RCB vs CSK: ಗೆಲ್ಲೋರು ಯಾರು? ಹೀಗಿದೆ ಲೆಕ್ಕಾಚಾರ

RCB vs CSK: ಗೆಲ್ಲೋರು ಯಾರು? ಹೀಗಿದೆ ಲೆಕ್ಕಾಚಾರ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಏ.5) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 11ನೇ ಪಂದ್ಯದಲ್ಲಿ ಬದ್ಧವೈರಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಮುಖಾಮುಖಿಯಾಗಲಿದೆ. ಸೌತ್ ಡರ್ಬಿ ಪಂದ್ಯ ಎಂದೇ ಬಿಂಬಿತವಾಗಿರುವ ಈ ಮ್ಯಾಚ್​ನಲ್ಲಿ ಗೆಲ್ಲೋರು ಯಾರು ಎಂಬುದೇ ಈಗ ಕುತೂಹಲ. ಈ ಕುತೂಹಲವನ್ನು ತಣ್ಣಿಸುವಂತಹ ಲೆಕ್ಕಾಚಾರ ಇಲ್ಲಿದೆ…

ಗೆಲುವಿನ ಮುನ್ಸೂಚನೆ: ಯಾರ ಕೈ ಮೇಲು?

ಪ್ರಸ್ತುತ ಫಾರ್ಮ್ ಮತ್ತು ಅಂಕಿಅಂಶಗಳನ್ನು ಗಮನಿಸಿದರೆ, ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲ್ಲುವ ಸಾಧ್ಯತೆ 60.9% ರಷ್ಟಿದೆ. ಕಳೆದ ಸಾಲಿನ ಚಾಂಪಿಯನ್ ಆಗಿರುವ ಆರ್​ಸಿಬಿ ತಂಡ, ತನ್ನ ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದೇ ಗೆಲುವಿನ ಲಯವನ್ನು ಇಂದು ಸಹ ಮುಂದುವರೆಸುವ ವಿಶ್ವಾಸದಲ್ಲಿದೆ.

ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿ (ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ) ಸೋಲನುಭವಿಸಿ ಒತ್ತಡದಲ್ಲಿದೆ. ಇದೀಗ ಬಲಿಷ್ಠ ಆರ್​ಸಿಬಿ ತಂಡವನ್ನು ಅವರ ತವರಿನಲ್ಲೇ ಮಣಿಸುವುದು ಸಿಎಸ್​ಕೆ ತಂಡಕ್ಕೆ ಅಂದು ಕೊಂಡಷ್ಟು ಸುಲಭವಲ್ಲ.

ಮುಖಾಮುಖಿ ದಾಖಲೆ:

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೇಲುಗೈ ಸಾಧಿಸಿದ್ದರೂ, ಬೆಂಗಳೂರಿನ ಮೈದಾನದಲ್ಲಿ ಇಬ್ಬರ ನಡುವೆ ಸಮಬಲದ ಹೋರಾಟ ನಡೆದಿದೆ:

  • ಒಟ್ಟು ಪಂದ್ಯಗಳು: 35
  • CSK ಜಯ: 21
  • RCB ಜಯ: 13
  • 1 ಪಂದ್ಯ ಕಾರಣಾಂತರಗಳಿಂದ ರದ್ದಾಗಿತ್ತು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಭಯ ತಂಡಗಳು ಒಟ್ಟು 11 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ಬಾರಿ ಗೆದ್ದಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡ 5 ಸಲ ಜಯ ಸಾಧಿಸಿದೆ. ಅಂದರೆ ಆರ್​ಸಿಬಿ ತಂಡದ ತವರು ಮೈದಾನದಲ್ಲಿ ಸಿಎಸ್​ಕೆ ಸಮಬಲದ ಹೋರಾಟ ನೀಡಿದೆ.

ಪಿಚ್ ವರದಿ:

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್ ಬ್ಯಾಟರ್‌ಗಳ ಪಾಲಿಗೆ ಸ್ವರ್ಗ. ಚಿಕ್ಕ ಬೌಂಡರಿಗಳಿರುವುದರಿಂದ ರನ್ ಮಳೆ ಗ್ಯಾರಂಟಿ. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ದುಕೊಂಡು, ನಂತರ ಗುರಿ ಬೆನ್ನಟ್ಟುವುದು ಇಲ್ಲಿನ ಯಶಸ್ಸಿನ ಸೂತ್ರ.

ಪ್ರಮುಖ ವಿಷಯಗಳು:

  • ಧೋನಿ ಅಲಭ್ಯತೆ: ಗಾಯದ ಸಮಸ್ಯೆಯಿಂದಾಗಿ ಎಂ.ಎಸ್. ಧೋನಿ ಇಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಇದು ಸಿ.ಎಸ್.ಕೆ ತಂಡದ ಆತ್ಮವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಬಹುದು.
  • ಕೊಹ್ಲಿ ಅಬ್ಬರ: ವಿರಾಟ್ ಕೊಹ್ಲಿ ಕಳೆದ ಪಂದ್ಯದಲ್ಲಿ ಅಜೇಯ 50+ ರನ್ ಬಾರಿಸಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಹೊಸ ಆಟಗಾರ ಜೇಕಬ್ ಡಫಿ ಪವರ್‌ಪ್ಲೇನಲ್ಲಿ ವಿಕೆಟ್ ಪಡೆಯುವ ಜವಾಬ್ದಾರಿ ಹೊತ್ತಿದ್ದಾರೆ.

ಉಭಯ ತಂಡಗಳ ಕೀ ಪ್ಲೇಯರ್ಸ್​:

  • RCB: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಟಿಮ್ ಡೇವಿಡ್ ಮತ್ತು ಜೇಕಬ್ ಡಫಿ.
  • CSK: ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ ಶಿವಂ ದುಬೆ ಮತ್ತು ನೂರ್ ಅಹಮದ್.

ಇದನ್ನೂ ಓದಿ: ತಂದೆ-ಮಗನನ್ನು ಔಟ್ ಮಾಡಿ ವಿಶ್ವ ದಾಖಲೆ ಬರೆದ ಜೇಮ್ಸ್ ಅ್ಯಂಡರ್ಸನ್

ಗೆಲ್ಲೋದು ಯಾರು?

ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲಯ ಹಾಗೂ ತವರು ಮೈದಾನದಲ್ಲಿನ ಅಭಿಮಾನಿಗಳ ಬೆಂಬಲವನ್ನು ಗಣನೆಗೆ ತೆಗೆದುಕೊಂಡರೆ, ಇಂದಿನ ಮ್ಯಾಚ್​ನಲ್ಲೂ ಆರ್​ಸಿಬಿ ತಂಡವೇ ಜಯಭೇರಿ ಬಾರಿಸಲಿದೆ.

 

Source link

Leave a Reply

Your email address will not be published. Required fields are marked *