
ಐಪಿಎಲ್ 2026ರ ಸೀಸನ್ ಆರಂಭವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಚಿತ್ರ ಸುದ್ದಿ ವೈರಲ್ ಆಗಿತ್ತು. ಅದೇನೆಂದರೆ, “ಈ ಬಾರಿ ಆರ್ಸಿಬಿ ತಂಡದಲ್ಲಿ 5 ವಿದೇಶಿ ಆಟಗಾರರು ಆಡುತ್ತಿದ್ದಾರೆ” ಎಂಬುದು. ಐಪಿಎಲ್ ನಿಯಮದ ಪ್ರಕಾರ ಪ್ಲೇಯಿಂಗ್ ಇಲೆವೆನ್ನಲ್ಲಿ ಕೇವಲ ನಾಲ್ವರು ವಿದೇಶಿಯರಿಗೆ ಮಾತ್ರ ಅವಕಾಶವಿದೆ, ಹಾಗಿದ್ದ ಮೇಲೆ ಇದು ಹೇಗೆ ಸಾಧ್ಯ? ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿಬರಬಹುದು.
ಆದರೆ ಅಸಲಿ ವಿಷಯ ಎಂದರೆ, ಇಲ್ಲಿ 5ನೇ ವಿದೇಶಿ ಆಟಗಾರ ಬೇರೆ ಯಾರೂ ಅಲ್ಲ, ಅದು ನಮ್ಮ ವಿರಾಟ್ ಕೊಹ್ಲಿ! ಕೊಹ್ಲಿ ಅವರು ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಲಂಡನ್ನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವುದರಿಂದ, ಅಭಿಮಾನಿಗಳು ತಮಾಷೆಯಾಗಿ ಅವರನ್ನು “ಓವರ್ಸೀಸ್ ಪ್ಲೇಯರ್” (ವಿದೇಶಿ ಆಟಗಾರ) ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಚಾಯಿಸಿದ್ದರು.
ಇದನ್ನೇ ಆರ್ಸಿಬಿ ಇನ್ಸೈಡರ್ ಶೋನಲ್ಲಿ ಮಿಸ್ಟರ್ ನಾಗ್ಸ್ (ದಾನಿಶ್ ಸೇಠ್) ಪ್ರಸ್ತಾಪಿಸಿ ಕೊಹ್ಲಿಯ ಕಾಲೆಳೆದಿದ್ದಾರೆ. ನೀವು ಆರ್ಸಿಬಿಯ 5ನೇ ವಿದೇಶಿ ಆಟಗಾರನಲ್ಲವೇ ಎಂದು ಕೇಳಿದಾಗ, ಕೊಹ್ಲಿ ನಗುತ್ತಾ, “ನನಗೇನು ಗೊತ್ತು, ನನ್ನನ್ನೇಕೆ ಕೇಳುತ್ತಿದ್ದೀಯಾ? ವಿದೇಶಿ ಆಟಗಾರರನ್ನೇ ಕೇಳು. ನಾನು ವಿದೇಶಿ ಆಟಗಾರನಲ್ಲ” ಎಂದು ಹಾಸ್ಯಮಯವಾಗಿ ಉತ್ತರಿಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.