ಲಕ್ಷ್ಮೀ ನಿವಾಸ ; ಜಯಂತ್ ಕೈಗೇ ತಾಳಿ ಬಿಚ್ಚಿಟ್ಟು ಹೊರಟ ಜಾಹ್ನವಿ; ಮುರಿದು ಬಿತ್ತಾ ಒಲವ ಬಂಧ? – Kannada News | Lakshmi Nivasa Twist: Jahnavi Returns Mangalsutra to Jayanth, Walks Out of Marriage
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಲಕ್ಷ್ಮೀ ನಿವಾಸ’ ಈಗ ಅತ್ಯಂತ ರೋಚಕ ಹಂತಕ್ಕೆ ಬಂದು ತಲುಪಿದೆ. ಜಯಂತ್ ಹಾಗೂ ಜಾಹ್ನವಿ ಜೋಡಿಯ ಬದುಕಿನಲ್ಲಿ ಈಗ ದೊಡ್ಡ ಬಿರುಗಾಳಿಯೇ ಎದ್ದಿದೆ. ಇಷ್ಟು ದಿನ ಜಯಂತ್‌ನ ಅತಿಯಾದ ಪೊಸೆಸಿವ್ ಗುಣವನ್ನು ಸಹಿಸಿಕೊಂಡಿದ್ದ ಜಾಹ್ನವಿ, ಈಗ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾಳೆ. ಕೈ ಹಿಡಿದ ಗಂಡನ ಕೈಗೇ ತಾಳಿ ಬಿಚ್ಚಿಟ್ಟು ಆಕೆ ಮನೆಯಿಂದ ಹೊರನಡೆದಿದ್ದಾಳೆ. ಪ್ರೋಮೋದಲ್ಲಿ ಏನಿದೆ? ಧಾರಾವಾಹಿಯ ಹೊಸ ಪ್ರೋಮೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಪ್ರೇಕ್ಷಕರಲ್ಲಿ…