RCB vs CSK: ಸಂಜು ಬಗ್ಗೆ ಒಂದೂ ಮಾತನಾಡದ ರುತುರಾಜ್: ಆರ್​​ಸಿಬಿ ವಿರುದ್ಧದ ಸೋಲಿಗೆ ದೂರಿದ್ದು ಯಾರನ್ನು?

RCB vs CSK: ಸಂಜು ಬಗ್ಗೆ ಒಂದೂ ಮಾತನಾಡದ ರುತುರಾಜ್: ಆರ್​​ಸಿಬಿ ವಿರುದ್ಧದ ಸೋಲಿಗೆ ದೂರಿದ್ದು ಯಾರನ್ನು?

ಬೆಂಗಳೂರು (ಏ. 06): ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಭಾನುವಾರದ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು, ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 43 ರನ್‌ಗಳಿಂದ ಸೋಲಿಸಿತು. ಈ ಮೂಲಕ ಆರ್​​ಸಿಬಿ ಟೂರ್ನಿಯಲ್ಲಿ ಸತತ ಎರಡನೇ ಜಯ ಕಂಡು ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಸಿಎಸ್​​ಕೆ ಈ ಋತುವಿನಲ್ಲಿ ಸತತ ಮೂರನೇ ಸೋಲನ್ನು ಅನುಭವಿಸಿತು. 251 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ 19.4 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲೌಟ್ ಆಯಿತು. ಚೆನ್ನೈ ನಾಯಕ ರುತುರಾಜ್ ಗಾಯಕ್ವಾಡ್ ಸೋಲಿನ ನಂತರ ನಿರಾಶೆಗೊಂಡರು.

ಆರ್​ಸಿಬಿ ವಿರುದ್ಧದ ಸೋಲಿನ ಬಳಿಕ ರುತುರಾಜ್ ಗಾಯಕ್ವಾಡ್ ಹೇಳಿದ್ದೇನು?

ತಮ್ಮ ಬ್ಯಾಟಿಂಗ್ ಮತ್ತು ತಂಡದ ಹೋರಾಟದ ಬಗ್ಗೆ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ನಲ್ಲಿ ಮಾತನಾಡಿದ ರುತುರಾಜ್, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೂ ಆಶ್ಚರ್ಯವಾಯಿತು. ಸರ್ಫರಾಜ್ ಖಾನ್, ಪ್ರಶಾಂತ್ ವೀರ್, ಜೇಮಿ ಓವರ್ಟನ್ ಮತ್ತು ಸ್ವಲ್ಪ ಮಟ್ಟಿಗೆ ಶಿವಂ ದುಬೆ ಉತ್ತಮ ಹೋರಾಟ ತೋರಿಸಿದರು ಮತ್ತು ಕೊನೆಯವರೆಗೂ ಪ್ರಯತ್ನಪಟ್ಟರು. ನಾನು ಮೇಲಿನ ಕ್ರಮಾಂಕದಲ್ಲಿ ಸ್ವಲ್ಪ ಉತ್ತಮ ಕೊಡುಗೆ ನೀಡಿದ್ದರೆ, ಯಾರಿಗೆ ಗೊತ್ತು, ಬಹುಶಃ ನಾವು ಈ ಗುರಿಯನ್ನು ಸಾಧಿಸಬಹುದಿತ್ತು. ಆದ್ದರಿಂದ, ಇಂದಿನ ಸೋಲಿನ ಜವಾಬ್ದಾರಿ ಖಂಡಿತವಾಗಿಯೂ ನನ್ನ ಮೇಲಿದೆ.” ಎಂದು ಹೇಳಿದ್ದಾರೆ.

ಪಂದ್ಯದ ತಿರುವು ಆರ್‌ಸಿಬಿ ಬ್ಯಾಟ್ಸ್‌ಮನ್ ಟಿಮ್ ಡೇವಿಡ್ ಅವರ ಪ್ರದರ್ಶನ ಎಂದು ರುತುರಾಜ್ ಹೇಳಿದರು. “ಅನ್ಶುಲ್ ಕಾಂಬೋಜ್ ತಮ್ಮ (ಡೇವಿಡ್) ವಿಕೆಟ್ ಅನ್ನು ಬಹುತೇಕ ತೆಗೆದುಕೊಂಡರು. ಅದು ನೋ-ಬಾಲ್ ಆಗಿ ಬದಲಾಯಿತು ಎಂಬುದು ದುರದೃಷ್ಟಕರ. ಆದರೆ ಆ ಜೀವದಾನದ ನಂತರ, ಅವರು ಮೈದಾನದ ಪ್ರತಿಯೊಂದು ಮೂಲೆಗೂ ಹೊಡೆತಗಳನ್ನು ಹೊಡೆದರು. ಅವರು ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು.”

RCB vs CSK: ಚಿನ್ನಸ್ವಾಮಿಯಲ್ಲಿ ಚೆನ್ನೈ ತಂಡವನ್ನು ಚೆಂಡಾಡಿದ ಆರ್​ಸಿಬಿ

ಫೀಲ್ಡಿಂಗ್ ದೋಷಗಳು ಮತ್ತು ವಿರಾಟ್ ಕೊಹ್ಲಿಗೆ ನೀಡಿದ ಜೀವದಾನ ಸೋಲಿಗೆ ಪ್ರಮುಖ ಕಾರಣ ಎಂದು ರುತುರಾಜ್ ಉಲ್ಲೇಖಿಸಿದರು. “ನಾವು ವಿರಾಟ್ ಕೊಹ್ಲಿಯನ್ನು ಇನ್ನಿಂಗ್ಸ್‌ನ ಆರಂಭದಲ್ಲಿಯೇ ಕ್ಯಾಚ್ ಹಿಡಿದಿದ್ದರೆ, ನಮಗೆ ಆವೇಗ ಸಿಗುತ್ತಿತ್ತು. ಇದರ ಹೊರತಾಗಿಯೂ, 13-14ನೇ ಓವರ್‌ವರೆಗೆ ಪಂದ್ಯ ನಮ್ಮ ಕೈಯಲ್ಲಿತ್ತು ಎಂದು ನಾನು ಭಾವಿಸುತ್ತೇನೆ, ಆದರೆ ಅಲ್ಲಿಂದ ಆವೇಗ ಸಂಪೂರ್ಣವಾಗಿ ಆರ್‌ಸಿಬಿ ಪರವಾಗಿ ಬದಲಾಯಿತು, ನಾವು ಹಿಂದೆ ಬಿದ್ದೆವು” ಎಂದು ಅವರು ಹೇಳಿದರು.

ಆರ್‌ಸಿಬಿ ನೀಡಿದ್ದ 251 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ನಾಯಕ ರುತುರಾಜ್ ಗಾಯಕ್ವಾಡ್ ಕೇವಲ 7 ರನ್‌ಗಳಿಗೆ ಔಟಾದರು. ಮತ್ತೊಂದೆಡೆ, ಸಂಜು ಸ್ಯಾಮ್ಸನ್ 5 ಎಸೆತಗಳಲ್ಲಿ 9 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಆಯುಷ್ ಮ್ಹಾತ್ರೆ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಕಾರ್ತಿಕ್ ಶರ್ಮಾ ಸತತ ಮೂರನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *