ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ರೈತನಿಗೆ ವಂಚನೆ: ಕೋಲ್ಡ್ ಸ್ಟೋರೇಜ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಮೆಣಸಿನಕಾಯಿ ಮಾಯ! – Kannada News | Haveri: Byadagi Chilli Farmer Cheated, Produce Worth 50 Lakh Sold from Cold Storage
ಬ್ಯಾಡಗಿ ಮೆಣಸಿನಕಾಯಿImage Credit source: tv9 kannada ಹಾವೇರಿ, ಮೇ 06: ವಿಶ್ವಪ್ರಸಿದ್ಧ ಬ್ಯಾಡಗಿ ಮೆಣಸಿನಕಾಯಿ (Byadagi Chilli) ಮಾರುಕಟ್ಟೆಯಲ್ಲಿ ರೈತನೊಬ್ಬನಿಗೆ (Farmer) ದಲ್ಲಾಳಿಯೊಬ್ಬ ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರೈತ ಮಹಾದೇವಪ್ಪ ಎಂಬುವವರ ಮೋಸಕ್ಕೊಳಗಾದವರು. ಬೆಳೆದ ಮೆಣಸಿನಕಾಯಿಗೆ ಸೂಕ್ತ ಬೆಲೆ ಸಿಗಲಿಲ್ಲವೆಂಬ ಕಾರಣಕ್ಕೆ, ದಲ್ಲಾಳಿ ನಾಗಪ್ಪ ಹಡಗಲಿ ಎಂಬಾತನ ಸಹಾಯದಿಂದ 2023ರಲ್ಲಿ ತಮ್ಮ 363 ಚೀಲ ಮೆಣಸಿನಕಾಯಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಿದ್ದರು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾದಾಗ ಮಾರಾಟ…