ಅಂದುಕೊಂಡಿದ್ದನ್ನು ಸಾಧಿಸಿಯೇ ಬಿಟ್ಟ ಫ್ಯಾನ್ಸ್; ಧನ್ಯವಾದ ಹೇಳಿದ ಗಿಲ್ಲಿ ನಟ – Kannada News | Gilli Nata Hits 1M Instagram Followers: Bigg Boss Fans Fulfill Wish
ಬಿಗ್ ಬಾಸ್ (Bigg Boss) ಮನೆಯಲ್ಲಿರುವ ಗಿಲ್ಲಿ ನಟ ಅವರು ಇತ್ತೀಚೆಗೆ ಅಪರೂಪದ ಸಾಧನೆ ಮಾಡಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಸೇರುವಾಗ ಇನ್ಸ್ಟಾಗ್ರಾಮ್ನಲ್ಲಿ ಇದ್ದಿದ್ದು ಕೇವಲ 1 ಲಕ್ಷದ 9 ಸಾವಿರ ಹಿಂಬಾಲಕರು. ಈಗ ಈ ಸಂಖ್ಯೆ 1 ಮಿಲಿಯನ್ ದಾಟಿದೆ. ಕ್ಷಣ ಕ್ಷಣಕ್ಕೂ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಬಿಗ್ ಬಾಸ್ ಪೂರ್ಣಗೊಳ್ಳುವ ವೇಳೆಗೆ ಈ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಕಳೆದ ಕೆಲ ದಿನಗಳಿಂದ ಗಿಲ್ಲಿ ಇನ್ಸ್ಟಾ ಫಾಲೋವರ್ಸ್ ಸಂಖ್ಯೆ…