Headlines

T20 World Cup: 2ನೇ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆ ಖಚಿತ – Kannada News | Team India Squad Changes for Namibia T20 WC: Sundar’s Comeback & Bumrah’s Fitness Update

ಅಮೆರಿಕ ವಿರುದ್ಧದ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ 2026 ರ ಟಿ20 ವಿಶ್ವಕಪ್ (T20 World Cup 2026) ಅಭಿಯಾನವನ್ನು ಆರಂಭಿಸಿರುವ ಟೀಂ ಇಂಡಿಯಾ ತನ್ನ ಮುಂದಿನ ಪಂದ್ಯವನ್ನು ಫೆಬ್ರವರಿ 12 ರಂದು ನಮೀಬಿಯಾ (India vs Namibia) ವಿರುದ್ಧ ಆಡಲಿದೆ. ಮೊದಲ ಪಂದ್ಯಕ್ಕೆ ಭಾರತ ತಂಡದಲ್ಲಿ 3 ಬದಲಾವಣೆಗಳಾಗಿದ್ದವು. ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ ಹಾಗೂ ಸಂಜು ಸ್ಯಾಮ್ಸನ್ ಪ್ಲೇಯಿಂಗ್​ 11 ನಿಂದ ಹೊರಬಿದ್ದಿದ್ದರು. ಇದೀಗ ಎರಡನೇ ಪಂದ್ಯಕ್ಕೂ ಭಾರತದ ಆಡುವ 11 ರ ಬಳಗದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ನಮೀಬಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ. ಹೀಗಾಗಿ ಸುಂದರ್​ಗೆ ಪ್ಲೇಯಿಂಗ್​ನಲ್ಲಿ ಅವಕಾಶಕೊಟ್ಟರೆ ಯುಎಸ್​ಎ ವಿರುದ್ಧ ಆಡಿದ ತಂಡದಲ್ಲಿ ಬದಲಾವಣೆಯಾಗುವುದು ಖಚಿತ.

ಅಭಿಷೇಕ್​ಗೆ ಅನಾರೋಗ್ಯ

ಜ್ವರದಿಂದಾಗಿ ಅಮೆರಿಕ ವಿರುದ್ಧದ ಪಂದ್ಯವನ್ನು ತಪ್ಪಿಸಿಕೊಂಡಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿ ಔಟಾದ ಅಭಿಷೇಕ್ ಫೀಲ್ಡಿಂಗ್ ಮಾಡಿರಲಿಲ್ಲ. ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್ ಫೀಲ್ಡಿಂಗ್ ಮಾಡಿದ್ದರು.

ಅಭಿಷೇಕ್ ಚೇತರಿಕೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಅಭಿಷೇಕ್‌ಗೆ ವಿಶ್ರಾಂತಿ ನೀಡಿದರೆ, ಸಂಜು ಸ್ಯಾಮ್ಸನ್-ಇಶಾನ್ ಕಿಶನ್ ಭಾರತದ ಆರಂಭಿಕರಾಗಿ ಆಡುವ ಸಾಧ್ಯತೆ ಇದೆ. ಆದರೆ ಮುಂದಿನ ಪಂದ್ಯಕ್ಕೆ ಇನ್ನು 4 ದಿನಗಳು ಬಾಕಿ ಇರುವುದರಿಂದ ಅಭಿಷೇಕ್ ಅಷ್ಟರೊಳಗೆ ಗುಣಮುಖರಾಗುವ ಸಾಧ್ಯತೆಯಿದೆ. ಹೀಗಾಗಿ ನಮೀಬಿಯಾ ವಿರುದ್ಧ ಅಭಿಷೇಕ್ ಕಣಕ್ಕಿಳಿಯುವುದು ಖಚಿತ. ಹೀಗಾಗಿ ಸಂಜುಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುವ ಸಾಧ್ಯತೆ ಇಲ್ಲ.

U19 World Cup 2026: ಭಾರತಕ್ಕೆ ಬಂದ ಯುವ ಚಾಂಪಿಯನ್ಸ್​ಗೆ ಅದ್ಧೂರಿ ಸ್ವಾಗತ

ಸುಂದರ್, ಬುಮ್ರಾ ಇನ್

ಇನ್ನು ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಸಮಯದಲ್ಲಿ ಗಾಯಗೊಂಡಿದ್ದ ವಾಷಿಂಗ್ಟನ್ ಸುಂದರ್ ಟಿ20 ಸರಣಿ ಮತ್ತು ವಿಶ್ವಕಪ್‌ನ ಮೊದಲ ಪಂದ್ಯವನ್ನು ತಪ್ಪಿಸಿಕೊಂಡಿದ್ದರು. ಇದೀಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಅವರು ವಿಶ್ವಕಪ್ ತಂಡವನ್ನು ಸೇರಿಕೊಂಡಿದ್ದಾರೆ.

ಸುಂದರ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಸೇರಿಸಿದರೆ, ಕಳಪೆ ಫಾರ್ಮ್‌ನಲ್ಲಿರುವ ರಿಂಕು ಸಿಂಗ್ ಅವರನ್ನು ಕೈಬಿಡುವ ಸಾಧ್ಯತೆಯಿದೆ. ಅವರು ಆಲ್‌ರೌಂಡರ್ ಆಗಿರುವುದರಿಂದ ಸುಂದರ್ ಅವರನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಯುಎಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಆಡಿಸಲಾಗಿತ್ತು. ಅಮೆರಿಕ ವಿರುದ್ಧ ಸಿರಾಜ್ ಮೂರು ವಿಕೆಟ್ ಕಬಳಿಸಿದ್ದರು. ಅವರ ಅದ್ಭುತ ಪ್ರದರ್ಶನದ ಹೊರತಾಗಿಯೂ, ಬುಮ್ರಾ ತಂಡಕ್ಕೆ ಮರಳಿದಾಗ ಸಿರಾಜ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈಬಿಡಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *