Headlines

ಬೆಂಗಳೂರು ಕರಗ 2026: ಏನಿದು ಅಲಗು ಸೇವೆ? ವೀರಕುಮಾರರು ಖಡ್ಗದಿಂದ ಎದೆಗೆ ಬಡಿದುಕೊಳ್ಳುವುದರ ಹಿಂದಿದೆ ರೋಚಕ ಇತಿಹಾಸ!

ಬೆಂಗಳೂರು, ಮಾರ್ಚ್​ 31: ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಸಾಂಪ್ರದಾಯಿಕ ಉತ್ಸವವಾದ ‘ಬೆಂಗಳೂರು ಕರಗ ಶಕ್ತ್ಯೋತ್ಸವ’ಕ್ಕೆ (Karaga Shaktyotsava) ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ಅವರು ಕರಗದ ಪೌರಾಣಿಕ ಹಿನ್ನೆಲೆ ಮತ್ತು ವೀರಕುಮಾರರ ಆಚರಣೆಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಏನಿದು ಅಲಗು ಸೇವೆ? ಇದರ ಹಿನ್ನೆಲೆ ಏನು? ಪೌರಾಣಿಕ ನಂಬಿಕೆಯಂತೆ, ಚೈತ್ರ ಪೂರ್ಣಿಮೆಯ ಮೂರು ದಿನಗಳ ಮೊದಲು ತಾಯಿ ದ್ರೌಪದಿ ದೇವಿ ಭೂಮಿಗೆ ಬರುತ್ತಾಳೆ ಎಂಬ…

Read More

IPL 2026: ಐಪಿಎಲ್‌ನಲ್ಲಿ ಮೊದಲ ಡಬಲ್ ಹೆಡರ್; ಯಾವ 4 ತಂಡಗಳ ನಡುವೆ ಪಂದ್ಯ?

ಮಾರ್ಚ್​ 28 ರಂದು ಆರಂಭವಾದ 2026 ರ ಐಪಿಎಲ್‌ನಲ್ಲಿ (IPL 2026) ಇದುವರೆಗೆ 6 ಪಂದ್ಯಗಳು ನಡೆದಿವೆ. 7ನೇ ಪಂದ್ಯ ಇಂದು, ಸಿಎಸ್​ಕೆ ಹಾಗೂ ಪಂಜಾಬ್ (CSK vs PBKS) ನಡುವೆ ನಡೆಯಲಿದೆ. ಅಂದಹಾಗೆ ಈ ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ 12 ಡಬಲ್ ಹೆಡರ್ (Double Header) ಪಂದ್ಯಗಳು ನಡೆಯಲಿವೆ. ಅಂದರೆ ಒಂದೇ ದಿನ ಎರಡು ಪಂದ್ಯಗಳು ನಡೆಯಲಿವೆ. ಅದರಲ್ಲಿ ಮೊದಲ ಡಬಲ್ ಹೆಡರ್ ಪಂದ್ಯ ಏಪ್ರಿಲ್ 4 ರಂದು ನಡೆಯಲಿದೆ. ದಿನದ ಮೊದಲ ಪಂದ್ಯ ಮಧ್ಯಾಹ್ನ 3:30ಕ್ಕೆ…

Read More

ದೇಹದಲ್ಲಿ ಪದೇಪದೇ ದದ್ದುಗಳು ಕಂಡುಬರುತ್ತಿದ್ದರೆ ನಿರ್ಲಕ್ಷಿಸಬೇಡಿ! ಇದು ಈ ರೋಗ ಬರುವ ಮುನ್ಸೂಚನೆ

ಅನೇಕರಿಗೆ ದೇಹದ ಮೇಲೆ ಪದೇಪದೇ ದದ್ದುಗಳು (Skin Rashes) ಅಥವಾ ಚರ್ಮದ ಮೇಲೆ ಕೆಂಪು ಕಲೆಗಳು ಕಾಣಿಸುವ ಸಮಸ್ಯೆ ಉಂಟಾಗುತ್ತದೆ. ಇದನ್ನು ಸಾಮಾನ್ಯ ಅಲರ್ಜಿ ಅಥವಾ ಹವಾಮಾನ ಪರಿಣಾಮ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ, ಏಕೆಂದರೆ ಇದು ಕೆಲವೊಮ್ಮೆ ದೇಹದಲ್ಲಿನ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ದದ್ದುಗಳು ಸಣ್ಣ ಕೆಂಪು ಚುಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಕೆಲವರಿಗೆ ಇದರ ಜೊತೆಗೆ ಉರಿ, ಚರ್ಮದ ಊತ ಅಥವಾ ಸ್ವಲ್ಪ ನೋವು ಕಾಣಿಸಬಹುದು. ಕೆಲ…

Read More

ಕಾಫಿಗೂ ತಟ್ಟಿದ ಯುದ್ಧದ ಬಿಸಿ! ರಫ್ತು ಸ್ಥಗಿತಗೊಂಡು ಕಂಗಾಲಾದ ಬೆಳೆಗಾರ; ಶೇ 20ರಷ್ಟು ಕುಸಿದ ದರ

ಹಾಸನ, ಏಪ್ರಿಲ್ 8: ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಧ್ಯಪ್ರಾಚ್ಯ ಯುದ್ಧದ ಪರಿಣಾಮಗಳು ಈಗ ಕರ್ನಾಟಕದ (Karnataka) ಕಾಫಿ ತೋಟಗಳಿಗೂ ತಟ್ಟಿವೆ. ಅಡುಗೆ ಅನಿಲ ಮತ್ತು ಆಟೋ ಗ್ಯಾಸ್ ಕೊರತೆಯ ನಡುವೆ, ದೇಶಕ್ಕೆ ಅತಿ ಹೆಚ್ಚು ವಿದೇಶಿ ವಿನಿಮಯ ತಂದುಕೊಡುತ್ತಿದ್ದ ಕಾಫಿ ಉದ್ಯಮ ಈಗ ಸಂಕಷ್ಟದ ಸುಳಿಗೆ ಸಿಲುಕಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಕದನದಿಂದಾಗಿ ಕಾಫಿ ರಫ್ತು (Coffee Export) ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಕಾಫಿ ಬೆಲೆ ತೀವ್ರವಾಗಿ ಕುಸಿಯುತ್ತಿದೆ. ದಶಕದ ಬಳಿಕ ಏರಿದ್ದ ಬೆಲೆ…

Read More

ಬಂಡೀಪುರ ಸಫಾರಿ ವಿರುದ್ಧ ಮತ್ತೆ ಸಿಡಿದೆದ್ದ ರೈತರು: ನಾಳೆಯಿಂದ ಆಮರಣಾಂತ ಧರಣಿ, ಕಾರಣವೇನು?

ಚಾಮರಾಜನಗರ, ಏಪ್ರಿಲ್ 06: ಭಾರಿ ವಿರೋಧದ ನಡುವೆಯೂ ಬಂಡೀಪುರ ಸಫಾರಿಯನ್ನ (Bandipur Safari) ಸರ್ಕಾರ ರೀ ಓಪನ್ ಮಾಡಿತ್ತು. ಇದೀಗ ಸಫಾರಿ ಆರಂಭವಾದ ಬೆನ್ನಲ್ಲೇ ಮತ್ತೆ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ಸಿಡಿದೆದ್ದಿರುವ ರೈತರು ಸಫಾರಿ ಬಂದ್​​ಗೆ ಆಗ್ರಹಿಸಿ ನಾಳೆಯಿಂದ ಅಂದರೆ ಏಪ್ರಿಲ್​ 07ರಿಂದ ಆಮರಣಾಂತ ಧರಣಿಗೆ ಸಜ್ಜಾಗಿದ್ದಾರೆ. ಪ್ರತಿ ತಾಲೂಕಿನಲ್ಲಿ ಧರಣಿ ಕಳೆದೊಂದು ವರ್ಷದಿಂದ ಮಾನವ ಮತ್ತು ಕಾಡು ಪ್ರಾಣಿ ಸಂಘರ್ಷಕ್ಕೆ ಸುದ್ದಿ ಆಗುತ್ತಿರುವ ಚಾಮರಾಜನಗರ…

Read More

ಬಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ: ಸಿದ್ಧರ ಗುಹೆಯೊಳಗಿದೆ ಅಪಾರ ಸಂಪತ್ತು? – Kannada News | Lakkundi Nagavi Link: Gadag Hidden Gold, Siddhi Purusha Caves and Ancient Mysteries

