Headlines

U19 World Cup 2026: ಚಾಂಪಿಯನ್ ಭಾರತಕ್ಕೆ ಐಸಿಸಿಯಿಂದ ನಯಾಪೈಸೆ ಸಿಗಲಿಲ್ಲ – Kannada News | India U19 Champions 2026 BCCI Prize Money Expectation

ವರ್ಷಕ್ಕೊಂದು ಐಸಿಸಿ (ICC) ಟ್ರೋಫಿಯನ್ನು ಗೆಲ್ಲುವುದನ್ನು ಟೀಂ ಇಂಡಿಯಾ (Team India) ಅಭ್ಯಾಸ ಮಾಡಿಕೊಂಡಿದೆ. ಇದೀಗ 2026 ರ ಆರಂಭದಲ್ಲಿ ಭಾರತ ಯುವ ಪಡೆ 19 ವರ್ಷದೊಳಗಿನವರ ವಿಶ್ವಕಪ್ (U19 World Cup 2026) ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಫೈನಲ್‌ ಪಂದ್ಯವನ್ನು 100 ರನ್​ಗಳಿಂದ ಗೆದ್ದಿಕೊಳ್ಳುವ ಮೂಲಕ ಟೀಂ ಇಂಡಿಯಾ ಆರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಮೂಲಕ ಭಾರತ ತಂಡ ಅತಿ ಹೆಚ್ಚು ಬಾರಿ ವಿಶ್ವಕಪ್ ಗೆದ್ದ ತಂಡ ಎನಿಸಿಕೊಂಡಿದೆ. ಈ ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ತಂಡ ಅಜೇಯ ತಂಡವಾಗಿ ಫೈನಲ್​ಗೇರಿದ್ದು ಮಾತ್ರವಲ್ಲದೆ ಚಾಂಪಿಯನ್ ಕೂಡ ಆಯಿತು.

ಭಾರತಕ್ಕೆ ಐತಿಹಾಸಿಕ ಗೆಲುವು

ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 411 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಭಾರತದ ಪರ ಆರಂಭಿಕ ವೈಭವ್ ಸೂರ್ಯವಂಶಿ ಕೇವಲ 80 ಎಸೆತಗಳಲ್ಲಿ 175 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭ ಒದಗಿಸಿಕೊಟ್ಟರು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೂಡ ಉತ್ತಮ ಹೋರಾಟ ನೀಡಿತ್ತಾದರೂ ಬೃಹತ್ ಗುರಿಯ ಒತ್ತಡಕ್ಕೆ ಸಿಲುಕಿ 50 ಓವರ್​ಗಳನ್ನು ಪೂರ್ಣಗೊಳಿಸಲಾಗದೆ ಸೋಲೊಪ್ಪಿಕೊಂಡಿತು. ಈ ಮೂಲಕ 28 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಬೇಕೆನ್ನುವ ಇಂಗ್ಲೆಂಡ್ ತಂಡದ ಕನಸು ಕನಸಾಗಿಯೇ ಉಳಿಯಿತು.

ಐಸಿಸಿಯಿಂದ ನಗದು ಬಹುಮಾನವಿಲ್ಲ

ಈ ಐತಿಹಾಸಿಕ ಗೆಲುವಿನ ಹೊರತಾಗಿಯೂ ಟೀಂ ಇಂಡಿಯಾ ಐಸಿಸಿಯಿಂದ ಯಾವುದೇ ಅಧಿಕೃತ ಬಹುಮಾನದ ಹಣವನ್ನು ಪಡೆಯುವುದಿಲ್ಲ. ಏಕೆಂದರೆ 19 ವರ್ಷದೊಳಗಿನ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಐಸಿಸಿ ಯಾವುದೇ ನಗದು ಬಹುಮಾನವನ್ನು ನೀಡುವುದಿಲ್ಲ. ಈ ಪಂದ್ಯಾವಳಿಯು ಯುವ ಕ್ರಿಕೆಟಿಗರಿಗೆ ಅಭಿವೃದ್ಧಿ, ಅನುಭವ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಅಭಿವೃದ್ಧಿ ಪಂದ್ಯಾವಳಿಯಾಗಿದೆ. ಹೀಗಾಗಿ ವಿಜೇತ ತಂಡಕ್ಕಾಗಲಿ ಅಥವಾ ರನ್ನರ್ ಅಪ್ ತಂಡಕ್ಕಾಗಲಿ ಟ್ರೋಫಿಯನ್ನು ಹೊರತುಪಡಿಸಿ ಯಾವುದೇ ನಗದು ಬಹುಮಾನ ಸಿಗುವುದಿಲ್ಲ. ಹಿಂದಿನ ಆವೃತ್ತಿಯಲ್ಲೂ ಐಸಿಸಿ ಯಾವುದೇ ಬಹುಮಾನದ ಹಣವನ್ನು ನೀಡಲಿಲ್ಲ.

U19 World Cup: 6ನೇ ಬಾರಿಗೆ ಅಂಡರ್-19 ವಿಶ್ವಕಪ್ ಗೆದ್ದ ಟೀಂ ಇಂಡಿಯಾ

ಬಹುಮಾನ ನೀಡಲಿರುವ ಬಿಸಿಸಿಐ

ಐಸಿಸಿಯಿಂದ ಯಾವುದೇ ನಗದು ಬಹುಮಾನ ಸಿಗದಿದ್ದರೂ, ವಿಶ್ವ ಕ್ರಿಕೆಟ್​ನ ದೊಡ್ಡಣ್ಣ ಬಿಸಿಸಿಐನಿಂದ ಯುವ ಭಾರತ ತಂಡಕ್ಕೆ ನಗದು ಬಹುಮಾನ ಸಿಗಲಿದೆ. ಈ ಹಿಂದೆಯೂ ಬಿಸಿಸಿಐ ಅಂಡರ್ 19 ವಿಶ್ವಕಪ್ ಗೆದ್ದ ತಂಡಗಳಿಗೆ ನಗದು ಬಹುಮಾನ ಘೋಷಿಸಿತ್ತು. ಉದಾಹರಣೆಗೆ, 2024 ರ ಅಂಡರ್ 19 ವಿಶ್ವಕಪ್‌ ಗೆದ್ದ ಭಾರತ ತಂಡದ ಪ್ರತಿಯೊಬ್ಬ ಆಟಗಾರನಿಗೆ ಬಿಸಿಸಿಐ ತಲಾ 30 ಲಕ್ಷ ರೂ. ಬಹುಮಾನ ನೀಡಿತ್ತು. ಅದೇ ರೀತಿ, 2025 ರ ಮಹಿಳಾ ಅಂಡರ್-19 ಟಿ20 ವಿಶ್ವಕಪ್‌ ಗೆದ್ದಿದ್ದ ವನಿತಾ ಪಡೆಗೆ ಬಿಸಿಸಿಐ 5 ಕೋಟಿ ರೂ. ಬಹುಮಾನ ನೀಡಿತ್ತು. ಅದರಂತೆ ಈ ಬಾರಿಯೂ ಸಹ ಬಿಸಿಸಿಐ ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ತರಬೇತಿ ತಂಡಕ್ಕೆ ನಗದು ಬಹುಮಾನ ಘೋಷಣೆ ಮಾಡುವ ನಿರೀಕ್ಷೆಯಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *