Headlines

Rajya Sabha Election: 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್​ 16ರಂದು ಚುನಾವಣೆ: ಚುನಾವಣಾ ಆಯೋಗ ಘೋಷಣೆ – Kannada News | Election Commission of India Announces March 16 Polls for 37 Rajya Sabha Seats

ನವದೆಹಲಿ, ಫೆಬ್ರವರಿ 18: ಹತ್ತು ರಾಜ್ಯಗಳ 37 ರಾಜ್ಯಸಭಾ(Rajya Sabha) ಸ್ಥಾನಗಳಿಗೆ ಮಾರ್ಚ್​ 16ರಂದು ಚುನಾವಣೆ ನಡೆಸುವುದಾಗಿ ಚುನಾವಣಾ ಆಯೋಗ ಇಂದು ಘೋಷಿಸಿದೆ. ಮಹಾರಾಷ್ಟ್ರ, ತಮಿಳುನಾಡು, ಬಿಹಾರ ಸೇರಿದಂತೆ 10 ರಾಜ್ಯಗಳ 37 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಫೆಬ್ರವರಿ 26ರಂದು ಚುನಾವಣಾ ಆಯೋಗದಿಂದ ಅಧಿಕೃತ ಅಧಿಸೂಚನೆ ಪ್ರಕಟವಾಗಲಿದೆ. ಮಾರ್ಚ್​ 5ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರಲಿದೆ. ಮಾರ್ಚ್​ 6ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದೆ.

ಮಾರ್ಚ್​ 16ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾರ್ಚ್​ 16ರಂದು ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಪ್ರಕಟವಾಗಲಿದೆ. ಮಹಾರಾಷ್ಟ್ರದ 7, ತಮಿಳುನಾಡಿನ 6 ಹಾಗೂ ಬಿಹಾರದ 5 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಅಸ್ಸಾಂ, ಹರಿಯಾಣ, ಛತ್ತೀಸ್​ಗಢ ಮತ್ತು ತೆಲಂಗಾಣದಲ್ಲೂ ತೆರವಾಗಲಿರುವ ಸ್ಥಾನಗಳಿಗೂ ಚುನಾವಣೆ ನಡೆಯಲಿದೆ. ಮಾರ್ಚ್ 20ರ ಒಳಗೆ ಇಡೀ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗದ ಗಡುವು ನೀಡಿದೆ. ಮತಪತ್ರದಲ್ಲಿ ಆದ್ಯತೆ ಗುರುತಿಸಲು ಚುನಾವಣಾಧಿಕಾರಿ ನೀಡುವ ವಿಶೇಷ ವೈಲೆಟ್ ಪೆನ್ ಬಳಕೆ ಕಡ್ಡಾಯವಾಗಿರಲಿದೆ. 37 ರಾಜ್ಯಸಭಾ ಸದಸ್ಯರ ಅವಧಿ ಏಪ್ರಿಲ್ 2026 ರಲ್ಲಿ ಮುಕ್ತಾಯಗೊಳ್ಳಲಿದ್ದು, ಚುನಾವಣೆ ಅನಿವಾರ್ಯವಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Leave a Reply

Your email address will not be published. Required fields are marked *