಷನ್ ಸ್ಲೈ ಥ್ರಿಲ್ಲರ್ ‘ಧುರಂಧರ್: ದಿ ರಿವೆಂಜ್’ (Dhurandhar 2) ಇದೀಗ ಒಟಿಟಿ ಪ್ರೇಕ್ಷಕರನ್ನು ಮತ್ತೊಮ್ಮೆ ರಂಜಿಸಲು ಸಜ್ಜಾಗಿದೆ. ಜೂನ್ 19ರಿಂದ ಈ ಚಿತ್ರದ ಬಹುನಿರೀಕ್ಷಿತ ‘ಅನ್‌ಕಟ್ ಇಂಟರ್ನ್ಯಾಷನಲ್ ವರ್ಷನ್’ (Uncut International Version) ನೆಟ್‌ಫ್ಲಿಕ್ಸ್ ಒಟಿಟಿ ಮೂಲಕ ಪ್ರಸಾರ ಆಗಲಿದೆ. ಕೆಲವೇ ವಾರಗಳ ಹಿಂದೆಯಷ್ಟೇ (ಜೂನ್ 4)…

Read More

ಹಣ ಕೊಡಲಿಲ್ಲವೆಂದು ಎರಡೂ ಕಾಲು ಮುರಿದ್ರು; ಪೊಲೀಸ್ ಇನ್ಸ್ಪೆಕ್ಟರ್‌ರಿಂದಲೇ ಮಾರಣಾಂತಿಕ ಹಲ್ಲೆ? – Kannada News | Hassan: Police Inspector Accused of Brutal Assault Over Money Dispute

ಪೊಲೀಸ್ ಇನ್ಸ್ಪೆಕ್ಟರ್‌ರಿಂದಲೇ ಮಾರಣಾಂತಿಕ ಹಲ್ಲೆ? ಹಾಸನ, ಜನವರಿ 07: ಪೊಲೀಸ್ ಇನ್ಸ್ಪೆಕ್ಟರ್ ವಿರುದ್ಧ ಮಾರಣಾಂತಿಕ ಹಲ್ಲೆ ಆರೋಪದ ಕೇಳಿ ಬಂದಿದೆ. ಹಾಸನ ತಾಲ್ಲೂಕಿನ ಕಾರ್ಲೆಕೊಪ್ಪಲು ಗ್ರಾಮದ ಶಶಿಧರ್ ಎಂಬವರ ಮೇಲೆ ಬೆಂಗಳೂರು ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ‘ಕಬ್ಬಿಣದ ರಾಡ್‌ನಿಂದ ಹಲ್ಲೆ’ ನಿನ್ನೆ ಸಂಜೆ ಹಾಸನ ಜಿಲ್ಲೆಯ ಗೊರೂರು ಸಮೀಪದ ಉಳುವಾರೆ ಗ್ರಾಮದ ಬಳಿ ಇನ್ನೊವಾ ಕಾರಿನಲ್ಲಿ ಬಂದ ಶಿವಕುಮಾರ್ ಹಾಗೂ ಅವರೊಂದಿಗೆ ಇದ್ದ ಇಬ್ಬರು ತನ್ನನ್ನು ಅಡ್ಡಗಟ್ಟಿ ಕಬ್ಬಿಣದ ರಾಡ್‌ನಿಂದ…

Read More

1 ರೂಪಾಯಿಗೆ ಟಿ ಶರ್ಟ್: ಚಿಂತಾಮಣಿಯಲ್ಲಿ ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು – Kannada News | Rs 1 T Shirt Offer! Massive Crowd Throngs New Clothing Store in Chintamani

ಚಿಕ್ಕಬಳ್ಳಾಪುರ, ಜೂನ್​ 22: 1 ರೂಪಾಯಿಗೆ 1 ಟಿ ಶರ್ಟ್​ ಕೊಡುವುದಾಗಿ ಆಫರ್ ಹಿನ್ನೆಲೆ ಗ್ರಾಹಕರು ಬಟ್ಟೆ ಅಂಗಡಿಗೆ ಮುಗಿಬಿದ್ದ ಘಟನೆ ​ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದಲ್ಲಿ ನಡೆದಿದೆ. ಚಿಂತಾಮಣಿ ನಗರದ ಬೆಂಗಳೂರು ಮುಖ್ಯರಸ್ತೆಯಲ್ಲಿರುವ ಅಂಗಡಿ ಎದುರು ಜಮಾಯಿಸಿರುವ ಗ್ರಾಹಕರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಟ್ಟಿದ್ದಾರೆ. ಬಟ್ಟೆ ಅಂಗಡಿ ಓಪನಿಂಗ್​​ಗೆ ಗ್ರಾಹಕರನ್ನು ಸೆಳೆಯಲು ಅಂಗಡಿಯವರು ಆಫರ್ ಘೋಷಿಸಿದ್ದರು ಎನ್ನಲಾಗಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

ಲಿವ್-ಇನ್ ಸಂಗಾತಿಯ 2 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಡಿಎಂಕೆ ಕಾರ್ಯಕರ್ತ – Kannada News | Tamil Nadu Man Linked to DMK Youth Wing Arrested in Toddler Assault and Murder Case

ಬಂಧನ-ಸಾಂದರ್ಭಿಕ ಚಿತ್ರImage Credit source: ipleaders ಕೃಷ್ಣಗಿರಿ, ಮಾರ್ಚ್​ 01: ಡಿಎಂಕೆ ಕಾರ್ಯರ್ತನೊಬ್ಬ ಲಿವ್-ಇನ್ ಸಂಗಾತಿ(Live-in Partner)ಯ 2 ವರ್ಷದ ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಡೆದಿದೆ. ಪೆರಿಯನಾಯಗಂ ತನ್ನ ಸಂಗಾತಿ ಪ್ರಿನ್ಸಿಯ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ಗಂಡ ಸೂರ್ಯನಿಂದ ಬೇರೆಯಾಗಿದ್ದಳು. ತಾಯಿ ಇಲ್ಲದ ಸಮಯದಲ್ಲಿ ಪೆರಿಯನಾಯಗಂ ಮಗುವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ವೈವಾಹಿಕ ಭಿನ್ನಾಭಿಪ್ರಾಯಗಳ ನಂತರ, ಪ್ರಿನ್ಸಿ ತನ್ನ ತಾಯಿಯೊಂದಿಗೆ ಅಂಚೆಟ್ಟಿ ಗ್ರಾಮದಲ್ಲಿ ವಾಸಿಸುತ್ತಿದ್ದರು,…

Read More