ಗದಗ, ಫೆಬ್ರವರಿ 09: ಐತಿಹಾಸಿಕ ಲಕ್ಕುಂಡಿಯಲ್ಲಿ (Lakkundi) ನಿಧಿ ಸಿಕ್ಕ ಬೆನ್ನಲ್ಲೇ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿವೆ. ಇದೀಗ ನಾಗಾವಿ ಗ್ರಾಮದ ಗುಡ್ಡದಲ್ಲಿನ ನಿಗೂಢ ಗುಹೆಯ ಬಾವಿಗೂ ಲಕ್ಕುಂಡಿಯ ಮುಸುಕಿನ ಬಾವಿಗೆ ಸಂಬಂಧವಿದೆ. ನಾಗಾವಿ ಗುಹೆಯಲ್ಲಿನ ಬಾವಿಯಲ್ಲಿ ವಸ್ತುವೊಂದನ್ನು ತೇಲಿ ಬಿಟ್ಟರೆ ಅದು ಲಕ್ಕುಂಡಿ ಮುಸುಕಿನ ಬಾವಿಗೆ ಹೋಗ್ತಾಯಿತ್ತಂತೆ. ಸಿದ್ಧಿ ಪುರುಷರು ವಾಸವಾಗಿದ್ದ ಗುಹೆಯಲ್ಲಿ ಅಪಾರ ನಿಧಿ ಸಂಪತ್ತಿಗೆ ಹಾವಿನ ಕಾವಲುವಿದೆಯಂತೆ. ಚಿನ್ನದ ನಿಧಿ ಮುಟ್ಟಲು ಬಿಡೋದಿಲ್ಲ. ಇನ್ನೊಂದೆಡೆ ಶತಮಾನಗಳ ಹಿಂದೆ ಆಕಳೊಂದು ಈ ಗುಹೆಯೊಳಗೆ ಹೋಗಿ ಸಿದ್ಧಿ…

Read More

Inspiring: ಸಿಮೆಂಟ್ ತ್ಯಾಜ್ಯದಿಂದ ಹೊಸ ಬ್ಯುಸಿನೆಸ್ ಐಡಿಯಾ ಮಾಡಿ ಗೆದ್ದ ಪ್ರಾಚಿ ಪೊದ್ದಾರ್; ಮದುವೆ ಒತ್ತಡದ ನಡುವೆಯೂ ಕುಂದದ ಛಲ – Kannada News | Prachi Poddar of Jagannath Stones, story of how she made new business idea from cement waste

ಕೆಲವು ಕುಟುಂಬಗಳಲ್ಲಿ, ಮನೆತನಗಳಲ್ಲಿ ಈಗಲೂ ಕೂಡ ಹೆಣ್ಮಕ್ಕಳಿಗೆ ಶಿಕ್ಷಣ ಸಿಗುವುದು ಕನಸಿನ ಮಾತೇ ಆಗಿದೆ. ಮಾರ್ವಾಡಿ ಮನೆತನಗಳಲ್ಲಿ ಹೆಣ್ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಇರುವುದು ಬಹಳ ಅಪರೂಪ. ಇಂಥ ಸಾಂಪ್ರದಾಯಿಕ ಮಾರ್ವಾಡಿ ಕುಟುಂಬವೊಂದರಲ್ಲಿ ಹುಟ್ಟಿದವರು ಪ್ರಾಚಿ ಪೊದ್ದಾರ್. 2001 ರಲ್ಲಿ ಅವರು ಬೆಂಗಳೂರಿನ ಐಐಎಂಗೆ ಆಯ್ಕೆಯಾದಾಗ, ಅದು ಸಂತೋಷಕ್ಕಿಂತ ಚರ್ಚೆಯ ವಿಷಯವಾಯಿತು. ಮೊದಲು ಮದುವೆಯಾಗು, ಆನಂತರ ಬೇಕಾದರೆ ಓದುವಿಯಂತೆ ಎಂದು ಮನೆಯವರು ಒತ್ತಡ ಹಾಕಿದರು. ಆದರೆ, ಪ್ರಾಚಿ ಅದು ಹೇಗೋ ಐಐಎಂಗೆ ಸೇರಲು ಅನುಮತಿ ಪಡೆದರು. ಆದರೆ, ಅಲ್ಲೊಂದು…

Read More

ಸತೀಶ್ ಜಾರಕಿಹೊಳಿಯನ್ನು ‘ಕ್ಲೀನ್ ಬೋಲ್ಡ್’ ಮಾಡಿದ ಲಕ್ಷ್ಮೀ ಹೆಬ್ಬಾಳಕರ್..! – Kannada News | Minister Lakshmi hebbalkar clean bowled to satish jarkiholi in Cricket at Belagavi

