
ಮಾರ್ಚ್ 28ರಿಂದಲೇ ಐಪಿಎಲ್-2026 (IPL 2026) ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (Chinnaswamy Stadium) ಉದ್ಘಾಟನಾ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವೆ ಓಪನಿಂಗ್ ಮ್ಯಾಚ್ ನಡೆಯಲಿದೆ. ಆದ್ರೆ ಇದು ಕನ್ಫರ್ಮ್ ಆಗಿರಲಿಲ್ಲ. ಯಾಕಂದ್ರೆ ರಾಜ್ಯ ಸರ್ಕಾರ ಇದೂವರೆಗೂ ಚಿನ್ನಸ್ವಾಮಿಯಲ್ಲಿ ಐಪಿಎಲ್ ಗೆ ಅನುಮತಿ ನೀಡಿರಲಿಲ್ಲ. ಆದ್ರೆ, ಇಂದು (ಮಾರ್ಚ್ 16) ಬರೋಬ್ಬರಿ 10 ತಿಂಗಳ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಆಡುವುದಕ್ಕೆ ಸರ್ಕಾರ (Karnataka government )ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ ಇಷ್ಟು ದಿನ ಇದ್ದ ಅಡೆತಡೆಗಳು ಕೊನೆಗೂ ದೂರ ಆಗಿವೆ.
ಕೆಎಸ್ಸಿಗೆ ಸರ್ಕಾರದ ಸಲಹೆ
ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಇಂದು (ಮಾರ್ಚ್ 16) ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ, ಪೊಲೀಸ್ ಇಲಾಖೆ, ಮತ್ತು ಕೆಎಸ್ಸಿಎ ಪದಾಧಿಕಾರಿಗಳ ಜೊತೆ ಸಭೆ ಮಾಡಿದ್ದು, ಕೆಎಸ್ಸಿಗೆ ಕೆಲಸ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಚಿನ್ನಸ್ವಾಮಿಯಲ್ಲಿ ಮುಖ್ಯವಾಗಿ ಸುರಕ್ಷತೆ ಇರಬೇಕು, ತಜ್ಞರ ತಂಡ ನೀಡಿದ್ದ ವರದಿಯಂತೆ ಎಲ್ಲಾ ನಿಯಮ ಪಾಲಿಸಬೇಕು, ಗೇಟ್ ದೊಡ್ಡದು ಇರಲಿ, ಆ್ಯಂಬುಲೆನ್ಸ್ ಇರಬೇಕು, ಫೈರ್ ವಾಹನ ಇರಬೇಕು, ನೀರಿನ ವ್ಯವಸ್ಥೆ ಇರಬೇಕು. ಹೀಗೆ ಕೆಎಸ್ಸಿಎಗೆ ಹತ್ತು ಹಲವು ಸಲಹೆಗಳನ್ನು ನೀಡಲಾಗಿದೆ.
ಇದನ್ನೂ ಓದಿ: IPL 2026: ಇಲ್ಲಿದೆ ಆರ್ ಸಿಬಿ ಪಂದ್ಯಗಳ ವೇಳಾಪಟ್ಟಿ, ಸೇವ್ ಮಾಡಿಟ್ಟುಕೊಳ್ಳಿ
RCBಯ 5 ಪಂದ್ಯಗಳ ಜತೆ ಪ್ಲೇ ಆಫ್ -ಸಮಿಸ್
ವಿಶ್ವದ ಅತೀ ದೊಡ್ಡ ಟೂರ್ನಮೆಂಟ್, ಈ ಬಾರಿ ಆರ್ ಸಿಬಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಯಾಕಂದ್ರೆ ಹೋಮ್ ಪಂದ್ಯಗಳಲ್ಲಿ ಕೇವಲ 5 ಪಂದ್ಯ ಮಾತ್ರ ಬೆಂಗಳೂರಿನಲ್ಲಿ ಆಡಿಸಲು ಆರ್ ಸಿಬಿ ಮ್ಯಾನೇಜ್ಮೆಂಟ್ ತಿಳಿಸಿತ್ತು. ಆದ್ರೆ ಬಿಸಿಸಿಐ ಮಾತ್ರ ಫ್ಯಾನ್ಸ್ ಶುಭ ಸುದ್ದಿ ನೀಡಿದೆಯಂತೆ. ಆರ್ ಸಿಬಿಯ 5 ಪಂದ್ಯದ ಜತೆ ಒಂದು ಪ್ಲೇ ಆಫ್ ಪಂದ್ಯ ಮತ್ತು ಸೆಮಿ ಫೈನಲ್ ಮ್ಯಾಚ್ ಸಹ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆಯಂತೆ.