ಹೊಸ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದ ಸುದೀಪ್; ಇಲ್ಲಿದೆ ವಿಡಿಯೋ – Kannada News | Kiccha Sudeep Buys Brand New Mahindra BE 6 Electric Car Viral Delivery Video Inside
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕಾರುಗಳ ಮೇಲೆ ಸಾಕಷ್ಟು ಪ್ರೀತಿ ಇದೆ. ಇದು ಇಡೀ ಗಾಂಧಿನಗರಕ್ಕೆ ತಿಳಿದಿರುವ ವಿಚಾರ. ಸದಾ ಒಂದಿಲ್ಲೊಂದು ಅತ್ಯಾಧುನಿಕ ಹಾಗೂ ರಾಯಲ್ ಕಾರುಗಳಲ್ಲಿ ಓಡಾಡುವ ಸುದೀಪ್ ಅವರ ಗ್ಯಾರೇಜ್‌ನಲ್ಲಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿವೆ. ಆದರೆ, ಈ ಬಾರಿ ಅವರು ಎಂದಿನ ತಮ್ಮ ಶೈಲಿಗಿಂತ ಭಿನ್ನವಾಗಿ ಯೋಚಿಸಿದ್ದು, ಪರಿಸರ ಸ್ನೇಹಿಯಾಗಿರುವ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಖರೀದಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸುದೀಪ್ ಅವರು ಮಹಿಂದ್ರಾ ಕಂಪನಿಯ ಬಿಇ6 ಕಾರು ಖರೀದಿ…