ಬೆಳಗಾವಿ, (ಫೆಬ್ರವರಿ 06): ರಾಜಕೀಯದ ಜಂಜಾಟ, ಅಧಿಕಾರದ ಒತ್ತಡಗಳನ್ನು ಬದಿಗಿಟ್ಟು ಬೆಳಗಾವಿಯ (Belagavi)  ಪ್ರಭಾವಿ ಕಾಂಗ್ರೆಸ್ ನಾಯಕರು ಇಂದು (ಫೆಬ್ರವರಿ 06) ಕ್ರಿಕೆಟ್ ಆಟವಾಡಿ ಗಮನ ಸೆಳೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi)  ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್  ಅವರ ‘ಬಾಕ್ಸ್ ಕ್ರಿಕೆಟ್’  ನೆರೆದಿದ್ದ ಜನರಿಗೆ ಭರಪೂರ ಮನರಂಜನೆ ನೀಡಿದೆ.  ಹೌದು.. ಬೆಳಗಾವಿಯಲ್ಲಿ ಬಾಲಭವನ ವತಿಯಿಂದ ನಿರ್ಮಿಸಲಾದ ನೂತನ ಬಾಕ್ಸ್ ಕ್ರಿಕೆಟ್ ಮೈದಾನದ ಉದ್ಘಾಟನೆ  ನೆರವೇರಿತು. ಉದ್ಘಾಟನೆಯ…

Read More

ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್: ಇನ್ಮುಂದೆ ರೈಲಿಗೆ ಹೆಚ್ಚು ಹೊತ್ತು ಕಾಯಬೇಕಿಲ್ಲ – Kannada News | Good News for Yellow Line Metro Passengers: Sixth Train to Begin Operations from December 23

ಬೆಂಗಳೂರು, ಡಿಸೆಂಬರ್​ 22: ನಾಳೆಯಿಂದ ಅಂದರೆ ಡಿಸೆಂಬರ್ 23ರಿಂದ 6ನೇ ಹೊಸ ಮೆಟ್ರೋ (Namma Metro) ರೈಲು ಟ್ರ್ಯಾಕಿಗಿಳಿಯಲಿದೆ. ಆ ಮೂಲಕ ಯೆಲ್ಲೋ ಲೈನ್ ಮೆಟ್ರೋ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಗುಡ್​ ನ್ಯೂಸ್ ನೀಡಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಆರನೇ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಹಾಗಾಗಿ ಹೆಚ್ಚು ಹೊತ್ತು ರೈಲಿಗಾಗಿ ಕಾಯುವಿಕೆಗೆ ಬ್ರೇಕ್​​ ಬೀಳಲಿದೆ. ಈ ಬಗ್ಗೆ ಬಿಎಂಆರ್​ಸಿಎಲ್ (BMRCL)​​ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಬಿಎಂಆರ್​ಸಿಎಲ್​​ ಮಾಧ್ಯಮ ಪ್ರಕಟಣೆ ಬೆಂಗಳೂರು…

Read More

‘ರಾಜ ಶಿವಾಜಿ’ ಸಿನಿಮಾದ ಕಲಾವಿದರಿಗೆ ಸಿಕ್ಕಿದೆ ಭಾರೀ ಸಂಭಾವನೆ – Kannada News | Raja Shivaji Cast Salaries: Ritesh Deshmukh, Sanjay Dutt, Vidya Balan Remuneration Revealed

ನಟ ರಿತೇಶ್ ದೇಶಮುಖ್ ಅಭಿನಯದ ‘ರಾಜ ಶಿವಾಜಿ’ ಚಿತ್ರ ಮೇ 1ರಂದು ದೊಡ್ಡ ಪರದೆಯ ಮೇಲೆ ಬರಲಿದೆ. ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಈ ಚಿತ್ರದಲ್ಲಿ ಅನೇಕ ಬಾಲಿವುಡ್ ನಟರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಟ ಸಂಜಯ್ ದತ್ ನಿಂದ ನಟಿ ವಿದ್ಯಾ ಬಾಲನ್ ವರೆಗೆ, ಅನೇಕ ಬಾಲಿವುಡ್ ನಟರು ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. 100 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಚಿತ್ರದಲ್ಲಿ ನಟರ ಸಂಭಾವನೆ ಕೂಡ ದೊಡ್ಡದಿದೆ,. ಆ ಬಗ್ಗೆ ಇಲ್ಲಿದೆ ವಿವರ. ‘ರಾಜ…

Read More