ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು – Kannada News | Bangaluru Rain Havoc: Footpath Collapses, Exposing Shoddy GBA Work
ಬೆಂಗಳೂರು, ಏಪ್ರಿಲ್ 30: ನಗರದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಯಿಂದ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಧಾರಾಕಾರ ಮಳೆಗೆ ಜಿಬಿಎ ಕಳಪೆ ಕಾಮಗಾರಿ ಬಟಾಬಯಲಾಗಿದೆ. ಅದರಲ್ಲೂ ರಾಜ್ಯದ ಆಡಳಿತ ಕೇಂದ್ರವಾಗಿರುವ ವಿಧಾನಸೌಧದ ಸಮೀಪವಿರುವ ಎಂ.ಎಸ್. ಬಿಲ್ಡಿಂಗ್ ಮುಂಭಾಗದ ಫುಟ್‌ಪಾತ್ ಕುಸಿಬಿದ್ದು ಅವಾಂತರ ಸೃಷ್ಟಿಯಾಗಿದೆ. ಕೇವಲ 1 ಗಂಟೆ ಸುರಿದ ಭಾರಿ ಮಳೆಗೆ ಫುಟ್‌ಪಾತ್ ಕುಸಿದುಹೋಗಿದೆ. ಪ್ರತಿನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ನಡೆದಾಡುವ ಫುಟ್‌ಪಾತ್ ಬಲಿಗಾಗಿ ಕಾದುಕುಳಿತಂತಿದೆ. ಹೀಗಾಗಿ ಜನರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು…